ಪ್ರತಿಯೊಂದು ನಗರಕ್ಕೂ ತನ್ನದೇ ಆದ ವೈಶಿಷ್ಟ್ಯತೆ, ಆಕರ್ಷಣೆ ಇದ್ದೇ ಇರುತ್ತದೆ. ಕೆಲವು ನಗರಗಳು ತಮ್ಮ ಇತಿಹಾಸದಿಂದ ನಿಮ್ಮ ಮನಸೆಳೆದರೆ, ಮತ್ತೆ ಕೆಲವು ನಗರಗಳು ತಮ್ಮ ವರ್ತಮಾನದಿಂದ ಚಕಿತಗೊಳಿಸುತ್ತದೆ. ಇಂತಹದೇ ನೈಸರ್ಗಿಕ ದೃಶ್ಯಗಳು ಮತ್ತು ಆಧುನಿಕತೆಯ ಸಮ್ಮಿಶ್ರಣನ್ನೊಳಗೊಂಡ ಟೊರಾಂಟೊ ನಗರ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಟೊರಾಂಟೊದ ಸಿಎನ್‌ ಟವರ್‌ 555  ಮೀಟರ್‌ ಎತ್ತರವಿದ್ದು, ಇದು ಜಗತ್ತಿನ ಅತಿ ಎತ್ತರದ ಕಟ್ಟಡಗಳಲ್ಲೊಂದು. ಇಲ್ಲಿರುವ ಗಾಜಿನ 6 ಲಿಫ್ಟ್ ಗಳು 58 ಸೆಕೆಂಡ್‌ಗಳಲ್ಲಿ ಅಬ್ಸರ್ವೇಶನ್‌ ಡೆಕ್‌ ತನಕ ತಲುಪಿಸುತ್ತವೆ.

1994ರಲ್ಲಿ ನಿರ್ಮಾಣವಾದ ಈ ಬೃಹತ್‌ ಕಟ್ಟಡದ ನೆಲವನ್ನು ಗಾಜಿನಿಂದ ಸಿದ್ಧಪಡಿಸಲಾಗಿದ್ದು, ಅದು ಜಗತ್ತಿನಲ್ಲಿಯೇ ಪ್ರಥಮ ಪ್ರಯತ್ನ ಎಂದು ಹೇಳಲಾಗುತ್ತದೆ. ಪ್ರವಾಸಿಗರು ಮೇಲೆ ಹೋದಂತೆ, ಕಾಲ ಕೆಳಗಿನ ನೆಲವನ್ನು ನೋಡುವ ಅವಕಾಶವನ್ನು ಒದಗಿಸಿಕೊಡುತ್ತದೆ.

ಟವರಿನ ಅಬ್ಸರ್ವೇಶನ್‌ ಡೆಕ್‌ ನಿಂದ 160 ಕಿ.ಮೀ. ದೂರದ ನಯಾಗರಾ ಫಾಲ್ಸನ್ನು ಕಣ್ತುಂಬಿಸಿಕೊಳ್ಳಬಹುದು. ಗಾಳಿ ಇರದೇ ಇದ್ದರೆ ಒಂಟಾರಿಯಾ ಲೇಕ್‌ನ್ನು ದಾಟಿ ನ್ಯೂಯಾರ್ಕ್‌ ಸ್ಟೇಟನ್ನು ಕೂಡ ನೋಡಬಹುದು.

ಇಲ್ಲಿನ 360 ಹೋಟೆಲು‌ಗಳು ಪ್ರತಿ 72 ನಿಮಿಷಗಳಿಗೊಮ್ಮೆ ಸಂಪೂರ್ಣ ಪರಿಭ್ರಮಣ ಮಾಡುತ್ತಾ 1000 ಅಡಿ ಕೆಳಗಿನ ಟೊರಾಂಟೊ ನಗರದ ಬದಲಾದ ದೃಶ್ಯವನ್ನು ನೋಡುವ ಆನಂದ ದೊರಕಿಸಿಕೊಡುತ್ತವೆ.

ವಿಶಿಷ್ಟ ಅನುಭವ

ಸೇಂಟ್‌ ಲಾರೆನ್ಸ್ ಬಜಾರ್‌ : ಇದು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಇಲ್ಲಿ 3 ಐತಿಹಾಸಿಕ ಕಟ್ಟಡಗಳಿವೆ. ಇಲ್ಲಿ ಆ್ಯಂಟಿಕ್ ಬಜಾರ್‌, ಫುಡ್‌ ಕೋರ್ಟ್‌ ಹಾಗೂ ಪಬ್ಲಿಕ್‌ ಪ್ಲೇಸ್‌ ಗಳಿವೆ. ಮಾರುಕಟ್ಟೆಯಲ್ಲಿ 50 ಬಗೆಯ ಫುಡ್‌ ಜಾಯಿಂಟ್‌ ಗಳಿವೆ. ಇಲ್ಲಿ 200 ವರ್ಷಗಳಷ್ಟು ಹಳೆಯ ಆ್ಯಂಟಿಕ್‌ ಮಾರ್ಕೆಟ್‌ ಹಾಗೂ ಫಾರ್ಮರ್ಸ್‌ ಮಾರ್ಕೆಟುಗಳು ಸೇರುತ್ತವೆ. ಅದು ಕೂಡ ಶನಿವಾರ ಹಾಗೂ ಭಾನುವಾರಗಳಂದು ಮಾತ್ರ.

ಈಡನ್‌ ಸೆಂಟರ್‌ : ಇದು 1979ರಲ್ಲಿ ನಿರ್ಮಾಣವಾಗಿದ್ದು, ಇಟಲಿಯ ಮಿಲಾನ್‌ ನಗರದ `ಗ್ಲಾಸ್‌ ರೂಫ್‌ ಗೆಲೆರಿಯಾ' ಮಾದರಿಯಲ್ಲಿ ಸಿದ್ಧವಾಗಿದೆ. ಇಲ್ಲಿ ಬಹುಮಹಡಿ ಶಾಪಿಂಗ್‌ ಸೆಂಟರ್‌ಗಳಿಗೆ ಹಲವು ಬಗೆಯ ಅಂಗಡಿಗಳು, ಹೋಟೆಲುಗಳು, ಸಿನಿಮಾ ಮಂದಿರಗಳಿವೆ. ಬ್ಲೂರ್‌ ರಾರ್ಕ್‌ ವಿಲೆ ಟೊರಾಂಟೊದ ಸುಪ್ರಸಿದ್ಧ ಶಾಪಿಂಗ್‌ ಏರಿಯಾ ಆಗಿದೆ.

ನದಿ ದಂಡೆಗೆ ಹೊಂದಿಕೊಂಡಿರುವ ಮಹಾನಗರಗಳ ಹಾಗೆ ಟೊರೊಂಟೊದ ಡೌನ್‌ ಟೌನ್‌ ವಾಟರ್‌ ಫ್ರಂಟ್‌ ಕೂಡ 10 ಎಕರೆ ಸ್ಥಳದಲ್ಲಿ ವ್ಯಾಪಿಸಿದೆ. ಹಾರ್ಬರ್ ಫ್ರಂಟ್‌ ಸೆಂಟರ್‌ನಲ್ಲಿ ಆರ್ಟ್‌ ಗ್ಯಾಲರಿಗಳು, ಥಿಯೇಟರ್‌ ಕ್ರಾಫ್ಟ್ ಬೊಟಿಕ್‌ ಗಳು, ಆಫೀಸ್‌ ಗಳು, ಹೋಟೆಲುಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ.

ರಾಯಲ್ ಅಂಟಾರಿಯೊ ಸಂಗ್ರಹಾಲಯ ಕೆನಡಾದ ಅತಿದೊಡ್ಡ ವಸ್ತು ಸಂಗ್ರಹಾಲಯವಾಗಿದ್ದು, ಇದು ಜಗತ್ತಿನ 10 ವಸ್ತು ಸಂಗ್ರಹಾಲಯಗಳಲ್ಲಿ ಒಂದೆನಿಸಿಕೊಂಡಿದೆ. ನೈಸರ್ಗಿಕ ಇತಿಹಾಸದ ಜೊತೆಗೆ ಸಾಂಸ್ಕೃತಿಕ ಇತಿಹಾಸವನ್ನು ಬಿಂಬಿಸುವ ರಾಯಲ್ ಅಂಟಾರಿಯೊ ಉತ್ತರ ಅಮೆರಿಕಾದ ಅತ್ಯುನ್ನತ ಆರ್ಟ್‌ ಮ್ಯೂಸಿಯಂ ಆಗಿದೆ.

ಅತಿ ದೊಡ್ಡ ಆಕರ್ಷಣೆ 1969ರಲ್ಲಿ ಸ್ಥಾಪನೆಗೊಂಡ ವಿಜ್ಞಾನ ಕೇಂದ್ರದಲ್ಲಿ ಪರಿಸರ, ಇನ್‌ ಫರ್ಮೇಶನ್‌ ಹೈವೆ ಮುಂತಾದವುಗಳ ಬಗ್ಗೆ ವೈವಿಧ್ಯಮಯ ಪ್ರದರ್ಶನಗಳು ಏರ್ಪಡಾಗುತ್ತಿರುತ್ತವೆ. ಇತಿಹಾಸ ಅಥವಾ ವಾಸ್ತುಕಲೆಯ ಪ್ರೇಮಿಗಳಿಗೆ ಕಾಸಾ ಲೋಮಾ ವಿಶಿಷ್ಟತೆಯ ಅನುಭವ ನೀಡುತ್ತದೆ. 1900ರಲ್ಲಿ ಟೊರಾಂಟೊದ ಶ್ರೀಮಂತ ವ್ಯಾಪಾರಿ ಸರ್‌ ಹೆನ್ರಿ ಫಿಲ್ಯಾಟ್‌ ಕ್ಯಾಲಿಫೋರ್ನಿಯಾದ ಹರ್ಸಕ್ಸ್ ಕ್ಯಾಸ್ಟಲ್ ಮಾದರಿಯಲ್ಲಿ ಈ ಮ್ಯೂಸಿಯಂನ್ನು ಸ್ಥಾಪಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ