ಸ್ನೇಹಾಳಿಗೆ ಆಕಸ್ಮಿಕವಾಗಿ ಶೀತ, ನೆಗಡಿಯ ಸಮಸ್ಯೆ ಶುರುವಾಯಿತು. ಆರಂಭದಲ್ಲಿ ಎಲ್ಲರೂ ಇದನ್ನು ಹವಾಮಾನದ ಬದಲಾವಣೆ, ಸಾಮಾನ್ಯ ಸಮಸ್ಯೆ ಎಂದು ಭಾವಿಸಿದ್ದರು. ಆದರೆ ಬಹಳ ದಿನಗಳವರೆಗೆ ಅದು ಹಾಗೆಯೇ ಮುಂದುವರಿದಾಗ, ಮನೆಯವರಿಗೆ ಚಿಂತೆ ಶುರುವಾಯಿತು. ಅವಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತು.

ವೈದ್ಯರು ಅವಳನ್ನು ಪರೀಕ್ಷೆಗೊಳಪಡಿಸಿ ಕಂಡುಕೊಂಡಿದ್ದೇನೆಂದರೆ, ಸ್ನೇಹಾಳ ಇಮ್ಯೂನ್‌ ಸಿಸ್ಟಂ ಅಂದರೆ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗಿದೆ. ಹಾಗಾಗಿ ಅವಳ ದೇಹದಲ್ಲಿ ರೋಗಗಳೊಂದಿಗೆ ಹೋರಾಡುವ ಶಕ್ತಿಯೇ ಇಲ್ಲದಂತಾಗಿದೆ. ಅವಳ ಆಹಾರ ಹಾಗೂ ಜೀವನಶೈಲಿ ಹದಗೆಟ್ಟಿರುವುದೇ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಮುಖ್ಯ ಕಾರಣ ಎಂದು ವೈದ್ಯರು ಹೇಳಿದರು.

ಪರಿಪೂರ್ಣ ನಿದ್ರೆಯಿಂದ ಒತ್ತಡ ದೂರ

ಪ್ರತಿಯೊಬ್ಬ ವ್ಯಕ್ತಿಗೂ ದಿನಕ್ಕೆ 5-6 ಗಂಟೆಗಳ ನಿದ್ರೆ ಅತ್ಯವಶ್ಯ. ಆದರೆ ಇತ್ತೀಚಿನ ವ್ಯಸ್ತ ಜೀವನಶೈಲಿ ಹಾಗೂ ನೈಟ್‌ ಶಿಫ್ಟ್ ನ ಜಾಬ್‌ಗಳ ಕಾರಣದಿಂದಾಗಿ ಅಷ್ಟೊಂದು ನಿದ್ರೆ ಪಡೆಯಲು ಆಗದು. ಅದರ ಹೊರತಾಗಿ ಕಾಂಪಿಟಿಶನ್‌ನ ಕಾರಣದಿಂದಲೂ ಒತ್ತಡ ಹೆಚ್ಚುತ್ತಿದೆ. ಆ ಕಾರಣದಿಂದಾಗಿ ಕಾರ್ಟಿಸಾಲ್ ಲೆವಲ್‌ ಹೆಚ್ಚುತ್ತಿದೆ. ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿಸಬೇಡಿ.

ಧೂಮಪಾನದಿಂದ ದೂರ ಇರಿ

ಇತ್ತೀಚೆಗೆ ಧೂಮಪಾನ ಒಂದು ಟ್ರೆಂಡ್‌ ಆಗಿಬಿಟ್ಟಿದೆ. ಪುರುಷರಷ್ಟೇ ಅಲ್ಲ, ಮಹಿಳೆಯರು ಕೂಡ ಧೂಮಪಾನಕ್ಕೆ ತುತ್ತಾಗುತ್ತಿದ್ದಾರೆ. ಅದು ಅವರ ಆರೋಗ್ಯಕ್ಕೆ ಘಾತಕವಾಗಿ ಪರಿಣಮಿಸುತ್ತಿದೆ. ದಂಪತಿಗಳಿಗೆ ಮಕ್ಕಳಾಗದೇ ಇರಲು ಇದೂ ಒಂದು ಮುಖ್ಯ ಕಾರಣವಾಗಿದೆ. ಧೂಮಪಾನದಿಂದ ಹಲವು ಪ್ರಕಾರದ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಅದರ ಚಟದಿಂದ ದೂರ ಇರಿ.

ಮದ್ಯಪಾನ : ಸಾವಿಗೆ ಆಹ್ವಾನ

ಧೂಮಪಾನದ ಹಾಗೆ ಮದ್ಯಪಾನ ಕೂಡ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಮದ್ಯಪಾನ ಮಾಡುವವರು ಅದನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸಬಹುದು. ಆದರೆ ಅದು ನಮ್ಮ ಲಿವರ್‌ಗೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಆರೋಗ್ಯದಿಂದ ಇರಬೇಕೆಂಬ ಅಪೇಕ್ಷೆ ಇದ್ದರೆ ಈಗಲೇ ಮದ್ಯಪಾನ ಬಿಟ್ಟುಬಿಡಿ.

ನೀರು ಮತ್ತು ಹಸಿರು ತರಕಾರಿಗಳು

ನೀರು ನಮ್ಮ ದೇಹದ ವಿಷಕಾರಕ ಘಟಕಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಹಸಿರು ಸೊಪ್ಪು, ತರಕಾರಿಗಳು ನಮ್ಮ ದೇಹಕ್ಕೆ  ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ, ವಿಟಮಿನ್‌, ಖನಿಜಾಂಶ ಹಾಗೂ ನಾರಿನಂಶಗಳನ್ನು ಹೇರಳವಾಗಿ ಪೂರೈಸುತ್ತವೆ. ಅದರಿಂದ ದೇಹಕ್ಕೆ ಕೆಲಸ ಮಾಡುವ ಶಕ್ತಿಯಷ್ಟೇ ದೊರಕುವುದಿಲ್ಲ. ರೋಗದೊಂದಿಗೆ ಹೋರಾಡುವ ಶಕ್ತಿ ಕೂಡ ಹೆಚ್ಚುತ್ತದೆ.

ಪ್ರೊಬಯಾಟಿಕ್ಸ್ ನಿಂದ ಲಾಭ

ನಮ್ಮ ದೇಹದಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ಬಗೆಯ ಬ್ಯಾಕ್ಟೀರಿಯಾಗಳಿರುತ್ತವೆ. ನಮ್ಮ ದೇಹದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾದಾಗ ನಾವು ಮೇಲಿಂದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಹೀಗಾಗಿ ಮೊಸರು ಕೂಡ ನಿಮ್ಮ ಆಹಾರದ ಪಟ್ಟಿಯಲ್ಲಿ ಸೇರ್ಪಡೆ ಆಗಲಿ. ಅದು ನಿಮ್ಮ ರೋಗ ನಿರೋಧಕ ಶಕ್ತಿ (ಇಮ್ಯುನಿಟಿ) ಹೆಚ್ಚಿಸುತ್ತದೆ.

ಬಿಸಿಲೂ ಬೇಕು

ದೇಹಕ್ಕೆ ವಿಟಮಿನ್‌ `ಡಿ' ಅತ್ಯವಶ್ಯ. ಅದು ನಮಗೆ ಸಿಗುವುದು ಬಿಸಿಲಿನಿಂದ. ದಿನಕ್ಕೆ ಸ್ವಲ್ಪ ಹೊತ್ತು ದೇಹಕ್ಕೆ ಬಿಸಿಲಿನ ದರ್ಶನ ಕೊಡಿಸಿ. ವಿಟಮಿನ್‌ `ಡಿ' ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ