ಪಾರ್ಟಿ ಅಥವಾ ಯಾವ ವಿಶೇಷ ಸಮಾರಂಭವೇ ಇರಲಿ, ಯಾವ ರೀತಿ ಡೈನಿಂಗ್ ಟೇಬಲ್ ಸಜ್ಜುಗೊಳಿಸಿದರೆ ನಿಮ್ಮ ಅತಿಥಿಗಳು ಹೆಚ್ಚು ಖುಷಿಪಟ್ಟಾರು.....?
ಇಂದು ನಾನು ಗೆಳತಿ ಕುಸುಮಾಳ ಮನೆಗೆ ಡಿನ್ನರ್ ಪಾರ್ಟಿಗೆಂದು ಹೊರಟೆವು. ಈ ನೆಪದಲ್ಲಿ ನಮ್ಮ ಕಾಲೇಜಿನ ಗೆಳತಿಯರೂ ಮೀಟ್ ಆಗ್ತೀವಿ. ಅನ್ನೋದೇ ಒಂದು ದೊಡ್ಡ ಖುಷಿ! ಇಲ್ಲದಿದ್ದರೆ ಇಷ್ಟು ಮಂದಿಯನ್ನು ಒಂದೆಡೆ ಕಲೆ ಹಾಕುವುದಾದರೂ ಹೇಗೆ? ಕುಸುಮಾ ಸ್ವತಃ ಇಂಟೀರಿಯರ್ ಡಿಸೈನರ್ ಆಗಿರುವುದರಿಂದ, ಈ ಸಲದ ಪಾರ್ಟಿಗೆ ಏನೇನು ಹೊಸದಾಗಿ ರೆಡಿ ಮಾಡಿಸಿರುತ್ತಾಳೋ ಎಂಬ ಕುತೂಹಲ ಎಲ್ಲರಿಗೂ ಇತ್ತು.
ಅಲ್ಲಿ ಹೋಗಿ ನೋಡಿದಾಗ, ಕುಸುಮಾಳ ಮನೆಯ ಡ್ರಾಯಿಂಗ್ ರೂಂ, ಬೆಡ್ ರೂಂ, ಡೈನಿಂಗ್ ಹಾಲ್ ನಲ್ಲಿ ಟೇಬಲ್ ಅರೇಂಜ್ ಮೆಂಟ್ಸ್ ಎಲ್ಲರನ್ನೂ ದಂಗುಬಡಿಸಿತು! ಊಟಕ್ಕೆ ಹರಟುತ್ತಾ ಕುಳಿತಾಗ ಎಲ್ಲರೂ ಡೈನಿಂಗ್ ಟೇಬಲ್ ನ ಅಲಂಕಾರವನ್ನು ಹೊಗಳುವವರೇ!
ಡೈನಿಂಗ್ ಟೇಬಲ್ ಬಲು ನೀಟ್‌ಕ್ಲೀನ್ ಆಗಿ ಇರಲೇಬೇಕು, ಇತ್ತೀಚೆಗೆ ಇದರ ಡಿಸೈನಿಂಗ್ ಗೂ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಇದನ್ನು ಅಚ್ಚುಕಟ್ಟಾಗಿ ಅರೇಂಜ್ ಮಾಡುವುದು ಹೇಗೆ?
ಸಣ್ಣಪುಟ್ಟ ಇನ್ ಡೋರ್ ಪ್ಲಾಂಟ್ಸ್ ಇರಲಿ
ಜನ ಸಾಮಾನ್ಯವಾಗಿ ಕೃತಕ ಹೂಗಳ ಅಲಂಕಾರಕ್ಕೆ ಮೊರೆಹೋಗುತ್ತಾರೆ. ಬದಲಿಗೆ ನೈಸರ್ಗಿಕ ಇನ್ ಡೋರ್ ಪ್ಲಾಂಟ್ಸ್ ಯಾ ತಾಜಾ ಹೂಗಳಿಂದಲೇ ಡೈನಿಂಗ್ ಟೇಬಲ್ ಅಲಂಕರಿಸಿದರೆ ಎಷ್ಟೋ ಸುಂದರವಾಗಿರುತ್ತದೆ. ಸುಗಂಧಿತ ಹೂಗಳ ಜೋಡಣೆ ಮತ್ತಷ್ಟು ರಮ್ಯ ಎನಿಸುತ್ತದೆ. ಬಣ್ಣ ಬಣ್ಣದ ಸೇವಂತಿ, ಗುಲಾಬಿ, ಬಿಳಿ, ಆರೆಂಜ್ ರೋಜಾ ಹೂಗಳೂ ನೋಡಲು ಚೆನ್ನ! ಜೊತೆಗೆ ನೀವು ನಳನಳಿಸುವ ಗಿಡಮೂಲಿಕೆಗಳನ್ನು ಬಳಸಿದರೆ ಇನ್ನಷ್ಟು ಚೆನ್ನಾಗಿರುತ್ತದೆ. ಈ ರೀತಿ ಮಾಡುವುದು ಆಧುನಿಕ ಗೃಹಾಲಂಕಾರದ ಹೊಸ ಟೆಕ್ನಿಕ್ ಆಗಿದೆ.
ಕ್ಯಾಂಡಲ್ ಡೆಕೋರೇಶನ್
ಡೈನಿಂಗ್ ಟೇಬಲ್ ಮಧ್ಯೆ ಅವಳಡಿಸಿರುವ ಫ್ರಾಗ್ರೆನ್ಸ್ ಬೀರುವ ಕ್ಯಾಂಡಲ್ ಇದ್ದಾಗ, ಅದು ಗ್ಲೋ ಮಾಡುವ ಜೊತೆಗೆ ಸುಗಂಧ ಬೀರುತ್ತಾ ಎಲ್ಲರ ಮೂಡ್ ನ್ನು ಚಿಲ್ ಮಾಡುತ್ತದೆ. ಫ್ರೆಂಡ್ಸ್ ಜೊತೆ ಕ್ಯಾಂಡಲ್ ಲೈಟ್ ಡಿನ್ನರ್ ನ ಮಜಾನೇ ಬೇರೆ!
ಸೂಕ್ತ ಲೈಟ್ಸ್ ಬಳಸಿಕೊಳ್ಳಿ
ಡೈನಿಂಗ್ ಟೇಬಲ್ ಮೇಲೆ ಒಂದು ಸುಂದರ ಲ್ಯಾಂಪ್ ಅಳವಡಿಸಿ. ಇದರಿಂದ ಟೇಬಲ್ ನ ಬ್ಯೂಟಿ ಇನ್ನೂ ಹೆಚ್ಚುತ್ತದೆ. ಟೇಬಲ್ ನ ನಾಲ್ಕೂ ಬದಿ ಒಂದೇ ರೀತಿಯ ಲೈಟಿಂಗ್ ವ್ಯವಸ್ಥೆ ಇರಬೇಕು. ಆದರೆ ಮೇಲಿನ ಲೈಟ್ ಅಳವಡಿಸುವಾಗ, ಅದರ ಪ್ರಕಾಶ ನೇರ ನಿಮ್ಮ ಕಣ್ಣಿಗೆ ರಾಚದಂತಿರಲಿ ಹಾಗೂ ಬಹಳಷ್ಟು ಪ್ರಕಾಶಮಾನವಾಗಿಯೂ ಇರಬಾರದು, ಎಂಬುದರ ಕಡೆಗೆ ಗಮನ ಕೊಡಿ.
ವಿಭಿನ್ನ ರೀತಿಗಳಿಂದ ಅಲಂಕರಿಸಿ
ನೀವು ಪಾರ್ಟಿ ನೀಡುವಾಗ ಪ್ರತಿ ಸಲ, ಡೈನಿಂಗ್ ಟೇಬಲ್ ನ್ನು ಬೇರೆ ಬೇರೆ ವಿಧಾನಗಳಿಂದ ಅಲಂಕರಿಸಿ. ಏಕೆಂದರೆ ಪ್ರತಿಸಲ ಅದೇ ರೀತಿಯ ಅರೇಂಜ್ ಮೆಂಟ್ ನೋಡಿದರೆ ಅತಿಥಿಗಳಿಗೆ ಬೋರಿಂಗ್ ಅನಿಸಬಹುದು. ಹೀಗಾಗಿ ಡೈನಿಂಗ್ ಟೇಬ್ ಅರೇಂಜ್‌ಮೆಂಟ್ ಸೀಸನ್ ಗೆ ತಕ್ಕಂತೆ ಇರಲಿ. ಅದು ಪ್ರತಿ ಪಾರ್ಟಿಯ ಥೀಮ್ ಗೆ ಸೂಟ್ ಆಗುವಂತಿರಲಿ. ಇದು ಪಾರಂಪರಿಕ ವಸ್ತುಗಳನ್ನು ಆಧರಿಸಿದ್ದರೆ ಇನ್ನೂ ಬೊಂಬಾಟ್ ಆಗಿರುತ್ತದೆ!





