ತಮ್ಮನ್ನು ತಾವು ಪುರುಷರೆದುರು ಸಮರ್ಥ ಎಂದು ಸಾಬೀತುಪಡಿಸಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ಅರ್ಧದಷ್ಟು ಜನಸಂಖ್ಯೆಯ ಮಹಿಳೆಯರಿಗೆ ತಾವಿನ್ನೂ ಅರ್ಧ ದಾರಿಯನ್ನಷ್ಟೇ ಸವೆಸಿದ್ದೇವೆ ಎಂದೆನಿಸಿದ್ದರೆ, ಇದನ್ನೇ ಹೊಸ ಆರಂಭ ಎಂದು ಭಾವಿಸಬೇಕು.
ವಿಶ್ವಸಂಸ್ಥೆ ಇತ್ತೀಚೆಗಷ್ಟೇ ಒಂದು ವರದಿ ಜಾರಿಗೊಳಿಸಿತು. ಇದರಲ್ಲಿ ವಿಶ್ವದ 75 ದೇಶಗಳ ವಿವಿಧ ಕ್ಷೇತ್ರಗಳು ಅದರಲ್ಲೂ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಲೈಂಗಿಕ ಅಸಮಾನತೆಯ ಬಗ್ಗೆ ವಿಶ್ಲೇಷಣೆ ಮಾಡಲಾಯಿತು.
ಈ ವರದಿಯಲ್ಲಿ ಸ್ಪಷ್ಟಪಡಿಸಲಾದ ಒಂದು ವಿಷಯವೆಂದರೆ, ಜಗತ್ತಿನ ಯಾವುದೇ ದೇಶದಲ್ಲೂ ಲೈಂಗಿಕ ಸಮಾನತೆ ಇಲ್ಲ. ವರದಿಯ ಪ್ರಕಾರ, ಶೇ.86ರಷ್ಟು ಮಹಿಳೆಯರು ಹಾಗೂ ಶೇ.90ರಷ್ಟು ಪುರುಷರು ಮಹಿಳೆಯರ ಬಗ್ಗೆ ಯಾವುದಾದರೊಂದು ರೀತಿಯಲ್ಲಿ ಭೇದಭಾವ ತೋರಿಸುತ್ತಾರೆ.
ವರದಿಯಿಂದ ಗೊತ್ತಾಗುವ ವಿಷಯವೆಂದರೆ, ಜಗತ್ತಿನ ಅರ್ಧದಷ್ಟು ಪುರುಷರು ಹಾಗೂ ಮಹಿಳೆಯರು ಒಪ್ಪಿಕೊಳ್ಳುವ ಸಂಗತಿಯೆಂದರೆ ಪುರುಷರು ಅತ್ಯುತ್ತಮ ರಾಜಕೀಯ ಮುಖಂಡರಾಗುತ್ತಾರೆ ಎಂದು. ಅಷ್ಟೇ ಅಲ್ಲ ಶೇ.40ರಷ್ಟು ಜನರಿಗೆ ಅನಿಸುವುದೇನೆಂದರೆ, ಪುರುಷರು ಅತ್ಯುತ್ತಮ ವಹಿವಾಟು ಹಾಗೂ ಅಧಿಕಾರ ನಡೆಸುವ ಅರ್ಹತೆ ಪಡೆದಿರುತ್ತಾರೆ.
ಇದೇ ಕಾರಣದಿಂದ ಜಗತ್ತಿನ ಕೇವಲ ಶೇ.24ರಷ್ಟು ಸಂಸದೀಯ ಸೀಟುಗಳು ಮಾತ್ರ ಮಹಿಳೆಯರಿಗೆ ದಕ್ಕಿವೆ. ಅಷ್ಟೇ ಅಲ್ಲ, ಸರ್ಕಾರದ ಸಂಭಾವ್ಯ 193 ಮಹಿಳಾ ಪ್ರಮುಖರಲ್ಲಿ 10 ಮಂದಿ ಮಾತ್ರ ಮಹಿಳೆಯರಿದ್ದಾರೆ.
ರಾಜಕೀಯದಲ್ಲಿ ಪಾಲುದಾರಿಕೆ ಅಮೆರಿಕದಂತಹ ದೊಡ್ಡ ದೇಶದ ಬಗ್ಗೆ ಹೇಳಬೇಕೆಂದರೆ, ಅತ್ಯುತ್ತಮ ಸಾಮರ್ಥ್ಯ ಹೊಂದಿದಾಗ್ಯೂ ಅಮೆರಿಕದ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್‌ಗೆ ಆ ಸ್ಥಾನ ದಕ್ಕಲಿಲ್ಲ.
ಯಾರು ಈ ಹಿಲರಿ ಕ್ಲಿಂಟನ್? : ಹಿಲರಿಯರು ಅಮೆರಿಕದ ನ್ಯೂಯಾರ್ಕ್ ಪ್ರಾಂತ್ಯದ ಸೆನೆಟರ್. ಅಮೆರಿಕದ 42ನೇ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್‌ರ ಪತ್ನಿ. 1993 ರಿಂದ 2001ರತನಕ ಅಮೆರಿಕದ ಪ್ರಥಮ ಮಹಿಳೆಯೆನಿಸಿಕೊಂಡಿದ್ದರು. ಬರಾಕ್ ಒಬಾಮಾರ ಕಾರ್ಯಾವಧಿಯಲ್ಲಿ ಹಿಲರಿ ವಿದೇಶಾಂಗ ಸಚಿವೆಯಾಗಿದ್ದರು. 2016ರ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಅವರು ಡೆಮಾಕ್ರೆಟಿಕ್ ಪಾರ್ಟಿಯ ಉಮೇದುವಾರರಾಗಲು ತಮ್ಮ ಹಕ್ಕು ಮಂಡಿಸಿದ್ದರು. ತಾವು ಅಮೆರಿಕದ ಜನರ ಚಾಂಪಿಯನ್ ಆಗಲು ಇಚ್ಛಿಸುವುದಾಗಿ ಹೇಳಿದ್ದರು. ಆದರೆ ಅವರು ಟ್ರಂಪ್ ಎದುರು ಸೋತರು. 2008ರಲ್ಲೂ ಅವರು ಡೆಮಾಕ್ರೆಟಿಕ್ ಪಾರ್ಟಿಯಿಂದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ್ದರು. ಆದರೆ ಬರಾಕ್ ಒಬಾಮಾರಿಂದಲೂ ಸೋತಿದ್ದರು.
ರಾಷ್ಟ್ರಪತಿ ಚುನಾವಣೆಯಲ್ಲಿನ ತಮ್ಮ ಸೋಲಿಗೆ ಅವರು ರಷ್ಯಾದ ರಾಷ್ಟ್ರಾಧ್ಯಕ್ಷ ಪುಟಿನ್ ಕಾರಣ ಎಂದು ಆಪಾದಿಸಿದ್ದರು. ಟ್ರಂಪ್ ರಾಷ್ಟ್ರಧ್ಯಕ್ಷರಾಗುವುದನ್ನು ತಡೆಯಲು ನನ್ನಿಂದ ಆಗಲಿಲ್ಲ ಎಂದೂ ಅವರು ಹೇಳಿದ್ದರು.
ಹಿಲರಿ ಎಡವಿದ್ದು ಎಲ್ಲಿ? ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಸಾಧಾರಣ ಚುನಾವಣೆಯೆಂದರೆ ಅದು 2016ರ ರಾಷ್ಟ್ರಾಧ್ಯಕ್ಷರ ಚುನಾವಣೆ. ಅಂದಹಾಗೆ ಅದು ರಾಜಕೀಯ ವ್ಯವಸ್ಥೆಯ ವಿರುದ್ಧದ ಬಂಡುಕೋರತನವಾಗಿತ್ತು ಮತ್ತು ಈ ರಾಜಕೀಯ ವ್ಯವಸ್ಥೆಯ ಅತಿ ದೊಡ್ಡ ಪ್ರತೀಕ ಬೇರಾರೂ ಅಲ್ಲ, ಸ್ವತಃ ಹಿಲರಿ ಕ್ಲಿಂಟನ್ ಆಗಿದ್ದರು. ಚುನಾವಣೆಯ ಪ್ರಚಾರದ ಅವಧಿಯಲ್ಲಿ ಕೋಪಗೊಂಡಿದ್ದ ಕೋಟ್ಯಂತರ ಮತದಾರರಿಗೆ ಅವರು ಅಮೆರಿಕದ `ಬ್ರೋಕನ್ ಪಾಲಿಟಿಕ್ಸ್'ನ ಮುಖವಾಣಿಯಾಗಿ ಹೊರಹೊಮ್ಮಿದ್ದರು.