ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸದ್ಯ ಕೋರ್ಟ್ನಲ್ಲಿದೆ. ಇತ್ತೀಚೆಗೆ ಚಾರ್ಜ್ ಫ್ರೇಮ್ ಆಗಿದ್ದು, ಸಾಕ್ಷಿ ವಿಚಾರಣೆಗೆ ದಿನ ಕೂಡಾ ನಿಗದಿಯಾಗಿದೆ. ಹೀಗಿರುವಾಗಲೇ ರುದ್ರಭೂಮಿಯಲ್ಲಿದ್ದ ರೇಣುಕಾಸ್ವಾಮಿ ಸಮಾಧಿ ಕಟ್ಟಡ ತೆರವು ಮಾಡಲಾಗಿದೆ.
ಚಿತ್ರದುರ್ಗದ ಹಿಂದೂ ರುದ್ರಭೂಮಿಯಲ್ಲಿದ್ದ ರೇಣುಕಾಸ್ವಾಮಿ ಸಮಾಧಿ ಕಟ್ಟಡವನ್ನು ತೆರವುಗೊಳಿಸಲಾಗಿದೆ. ವೀರಶೈವ ಸಮುದಾಯದ ರುದ್ರಭೂಮಿ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ ಸಮಾಧಿ ತೆರವು ಮಾಡಲಾಗಿದೆ ಎನ್ನಲಾಗಿದೆ.
ಈ ಕುರಿತು ರೇಣುಕಾಸ್ವಾಮಿ ಕುಟುಂಬಕ್ಕೆ ವೀರಶೈವ ಸಮಾಜದ ಮುಖಂಡರು ಮಾಹಿತಿ ನೀಡಿದ್ದಾರೆ. ಸ್ಮಶಾನ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆಯೇ ಸಮಾಧಿ ತೆರವುಗೊಳಿಸಿರುವುದಾಗಿ ವೀರಶೈವ ಸಮಾಜದ ಮುಖಂಡರು ರೇಣುಕಾಸ್ವಾಮಿ ಕುಟುಂಬಕ್ಕೆ ತಿಳಿಸಿದ್ದಾರೆ. ಆದರೆ ಈ ವಿಚಾರ ಸಾಕಷ್ಟು ವೈರಲ್ ಆಗಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾಗಿ ಸುಮಾರು ಒಂದೂವರೆ ವರ್ಷ ಕಳೆದಿದ್ದು, ದರ್ಶನ್ ಅವರ ಡೆವಿಲ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೇ ಈ ಸುದ್ದಿ ವೈರಲ್ ಆಗಿದೆ.





