ನವೆಂಬರ್ 28, 1986ರಲ್ಲಿ ಶಾರ್ಜಾದಲ್ಲಿ ವೆಸ್ಟ್ಇಂಡೀಸ್ ಮತ್ತು ಪಾಕೀಸ್ಥಾನದ ನಡುಬೆ ನಡೆಯುತ್ತಿದ್ದ ಛಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿಯ ಪಂದ್ಯದಲ್ಲಿ ಒಂದೇ ಒಂದು ಬೌಲ್ ಮಾಡದೇ ಮತ್ತು ಬ್ಯಾಟಿಂಗ್ ಸಹಾ ಮಾಡದೇ, ಗಸ್ ಲೋಗಿ ಪಂದ್ಯದ ಪುರುಷೋತ್ತಮನಾದ ಅಪರೂಪದ ಸಂಗತಿಯನ್ನು ಕೆಲ ವರ್ಷಗಳ ಹಿಂದೆ ನಮ್ಮದೇ ಬ್ಲಾಗ್ ನಲ್ಲಿ ಹಾಕಿದ್ದು (ಈ ಲಿಂಕ್ ಮೂಲಕ ಆ ಲೇಖನವನ್ನು ಓದಬಹುದಾಗಿದೆ) ಪ್ರಸ್ತುತ 2026ರ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಏಪ್ರಿಲ್ 29ರಂದು ನಡೆದ ಪಂದ್ಯಾವಳಿಯಲ್ಲಿಯೂ ಬ್ಯಾಟಿಂಗ್ ಮತ್ತು ಬೋಲಿಂಗ್ ಮಾಡದೇ ಹೋದರೂ ವಿಚಿತ್ರವಾದ ದಾಖಲೆಗೆ ಶಾರ್ದೂಲ್ ಠಾಕೂರ್ ಪಾತ್ರರಾಗಿದ್ದಾರೆ.

ಕ್ರಿಕೆಟ್ ಆಟದಲ್ಲಿ ದಾಖಲೆಗಳು ನಿರ್ಮಾಣ/ನಿರ್ನಾಮವಾಗುವುದು ಸಹಜ ಪ್ರಕ್ರಿಯೆ. ಅದರಲ್ಲೂ ಐಪಿಎಲ್ ಪಂದ್ಯಾವಳಿಯಲ್ಲಿ ಪ್ರತಿ ಕ್ಷಣ ಕ್ಷಣಕ್ಕೂ ದಾಖಲೆಗಲು ಧೂಳಿಪಟವಾಗುತ್ತಲೇ ಇರುತ್ತದೆ. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಮತ್ತು ಅತಿ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಗಳಿಸಿ ಅದನ್ನು ಸಂಭ್ರಮಿಸುವ ಮೊದಲೇ ಎರಡನೇ ಇನ್ನಿಂಗ್ಸ್ ಮುಗಿಯುವಷ್ಟರಲ್ಲಿ ಮತ್ತೊಬ್ಬ ಆ ದಾಖಲೆಯನ್ನು ಮುರಿದಿರುತ್ತಾನೆ. ಆಟದ ಮಧ್ಯದಲ್ಲಿ ಇವರಿಗೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಎಂದು ಭಾವಿಸಿದ್ದರೆ, ಪಂದ್ಯ ಮುಗಿಯುವಷ್ಟರಲ್ಲಿ ಆ ಪ್ರಶಸ್ತಿ ಮತ್ತೊಬ್ಬರ ಮುಡಿಲಿಗೇರುತ್ತದೆ. ಅದೇ ರೀತಿಯಾಗಿ ಯಾರೂ ಬಯಸದ, ಅತ್ಯಂತ ವಿಲಕ್ಷಣವಾದ ದಾಖಲೆಯೊಂದಕ್ಕೆ ಭಾರತದ ಪರ ಆಡಿರುವ ಮತ್ತು ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಪಾತ್ರರಾಗಿರುವುದು ವಿಚಿತ್ರವಾದರೂ ಸತ್ಯವಾಗಿದೆ.

2008 ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಐದು ಬಾರಿ (2013, 2015, 2017, 2019, 2020) ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಐಪಿಎಲ್ ಪಂದ್ಯಾವಳಿಯ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಐಪಿಎಲ್ ಪಂದ್ಯಗಳನ್ನು ಮತ್ತಷ್ಟು ರೋಚಕವಾಗಿಸಲು 2023ರಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್ ನಲ್ಲಿ ಪರಿಚಯಿಸಲಾಯಿತು. ತಂಡದಲ್ಲಿ ಆಡುವ 11 ಆಟಗಾರನ ಜೊತೆ ಮತ್ತೊಬ್ಬ ಹೆಚ್ಚುವರಿ ಆಟಗಾರನನ್ನು ಪಂದ್ಯದ ಯಾವುದೇ ಹಂತದಲ್ಲಿ ಆಡಿಸಬಹುದಾಗಿದ್ದು, ಆಟಗಾರನಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ಮಾಡುವ ಅವಕಾಶವಿರುತ್ತದೆ. ಹಾಗಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡವು ತನ್ನ ತಂಡದಲ್ಲಿ ಉತ್ತಮ ಬೌಲರ್ ಳನ್ನು ಆಡಿಸಿ ನಂತರ ಬ್ಯಾಟಿಂಗ್ ಮಾಡುವಾಗ, ಬ್ಯಾಟಿಂಗ್ ಬಾರದ ಒಬ್ಬ ಬೌಲರ್ ಬದಲಾಗಿ ಉತ್ತಮ ಬ್ಯಾಟರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೇ ರೀತಿ ಮೊದಲು ಬ್ಯಾಟಿಂಗ್ ಮಾಡುವಾಗ ಉತ್ತಮ ಬ್ಯಾಟರ್ಗಳನ್ನು ಆಡಿಸಿ ಬೋಲಿಂಗ್ ಮಾಡುವಾಗ ಒಬ್ಬ ಬ್ಯಾಟರ್ ಬದಲು ಒಳ್ಳೆಯ ಬೋಲರ್ ನನ್ನು ಆಡಿಸಲಾಗುತ್ತದೆ. ಈ ಪದ್ದತಿಯು ಕುರಿತಾಗಿ ಅನೇಕ ಹಿರಿಯ ಆಟಗಾರರ ಆಕ್ಷೇಪಣೆಗಳ ನಡುವೆಯೂ ಅನೇಕ ತಂಡಗಳು ಇದರ ಸದುಪಯೋಗವನ್ನು ಪಡೆದುಕೊಂಡು ತಂಡವನ್ನು ಬಲಿಷ್ಟಗೋಲಿಸುತ್ತಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ