ಕರ್ನಾಟಕ ರಾಜ್ಯದ ನಾಲ್ಕನೇ ದೊಡ್ಡ ಜಿಲ್ಲೆ ಎಂದು ಪರಿಗಣಿಸಲ್ಪಟ್ಟಿರುವ ಧಾರವಾಡ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಂತಿರುವ ಜಿಲ್ಲೆ. ಅದರಲ್ಲೂ ಹುಬ್ಬಳ್ಳಿ ಎಂದ ತಕ್ಷಣ ವಾಣಿಜ್ಯೋದ್ಯಮದ ತಾಣ ಎಂದು ಎಲ್ಲರ ಮನದಲ್ಲೂ ಬೇರೂರಿಬಿಟ್ಟಿದೆ. ಹುಬ್ಬಳ್ಳಿಯಲ್ಲಿ ರೈಲು, ವಿಮಾನ ಮತ್ತು ರಸ್ತೆ ಸಾರಿಗೆ ಎಲ್ಲ ಸೌಕರ್ಯಗಳೂ ಇರುವುದರಿಂದ ಮುಖ್ಯ ಸಾರಿಗೆ ಕೇಂದ್ರದಿಂದಲೂ ಪರಿಗಣಿಸಲ್ಪಟ್ಟಿದೆ. ಹುಬ್ಬಳ್ಳಿಗೆ ಬಂದವರು ಇಲ್ಲಿನ ಧರೆಗಿಳಿದ ಸ್ವರ್ಗವೆಂದೇ ಕರೆಸಿಕೊಳ್ಳುತ್ತಿರುವ ನೃಪತುಂಗ ಬೆಟ್ಟಕ್ಕೆ ಒಮ್ಮೆಯಾದರೂ ಭೇಟಿ ನೀಡಲಿಲ್ಲವೆಂದಾದರೆ ನೀವು ಏನನ್ನೋ ಕಳೆದುಕೊಂಡಂತೆ, ಜೊತೆಗೆ ಪರಿಸರ ಪ್ರಿಯರಿಗಂತೂ ಇದು ಸ್ವರ್ಗವಷ್ಟೇ ಅಲ್ಲ, ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲದೇನೋ ಎಂಬಂತಿದೆ.

ಹುಬ್ಬಳ್ಳಿಯ ಡಾ. ಗೋವಿಂದ ಮಣ್ಣೂರ ಎಂಬುವರ ಹೆಸರಿರುವ ಫಲಕವೊಂದರಲ್ಲಿನ ಈ ಸಾಲುಗಳು ನೃಪತುಂಗ ಬೆಟ್ಟದ ಕುರಿತು ಈ ರೀತಿ ಹೇಳುತ್ತವೆ:

ಹತ್ತು ಬಾವಿಗಳಿಗೆ ಒಂದು ಕೆರೆ ಸಮ, ಹತ್ತು ಕೆರೆಗಳಿಗೆ ಒಂದು ಸರೋವರ ಸಮ, ಹತ್ತು ಸರೋವರಗಳಿಗೆ ಒಂದು ಸಾಗರ ಸಮ, ಹತ್ತು ಸಾಗರಗಳಿಗೆ ಒಬ್ಬ ಸತ್ಪುರುಷ ಸಮ, ಹತ್ತು ಸತ್ಪುರಷರಿಗೆ ಒಬ್ಬ ಹೆತ್ತ ತಾಯಿ ಸಮ, ಹತ್ತು ತಾಯಂದಿರಿಗೆ ಒಂದು ಮರ ಸಮ. ನೃಪತುಂಗ ಬೆಟ್ಟ ಧರೆಗಿಳಿದ ಸ್ವರ್ಗದ ತುಣುಕು ಇಲ್ಲಿ ಮಾಡಬೇಡಿ ಕೊಳಕು! ಎಂಬ ಸಂದೇಶ ಇಲ್ಲಿ ಅಳಡಿಸಿರುವರು. ಅಂದಹಾಗೆ ಹುಬ್ಬಳ್ಳಿ ಬೆಂಗಳೂರಿನಿಂದ 400 ಕಿ.ಮೀ. ಧಾರವಾಡದಿಂದ 20 ಕಿ.ಮೀ. ಬೆಳಗಾವಿಯಿಂದ 85 ಕಿ.ಮೀ. ದೂರದಲ್ಲಿದೆ. ವಾಣಿಜ್ಯ ಕೇಂದ್ರ ಹುಬ್ಬಳ್ಳಿಯನ್ನು ಛೋಟಾ ಮುಂಬೈ ಎಂದೂ ಕರೆಯುತ್ತಾರೆ. ಇದು ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರಲ್ಲಿ  ಬರುವುದು. ಅಷ್ಟೇ ಅಲ್ಲ, ಕಾರವಾರ ಬಂದರು ಕೂಡ ಇಲ್ಲಿಂದ 165 ಕಿ.ಮೀ. ಅಂತರವಿದ್ದು ಒಂದೆಡೆ ನೈಋತ್ಯ ರೈಲ್ವೆ ವಲಯ, ಮತ್ತೊಂದೆಡೆ ವಿಮಾನ ನಿಲ್ದಾಣ, 46 ವಾರ್ಡ್‌ ಹೊಂದಿದ ಮಹಾನಗರ ಪಾಲಿಕೆ ಎನಿಸಿದೆ. 1997ರಿಂದ ವಾಯವ್ಯ ಸಾರಿಗೆ ಸಂಸ್ಥೆಯನ್ನು ಹೊಂದುವ ಮೂಲಕ ರಾಜ್ಯದ ಎಲ್ಲ ಮಾರ್ಗಗಳಿಂದಲೂ ರಸ್ತೆ ಸಾರಿಗೆ ಸಂಪರ್ಕ ಹೊಂದಿದೆ.

ಹುಬ್ಬಳ್ಳಿ ಧಾರವಾಡ ನಡುವೆ ಅವಳಿ ನಗರಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‌ಗಳಲ್ಲಿ ದಿನಕ್ಕೆ 55 ರೂಪಾಯಿಗಳ ರಿಯಾಯಿತಿ ಪಾಸ್‌ ಸೌಲಭ್ಯವುಂಟು. ಇದನ್ನು ಪಡೆದರೆ ಹುಬ್ಬಳ್ಳಿ ಧಾರವಾಡವನ್ನು ಒಂದು ದಿನದ ಮಟ್ಟಿಗೆ ಎಲ್ಲೆಂದರಲ್ಲಿ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸಬಹುದಾಗಿದೆ. ಒಟ್ಟಾರೆ ಹುಬ್ಬಳ್ಳಿಗೆ ರಸ್ತೆ, ರೈಲು, ವಿಮಾನ ಯಾವುದೇ ಮಾರ್ಗದ ಮೂಲಕ ಬಂದಿಳಿದರೂ ಕೂಡ ನಗರ ಸಾರಿಗೆ ಬಸ್‌ ಮೂಲಕ ನೃಪತುಂಗ ಬೆಟ್ಟ ತಲುಪಲು ಅನುಕೂಲಗಳಿವೆ. ನಗರ ಸಾರಿಗೆ ಬಸ್ಸುಗಳಾದ ಶಿರಡಿನಗರ, ವಿಶ್ವೇಶ್ವರನಗರ, ಪತ್ರಕರ್ತರ ನಗರ, ಶಕ್ತಿನಗರ ಬಸ್‌ಗಳು ಸಬ್‌ ಜೈಲೈ ‌ಹತ್ತಿರದ ಬಸ್‌ ನಿಲುಗಡೆಯಲ್ಲಿ ನಿಂತು ಹೋಗುತ್ತವೆ. ಅಲ್ಲಿಂದ ಬೆಟ್ಟಕ್ಕೆ ಅರ್ಧ ಕಿ.ಮೀ.ನಷ್ಟು ನಡೆದು ಬರಬೇಕು. ಇಲ್ಲವೇ ಅಲ್ಲಿಯೇ ನಿಂತಿರುವ ಆಟೋ ಮೂಲಕ ಬರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ