ಹೃದಯ ನಮ್ಮ ಶರೀರದ ಮುಖ್ಯ ಅಂಗ. ಇದು ಶರೀರದ ಪ್ರತಿಯೊಂದು ಭಾಗಕ್ಕೂ ಲಕ್ಷಗಟ್ಟಲೆ ಗ್ಯಾಲನ್ ರಕ್ತವನ್ನು ಪಂಪ್ ಮಾಡುತ್ತದೆ. ಹೃದಯ ನಿರ್ವಹಿಸುವ ಕೆಲಸದ ಒತ್ತಡಕ್ಕೆ ಹೃದಯವನ್ನು ಆರೋಗ್ಯವಾಗಿಡಲು ಮತ್ತು ಒಟ್ಟಾರೆ ಚಯಾಪಚಯ ಆರೋಗ್ಯ ಸಕ್ರಿಯವಾಗಿರಲು ನಮ್ಮ ಆಹಾರ ಮತ್ತು ಜೀವನಶೈಲಿ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೃದಯದ ಸಂಪೂರ್ಣ ಆರೋಗ್ಯದ ವಿಷಯ ಬಂದಾಗ ಅನೇಕ ವಿಷಯಗಳಲ್ಲಿ ನಾವು ತಪ್ಪು ಮಾಡುತ್ತೇವೆ. ಹೃದಯದ ಸಮಸ್ಯೆಗಳನ್ನು ಉಂಟು ಮಾಡುವ ಅನೇಕ ಅಂಶಗಳಲ್ಲಿ ಮುಖ್ಯವಾಗಿರುವುದೆಂದರೆ ನಮ್ಮ ಅಡುಗೆಮನೆಯಲ್ಲಿ ಅಡಗಿರುವ ದೋಷ ಎಂದರೆ ನಿಮ್ಮ ಅಡುಗೆ ಎಣ್ಣೆ. ಏಕೆಂದು ಇಲ್ಲಿ ನೋಡಿ.
ಯಾವುದೇ ಭಾರತೀಯ ಮನೆಯಲ್ಲಿ ಅಡುಗೆ ಮಾಡುವಾಗ ಪ್ಯಾನ್ಗೆ ಮೊದಲು ಹಾಕುವುದು ಎಣ್ಣೆ. ಅಡುಗೆ ಎಣ್ಣೆಯನ್ನು ಕೊಬ್ಬಿನಿಂದ ತಯಾರಿಸಲಾಗಿರುತ್ತದೆ. ಇವುಗಳಲ್ಲಿ ಕೆಲವು ಒಳ್ಳೆಯದಾಗಿದ್ದರೆ, ಮತ್ತೆ ಕೆಲವು ಅಷ್ಟೇನೂ ಒಳ್ಳೆಯದಲ್ಲ, ಎಂದರೆ ನೀವು ಎಣ್ಣೆ ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೇ? ಖಂಡಿತಾ ಇಲ್ಲ. ನೀವು ಸೂಕ್ಷ್ಮ ಅಂಶಗಳನ್ನು ಓದಿ ನಿಮ್ಮ ಅಡುಗೆ ಎಣ್ಣೆ ಯಾವುದರಿಂದ ತಯಾರಾಗಿದೆ ಎಂದು ತಿಳಿಯುವುದು ಮುಖ್ಯ. ಮಾರುಕಟ್ಟೆಯಲ್ಲಿ ಅನೇಕ ಎಣ್ಣೆ ಬ್ರಾಂಡ್ಗಳು ಲಭ್ಯವಿದ್ದು, ಪ್ರತಿಯೊಂದೂ ಒಂದಕ್ಕಿಂತ ಮತ್ತೊಂದು ಉತ್ತಮವೆಂದು ಬಿಂಬಿಸುತ್ತವೆ. ಆದರೆ ಸೂಕ್ತವಾದ ಆಯ್ಕೆ ಮಾಡುವುದು ನಿಮ್ಮ ಜವಾಬ್ದಾರಿ. ನೀವು ಸರಿಯಾದ ಅಡುಗೆ ಎಣ್ಣೆ ಆಯ್ಕೆ ಮಾಡುವಾಗ, ರುಚಿಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲದೇ ಆರೋಗ್ಯಕರವಾದ ಮತ್ತು ನಿಮ್ಮ ಕುಟುಂಬದ ಯೋಗಕ್ಷೇಮ ನಿರ್ವಹಿಸುವ ಆಹಾರ ಸಿದ್ಧಪಡಿಸುತ್ತಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಇದನ್ನು ಸರಳವಾಗಿ ತಿಳಿಸಲು, ಮುಂದಿನ ಬಾರಿ ನೀವು ಅಡುಗೆ ಎಣ್ಣೆ ಖರೀದಿಸುವಾಗ ನೋಡಬೇಕಾದ 5 ಪ್ರಮುಖ ಅಂಶಗಳ ಬಗ್ಗೆ ಇಲ್ಲಿ ನೀಡಲಾಗಿದೆ.
ಅಧಿಕ ಒಮೇಗಾ 3
ಒಮೇಗಾ 3 ಉರಿಯೂತದ ವಿರುದ್ಧ ಹೋರಾಡುತ್ತದೆ ಮತ್ತು ರಕ್ತದಲ್ಲಿ ಸಾಮಾನ್ಯವಾದ ಕೊಲೆಸ್ಟ್ರಾಲ್ ಮಟ್ಟ ನಿರ್ವಹಿಸಲು ನೆರವಾಗುತ್ತದೆ. ಇವೆರಡೂ ಹೃದಯ ರಕ್ತನಾಳಗಳ ರೋಗಕ್ಕೆ ಅಪಾಯದ ಅಂಶಗಳೆಂದು ಪರಿಗಣಿಸಲಾಗಿದೆ. ಒಮೇಗಾ 3 ಸಾಮಾನ್ಯವಾಗಿ ಸಮುದ್ರ ಆಹಾರದಲ್ಲಿ ಕಂಡುಬರುತ್ತದೆ. ನೀವು ಸಸ್ಯಾಹಾರಿಯಾಗಿದ್ದರೆ, ನಿಮ್ಮ ದೈನಂದಿನ ಆಹಾರದಿಂದ ಸಾಕಷ್ಟು ಒಮೇಗಾ 3 ಪಡೆಯಲು ಒಮೇಗಾ 3 ಸಮೃದ್ಧವಾಗಿರುವ ಅಡುಗೆ ಎಣ್ಣೆ ಬಳಸುವುದು ಮುಖ್ಯ.
ಒಮೇಗಾ 6 ರಿಂದ ಒಮೇಗಾ 3ರರೆಗೆ ಸೂಕ್ತ ಅನುಪಾತ ಹೃದಯದ ಒಟ್ಟಾರೆ ಆರೋಗ್ಯ ನಿರ್ವಹಿಸುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಒಮೇಗಾ 6 ರಿಂದ ಒಮೇಗಾ 3ರ ಅನುಪಾತ ಸೇವನೆಗೆ 5 ಮತ್ತು 10ರ ನಡುವಿದ್ದರೆ ಸೂಕ್ತ ಎಂದು ತಿಳಿಸಿದೆ. ಒಮೇಗಾ 3 ಪ್ರಮಾಣ ಅಧಿಕವಾಗಿದ್ದಲ್ಲಿ ಹಾಗೂ ಅದು ಸರಿಯಾದ ಅನುಪಾತದಲ್ಲಿ ಸಂಯೋಜನೆಯಾಗಿದ್ದಲ್ಲಿ ಹೃದಯದ ಒಟ್ಟಾರೆ ಆರೋಗ್ಯ ನಿರ್ವಹಣೆಗೆ ನೆರವಾಗುತ್ತದೆ.
ಅಧಿಕ ಮಾನೋಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ಸ್
ಮಾನೋಸ್ಯಾಚುರೇಟೆಜ್ ಕೊಬ್ಬು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಅವು ಆಹಾರ ತಯಾರಿಕೆಯಲ್ಲಿ ಎಣ್ಣೆಯ ಹೀರುವಿಕೆಯನ್ನು ಕಡಿಮೆ ಮಾಡುವುದರಿಂದ ಹೊಟ್ಟೆಗೆ ಆಹಾರ ಹಗುರವೆನಿಸುತ್ತದೆ ಮತ್ತು ಜೀರ್ಣ ಸುಲಭವಾಗುತ್ತದೆ. ಅವು ಆರೋಗ್ಯ ಮತ್ತು ರುಚಿಯ ಮೇಲೆ ಯಾವುದೇ ಹೊಂದಾಣಿಕೆ ಇಲ್ಲದೇ ಆಹಾರದಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಹಾಗೇ ಉಳಿಸುತ್ತದೆ.
ಗಾಮಾ ಒರೈಜೆನಾಲ್
ಇದು ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ ಒರೈಜೆನಾಲ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ನ್ನು ಹೆಚ್ಚಿಸುತ್ತದೆಂದು ತಿಳಿದುಬಂದಿದೆ. ನೀವು ಹೃದಯಕ್ಕೆ ಆರೋಗ್ಯಕರವಾದ ಎಣ್ಣೆ ಬಯಸಿದರೆ, ಇದು ಇರಲೇಬೇಕು.
ವಿಟಮಿನ್ ಎ, ಡಿ ಮತ್ತು ಇ ಪೋಷಕಾಂಶ ಬೆಂಬಲಿಸುತ್ತದೆ ವಿಟಮಿನ್ ಎ ದೃಷ್ಟಿಗೆ ಬೆಂಬಲ ನೀಡುತ್ತದೆ ಮತ್ತು ಇದು ಜೀವನಶೈಲಿ ಹಾಗೂ ಒತ್ತಡದಿಂದ ಉಂಟಾಗುವ ಹಾನಿಯನ್ನು ಸರಿಪಡಿಸಲು ನೆರವಾಗುತ್ತದೆ. ವಿಟಮಿನ್ `ಡಿ’ ಇಮ್ಯೂನಿಟಿಗೆ ಬಲು ಅಗತ್ಯವಾದುದು ಹಾಗೂ ನಮ್ಮ ಮೂಳೆಗಳನ್ನು ಸಶಕ್ತಗೊಳಿಸುತ್ತದೆ ಎಂಬುದನ್ನು ಅರಿಯಿರಿ. ವಿಟಮಿನ್ ಇ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು ಇದು ನಿಮ್ಮ ಶರೀರದಲ್ಲಿ ಮುಕ್ತ ರಾಡಿಕಲ್ಸ್ ಕಡಿಮೆ ಮಾಡುತ್ತದೆ. ಇವೆಲ್ಲ ಒಟ್ಟಾರೆ ಪೌಷ್ಟಿಕಾಂಶಕ್ಕೆ ಅಗತ್ಯ.
ಸರಿಯಾದ ಎಣ್ಣೆ ಆಯ್ಕೆ ಮಾಡುವ ಮೂಲಕ, ಯೋಚನೆ ಮತ್ತು ಕೆಲವು ಸರಳ ಮಾರ್ಪಾಡುಗಳ ಮೂಲಕ, ನೀವು ನಿಮ್ಮ ಹೃದಯ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಂಡು ನಿಮ್ಮ ಆಯ್ಕೆಯ ಆಹಾರ ಸೇವಿಸಬಹುದು.
ಡಾ. ಪ್ರಿಯಾಂಕಾ ರೊಹ್ತಾಗಿ, ಅಪೊಲೋ ಆಸ್ಪತ್ರೆ, ಬೆಂಗಳೂರು, ಇವರಿಂದ.