ನಮಗೆಲ್ಲರಿಗೂ ತಿಳಿದಿರುವಂತೆ ಮಹಾಮಾರಿ ಕೊರೋನ ಚೀನಾದೇಶದಲ್ಲಿ ಆರಂಭವಾಗಿ ಐರೋಪ್ಯ ದೇಶಗಳಲ್ಲಿ ಅಟ್ಟಹಾಸ ಮೆರೆದು ಈಗ ಭಾರತದ ಕಡೆ ತನ್ನ ಕೆನ್ನಾಲಿಗೆ ಬೀರಲು ಸಿದ್ಧವಾಗುತ್ತಿದೆ. ಅದನ್ನು ತಡೆಯಲು ನಮ್ಮ ಸರ್ಕಾರವೂ ಕೂಡ ಏಪ್ರಿಲ್ 15ರ ತನಕ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದೆ. ಹಾಗಾಗಿ ಕೋಟ್ಯಾಂತರ ದಿನಗೂಲಿ ನೌಕರಿಗೆ ಮತ್ತು ಬಡಬಗ್ಗರಿಗೆ ದಿನ ನಿತ್ಯದ ಕೂಳಿಗೆ ತೊಂದರೆಯಾಗುತ್ತಿದ್ದದ್ದನ್ನು ಮನಗಂಡು ಪ್ರಧಾನಿಗಳೂ ಸಹಾ ಕೋಟ್ಯಾಂತರ ರೂಪಾಯಿಗಳ ನೆರವನ್ನು ಘೋಷಿಸಿದ್ದಾರೆ ಮತ್ತು ದೇಶವಾಸಿಗಳಿಂದ ಈ ಮಹತ್ಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು ದೇಣಿಗೆಯನ್ನು ನೀಡಲು ಕೋರಿಕೊಂಡಿದ್ದಾರೆ.

unnamed (6)

ಪ್ರಧಾನಿಗಳ ಈ ಕರೆಗೆ ಓಗೊಟ್ಟು ದೇಶ ವಿದೇಶದಲ್ಲಿರುವ ಲಕ್ಷಾಂತರ ಭಾರತೀಯರು, ಉದ್ಯಮಿಗಳು ತಮ್ಮ ಕೈಲಾದ ಮಟ್ಟಿಗಿನ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಗೆ 25 ಕೋಟಿ ರೂಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿ, ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಸಾಂಕ್ರಾಮಿಕ ವೈರಸ್ ವಿರುದ್ಧ ಹೋರಾಡಲು ಕರೆ ನೀಡಿದ್ದರೆ. ಅಕ್ಷಯ್ ಕುಮಾರ್ ಅವರ ಈ ಹೇಳಿಕೆಯನ್ನು ನೋಡಿದ ತಕ್ಷಣವೇ ಆತನ ಮಡದಿ ಟ್ವಿಂಕಲ್ ಖನ್ನಾ ಸಹಜವಾಗಿ ಪ್ರತಿಕ್ರಯಿಸಿ, ನಾನು ಶ್ರೀಮತಿ ಅಕ್ಷಯ್ ಕುಮಾರ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಆತ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡುತ್ತೇನೆ ಎಂದು ಹೇಳಿದಾಗ, ಖಂಡಿತವಾಗಿಯೂ ಇಷ್ಟೊಂದು ಮೊತ್ತವನ್ನು ನೀಡುತ್ತಿರುವೆಯಾ? ಇಷ್ಟೊಂದು ಹಣವನ್ನು ನೀಡಿದಲ್ಲಿ ನಾವೇ ದೀವಾಳಿಯಂಚಿಗೆ ಸಿಲಕ ಬಹುದೆ? ಎಂದು ಎಚ್ಚರಿಸಿದಾಗ ಆತ ಹೇಳಿದ ಈ ಮಾತು ನನ್ನ ಮನಸ್ಸು ತುಂಬಿ ಬಂತು. ನಾನು ಚಲನ ಚಿತ್ರರಂಗಕ್ಕೆ ಬಂದಾಗ ನನ್ನ ಬಳಿ ಏನೂ ಇರಲಿಲ್ಲ. ಇದೇ ಜನರ ಅಭಿಮಾನದಿಂದಾಗಿ ಸದ್ಯ ಈ ರೀತಿಯ ಸ್ಥಾನಮಾನ ಗಳಿಸಿದ್ದೇನೆ. ಈಗ ಅದೇ ಜನ ಸಂಕಷ್ಟದಲ್ಲಿರುವಾಗ ಅವರಿಂದ ಗಳಿಸಿದ್ದನ್ನು ಅವರಿಗೇ ಹಿಂದಿರಿಗಿರುಸುವು ನಮ್ಮ ಕರ್ತವ್ಯವಲ್ಲವೇ?

ಇದೇ ರೀತಿ ರಜನೀಕಾಂತ್, ಅಮಿತಾಭ್ ಬಚ್ಚನ್, ತೆಲುಗು ಸಿನಿಮಾದ ಅನೇಕ ನಟರುಗಳು ತಮ್ಮ ಕೈಯ್ಯಲ್ಲಾದ ಮಟ್ಟಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ ಅದೇ ರೀತಿ ಕ್ರಿಕೆಟ್ ಆಟಗಾರರಾದ ಸಚಿನ್, ದೋನಿ ಮತ್ತು ರೈನಾ ಅವರು ಕೊಡಾ ದೇಣಿಗೆ ನೀಡಿದ್ದಾರೆ.

ಇವರೆಲ್ಲಾ ಸೆಲೆಬ್ರಿಟಿಗಳು. ಅವರೆಲ್ಲರ ಆದಾಯ ತುಂಬಾನೇ ಹೆಚ್ಚಾಗಿದೆ. ಆದ್ರೆ ನಾನಿಂದು ನಿಮಗೆ ಪರಿಚಯ ಮಾಡಿಸ್ತಾ ಇರೋದು ಬಲಗೈಯಲ್ಲಿ ಕೊಟ್ಟದ್ದನ್ನು ಎಡಗೈಯ್ಯಿಗೆ ತಿಳಿಯಬಾರದು ಅಂತಾ ಎಚ್ಚರ ವಹಿಸಿರುವವರು. ತಮ್ಮ ಆಶ್ರಯದಾತೆಯಾದ ಆತ್ಮೀಯ ಗೆಳತಿ ಮತ್ತು ಸಹೋದ್ಯೋಗಿಯಾಗಿದ್ದವರನ್ನು ಕಡೆಯವರೆಗೂ ಮಗುವಿನಂತೆ ಪೋಷಿಸಿದಾಕೆ . ಅಂತಹ ಎಲೆಮರೆ ಕಾಯಿಯ ಹೆಸರೇ ಜಯಲಕ್ಷ್ಮಿ.

unknown1

ಸುಮ್ಮನೆ ಜಯಲಕ್ಷ್ಮೀ ಅಂದರೆ ಹೆಚ್ಚಿನ ಜನರಿಗೆ ಗೊತ್ತಾಗುವುದಿಲ್ಲ. ರಾಜನ್-ನಾಗೇಂದ್ರ, ಶಂಕರ್-ಜೈಕಿಶನ್, ದೊರೈ-ಭಗವಾನ್ ಜೋಡಿಯಂತೆ ಶಾರದ-ಜಯಲಕ್ಷ್ಮೀ ಅಂದರೆನೇ ಬಹಳಷ್ಟು ಜನರಿಗೆ ತಿಳಿಯುವುದು. ಏಕೆಂದರೆ ಆವರಿಬ್ಬರದ್ದೂ ಅಷ್ಟೊಂದು ಅನ್ಯೋನ್ಯ ಜೋಡಿ. ಎರಡು ದೇಹ ಒಂದೇ ಜೀವ ಅನ್ನುವ ರೀತಿ. ಶಾರದಾ ಮತ್ತು ಜಯಲಕ್ಷ್ಮಿ ಇಬ್ಬರೂ ಶಿಕ್ಷಕಿಯರಾಗಿ ಸರ್ಕಾರೀ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತೆಯರಾಗಿದ್ದರು. ಅದೊಂದು ದಿನ ಜಯಲಕ್ಷ್ಮಿಯಾರು ತುಂಬಾ ಬೇಸರದಲ್ಲಿದ್ದು ತರಗತಿ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ ಮತ್ತು ಬಹಳ ದುಃಖಿತಳಾಗಿ ಅಳುತ್ತಿದ್ದನ್ನು ಕಂಡ ಶಾರದಾರವರು ಈ ರೀತಿಯ ದುಃಖಕ್ಕೆ ಕಾರಣವೇನು ಎಂದು ಕೇಳಿದರು. ಇನ್ನೂ ಮದುವೆಯಾಗಿರದಿದ್ದ ಜಯಲಕ್ಷ್ಮಿಯವರು ಅ ಹಿಂದಿನ ಸಂಜೆ ಸ್ವಲ್ಪ ತಡವಾಗಿ ಅವರ ಮನೆಗೆ ಹೋಗಿದ್ದಾರೆ. ಆಕೆ ಸಂಜೆ ಮನೆಗೆ ಸ್ವಲ್ಪ ತಡವಾಗಿ ಮನೆಗೆ ಬಂದಿದ್ದನ್ನು ಆಕೆಯ ಅಣ್ಣನ ಹೆಂಡತಿ ಅತ್ತಿಗೆ ಪ್ರಶ್ನಿಸಿದ್ದಲ್ಲದೇ ಆಕೆಯ ಅಣ್ಣನ ಬಳಿ ಇಲ್ಲ ಸಲ್ಲದ ರೀತಿಯಲ್ಲಿ ಚಾಡಿ ಹೇಳಿದ್ದು, ಹೆಂಡತಿಯ ಮಾತು ಕೇಳಿ ಆವರ ಅಣ್ಣ ಸ್ವಲ್ಪ ಅನಾಗರೀಕ ರೀತಿಯಲ್ಲಿ ನಡೆದುಕೊಂಡದ್ದು ಜಯಲಕ್ಷ್ಮೀ ಅವರ ಮನಸ್ಸನ್ನು ಬಹಳವಾಗಿ ನೋಯಿಸಿದ್ದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ತಾಯಿ ಇಲ್ಲದ ತನ್ನ ಗೆಳತಿಯನ್ನು ಆಕೆಯ ಅಣ್ಣಾ ಅತ್ತಿಗೆ ಈ ರೀತಿಯಾಗಿ ಬೇಸರ ಪಡಿಸಿದ್ದದ್ದನ್ನು ಜೀರ್ಣಿಸಿಕೊಳ್ಳದ ಶಾರದಾ ಅವರು ಇನ್ನು ಮುಂದೆ ನೀನು ನಿನ್ನ ಸಹೋದರನ ಮನೆಯಲ್ಲಿ ಇರಬೇಡ ಎಂದು ಹೇಳಿ ಜಯಲಕ್ಷ್ಮೀ ಅವರನ್ನು ವೈಯ್ಯಾಳೀಕಾವಲ್ ನಲ್ಲಿ ಇರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ತಾಯಿ ಶಂಕರಮ್ಮನವರಿಗೆ ಪರಿಚಯಿಸಿ ಅಂದಿನಿಂದ ಆ ಮನೆಯಲ್ಲಿ ಆ ಮೂವರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಮತ್ತು ಕಡೆಯ ತನಕ ಅವಿವಾಹಿತರಾಗಿಯೇ ಉಳಿಯಲು ನಿರ್ಧರಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ