.... ಸುಂದರಿಯ ಕಾಪಾಡುವವರಿಲ್ಲವೇ? : ಛೇ...ಛೇ! ಈಕೆ ಬಿದ್ದೇ ಹೋದಳೆಂದು ಗಾಬರಿಯಾಗಬೇಡಿ. ಈಕೆ ಕೇವಲ ಇಲ್ಲಿಂದಲ್ಲಿಗೆ ದುಮುಕಿದ್ದಷ್ಟೇ! ಐರ್ಲೆಂಡ್‌ನ ಇತ್ತೀಚಿನ ಒಂದು ಉತ್ಸವದಲ್ಲಿ ಫ್ಯಾನ್ಸಿ ಡ್ರೆಸ್‌ ಗೆಟಪ್‌ನಲ್ಲಿ ನೀರು ಮಂಜಿನಂತೆ ಕೊರೆಯುವ ಸಂದರ್ಭದಲ್ಲಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಈಕೆ ಹೀಗೆ ಮಾಡಿ ತೋರಿಸಿದಳು.

ಕಳಂಕ ತಗುಲದಿರುತ್ತದೆಯೇ? : ಮೆಕ್ಸಿಕನ್‌ ನಗರದಲ್ಲಿ ಗ್ಲೋರಿಯಾ ಟ್ರೇವಿ ಜನಪ್ರಿಯ ಗಾಯಕಿ ಎಂಬುದೇನೋ ನಿಜ, ಮಕ್ಕಳ ಕೈಲಿ ಲೈಂಗಿಕ ದುರ್ವ್ಯವಹಾರ ನಡೆಸಿದ್ದಾಳೆಂಬ ಆರೋಪಕ್ಕೆ ಗುರಿಯಾದ ಈಕೆ ಅದಕ್ಕಾಗಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿದ್ದೂ ಆಯ್ತು. ಮರಳಿ ಯತ್ನವ ಮಾಡು ಎಂಬಂತೆ ಈಕೆ ಮತ್ತೆ ವೇದಿಕೆ ಹತ್ತಿ ಮೈಕ್‌ ಹಿಡಿದು ಗ್ಲಾಮರಸ್‌ ಸ್ಟೆಪ್ಸ್ ಹಾಕುತ್ತಿದ್ದಾಳೆ. ಅವಳ ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೋ..... ಕಾಲವೇ ನಿರ್ಧರಿಸಬೇಕು.

ಟೆಡ್ಡಿ ಬೇರ್ಗಳಲ್ಲಿ ಲ್ಯಾವೆಂಡರ್ ಪರಿಮಳ :  ಆಹಾ..... ಇದಲ್ಲವೇ ಮಜಾ! ಆಸ್ಟ್ರೇಲಿಯಾದ ಕಂಪನಿಯೊಂದು ಕಳೆದ ನವೆಂಬರ್‌ನಲ್ಲಿ ಇಂಥ ಪರಿಮಳಭರಿತ ಟೆಡ್ಡಿ ಬೇರ್‌ನ್ನು ಚೀನಾದ ರಾಷ್ಟ್ರಪತಿ ಶೀ ಜಿನ್‌ಪಿಂಗ್‌ರಿಗೆ ಉಡುಗೊರೆ ನೀಡಿತು. ಅಂದಿನಿಂದ ಚೀನಾದಲ್ಲಿ ಜನಪ್ರಿಯವಾದ ಇಂಥ ಲ್ಯಾವೆಂಡರ್‌ಯುಕ್ತ ಅತ್ತರು ಬಳಿದ ಟೆಡ್ಡಿಗಳು ವಿಶ್ವದೆಲ್ಲೆಡೆ ಹೆಸರು ಗಳಿಸುತ್ತಿವೆ.

ಹೆಸರು ಹಣ ಗಳಿಸಲು ಹೊಸ ಪರಿ : ಹಿಂದೆ ಮೊದಲ ಬಾರಿಗೆ ಆಫ್ರಿಕಾದಲ್ಲಿ ಕಾಫಿ ಬೆಳೆಯನ್ನು ಬೆಳೆದಿದ್ದರಂತೆ, ಆದರೆ ಈಗ ಅಲ್ಲಿ ಕಾಫಿಗೆ ಬೇಡಿಕೆ ಇಲ್ಲ. ಇದನ್ನು ಮತ್ತೆ ಜನಪ್ರಿಯಗೊಳಿಸಲು `ನಿಯೋ ಕೆಫೆ' ಲಾಗೋಸ್‌ನಲ್ಲಿ ಅನೇಕ ಔಟ್‌ಲೆಟ್ಸ್ ಗಳನ್ನು ತೆರೆಯಿತು. ಅಲ್ಲಿನ ಒಂದು ಔಟ್‌ಲೆಟ್‌ನಲ್ಲಿ ಕಾಫಿಯ ಮಜಾ ಪಡೆಯುತ್ತಾ ಸೇಲ್ಸ್ ಗರ್ಲ್ ತನ್ನ ಕೆಲಸದಲ್ಲಿ ತಲ್ಲೀನಳಾಗಿದ್ದಾಳೆ.

samachar-darshan-4

ಯಶಸ್ಸಿನ ಸೋಪಾನಗಳು : ಮಿಸ್‌ ಯೂನಿವರ್ಸ್‌ ಕಾಂಪಿಟಷನ್‌ನಲ್ಲಿ ಭಾಗಹಿಸುವುದೆಂದರೆ ಪ್ರತಿ ಕ್ಷಣ ಮೇಕಪ್‌ ಸಮೇತ ಕ್ಯಾಟ್ ವಾಕಿಗೆ ರೆಡಿಯಾಗಿರಲೇಬೇಕು. ಫ್ರೆಂಚ್‌ ಗಯಾನಾ ದೇಶದ ನಿಕೇತಾ ಬಾರ್ಕರ್‌ ವಿಶಿಷ್ಟ ಗ್ಲಾಮರಸ್‌ ಡಿಸೈನರ್‌ ಗೌನ್‌ನಲ್ಲಿ, ಅಮೆರಿಕಾದ ಮಿಯಾಮಿನಲ್ಲಿ ಸುತ್ತಾಡುತ್ತಿದ್ದಾಗ, ಕ್ಲಿಕ್ಕಿಸಲಾದ ಪೋಸ್‌ ಇದು.

ಹೀಗೊಂದು ವಿರೋಧದ ಪರಿ :  ಕೆಲವು ಮುಸಲ್ಮಾನ ಕಂದಾಚಾರಿಗಳ ಕಾರಣ, ಯೂರೋಪಿನ ಸಾಮಾನ್ಯ ಮುಸಲ್ಮಾನರು ಕಟಕಟೆ ಹತ್ತುವ ದಯನೀಯ ಸ್ಥಿತಿ ಬಂದಿದೆ. ಬರ್ಲಿನ್‌ನ ಭಯೋತ್ಪಾದಕರ ತಂಡದ ಮೆರವಣಿಗೆಯನ್ನು ಖಂಡಿಸಲೆಂದೇ ಈ ರೀತಿ ಛತ್ರಿಗಳನ್ನು ಹಿಡಿದು ಉಗ್ರ ಪ್ರತಿಭಟನೆ ನಡೆಸಿದರು.

ಜೀವನ ಇರುವುದೇ ಆನಂದಿಸಲು :   ಈ ದೇಶವೇನೋ ಕಟ್ಟಾ ಮುಸಲ್ಮಾನರದೇ, ಆದರೆ ಹಾವಭಾವಗಳು ಮಾತ್ರ ಪಾಶ್ಚಾತ್ಯರದ್ದು. ಲೆಬೆನಾನ್‌ನ ರಾಜಧಾನಿ ಬೇರೂತ್‌ ಇಂಥ ಒಂದು ನೆಮ್ಮದಿಯ ತಾಣ ಎನಿಸಿದೆ. ಅಲ್ಲಿ ಜನ ತಮ್ಮ ಕೆಲಸ ಕಾರ್ಯಗಳ ನಡುವೆ ಯಾವುದೇ ಪರದೆಗಳು, ಕಟ್ಟುಪಾಡುಗಳಿಲ್ಲದೇ ಸ್ವತಂತ್ರರಾಗಿ ಜೀವಿಸುತ್ತಿದ್ದಾರೆ. ಇಂಥ ನೆಮ್ಮದಿ ನಮ್ಮಲ್ಲೂ ಲಭ್ಯವಾಗಬಾರದೇ?

ಈಗ ನೆನಪುಗಳಷ್ಟೇ ಲಭ್ಯ : 2004ರ ಡಿಸೆಂಬರ್‌ 26 ರಂದು ಅಪ್ಪಳಿಸಿದ ಸುನಾಮಿ ಭಾರತವನ್ನೂ ಒಳಗೊಂಡಂತೆ ಇಂಡೋನೇಷ್ಯಾ, ಶ್ರೀಲಂಕಾ, ಸೋಮಾಲಿಯಾದ ಬಹಳಷ್ಟು ಪ್ರಯಾಣಿಕರನ್ನು ನಿರ್ನಾಮಗೊಳಿಸಿತು. ಈ ಮಹಾಪ್ರಳಯದ 10ನೇ ವರ್ಷದ ನೆನಪಾಗಿ, ಹಲವು ದೇಶಗಳು ಆ ದಿನವನ್ನು ಸ್ಮರಿಸಿದವು. ತಮ್ಮ ಬಂಧುಗಳನ್ನು ಕಳೆದುಕೊಂಡ ಇಬ್ಬರು ಪ್ರವಾಸಿಗರು, ಅವರಿದ್ದ ಹಡಗನ್ನೇ ದಿಟ್ಟಿಸುತ್ತಾ ದುಃಖಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ