ಜಪಾನಿನ ಸುಜುಕಿ ಮೋಟಾರ್ ಕಾರ್ಪೊರೇಷನ್ ದ್ವಿಚಕ್ರ ವಾಹನ ಅಧೀನ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈ.ಲಿ. (ಎಸ್.ಎಂ.ಐ.ಪಿ.ಎಲ್.) ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್- ಸುಜುಕಿ ಇ-ಅಕ್ಸೆಸ್ ಬಿಡುಗಡೆ ಮಾಡಿದೆ. ಭಾರತದಿಂದ ಪ್ರಾರಂಭಿಸಿ ದ್ವಿಚಕ್ರ ವಾಹನಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಗೆ ಸುಜುಕಿಯ ಜಾಗತಿಕ ಪ್ರವೇಶದ ಗುರುತಾಗಿರುವ ಸುಜುಕಿ ಇ-ಅಕ್ಸೆಸ್ ಕಂಪನಿಯ ವಿಶ್ವಾಸಾರ್ಹತೆ, ದೀರ್ಘಬಾಳಿಕೆ ಮತ್ತು ಪ್ರತಿನಿತ್ಯದ ಪ್ರಾಯೋಗಿಕತೆಯ ನಂಬಿಕೆಯ ಸಾಮರ್ಥ್ಯಗಳನ್ನು ತಂದಿದೆ.
ಗ್ರಾಹಕರಿಗೆ ಹೆಚ್ಚು ಆಯ್ಕೆಗಳನ್ನು ನೀಡುತ್ತಿರುವ ಎಸ್.ಎಂ.ಐ.ಪಿ.ಎಲ್. ಹೊಸ ಡ್ಯುಯಲ್ ಟೋನ್ ಶೇಡ್- ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ/ ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ ಮೂಲಕ ತನ್ನ ಬಣ್ಣಗಳನ್ನು ವಿಸ್ತರಿಸಿದೆ. ಇದರೊಂದಿಗೆ ಸುಜುಕಿ ಇ-ಅಕ್ಸೆಸ್ ಈಗ ನಾಲ್ಕು ಸೊಗಸಾದ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತಿದೆ:
- ಮೆಟಾಲಿಕ್ ಮ್ಯಾಟ್ ಬ್ಲಾಕ್ ನಂ.2/ ಮೆಟಾಲಿಕ್ ಮ್ಯಾಟ್ ಬಾರ್ಡ್ಯೂಕ್ಸ್ ರೆಡ್
- ಪರ್ಲ್ ಗ್ರೇಸ್ ವೈಟ್/ಮೆಟಾಲಿಕ್ ಫೈಬ್ರಾಯಿನ್ ಗ್ರೇ
- ಪರ್ಲ್ ಜೇಡ್ ಗ್ರೀನ್/ ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ
- ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ/ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ
ಈ ಕುರಿತು ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಉಮೇಡಾ ಮಾತನಾಡಿ, “ಸುಜುಕಿಯ ಇ-ಅಕ್ಸೆಸ್ ಸುಜುಕಿಯ ಮೊದಲ ಜಾಗತಿಕ ಬ್ಯಾಟರಿ ವಿದ್ಯುಚ್ಛಾಲಿತ ವಾಹನವನ್ನು ಪ್ರತಿನಿಧಿಸುತ್ತದೆ. ಇದು ದೀರ್ಘಕಾಲಿಕ ಬ್ಯಾಟರಿ, ಚುರುಕಾದ ನಿವರ್ಹಣೆ, ತಡೆರಹಿತ ಆಕ್ಸಲರೇಷನ್ ಮತ್ತು ಉನ್ನತ ಗುಣಮಟ್ಟದ ಫಿಟ್ ಅಂಡ್ ಫಿನಿಷ್ ನೀಡುತ್ತದೆ. ಪ್ರತಿ ಅಂಶವನ್ನೂ ಮಾಲೀಕತ್ವ ಸುಲಭ, ಆನಂದದಾಯಕ ಮತ್ತು ಆತಂಕರಹಿತವಾಗಿಸಲು ಆಲೋಚನಾಯುಕ್ತವಾಗಿ ವಿನ್ಯಾಸಗೊಳಿಸಲಾಗಿದ್ದು, ನಾವು `ನಿಮ್ಮ ಕಡೆ’ ಇರುವ ಗ್ರಾಹಕರಿಗೆ ಅವರ ಇಡೀ ವಿದ್ಯುಚ್ಛಾಲಿತ ಮೊಬಿಲಿಟಿ ಪ್ರಯಾಣದಲ್ಲಿ ಬೆಂಬಲಿಸುತ್ತೇವೆ” ಎಂದಿದ್ದಾರೆ.
ಇ-ತಂತ್ರಜ್ಞಾನದೊಂದಿಗೆ ಸುಜುಕಿ
ಸುಜುಕಿಯ ಇ-ತಂತ್ರಜ್ಞಾನದೊಂದಿಗೆ ಸನ್ನದ್ಧವಾದ ಸುಜುಕಿ ಇ-ಅಕ್ಸೆಸ್ ತನ್ನ ನಿಜ ವಿಶ್ವದ ಮೌಲ್ಯವನ್ನು ವ್ಯಾಖ್ಯಾನಿಸುವ ಐದು ಪ್ರಮುಖ ಶಕ್ತಿಗಳೊಂದಿಗೆ ನಿರ್ಮಿಸಲಾಗಿದೆ:
ವಿಶ್ವಾಸಾರ್ಹತೆ ಮತ್ತು ದೀರ್ಘಬಾಳಿಕೆ: ಸುಜುಕಿಯ ಜಾಗತಿಕ ಪರೀಕ್ಷೆಯ ಮಾನದಂಡಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಸುಜುಕಿ ಇ-ಅಕ್ಸೆಸ್ ಕಠಿಣ ಪರೀಕ್ಷೆಗೆ ಒಳಪಟ್ಟಿದ್ದು, ಅದರಲ್ಲಿ ಮುಳುಗಿಸುವಿಕೆ, ತೀವ್ರ ಉಷ್ಣತೆಗಳು, ಹನಿಗಳು, ಕಂಪನ ಮತ್ತು ಬ್ಯಾಟರಿ ಸುರಕ್ಷತೆ ಪರೀಕ್ಷೆಗಳು ಒಳಗೊಂಡಿವೆ.
ದೀರ್ಘ ಬ್ಯಾಟರಿ ಬಾಳಿಕೆಯ ವರ್ಷಗಳು: ಸುಜುಕಿ ಇ-ಅಕ್ಸೆಸ್ ಲಿಥಿಯಂ ಐರನ್ ಫಾಸ್ಫೇಟ್ (ಎಲ್.ಎಫ್.ಪಿ) ಬ್ಯಾಟರಿಯಿಂದ ಸನ್ನದ್ಧವಾಗಿದ್ದು, ಅದು ನಿಕಲ್ ಮ್ಯಾಂಗನೀಸ್ ಕೋಬಾಲ್ಟ್ (ಎನ್.ಎಂ.ಸಿ.) ಬ್ಯಾಟರಿಗಳಿಗಿಂತ ನಾಲ್ಕು ಪಟ್ಟು ದೀರ್ಘ ಬ್ಯಾಟರಿ ಲೈಫ್ ನೀಡುತ್ತದೆ.
ಚುರುಕಾದ ನಿರ್ವಹಣೆ: ಈ ಸ್ಕೂಟರ್ ಹಗುರ ಚಾಸಿಗಳನ್ನು ಅಲ್ಯುಮಿನಿಯಂ ಬ್ಯಾಟರಿ ಕೇಸ್ ಹೊಂದಿದ್ದು, ಅದನ್ನು ಹೆಚ್ಚಿನ ಬಿಗಿತಕ್ಕೆ ಫ್ರೇಮ್ ಒಳಗಡೆ ಸೇರಿಸಲಾಗಿದೆ. ಮೃದುವಾದ ಕಾರ್ನರಿಂಗ್ ಮತ್ತು ಸಮತೋಲನದ ನೇರ ಗೆರೆಯ ಸ್ಥಿರತೆ ನೀಡುತ್ತದೆ.
ತಡೆರಹಿತ ಆಕ್ಸಲರೇಷನ್: ಶಕ್ತಿಯುತ 4.1 ಕೆ.ಡಬ್ಲ್ಯೂ ಮೋಟಾರ್ 15ಎನ್.ಎಂ. ಟಾರ್ಕ್ ನೀಡುತ್ತದೆ, ಸುಜುಕಿ ಇ-ಅಕ್ಸೆಸ್ ತಡೆರಹಿತ ಆಕ್ಸಲರೇಷನ್ ಮತ್ತು ಅದೇ ಪ್ರತಿಕ್ರಿಯೆಯ ಭಾವನೆಯನ್ನು ಶೇ.10ರಷ್ಟು ಸ್ಟೇಟ್ ಆಫ್ ಚಾರ್ಜ್ (ಎಸ್.ಒ.ಸಿ.)ಯಲ್ಲಿ ನೀಡುತ್ತದೆ. ಈ ಸ್ಕೂಟರ್ ಅನ್ನು ಮೂರು ರೈಡ್ ಮೋಡ್ ಗಳು (ಇಕೊ, ರೈಡ್ ಎ ಮತ್ತು ರೈಡ್ ಬಿ), ರಿವರ್ಸ್ ಮೋಡ್ ಮತ್ತು ರೀಜನರೇಟಿವ್ ಬ್ರೇಕಿಂಗ್ ನಿಂದ ಸನ್ನದ್ಧವಾಗಿಸಿದೆ.





