ಮನೆಯಲ್ಲಿ ಯಾವುದೇ ಮಂಗಳಕರ ಸಂದರ್ಭ, ಶುಭ ಸಮಾರಂಭಗಳಾದ ಮದುವೆ, ಮುಂಜಿಯಂಥ ಕಾರ್ಯಕ್ರಮಗಳಿದ್ದಾಗ ಪ್ರತಿಯೊಬ್ಬ ಹೆಣ್ಣೂ ಮೈಸೂರು ಸಿಲ್ಕ್ ಸೀರೆ ಉಡಲು ಬಯಸುತ್ತಾಳೆ. ರೇಷ್ಮೆ ಸೀರೆ ತುಂಬಾ ದುಬಾರಿ ಅಥವಾ ತುಸು ಅಗ್ಗದ್ದೇ ಇರಲಿ, ರೇಷ್ಮೆ ಆಗಿರುವುದು ಮುಖ್ಯ. ಇದನ್ನು ಸುದೀರ್ಘ ಕಾಲ ಬಾಳಿಕೆ ಬರುವಂತೆ ಸಂರಕ್ಷಿಸಿ ಇಟ್ಟುಕೊಳ್ಳುವುದು ಹೇಗೆ?

ಈ ರೇಷ್ಮೆ ಸೀರೆಗಳನ್ನು ಇತರ ವಸ್ತ್ರಗಳ ಜೊತೆ ಬೆರೆಸದೆ ವಾರ್ಡ್‌ರೋಬ್‌ನಲ್ಲಿಡಿ.

ಸಾಮಾನ್ಯವಾಗಿ ಈ ದುಬಾರಿ ಸೀರೆಗಳನ್ನು ಡ್ರೈ ಕ್ಲೀನ್‌ಗೆ ಕೊಡುವುದು ವಾಡಿಕೆ. ಮನೆಯಲ್ಲೇ ಒಗೆಯ ಬಯಸಿದರೆ ಹೆಚ್ಚು ಕೆಮಿಕಲ್ಸ್ ಯುಕ್ತ ಸ್ಟ್ರಾಂಗ್‌ ಡಿಟರ್ಜೆಂಟ್‌ ಬಳಸದೆ, ವೈಟ್‌ಸೋಪ್‌ ಬಳಸಿ, ತಣ್ಣೀರಿನಲ್ಲೇ ಒಗೆದು ಜಾಲಿಸಿ. ಬಿಸಿ ನೀರು ಬಳಸಬಾರದು.

ಅಕಸ್ಮಾತ್‌ ಇದರ ಮೇಲೆ ಹಠಮಾರಿ ಕಲೆ ಮೂಡಿದ್ದರೆ, ಆ ಭಾಗಕ್ಕೆ ತುಸು ಪೆಟ್ರೋಲ್ ಸವರಬೇಕು. ಸೌಮ್ಯ ಡಿಟರ್ಜೆಂಟ್‌ಪ್ರೋಟೀನ್‌ ಸ್ಟೇನ್‌ ರಿಮೂವರ್‌ ಬಳಸಿ ಜೂಸ್‌, ಐಸ್‌ ಕ್ರೀಂ, ಕಾಫಿ ಟೀಗಳ ಕಲೆ ನಿವಾರಿಸಬಹುದು.

ಇದನ್ನು ಒಗೆಯುವ ಕಲ್ಲಿನ ಮೇಲೆ ರಪ ರಪ ಬಡಿದು ಬ್ರಶ್ಶಿನಿಂದ ಸರಭರ ಉಜ್ಜಿ, ಕಲ್ಲಿನ ಮೇಲೆ ತಿಕ್ಕಿ..... ಏನೂ  ಮಾಡದೆ ಸೌಮ್ಯವಾಗಿ ಕಸಕಿ ಒಗೆದು, ನೆರಳಿರುವ ಕಡೆ ಒಣಗಿಸಿ.

ಇಸ್ತ್ರಿ ಮಾಡುವಾಗ, ಅಗತ್ಯವಾಗಿ ಈ ಸೀರೆ ಕೆಳಗೆ ಕಾಟನ್‌ ಸೀರೆ ಹರಡಿ ಪ್ರೆಸ್‌ ಮಾಡಿ.

ಇದನ್ನು ಬೀರುವಿನಲ್ಲಿ ಎತ್ತಿಡುವಾಗ ಎಂದೂ ಈ ಸೀರೆ ಮಧ್ಯೆ ನುಸಿಗುಳಿಗೆಗಳನ್ನು ನೇರವಾಗಿ ಹರಡಬೇಡಿ. ಅದು ಸೀರೆಯ ಫ್ಯಾಬ್ರಿಕ್‌ ಹಾಳು ಮಾಡುವ ಸಾಧ್ಯತೆಗಳಿವೆ. ರೆಡಿಮೇಡ್‌ ವೆಲ್ವೆಟ್‌ ಚೀಲಗಳಲ್ಲಿ ಲಭ್ಯವಿರುವ ಇಂಥ ಗುಳಿಗೆ, ಅಥವಾ ನೀವೇ ಸಿದ್ಧಪಡಿಸಿದ ಕಾಟನ್‌ ಪ್ಯಾಕೆಟ್‌ ಒಳಗೆ ಗುಳಿಗೆ ಇರಿಸಿ ಅದನ್ನು ಸೀರೆ ಮಧ್ಯೆ ಹರಡಿರಿ.

-  ವಿನುತಾ 

ಹೃದಯವೀಣೆ….. ತಂತಿ ಮಿಡಿದು...

ಹೃದಯ ಮೀಟಿದೆ ಪ್ರೇಮ ವೀಣೆಯ, ರಾಗವಾಗಿದೆ ಅನುರಾಗ

ಮನಸು ಮಿಡಿದಿದೆ ನೂರು ತಂತಿಯ, ಪ್ರೇಮದ ಭಾವಾವೇಗ!

ಹೊಳೆಯುತಿದೆ ನನ್ನೀ ತಿಲಕ, ಬಳೆಗಳು  ನುಡಿದಿವೆ ಘಲ್‌ಘಲ್‌

ಸಂಜೆಯ ತಂಗಾಳಿ ತಾ ಸುಳಿದಾಡಿ ಸೀರೆಯ ಸೆರಗು ಜಿಲ್‌ಜಿಲ್‌

ಹಾರಾಡಿದೆ ಮುಂಗುರುಳು ಬಾಚಲು ಸಿಗದೆ ಇನಿಯನ ಕಂಗಳ ಮೋಡಿಗೆ

ಹೂವಾಗಿದೆ ಹೃದಯ ಪ್ರೇಮದ ಗಾನಕೆ ನಲ್ಲನ ನೆಚ್ಚಿನ ನೋಟಕೆ

ನಾ ಮುಡಿದಾ ಮಲ್ಲಿಗೆ ಹೂವಿನ ಮಾಲೆ ಹೊಸ ಪರಿಮಳ ತಾ ಬೀರಿದೆ

ಪ್ರಿಯಕರನ ತೋಳಿನ ಆಸರೆ ಬಯಸಿದೆ ಈ ಜೀವ

ಸಾಕೀ ಒಂಟಿತನ ಬೇಕೆಂದಿದೆ ಜೋಡಿಯ ಪ್ರಿಯ ಆಗಮನ!

- ಬೃಂದಾಸ್ವಾಮಿ, ಶಿವಮೊಗ್ಗ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ