ನಟನೆ, ಮಾಡೆಲಿಂಗ್ಕ್ಷೇತ್ರಗಳಲ್ಲಿ ಮಿಂಚುತ್ತಾ, ಕಿರಿತೆರೆ, ಬೆಳ್ಳಿತೆರೆಗಳಲ್ಲೂ ಸೈ ಎನಿಸಿಕೊಂಡ ತ್ವಿಷಾ ತೇಜು ಬಹು ಪ್ರತಿಭೆಗಳ ಗಣಿ. ಇವರ ಸಾಧನೆಯ ಬಗ್ಗೆ ವಿವರವಾಗಿ ತಿಳಿಯೋಣವೇ….?

ತ್ವಿಷಾ ತೇಜು ಬೆಂಗಳೂರಿನ ವೈಟ್‌ ಫೀಲ್ಡ್ ನಲ್ಲಿ 1996ರಂದು ವಿಶ್ವನಾಥ್‌ ಮತ್ತು ಪುಷ್ಪಾ ದಂಪತಿಗಳ ಪುತ್ರಿಯಾಗಿ ಜನಿಸಿದರು. ಈ ದಂಪತಿಗಳ ಮುದ್ದಿನ ಮಗಳಾಗಿ, ಅಣ್ಣ ಮಂಜುನಾಥ್‌ ರ ಪ್ರೀತಿಯ ತಂಗಿಯಾಗಿ ಬೆಳೆದರು.

ಇವರ ನರ್ಸರಿಯಿಂದ ಪಿಯುಸಿವರೆಗಿನ ವಿದ್ಯಾಭ್ಯಾಸ ಬೆಂಗಳೂರಿನ ಹೋಪ್‌ ಫಾರಂನಲ್ಲಿದ್ದ ಉಜ್ವಲ ವಿದ್ಯಾಲಯದಲ್ಲಿ ನಡೆಯಿತು. ಇವರು ಎಲ್.ಕೆ.ಜಿ ಯಲ್ಲಿದ್ದಾಗ ಶಿವರಾಜ್‌ ಕುಮಾರ್‌ ಅಭಿನಯದ `ಸುಂದರ ಕಾಂಡ’ ಸಿನಿಮಾ ಶೂಟಿಂಗ್‌ ಅವರು ಓದುತ್ತಿದ್ದ ಉಜ್ವಲ್ ವಿದ್ಯಾಲಯದಲ್ಲಿ ನಡೆಯಿತು. ಬೆಳೆಯುವ ಸಿರಿ ಮೊಳಕೆಯಲ್ಲಿ ಆಗಲೇ ಅವರು ನಟ ಶಿವರಾಜ್‌ ಕುಮಾರ್‌ ರ ಫ್ಯಾನ್‌ ಆಗಿಬಿಟ್ಟರು. ಅಲ್ಲದೆ, ಆಗಿನಿಂದ ಚಲನಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಅವರಲ್ಲಿ ಮೂಡಿತು. ಬೆಳೆಯುವ ಸಿರಿ ಮೊಳಕೆಯಲ್ಲಿ ಅವನ್ನು ಹಾಗೆ ಇವರು ಶಾಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇವರ ಆಸಕ್ತಿಯನ್ನು ಗಮನಿಸಿದ ಇವರ ಪೋಷಕರು, ಡ್ಯಾನ್ಸ್ ಕಲಿಯಲು ಸೇರಿಸಿದರು. ಅದು ಅವರಿಗೆ ಇನ್ನೂ ಹೆಚ್ಚಿಗೆ ಕಲಿಯಲು ಅವಕಾಶ ನೀಡಿತು. ಡ್ಯಾನ್ಸ್ ನಲ್ಲಿ ಆಸಕ್ತಿಯಿದ್ದರೂ ತೇಜು ಎಂದೂ ಓದಿನಲ್ಲಿ ಹಿಂದೆ ಬೀಳಲಿಲ್ಲ. ತುಂಟಿಯಾಗಿದ್ದ ಇರುವ ಓದಿನಲ್ಲಿ ಚುರುಕು. ಹಾಗೆಯೇ ಆಟೋಟ ಸ್ಪರ್ಧೆಗಳಲ್ಲಿ  ಕೂಡಾ ಭಾಗವಹಿಸುತ್ತಿದ್ದರು. ಶಾಲೆಯಲ್ಲಿ ಅಚ್ಚುಮೆಚ್ಚಿನ ಗೆಳತಿ, ಶಿಕ್ಷಕಿಯರಿಗೆ ಉತ್ತಮ ವಿದ್ಯಾರ್ಥಿನಿಯಾಗಿದ್ದರು.

ಡ್ಯಾನ್ಸ್ ಕಲಿಯುವಾಗ ಅಲ್ಲಿಗೆ ಬಂದ ನಿರ್ದೇಶಕರೊಬ್ಬರು ಈ ಹುಡುಗಿಗೆ ಧಾರಾವಾಹಿಯಲ್ಲಿ ಅಭಿನಯಿಸಲು ಆಸಕ್ತಿಯಿದೆಯೇ ಎಂದು ಕೇಳಿದರು, ಆಗ ಪೋಷಕರಿಗೆ ಈ ಸುದ್ದಿ ತಿಳಿದಾಗ ಅವರು ಸಂತೋಷದಿಂದ ಒಪ್ಪಿಗೆ ಕೊಟ್ಟರು. ಕಿರುತೆರೆಗೆ ಎಂಟ್ರಿ ಹೀಗೆ ತೇಜು ಎಂಟನೇ ತರಗತಿಯಲ್ಲಿದ್ದಾಗಲೇ ಮೊದಲನೇ ಬಾರಿಗೆ 2010ರಲ್ಲಿ `ಹ್‌್ಯಳಿ ನಮ್ಮೂರ ಶೂರರು’ ಧಾರಾವಾಹಿಯಲ್ಲಿ ನಟಿಸಿದ್ದರು. ಅದು ಉದಯ ಟಿವಿಯಲ್ಲಿ ಪ್ರಸಾರವಾಗಿತ್ತು. ನಂತರ ಹಲವಾರು ಆಲ್ಬಂ ಹಾಡುಗಳಲ್ಲಿ ಅಭಿನಯಿಸಿದ್ದಾರೆ. ನಂತರ `ಆ ಕ್ಷಣ, ಐ ಆ್ಯಮ್ ಲಕ್ಕಿ, ಸೈಕಲ್ ಸುಂದರ’ ಮುಂತಾದ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಭಿನಯದಲ್ಲಿ ಇವರಿಗಿದ್ದ ಆಸಕ್ತಿಯನ್ನು ಕಂಡು ಪಿಯುಸಿ ಮುಗಿದ ಮೇಲೆ ಅವರ ತಂದೆ ಸಿನಿಮಾಗೆ ಆಡಿಶನ್‌ ನಡೆಯುತ್ತಿದ್ದುದನ್ನು ತಿಳಿದು ಇವರನ್ನು ಆಡಿಶನ್‌ ಗೆ ಕರೆದುಕೊಂಡು ಹೋದರು. ಒಂಚೂರು ಅಳುಕಿಲ್ಲದೆ ನಟಿಸಿದರು. ಬೆಳ್ಳಿತೆರೆಗೆ ಪ್ರವೇಶನಂತರ ಇವರನ್ನು `ಹ್ಯಾಪಿ ಮ್ಯಾರೀಡ್‌ ಲೈಫ್‌’ ಚಿತ್ರಕ್ಕೆ ನಾಯಕಿಯನ್ನಾಗಿ ಆರಿಸಿದರು. ವರ್ಧನ್‌ ಪ್ರೊಡಕ್ಷನ್‌ ನಲ್ಲಿ, ಆನಂದ್‌ ಠವರ್ ನಿರ್ದೇಶನದಲ್ಲಿ ಬಂದ ಈ ಚಿತ್ರಕ್ಕೆ ವರ್ಧನ್‌ ನಾಯಕರಾಗಿ ನಟಿಸಿದ್ದರು. 2016ರಲ್ಲಿ ಅದು ತೆರೆಕಂಡಿತು. ಈ ಚಿತ್ರ ಸಾಕಷ್ಟು ಜನರ ಮನದಲ್ಲಿ ನಿಂತಿತು.

ನಂತರ ಈಕೆ ಮಾಡೆಲಿಂಗ್‌ ಕಡೆಗೆ ಗಮನಹರಿಸಿ, ಅಮೆರಿಕನ್‌ ಬ್ರಾಂಡ್‌ ಕಂಪನಿಯಿಂದ ಮಾಸ್ಟರ್ಸ್‌ ಓದುವಾಗ ಮಾಡೆಲಿಂಗ್ ನಲ್ಲಿ ಕೆರಿಯರ್‌ ರೂಪಿಸಿಕೊಂಡರು. `ಕ್ಲಿಕ್‌ ಮೈ ಪಿಕ್ಸ್’ ಎನ್ನುವ ಕಂಪನಿಯಲ್ಲಿ ಬ್ರಾಂಡ್‌ ಅಂಬಾಸಿಡರ್‌ ಆಗಿ ಕಾರ್ಯ ನಿರ್ವಹಿಸಿದರು. ಅದಾದ ನಂತರ ಬೇರೆ ಬ್ಯೂಟಿ ಪೇಜೆಂಟ್ಸ್ ಗೆ ಕ್ರಿಯೇಟಿವ್ ‌ಹೆಡ್‌ ಆಗಿ ಕೆಲಸ ಮಾಡಿದ್ದಾರೆ. ನಂತರ `ಕ್ರೀಮ್ ಬಿಸ್ಕೆಟ್‌’ ಕಾಮಿಡಿ ಸೀರೀಸ್‌ ಮಾಡಿದರು. ಅದು ಬಹಳ ಜನಯಪ್ರಿಯತೆ ಪಡೆಯಿತು.

ಕ್ರೀಮ್ ಬಿಸ್ಕೆಟ್‌ ಎಂಟರ್‌ ಟೈನ್‌ ಮೆಂಟ್‌ ಮುಂದೆ ಅದೇ ಹೆಸರಿನಲ್ಲಿ ಕ್ರೀಮ್ ಬಿಸ್ಕೆಟ್‌ ಎಂಟರ್‌ ಟೈನ್‌ ಮೆಂಟ್‌ ಎನ್ನುವ ಸ್ವಂತ ಮಾಡೆಲಿಂಗ್‌ ಏಜೆನ್ಸಿಯನ್ನು ತಮ್ಮ ಫ್ರೆಂಡ್ಸ್ ಜೊತೆ 2020ರಲ್ಲಿ ಶುರು ಮಾಡಿದರು. ಈ ಮೂಲಕ ಈಗಾಗಲೇ ಏಳುವ ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡಿದ್ದಾರೆ. ಮಾಡೆಲಿಂಗ್‌ ಗಾಗಿ ಫೋಟೋಸ್‌. ಫೋಟೋ ಶೂಟ್‌ ಪೋಸಸ್‌, ಗೆಸ್ಟರ್ಸ್‌ ಎಲ್ಲವೂ ಹೇಗಿರಬೇಕು ಎಂದು ಟ್ರೇನಿಂಗ್‌ ನೀಡುತ್ತಿದ್ದಾರೆ. ಈಗಾಗಲೇ  200 ಮಕ್ಕಳು ಮತ್ತು ಹಿರಿಯರು `ಕ್ರೀಮ್ ಬಿಸ್ಕೆಟ್‌’ ಕಂಪನಿಯಲ್ಲಿ ಟ್ರೇನಿಂಗ್‌ ಪಡೆದಿದ್ದಾರೆ. ಇಲ್ಲಿ ಟ್ರೇನಿಂಗ್‌ ಪಡೆದ ಹಲವರು, ಅನೇಕ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ, ಮಾಡೆಲಿಂಗ್‌ ಜಗತ್ತಿನಲ್ಲಿದ್ದಾರೆ. ಇವರ ಮುಖ್ಯ ಗುರಿ ಏನೆಂದರೆ ಮಾಡೆಲಿಂಗ್‌ ಗೆ ಬೇಕಾದ ಹಲವಾರು ವಿಷಯಗಳನ್ನು ಕಲಿಸುವುದಾಗಿದೆ. ಇವಿಷ್ಟೇ ಅಲ್ಲದೇ, ಇವರಿಗೆ ಕಾರ್ಯಕ್ರಮದ ನಿರೂಪಣೆಯಲ್ಲಿ ಕೂಡ ಆಸಕ್ತಿಯಿದೆ. ಶಾಲಾ ಕಾಲೇಜುಗಳ ಆನ್ಯುಯೆಲ್ ಡೇ, ಸ್ಪೋರ್ಟ್ಸ್ ಡೇ, ಯೂಟ್ಯೂಬ್‌ ಚಾನೆಲ್ ‌ಗಳಿಗೆ ಮತ್ತು ಚಲನಚಿತ್ರಗಳ ಪ್ರಮೋಷನ್‌ ಗಳಿಗೆ ಕಾರ್ಯಕ್ರಮದ ನಿರೂಪಣೆಯನ್ನೂ ಮಾಡುತ್ತಿದ್ದಾರೆ.

ಇವರ ಕ್ರೀಮ್ ಬಿಸ್ಕೆಟ್‌ ಎಂಟರ್‌ ಟೈನ್‌ ಮೆಂಟ್‌ ಕಂಪನಿಗೆ ಪುನೀತ್‌ ರಾಜ್‌ ಕುಮಾರ್‌ (ಅಪ್ಪು) ಸ್ವತಃ ಆಸಕ್ತಿಯಿಂದ ನಿಮ್ಮ ಕಂಪನಿಯ ವೆಬ್‌ ಸೈಟ್‌ ನಾನು ಲಾಂಚ್‌ ಮಾಡಿ ಕೊಡುತ್ತೇನೆ ಎಂದು ಹೇಳಿ ತಮ್ಮ ಆಫೀಸಿಗೆ ಕರೆಸಿಕೊಂಡು, ಸೆಪ್ಟೆಂಬರ್‌ 29, 2021ರಂದು ಲಾಂಚ್‌ ಮಾಡಿಕೊಟ್ಟರು. ಹೀಗೆ ಸಿನಿಮಾ ಮತ್ತು ಮಾಡೆಲಿಂಗ್‌ ಎರಡೂ ಕಡೆಯೂ ಸಾಕಷ್ಟು ಪ್ರೋತ್ಸಾಹವಿದೆ ಎಂದು ಹೇಳುತ್ತಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ