ಬೆಂಗಳೂರಿನ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ ಮಹಾನ್ ದಾನಿ, ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜ ಸುಧಾರಕ ಹಾಗೂ ಜನಸೇವಕರಾಗಿದ್ದರು. ತಮ್ಮ ಅಪಾರ ಸಂಪತ್ತನ್ನು ಸ್ವಂತ ವೈಭವಕ್ಕಾಗಿ ಬಳಸದೇ, ಬಡವರ ಶಿಕ್ಷಣ, ಸಂಸ್ಕೃತಿ, ಧಾರ್ಮಿಕ ಸೇವೆ ಮತ್ತು ಸಮಾಜದ ಏಳಿಗೆಗಾಗಿ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿತ್ವ ಅವರದು. ಅವರ ಜನೋಪಕಾರಿ ಕಾರ್ಯಗಳನ್ನು ಮೆಚ್ಚಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅವರಿಗೆ ಜನೋಪಕಾರಿ ಎಂಬ ಗೌರವ ಬಿರುದನ್ನು ನೀಡಿ ಸನ್ಮಾನಿಸಿದ್ದ ಜನೋಪಕಾರಿ ದೊಡ್ಡಣ್ಣ ಶೆಟ್ಟಿ (1840–1921) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ
ಬಾಲ್ಯ ಮತ್ತು ಕುಟುಂಬ ಹಿನ್ನೆಲೆ

ದೊಡ್ಡಣ್ಣ ಶೆಟ್ಟಿಯವರು 1840ರ ಫೆಬ್ರವರಿ 3ರಂದು ಬೆಂಗಳೂರಿನಲ್ಲಿ ನಂಜುಂಡಪ್ಪ
ದೊಡ್ಡಣ್ಣ ಸೆಟ್ಟಿಯವರು ಕುಟುಂಬದ ವ್ಯಾಪಾರವನ್ನು ಮುನ್ನಡೆಸಲು ಅಗತ್ಯವಾದ ಶಿಕ್ಷಣ ಮತ್ತು ವ್ಯವಹಾರ ಜ್ಞಾನವನ್ನು ಬಾಲ್ಯದಲ್ಲಿಯೇ ಪಡೆದುಕೊಂಡಿದ್ದರು. ತಂದೆಯ ನಿಧನದ ನಂತರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡ ಅವರು, ಯಜಮಾನರು ಎಂಬ ಗೌರವದ ಸ್ಥಾನವನ್ನು ಅಲಂಕರಿಸಿದರು. ತಂದೆಯಿಂದ ಬಂದ ವ್ಯಾಪಾರ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ ಕುಟುಂಬದ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಆದರೆ ವೈಯಕ್ತಿಕ ಜೀವನದಲ್ಲಿ ಅವರಿಗೆ ಅಪಾರ ದುಃಖಗಳು ಎದುರಾದವು. ಕ್ರಮವಾಗಿ ಮೂವರು ಪತ್ನಿಯರನ್ನು ಕಳೆದುಕೊಂಡರು. ನಾಲ್ಕನೇ ಪತ್ನಿಯಿಂದ ಇಬ್ಬರು ಪುತ್ರರು ಜನಿಸಿದರೂ, 1898ರಲ್ಲಿ ಬೆಂಗಳೂರಿನಲ್ಲಿ ಉಂಟಾದ ಭೀಕರ ಪ್ಲೇಗ್ ಮಹಾಮಾರಿಯಲ್ಲಿ ಹಿರಿಯ ಮಗ ಲಕ್ಷ್ಮೀನಾರಾಯಣ ನಿಧನರಾದರು. ಕೆಲವು ವರ್ಷಗಳ ನಂತರ ಎರಡನೇ ಮಗ ಲಕ್ಷ್ಮೀನರಸಿಂಹ ಕೂಡ ಅಕಾಲಿಕವಾಗಿ ನಿಧನರಾದರು. ಕುಟುಂಬದ ಈ ದುರಂತಗಳು ಅವರನ್ನು ಸಂಪೂರ್ಣವಾಗಿ ಬದಲಾಯಿಸಿತು. ಅವರು ತಮ್ಮ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಲು ನಿರ್ಧರಿಸಿದರು.
ಶ್ರೀ ಲಕ್ಷ್ಮೀ ನರಸಿಂಹ ಸಂಸ್ಥೆ – ಬಡವರ ಶಿಕ್ಷಣಕ್ಕಾಗಿ ಮಹತ್ತರ ಹೆಜ್ಜೆ
ತಮ್ಮ ಮಕ್ಕಳ ನೆನಪಿಗಾಗಿ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1906ರ ಮಾರ್ಚ್ 11ರಂದು ಶ್ರೀ ಲಕ್ಷ್ಮೀ ನರಸಿಂಹ ಸಂಸ್ಥೆ (SLN ಸಂಸ್ಥೆ) ಯನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುಮಾರು 5.5 ಎಕರೆ ಜಮೀನನ್ನು ದಾನವಾಗಿ ನೀಡಿದರು.
1909ರಲ್ಲಿ ನಗರ ಪುರಸಭೆಯು ಮೂಲ ಕಟ್ಟಡದ ಗೋಡೆಯನ್ನು ಕೆಡವಿದಾಗ, ಮಹಾರಾಜರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಹಿಂದಿನ ಮತ್ತೊಂದು ಜಾಗವನ್ನು ನೀಡಿದರು. ಅದನ್ನು ಸಮತಟ್ಟು ಮಾಡಿ ಹೊಸ ಶಾಲಾ ಆವರಣ ನಿರ್ಮಿಸಲಾಯಿತು. 1915ರಲ್ಲಿ ಪ್ರಾಥಮಿಕ ಶಾಲೆ ಆರಂಭವಾಯಿತು. 1917ರಲ್ಲಿ ಈ ಶಾಲೆಯನ್ನು ಆನಿ ಬೆಸೆಂಟ್ ಅವರ ಮಾರ್ಗದರ್ಶನದಲ್ಲಿ National High School ಆಗಿ ಅಭಿವೃದ್ಧಿಪಡಿಸಲಾಯಿತು. ನಂತರ ಅದು ಚಾಮರಾಜಪೇಟೆ ಹಾಗೂ ಬಳಿಕ ಬಸವನಗುಡಿಗೆ ಸ್ಥಳಾಂತರಗೊಂಡಿತು.





