ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. 108 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿರುವ ಟಿವಿಕೆ, ಸರ್ಕಾರ ರಚನೆಗೆ ಇನ್ನೂ 10 ಶಾಸಕರ ಬೆಂಬಲ ಬೇಕಿದ್ದು ಇದು ನಟ ವಿಜಯ್ ರ ಮುಂದಿರುವ ಮೊದಲ ಅಗ್ನಿ ಪರೀಕ್ಷೆಯಾಗಿದೆ.

ತಮಿಳುನಾಡು ರಾಜಕೀಯಕ್ಕೆ ನಟ ವಿಜಯ್ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಆದರೆ, ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಬಹುಮತದ ಗಡಿಗಿಂತ ಸ್ವಲ್ಪ ಹಿಂದೆ ಉಳಿದಿದೆ. ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಬೇಕಿರುವುದು 118 ಸದಸ್ಯರ ಬೆಂಬಲ. ಆದರೆ ಟಿವಿಕೆ ಬಳಿ ಇದೀಗ 108 ಸ್ಥಾನಗಳು ಮಾತ್ರ ಇದ್ದು ಸರ್ಕಾರ ರಚನೆಗೆ ಇನ್ನೂ 10 ಸ್ಥಾನಗಳ ಅಗತ್ಯವಿದೆ.

ಈಗಾಗಲೇ ಸ್ವತಃ ನಟ ವಿಜಯ್ ಸಾರ್ವಜನಿಕ ವೇದಿಕೆಗಳಲ್ಲಿ ಸ್ಪಷ್ಟಪಡಿಸಿರುವಂತೆ ತಾವು ಡಿಎಂಕೆಗೆ ನೇರ ಎದುರಾಳಿ ಎಂದು ಘೋಷಿಸಿಕೊಂಡಿದ್ದಾರೆ. ಹಾಗಾಗಿ ಅವರು ಡಿಎಂಕೆ ಪಕ್ಷದ ಬೆಂಬಲ ಕೇಳುವುದು ಅಸಾಧ್ಯ ಎನ್ನಲಾಗಿದೆ.

ಅಂತೆಯೇ ಇತ್ತ ಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ನಟ ವಿಜಯ್ ಗೆ ಬೆಂಬಲ ಘೋಷಿಸಿದ್ದರೂ ಸೈದ್ದಾಂತಿಕ ವಿಚಾರದಿಂದಾಗಿ ಅವರಿಂದಲೂ ವಿಜಯ್ ಬೆಂಬಲ ಪಡೆಯುವುದು ಅಸಾಧ್ಯ ಎನ್ನಲಾಗಿದೆ. ಹೀಗಾಗಿ ನಟ ವಿಜಯ್ ಇದೀಗ ಮೂರನೇ ಹಾದಿಯತ್ತ ಕಣ್ಣು ಹಾಯಿಸುವಂತಾಗಿದೆ.

ಚುನಾವಣಾ ರಾಜಕೀಯಕ್ಕೆ ವಿಜಯ್ ಅವರು ಐತಿಹಾಸಿಕ ಪ್ರವೇಶ ನೀಡಿದ್ದರೂ, ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಯನ್ನು ಅವರು ಹೇಗೆ ಹೊಂದಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಹಾಲಿ ಚುನಾವಣಾ ಆಯೋಗದ ಮೂಲಗಳ ಪ್ರಕಾರ ಟಿವಿಕೆ 108 ಸ್ಥಾನಗಳಲ್ಲಿ ಗೆದ್ದಿದ್ದು, ಡಿಎಂಕೆ 72ಮತ್ತು ಎಐಡಿಎಂಕೆ 54 ಸ್ಥಾನಗಳನ್ನು ಪಡೆದಿದೆ. ಇದಲ್ಲದೆ ಡಿಎಂಕೆ ಮೈತ್ರಿಕೂಟ ಪಕ್ಷಗಳಾದ ಕಾಂಗ್ರೆಸ್ 5, ವಿಸಿಕೆ 2 ಸಿಪಿಐ 2, ಡಿಎಂಡಿಕೆ 2 ಮತ್ತು ಐಯುಎಂಲ್ 1 ಸೇರಿದೆ ಒಟ್ಟು 13 ಸ್ಥಾನಗಳನ್ನು ಹೊಂದಿವೆ. ನಟ ವಿಜಯ್ ಸರ್ಕಾರಕ್ಕೆ 10 ಸ್ಥಾನಗಳ ಅಗತ್ಯತೆ ಇದ್ದು ಇದನ್ನು ಹೇಗೆ ಹೊಂದಿಸುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ವಾಡಿಕೆಯಂತೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಟಿವಿಕೆ ಹೊರಹೊಮ್ಮಿರುವುದರಿಂದ, ರಾಜ್ಯಪಾಲರು ಮೊದಲು ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಹೊಂದಿದ್ದು, ಈಗಾಗಲೇ ಕಾಂಗ್ರೆಸ್ ನ ಹಿರಿಯ ನಾಯಕರು ವಿಜಯ್ ಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ. ಇದಲ್ಲದೆ ಪಾಟ್ಟಾಳಿ ಮಕ್ಕಳ್ ಕಚ್ಚಿ (PMK) ಕೂಡ 4 ಸ್ಥಾನಗಳನ್ನು ಹೊಂದಿದ್ದು, ಎಡಪಕ್ಷಗಳು ಮತ್ತು ವಿಸಿಕೆ (VCK) 2 ಸ್ಥಾನಗಳನ್ನು ಹೊಂದಿದೆ. ಈ ಮೂರು ಪಕ್ಷಗಳಿಂದ ವಿಜಯ್ ಬೆಂಬಲ ಪಡದರೆ ಟಿವಿಕೆ ಅನಾಯಾಸವಾಗಿ ತಮಿಳುನಾಡಿನಲ್ಲಿ ಸರ್ಕಾರ ರಚಿಸಬಹುದು ಎಂದು ಹೇಳಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ