ಸಾವು ಎಂದೊಡನೆ ಮನುಷ್ಯನಿಗೆ ಮೂಲತಃ ಕಾಡುವುದು ಭಯ ಮಾತ್ರ. ಸಾವನ್ನು ಗೆದ್ದವರು ಯಾರೂ ಇಲ್ಲ. ಸಾವು ಅನಿವಾರ್ಯ, ಅದನ್ನು ತಪ್ಪಿಸಲಾಗದು. ಸಾವಿನ ಬಗ್ಗೆ ಎಷ್ಟೆಲ್ಲಾ ವ್ಯಾಖ್ಯಾನಗಳಿದ್ದರೂ ಸಾವಿಗೆ ನಾವಿನ್ನೂ ಅಂಜುವುದೇಕೆ......?

ದೇವಲೋಕದ ಸುಂದರ ಲೋಕೇಶನ್‌. ಎಲ್ಲೆಲ್ಲೂ ಸುಂದರ ಜೋಡಿಗಳು, ಆದರೆ ನೀವು ಇಲ್ಲಿ ಇಲ್ಲ. ನಾನು ಎಲ್ಲ ಕಡೆ ತಡಕಾಡಿದೆ, ಹುಡುಕಾಡಿದೆ. ಎಲ್ಲೂ ಕಾಣಲೇ ಇಲ್ಲ. ಎಲ್ಲಿ ಹೋದಿರಿ ನೀವು? ಹಾಗೆ ಹೋಗಿಬಿಟ್ಟರೆ ನನಗೆಷ್ಟು ಗಾಬರಿಯಾಗಬೇಡ. ಅಯ್ಯೋ ಏನಿದು? ಇದ್ದಕ್ಕಿದ್ದಂತೆ ಕಾಲಿಗೆ ಏನೋ ತೊಡರಿದಂತಾಗ್ತಿದೆ. ರಾತ್ರಿ ಕಾಲು ನೋವಂತಾ ಇಟ್ಟುಕೊಂಡ ಹಾಟ್‌ ವಾಟರ್‌ ಬ್ಯಾಗು, ಪಕ್ಕದಲ್ಲಿ ಕೈ ಚಾಚಿದರೆ ನೀವಿಲ್ಲ. ಹೌದಲ್ಲಾ, ನೀವು ನನ್ನನ್ನು ಬಿಟ್ಟು ಹೊರಟು ಹೋಗಿದ್ದಿರಿ, ಶಾಶ್ವತವಾಗಿ, ಆದರೂ ನೀವಿಲ್ಲವೆನ್ನುವ ಸತ್ಯವನ್ನು ನನಗೆ ಒಪ್ಪಿಕೊಳ್ಳಲು ಆಗುತ್ತಲೇ ಇಲ್ಲ. ಇಷ್ಟು ದಿನ ನನ್ನ ಜೊತೆಯಲ್ಲೇ ಇದ್ದವರು ಈಗ ಇಲ್ಲ ಎಂದರೆ ಏನರ್ಥ? ನಾನು ನಿಮ್ಮನ್ನು ಮತ್ತೆ ಮುಟ್ಟಲಾಗುವುದಿಲ್ಲವೇ? ನನ್ನ ಕೈಗೆ ನೀವು ಸಿಕ್ಕುವುದಿಲ್ಲವೇ? ಮತ್ತೆ ನಾನು ನಿಮ್ಮೊಡನೆ ವಾಕ್‌ ಹೋಗಲಾಗುದಿಲ್ಲವೇ? ರಸ್ತೆ ದಾಟುವಾಗ ನಿಮ್ಮ ಕೈಹಿಡಿದು ದಾಟಲಾರೆನೆ? ಗಸಗಸೆ ಹಣ್ಣುಗಳನ್ನು ನಾವಿಬ್ಬರು ಕೊಂಬೆ ಬಗ್ಗಿಸಿ ಕೊಯ್ಯಲು ಆಗುವುದಿಲ್ಲವೇ....? `ಹನ್ನೆರಡು ಗಂಟೆಯಾಯಿತು  ಹಣ್ಣು ಹೆಚ್ಚಿ ಕೊಡೆಂದು,' ಕೇಳುವುದಿಲ್ಲವೇ?  `ಎರಡೂವರೆಯಾದರೂ ಊಟ ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ಮಾಡೆಂದು,' ಹೇಳಲು ನೀವೆಲ್ಲಿದ್ದೀರಾ? `ಊಟದ ನಂತರ ಸ್ವಲ್ಪ ಹೊತ್ತು ಮಲಗು, ನಂತರ ಎಲ್ಲಾ ಮಾಡಿಕೊಳ್ಳುವೆಯಂತೆ. ಆಮೇಲೆ ಫೋನಿನಲ್ಲಿ ಮಾತನಾಡಬಹುದಲ್ಲವೇ....' ಎನ್ನುವವರು ಯಾರು? ಪಾರ್ಕಿಗೆ ಎಲ್ಲ ಹೆಂಗಸರು ಮತ್ತು ಗಂಡಸರು ಬೇರೆಯಾಗಿಯೇ ಬರುತ್ತಿದ್ದರಲ್ಲವೇ? ನಾವು ಮಾತ್ರ ಒಟ್ಟಿಗೆ ಹೋಗುತ್ತಿದ್ದುದು, ನೀವಿಲ್ಲದೆ ನಾನೊಬ್ಬಳೆ ಪಾರ್ಕಿಗೆ ಹೇಗೆ ಹೋಗಲಿ? ಅವರಿಗೆ ಹೇಗೆ ಮುಖ ತೋರಿಸಲಿ? ನಮ್ಮದು ಸುಂದರ ಜೋಡಿ, ಆದರ್ಶ ದಂಪತಿಗಳು, ಜೋಡಿ ಹಕ್ಕಿಗಳು ಎನ್ನುತ್ತಿದ್ದರು. ನನ್ನನ್ನು ಬಿಟ್ಟು ಹೋಗಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಇಲ್ಲ, ನಿಮಗೆ ಇನ್ನೂ ಬದುಕುವ ಆಸೆ ಇತ್ತು, ನಿಮ್ಮ ಕಣ್ಣುಗಳಲ್ಲಿ ವಿದಾಯ ಹೇಳುವ ಭಾವ ಇರಲಿಲ್ಲ. ನಿಮ್ಮನ್ನು ಈ ಭೂಮಿಯಿಂದ ಕರೆದುಕೊಂಡು ಹೋಗಲು ಆ ದೇವರಿಗೆ ಮನಸ್ಸಾದರೂ ಹೇಗೆ ಬಂತು? ನನ್ನ ಬಗ್ಗೆ ಅವನು ಹೇಗೆ ಅಷ್ಟು ನಿಷ್ಕರುಣಿಯಾದ....? ಹೋಗಲಿ ಈಗ ಹೇಗಿದ್ದೀರಾ? ಎಲ್ಲಿದ್ದೀರಾ? ನಿಮ್ಮ ಒಳ್ಳೆಯತನಕ್ಕೆ ನಿಮಗೆ ಸ್ವರ್ಗವೇ ಸಿಗಬೇಕು ಅಥವಾ  ಮತ್ತೊಂದು ಜನ್ಮವನ್ನೆತ್ತಿ ನನಗಾಗಿ ಬರ್ತೀರಾ? ನಂತರ ಏನಾಗುತ್ತದೆ....? ಅದು ಯಾರಿಗೂ ಗೊತ್ತಿಲ್ಲ ಅಲ್ಲವೇ? ಸಾವೆನ್ನುವುದು ಎಷ್ಟು ಕ್ರೂರ ಅಲ್ಲವೇ? ಬೇರೆಯವರಿಗಾದಾಗ ಅದರ ನೋವಿನ ತೀವ್ರತೆಯೇ ಬೇರೆ, ಆದರೆ ನಮಗೇ ಆದಾಗ ಸಹಿಸಲಸಾಧ್ಯ, ಈ ನೋವನ್ನು ನಾವು ಹೇಗೆ ಭರಿಸಲಿ ದೇವಾ?

tera-jana-story1

ಸಂಗಾತಿಯನ್ನು ಕಳೆದುಕೊಂಡಾಗ.....

ಇದು ಬಾಳ ಸಂಗಾತಿಯನ್ನು ಕಳೆದುಕೊಂಡವಳ ಅಳಲು. ಸಾವು ಯಾರನ್ನೂ ಬಿಟ್ಟಿದ್ದಿಲ್ಲ. ಸಾವಿಲ್ಲದ ಮನೆಯಲ್ಲಿ ಸಾಸಿವೆಯನ್ನು ತೆಗೆದುಕೊಂಡು ಬಾ ಎಂದ ಬುದ್ಧ. ಸಾವನ್ನು ಗೆದ್ದವರು ಯಾರಿದ್ದಾರೆ? ಪುರಾಣದ ಸಾವಿತ್ರಿ ತನ್ನ ಗಂಡ ಸತ್ಯವಾನನನ್ನು ಯಮನ ಪಾಶದಿಂದ ಬಿಡಿಸಿಕೊಂಡಳಂತೆ. ಆದರೂ ಅವಳನ್ನು ನಾವಂತೂ ನೋಡಿದ್ದಿಲ್ಲ. ಕೇಳಿದ್ದಷ್ಟೇ. ಬಿಟ್ಟರೆ ಭಕ್ತ ಮಾರ್ಕಂಡೇಯನ ಕಥೆ, ಶಿವಭಕ್ತನಾದ ಅವನು ಸಾವನ್ನು ಗೆದ್ದು ಬಂದದ್ದು, ಯಮನನ್ನೇ ಮತ್ತೆ ಹಿಂದಿರುಗಿ ಕಳುಹಿಸಿದ್ದು. ಬಾಲಕ ನಚಿಕೇತ ಯಮನನ್ನೇ ಸಾವಿನ ರಹಸ್ಯದ ಬಗ್ಗೆ ಕೇಳಿದನಂತೆ. ಇದೆಲ್ಲಾ ನಾವು ಚಿಕ್ಕಂದಿನ ನಮ್ಮ ಶಾಲೆಯ ಪಾಠದಲ್ಲಿ ಕೇಳಿದ್ದಷ್ಟೇ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ