ಪ್ರಜಾಪ್ರಭುತ್ವ ರೀತಿಯಿಂದಾಗಿ ಬಿಜೆಪಿಯನ್ನು ಸೋಲಿಸಲಾಗದೇ, ಕಳೆದ 12 ವರ್ಶಗಳಿಂದಲೂ ಕೇಂದ್ರದಲ್ಲಿ ಅಧಿಕಾರದಿಂದ ವಂಚಿತರಾಗಿ ಹತಾಶರಾಗಿರುವ ರಾಹುಲ್ ಗಾಂಧಿ ಎಂಬ ಅವಕಾಶವಾದಿ ರಾಜಕಾರಣಿ ಹೇಗಾದರೂ 2025-2026ರಲ್ಲಿ ಬಿಜೆಪಿಯವರು ಚುನಾವಣಾ ಆಯೋಗದೊಂದಿಗೆ ಸೇರಿಕೊಂಡು ಅಕ್ರಮವಾಗಿ  ಮತಗಳನ್ನು ಅಳಿಸುವ/ಸೇರಿಸುವ ಮೂಲಕ ವೋಟ್ ಚೋರಿ (ಮತ ಕಳ್ಳತನ) ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಇತ್ತೀಚಿನ ದಿನಗಳಲ್ಲಿ ಮಾಡುತ್ತಲೇ ಇದ್ದಾರೆ, ಇದಕ್ಕೆ ಪೂರಕ ಎನ್ನುವಂತೆ ಕರ್ನಾಟಕದ ಆಳಂದ ಮತ್ತು ಬೆಂಗಳೂರು ಸೆಂಟ್ರಲ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿ ಅಕ್ರಮಗಳ ಬಗ್ಗೆ ಪುಂಖಾನುಪುಂಖವಾಗಿ  PPT Presentation  ಮೂಲಕ ತೋರಿಸಿದ ಎಲ್ಲಾ ದಾಖಲೆಗಳೂ ನಂತರದ ದಿನಗಳಲ್ಲಿ ಸುಳ್ಳು ಎಂದು ಸಾಭೀತಾಗಿ  ಜನರು ನಂಬದೇ ಹೋದದ್ದು ಈಗ ಇತಿಹಾಸ. ಆದರೆ ಅದೇ  2023ರಲ್ಲಿ ನಡೆದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಜೇಗೌಡ ಅವರು ಜೀವರಾಜ್ ವಿರುದ್ಧ  ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂಬ ಫಲಿತಾಂಶ ಬಂದಾಗ, ಅಂಚೆ ಮತಗಳ ಮರು ಎಣಿಕೆಯಲ್ಲಿ ಲೋಪವಾಗಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಜೀವರಾಜ್ ಅಂದೇ ನ್ಯಾಯಾಲಯದ ಮೊರೆ ಹೋದಾಗ, ಸುಮಾರು ಮೂರು ವರ್ಷಗಳ ಕಾಲ ತನಿಖೆ ನಡೆದು, 2026ರ ಮೇ 2ರಂದು ಮತಗಳ ಮರು ಎಣಿಕೆ ಮಾಡಲು ನೀಡಿದ ಆಜ್ಞೆಯಂತೆ ನಡೆದ  ಅಂಚೆ ಮತಗಳ ಮರು ಎಣಿಕೆಯಲ್ಲಿ ಬಹಳ ಹೈಡ್ರಾಮ ನಡೆದು ಅಂತಿಮವಾಗಿ ತಡರಾತ್ರಿ 12:30ರ ವೇಳೆಗೆ 52 ಮತಗಳ ಅಂತರದಿಂದ ಜೀವರಾಜ್ ಅವರು ವಿಜಯಿಶಾಲಿಗಳಾಗಿದ್ದು ಅಸಲೀ ಓಟ್ ಚೋರಿ ಶೃಂಗೇರಿಯ ಮಾಜೀ ಶಾಸಕರಾಗಿದ್ದಂತಹ ರಾಜೇಗೌಡರಿಂದ ನಡೆದಿರುವುದು ಈಗ ಕಾಂಗ್ರೇಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ.

2023ರ ಫಲಿತಾಂಶದ ವಿರುದ್ದ  ಹೈಕೋರ್ಟ್ ಆದೇಶದ ಮೇರೆಗೆ ಮರು ಎಣಿಕೆ ಪ್ರಕ್ರಿಯೆ  ಚುನಾವಣಾಧಿಕಾರಿ ಗೌರವ್ ಶೆಟ್ಟಿ ನೇತೃತ್ವದಲ್ಲಿ ಮತ ಎಣಿಕೆ  ಮೇ ೨ರಂದು ಚಿಕ್ಕಮಗಳೂರಿನ ಚಿಕ್ಕಮಗಳೂರು ನಗರದ ಐಡಿಎಸ್‌ಜಿ (IDSG) ಕಾಲೇಜಿನಲ್ಲಿ   ಒಂದೇ ಟೇಬಲ್ ಮೇಲೆ  6 ಜನ ಸಹಾಯಕ ಚುನಾವಣಾಧಿಕಾರಿಗಳ ಸಹಾಯದಿಂದಿಗೆ  ಸಿಸಿ ಟಿವಿ ಸಮ್ಮುಖದಲ್ಲಿ  ಅಂಚೆ ಮತಗಳ ಮರು ಎಣಿಕೆ ಕಾರ್ಯರಣೆಗೆ ಸಿದ್ಧಗೊಳಿಸಿತ್ತು. ಬೆಳಿಗ್ಗೆ ಇಂದು ಬೆಳಗ್ಗೆ 9ಕ್ಕೆ ಸ್ಟ್ರಾಂಗ್ ರೂಮ್ ತೆಗೆದ ಸಂಧರ್ಭದಲ್ಲಿ  ಒಟ್ಟು 20 ಟ್ರಂಕ್ ಗಳಲ್ಲಿರುವ ಅಂಚೆ ಮತಪತ್ರಗಳನ್ನು ಹೊರತೆಗೆಯುವ ವೇಳೆಯಲ್ಲಿ ಕೆಲ ಟ್ರಂಕ್ ಗಳ ಬೀಗ ಒಡೆದು ಹೋಗಿದ್ದರೆ ಇನ್ನೂ ಕೆಲವು ಟ್ರಂಕ್ ಗಳು ಡ್ಯಾಮೇಜ್ ಆಗಿರುವ ಕಾರಣ ಇಲ್ಲಿ ಏನೋ ಅಕ್ರಮ ನದೆದಿದೆ ಎಂದು ಶಾಸಕ ರಾಜೇಗೌಡ ಹಾಗೂ ಅವರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಚುನಾವಣಾಧಿರಾರಿಗಲು  ಈ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣವಾಗಿದ್ದು ಅದನ್ನು ಪರಿಶೀಲಿಸಿದಾಗ, ಮತ ಪತ್ರಗಳು ಇದ್ದ ಪೆಟ್ಟಿಕೆಗಳು ಸುಭದ್ರವಾಗಿ ಬೀಗ ತೆರೆರಿದ್ದ ಪಟ್ಟಿಗೆಗಳಲ್ಲಿ ಚುನಾವಣೆಗೆ ಸಂಬಂಧ ಪಟ್ಟ ದಾಖಲೆಗಳು ಇದ್ದವೆಂದು ತಿಳಿಸುವ ಹೊತ್ತಿನಲ್ಲಿ ಮಧ್ಯಾಹ್ನವಾಗಿತ್ತು.  ರಾಜೇಗೌಡರು ಮತ್ತು ಅವರ ತಂಡ ಇಷ್ಟೆಲ್ಲಾ ಹೈಡ್ರಾಮ ಮಾಡುತ್ತಿದ್ದಾಗಲೂ ಜೀವರಾಜ್ ಶೃಂಗೇರಿಯ ಶಾರಾದಾದೇವಿಯ ಮೇಲೆ ನಂಬಿಕೆ ಇರಿಸಿ ತಾಳ್ಮೆಯಿಂದಲೇ ಇದ್ದು ಮತಗಳ ಎಣಿಕೆಗೆ  ಸಹಕರಿಸುತ್ತಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ