ಡಾ. ತನೇಯಾ ನರೇಂದ್ರ

ಡಾ. ಕ್ಯೂಟರಸ್‌ ಎಂದೇ ಖ್ಯಾತರಾದ ಡಾ. ತನೇಯಾ ನರೇಂದ್ರ ಪ್ರಸಿದ್ಧ ಸ್ತ್ರೀರೋಗ ತಜ್ಞೆ, ಲೈಂಗಿಕ ಆರೋಗ್ಯ ಶಿಕ್ಷಕಿ, ಭ್ರೂಣವಿಜ್ಞಾನಿ, ವೈಜ್ಞಾನಿಕ ಹಾಗೂ ಸೋಶಿಯಲ್ ಮೀಡಿಯಾದ ಇನ್‌ ಫ್ಲೂಯೆನ್ಸರ್‌. ಈಕೆ ಚಿಕಿತ್ಸಾ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಈಕೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ, ನೀತಿ ಆಯೋಗ ಹಾಗೂ ಆಯುಷ್ಮಾನ್‌ ಭಾರತದ ಮೂಲಕ ಸಮರ್ಥಿತ ವಿ ಪರಿಷತ್ತಿನಲ್ಲಿ `ಹೆಲ್ತ್ ಇನ್‌ ಫ್ಲೂಯೆನ್ಸರ್‌ ಆಫ್‌ ದಿ ಇಯರ್‌' ಹಾಗೂ ಟಾಪ್‌ 100 ಡಿಜಿಟಲ್ ಸ್ಟಾರ್ಸ್‌ ನ ಪುರಸ್ಕಾರ ದೊರಕಿದೆ. ಇಷ್ಟು ಮಾತ್ರವಲ್ಲದೆ, ಆಕೆ ವಿಭಿನ್ನ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ.

ಸೋಶಿಯಲ್ ಮೀಡಿಯಾದ ಇಂದಿನ ಯುಗದಲ್ಲಿ ಕೆಲವು ಎಜುಕೇಟರ್ಸ್‌ ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳ ಪರವಾಗಿ ಮಾತನಾಡುತ್ತಾರೆ ಎಂಬುದೇನೋ ಸರಿ, ಆದರೆ ಜನರ ಅರೆಬರೆ ಜ್ಞಾನವನ್ನು ಇನ್ನಷ್ಟು ಕುಲಗೆಡಿಸಿಡುತ್ತಾರೆ ಎಂದು ಹೇಳುತ್ತಾರೆ ತನೇಯಾ. ಹೀಗಾಗಿ ನುರಿತ ಲೈಂಗಿಕ ತಜ್ಞರ ಹೆಸರು ಹೇಳುವಾಗ ನಮಗೆ ಥಟ್ಟನೆ ಹೊಳೆಯುವವರೇ ಡಾ. ತನೇಯಾ ನರೇಂದ್ರ. ಈಕೆ ಬಹಳ ಜನಪ್ರಿಯತೆ ಪಡೆದಿದ್ದು, ಸೈಂಟಿಸ್ಟ್ ಸೆಕ್ಸ್ ಹೆಲ್ತ್ ಕೇರ್‌ ಎಜುಕೇಟರ್‌ ಸಹ ಆಗಿದ್ದಾರೆ.

ತಮ್ಮ ಚಾನೆಲ್ ‌ಡಾ. ಕ್ಯೂಟರಸ್‌ ನ ಮಾಧ್ಯಮದಿಂದ ಈಕೆ ಭಾರತದಲ್ಲಿ ಲೈಂಗಿಕ ಆರೋಗ್ಯ ಮತ್ತು ಮಾನವ ದೇಹದ ವೈಜ್ಞಾನಿಕ ವಿಶ್ಲೇಷಣೆ ನೀಡುವ ಕ್ರಮ ಅನುಸರಿಸುತ್ತಿದ್ದಾರೆ. ಇವರ `ಡಾ. ಕ್ಯೂಟರಸ್‌ : ಎವರಿಥಿಂಗ್‌ ನೋಬಡಿ ಟೆಲ್ಸ್ ಯೂ ಅಬೌಟ್‌ ಯುವರ್‌ ಬಾಡಿ' ಪುಸ್ತಕದಲ್ಲಿ ಆಕೆ ಇದೇ ವಿಷಯದ ಕುರಿತಾಗಿ ಸ್ಪಷ್ಟ ವಿವರಣೆ ನೀಡುತ್ತಾರೆ.

ಲೈಂಗಿಕ ಶಿಕ್ಷಣದ ಮುಕ್ತ ಮಾತುಕಥೆ

2022ರಲ್ಲಿ ಪ್ರಕಟಿತ ಈ ಪುಸ್ತಕದಿಂದ ಈಕೆ ಖ್ಯಾತಿ ಗಳಿಸಿದರು. ಈ ಪುಸ್ತಕ ಬೆಸ್ಟ್ ಸೆಲ್ಲರ್‌ ಎನಿಸಿತು. ಇದನ್ನು ಅನೇಕ ಭಾಷೆಗಳಿಗೆ ಅನುವಾದ ಮಾಡಲಾಯಿತು. ಇದರ ಮರಾಠಿ ರೂಪಾಂತರ ಅಷ್ಟೇ ಜನಪ್ರಿಯ. ಅಷ್ಟು ಮಾತ್ರವಲ್ಲದೆ, ಈಕೆ ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಆ್ಯಕ್ಟಿವ್ ‌ಆಗಿರುತ್ತಾರೆ. ಆ ವಿಷಯಗಳ ಕುರಿತು ಸಕ್ರಿಯ ಜ್ಞಾನ ನೀಡುತ್ತಾರೆ. ಈ ಕುರಿತಾಗಿ ಜನ ಕುಸುಕುಸು ಮಾತನಾಡಿಕೊಳ್ಳುತ್ತಾ ಅವೈಜ್ಞಾನಿಕ ಮಾಹಿತಿ ಹಂಚುವುದೇ ಹೆಚ್ಚು. ಈಕೆಯ ಕಾರಣದಿಂದಾಗಿ ಲೈಂಗಿಕ ರೋಗಗಳ ಬಗ್ಗೆ ಮಾತನಾಡುವ ಹೆಂಗಸರು, ಈಗ ಮುಕ್ತವಾಗಿ ಲೈಂಗಿಕ  ಶಿಕ್ಷಣದ ಬಗ್ಗೆ ಚರ್ಚೆ ಮಾಡತೊಡಗಿದ್ದಾರೆ. ಈಕೆಯ ಅಭಿಪ್ರಾಯದಲ್ಲಿ, ಲೈಂಗಿಕ ಶಿಕ್ಷಣವನ್ನು ಒಂದು ಮುಜುಗರದ ವಿಷಯವಾಗಿಸಿ, ಅದನ್ನು ಚರ್ಚಿಸಲಿಕ್ಕೇ ಹೋಗದೆ, ಪ್ರಾಪ್ತ ವಯಸ್ಕರಲ್ಲಿ ಸಹ ಈ ಕುರಿತಾಗಿ ತಪ್ಪು ಮಾಹಿತಿಗಳೇ ತುಂಬಿಕೊಂಡಿವೆ. ಹೀಗಾಗಿ ಪ್ರೌಢವಯಸ್ಸು ದಾಟುತ್ತಿದ್ದಂತೆ ಗಂಭೀರ ಲೈಂಗಿಕ ರೋಗಕ್ಕೆ ಬಲಿಯಾಗುತ್ತಾರೆ.

ಈಕೆ 25ರ ಹರೆಯದಿಂದಲೇ ತಮ್ಮ ಗುರಿ ಏನೆಂದು ಕಂಡುಕೊಂಡರು. ಶೈಕ್ಷಣಿಕ ವಿಷಯದಲ್ಲಿ ಮೊದಲಿಗರಾದ ಈಕೆ, ಈ ಕಾರಣದಿಂದಲೇ ಮೆಡಿಕಲ್ ಕಾಲೇಜಿನಲ್ಲಿ ಕಲಿತು, ಮುಂದೆ ಆಕ್ಸ್ ಫರ್ಡ್‌ ವಿ.ವಿ.ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರ ತಾಯಿ ತಂದೆ ಇಬ್ಬರೂ ಗೈನಕಾಲಜಿಸ್ಟ್ಸ್. ಹೀಗಾಗಿ ಕಿರಿಯ ವಯಸ್ಸಿನಿಂದಲೇ ಈಕೆ ಲೈಂಗಿಕ ಆರೋಗ್ಯದ ವಿಚಾರವಾಗಿ ಗಟ್ಟಿಗರಾದರು. ನಂತರ ಈಕೆ ಕ್ಲಿನಿಕ್‌ ಭ್ರೂಣ ವಿಜ್ಞಾನದಲ್ಲಿ ಮಾಸ್ಟರ್ಸ್‌ ಡಿಗ್ರಿ ಪಡೆದರು. 2020ರಿಂದ ಡಾ. ಕ್ಯೂಟರಸ್‌ ಹೆಸರಿನಿಂದ ಇನ್‌ ಸ್ಟಾಗ್ರಾಂ ಅಕೌಂಟ್‌ ಆರಂಭಿಸಿದರು. ಈಗ ಅದಕ್ಕೆ ಲಕ್ಷಾಂತರ ಮಂದಿ ಫಾಲೋಯರ್ಸ್‌ ಇದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ