ಎಷ್ಟೋ ಮಹಿಳೆಯರು ಚರ್ಮದ ಮೇಲೆ ಬೆಳೆದ ಅನಗತ್ಯ ಕೂದಲಿನ ಸಮಸ್ಯೆ ಎದುರಿಸುತ್ತಾ, ನಿವಾರಣೆಗಾಗಿ ನಾನಾ ಪ್ರಯತ್ನ ಪಡುತ್ತಾರೆ. ಹರ್ಬಲ್ ವಿಧಾನ, ಪ್ಯೂಮಿಕ್‌ ಸ್ಟೋನ್‌ ಬಳಸಿ ತಮ್ಮ ಮುಖ, ದೇಹದ ಭಾಗಗಳ ಅನಗತ್ಯ ಕೂದಲನ್ನು ತಿಕ್ಕುವುದೂ ಇದೆ. ಹೆಚ್ಚು ಹೆಂಗಸರು ಶೇವಿಂಗ್‌, ವ್ಯಾಕ್ಸಿಂಗ್‌ಗಳ ಮೊರೆಹೋಗುತ್ತಾರೆ. ಆದರೆ ಅನಗತ್ಯ ಕೂದಲ ನಿವಾರಣೆಗಾಗಿ ಈಗ ಎಷ್ಟೋ ಆಧುನಿಕ ವಿಧಾನ ಬಂದಿದೆ. ಕೆಲವು ತಾತ್ಕಾಲಿಕ ವಿಧಾನಗಳು ಹೀಗಿವೆ :

ಶೇವಿಂಗ್‌ : ಇದರಲ್ಲಿ ಒದ್ದೆ ರೇಝರ್‌/ ಎಲೆಕ್ಟ್ರಿಕ್‌ ರೇಝರ್‌ ಸಹಾಯದಿಂದ ಚರ್ಮದ ಮೇಲ್ಪದರದ ಮೇಲೆ ಇರುವ ಕೂದಲನ್ನು ತೊಲಗಿಸುತ್ತಾರೆ ಅಥವಾ ಟ್ರಿಮ್ ಮಾಡುತ್ತಾರೆ. ಈ ವಿಧಾನದಿಂದ ಕಾಲು, ತೋಳು, ಮುಖದ ಮೇಲಿನ ಕೂದಲು ಹೋಗುತ್ತದೆ. ಆದರೆ ಈ ಪ್ರಕ್ರಿಯೆ ನಂತರ ಕೂದಲು ಮತ್ತೆ ಹುಟ್ಟಿಕೊಳ್ಳುತ್ತದೆ. ಏಕೆಂದರೆ ಇಲ್ಲಿ ಬುಡ ನಾಶ ಆಗಿರುವುದಿಲ್ಲ. ಪ್ರಭಾವಿತ ಭಾಗಗಳ ಮೇಲೆ ಶೇವಿಂಗ್‌ ಕ್ರೀಂ/ ಜೆಲ್‌ ಹಚ್ಚಿರಿ. ಅದು ನೊರೆಯಾಗುವಂತೆ ಬ್ರಶ್‌ ಮಾಡಿ, 1 ನಿಮಿಷ  ಹಾಗೇ ಬಿಡಿ. ನಂತರ ರೇಝರ್‌ ಬಳಸಿ ಶೇವ್‌ ಮಾಡಿ. ಇದಾದ ಮೇಲೆ ನೀರು ಚಿಮುಕಿಸಿ ತೊಳೆಯಿರಿ. ಕ್ರೀಂ/ಜೆಲ್‌ ಬಳಸಿ ಮಾಯಿಶ್ಚರೈಸ್‌ ಮಾಡಿ. ಆಗ ಚರ್ಮದಲ್ಲಿ ಉರಿ ಇರದು, ಮೃದುವಾಗಿಯೂ ಆಗುತ್ತದೆ. ಅದನ್ನು ಉಳಿಸಿಕೊಳ್ಳಲು ಆಗಾಗ ಶೇವಿಂಗ್‌ ಮಾಡುತ್ತಿರಬೇಕು. ಶೇವಿಂಗ್‌ ನಂತರ ಮಾಯಿಶ್ಚರೈಸರ್‌ ಆ್ಯಂಟಿಸೆಪ್ಟಿಕ್‌ ಕ್ರೀಮಿನಿಂದ ಸವರಬೇಕು.

ಹೇರ್‌ ರಿಮೂವಲ್ ಕ್ರೀಂ : ಇಂದಿನ ಮಾರುಕಟ್ಟೆಯಲ್ಲಿ ಇಂಥ ಕ್ರೀಮುಗಳು ಬೇಕಾದಷ್ಟು ಸಿಗುತ್ತವೆ. ಈ ಕ್ರೀಮಿನಲ್ಲಿನ ಕೆಮಿಕಲ್ಸ್ ಹೇರ್‌ ಶ್ಯಾಫ್ಟ್ ನ್ನು ಸುತ್ತುವರಿಯುತ್ತದೆ. ಆದರೆ ಇದನ್ನು ಸಮರ್ಪಕ ರೀತಿಯಲ್ಲಿ ಬಳಸಬೇಕು. ಏಕೆಂದರೆ ಕ್ರೀಮನ್ನು ಸರಿಯಾಗಿ ಹಚ್ಚದಿದ್ದರೆ ಅಥವಾ ಬಹಳ ಹೊತ್ತು ಚರ್ಮದ ಮೇಲೆ ಹಾಗೇ ಬಿಟ್ಟಿದ್ದರೆ, ಚರ್ಮ ಉರಿಯುತ್ತದೆ. ಜೊತೆಗೆ ಇದನ್ನು ಬಳಸುವ ಮೊದಲು ಅಲರ್ಜಿ ಟೆಸ್ಟ್ ಸಹ ಮಾಡಿಸಬೇಕು. ತುಸು ಕ್ರೀಮ್ ನ್ನು ಅನಗತ್ಯ ಕೂದಲಿನ ಚರ್ಮದ ಮೇಲೆ ಹಚ್ಚಿ ನೋಡಿ.  ಅದರಿಂದ ಯಾವುದೇ ತೊಂದರೆ ಆಗುತ್ತಿಲ್ಲ ತಾನೇ ಎಂದು ಕನ್‌ಫರ್ಮ್ ಮಾಡಿಕೊಳ್ಳಿ. ನಂತರ ಕ್ರೀಂ ಜೊತೆಗೆ ಕೊಟ್ಟ ಸೂಚನೆ ಅನುಸರಿಸಿ ಹಚ್ಚಿಕೊಳ್ಳಿ.

ಲೇಸರ್‌ ಹೇರ್‌ ರಿಮೂವರ್ : ಇದು ಮತ್ತೊಂದು ಒಳ್ಳೆಯ ಆಯ್ಕೆ. ಇದರಲ್ಲಿ ಲೇಸರ್‌ ಲೈಟ್‌ನಿಂದ ಕೂದಲಿನ ಬುಡವನ್ನು ನಷ್ಟಗೊಳಿಸಲಾಗುತ್ತದೆ. ಇದು ಗಾಢ ಹಾಗೂ ತೆಳು ಎರಡೂ ಬಣ್ಣದ ಚರ್ಮಕ್ಕೆ ಹೊಂದುತ್ತದೆ. ಲೇಸರ್‌ ಬೀಮ್ ಹೇರ್‌ ಬಲ್ಬನ್ನು ನಾಶಗೊಳಿಸುತ್ತದೆ. ಈ ವಿಧಾನ ತುಸು ದುಬಾರಿ. ಇದನ್ನು ನುರಿತ ತಜ್ಞರಿಂದಲೇ ಮಾಡಿಸಬೇಕು ಎಂದು ನೆನಪಿಡಿ.

ಹಾಟ್‌ ವ್ಯಾಕ್ಸಿಂಗ್‌ : ಇದರಿಂದಲೂ ಸಹ ಅನಗತ್ಯ ಕೂದಲು ಬುಡದಿಂದ ನಾಶವಾಗುತ್ತದೆ. ಬಿಸಿ ವ್ಯಾಕ್ಸ್ ನ್ನು ಚರ್ಮದ ಮೇಲೆ ಹರಡಿ ಪೇಪರ್‌ ಶೀಟ್‌ ಯಾ ಬಟ್ಟೆಯನ್ನು ವ್ಯಾಕ್ಸ್ ಮೇಲೆ ಹರಡುತ್ತಾರೆ. ಅದು ತಣ್ಣಗಾಗುತ್ತಿದ್ದಂತೆ, ಶೀಟ್‌ನ್ನು ಕೂದಲಿನ ವಿರುದ್ಧ ದಿಕ್ಕಿನಲ್ಲಿ ಎಳೆಯಲಾಗುತ್ತದೆ. ಕೂದಲು ವ್ಯಾಕ್ಸ್ ಗೆ ಅಂಟಿಕೊಂಡು ಹೊರಬರುತ್ತದೆ.

ವ್ಯಾಕ್ಸಿಂಗ್‌ ತರಹವೇ ಶುಗರಿಂಗ್‌. ಇಲ್ಲಿ ಒಂದು ಗಾಢವಾದ ದ್ರವವನ್ನು ಚರ್ಮದ ಮೇಲೆ ಹರಡಿ, ಅದು ಗಟ್ಟಿಗೊಳ್ಳಲು ಬಿಡುತ್ತಾರೆ. ನಂತರ ವ್ಯಾಕ್ಸಿಂಗ್‌ ತರಹವೇ ಬಟ್ಟೆ ಅಥವಾ ಪೇಪರ್‌ ಶೀಟ್‌ನ್ನು ಎಳೆಯಲಾಗುತ್ತದೆ. ಇದರಿಂದಲೂ ಕೂದಲು ಬುಡ ಸಮೇತ ಬಂದುಬಿಡುತ್ತದೆ.

ವೇನಿಕಾ : ಇದರ ಸಕ್ರಿಯ ಎಂದರೆ ಪ್ಲೇರಿಥಿನ್‌ ಹೈಡ್ರೋಕ್ಲೋರೈಡ್‌. ಇದನ್ನು ದಿನಕ್ಕೆ 2 ಸಲ ಚರ್ಮದ ಮೇಲೆ ಹಚ್ಚಲಾಗುತ್ತದೆ. 8 ವಾರಗಳಲ್ಲೇ ಇದರಿಂದ ಉತ್ತಮ ಪರಿಣಾಮ ಸಿಗುತ್ತದೆ. ಇದರ ಸೈಡ್‌ ಎಫೆಕ್ಟ್ಸ್ ಕಡಿಮೆ ಇದ್ದರೂ, ಇದರ ಬಳಕೆಗೆ ಮೊದಲು ಅಲರ್ಜಿ ಟೆಸ್ಟ್ ಗಾಗಿ ಚರ್ಮತಜ್ಞರ ಸಲಹೆ ಪಡೆಯಬೇಕು. ಇದರ ಸಾಧಾರಣ ಸೈಡ್‌ ಎಫೆಕ್ಟ್ ಎಂದರೆ ಮೊಡವೆ, ದದ್ದು ಮೂಡುವುದು. ಅದು ನಿಮಗೆ ಹೆಚ್ಚಾಗಿದ್ದರೆ, ಆಗ ಹೇರ್‌ ರಿಮೂವ್‌ಗಾಗಿ ಈ ವಿಧಾನ ಬೇಡ.

ಬ್ಲೀಚಿಂಗ್‌ : ಇದು ನೇರವಾಗಿ ಹೇರ್‌ ರಿಮೂವ್‌ ವಿಧಾನವಲ್ಲ, ಆದರೆ ಮುಖದಲ್ಲಿನ ಕೂದಲನ್ನು ಮರೆಮಾಚಲು ಉತ್ತಮ ವಿಧಾನ. ಇದು ಹೆಚ್ಚು ಬಾಳಿಕೆ ಇರುತ್ತದೆ. ಇದರಿಂದ ಕೂದಲು ಕೀಳುವುದಿಲ್ಲ, ಹೀಗಾಗಿ ನೋವಿಲ್ಲ. ಬ್ಲೀಚ್‌ ಮಾಡಿದ ನಂತರ ಚರ್ಮದಲ್ಲಿ ಟ್ಯಾನಿಂಗ್‌ ಕಡಿಮೆ ಆಗುತ್ತದೆ. ಬಣ್ಣ ಸಹ ಒಂದೇ ಸಮ ಆಗುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ಬ್ಲೀಚ್‌ ಸುಲಭವಾಗಿ ಸಿಗುತ್ತದೆ. ಇದರ ಜೊತೆ ಪ್ರೀ ಪೋಸ್ಟ್ ಯೂಸ್‌ ಕ್ರೀಂ ಸಹ ಲಭ್ಯ. ಪೌಡರ್‌ ಕ್ರೀಮನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಬೇಕು. ಪ್ರಭಾವಿತ ಜಾಗಗಳಲ್ಲಿ ಹರಡಿ, ಕೆಲವು ನಿಮಿಷ ಹಾಗೇ ಬಿಡಿ.

ಮ್ಯಾನ್ಯುಯೆಲ್‌ನಲ್ಲಿ ನೀಡಿರುವ ಸೂಚನೆ ಪ್ರಕಾರ, ಕಾಟನ್‌ ಪ್ಯಾಡ್‌ ನೆರವಿನಿಂದ ಇದನ್ನು ತೆಗೆದುಬಿಡಿ, ತಣ್ಣೀರಿನಿಂದ ತೊಳೆಯಿರಿ. ಕೂದಲಿನ ಬಣ್ಣ ನಿಮ್ಮ ಚರ್ಮದ ಬಣ್ಣಕ್ಕೆ ಸಮನವಾಗಿ ಕಾಣಿಸುತ್ತದೆ, ಯಾರಿಗೂ ಕಾಣಿಸದು. ಬ್ಲೀಚಿಂಗ್‌ನಿಂದ ಒಮ್ಮೊಮ್ಮೆ ಉರಿ ಆಗುವುದುಂಟು, ಏಕೆಂದರೆ ಕೆಮಿಕಲ್ಸ್ ಇರುತ್ತದೆ. ಆದ್ದರಿಂದ ಬ್ಲೀಚ್‌ ಬಳಸುವ ಮೊದಲು ಪ್ಯಾಚ್‌ ಟೆಸ್ಟ್ ಮಾಡಿಸಿ. ಇಂದು ಟೆಕ್ನಾಲಜಿ ಬಲು ಮುಂದುವರಿದಿದೆ. ಚರ್ಮದ ಅನಗತ್ಯ ಕೂದಲ ಶಾಶ್ವತ ನಿವಾರಣೆಗೂ ಅವಕಾಶವಿದೆ. ಪ್ರಸ್ತುತ ಇದಕ್ಕಾಗಿ 3 ವಿಧಾನ ಅನುಸರಿಸುತ್ತಾರೆ :

ಇನ್‌ಟೆನ್ಸ್ ಫೈಡ್ ಲೈಟ್‌ : ಈ ಪ್ರಕ್ರಿಯೆಯಲ್ಲಿ ಕಾನ್‌ಸಂಟ್ರೇಟೆಡ್‌ ಲೈಟ್‌ನ ತೆಳು ಬೀಮ್ ನ್ನು ಚರ್ಮದ ಒಂದು ಸಣ್ಣ ಜಾಗದ ಮೇಲೆ ಫೋಕಸ್‌ ಮಾಡುತ್ತಾರೆ. ಚರ್ಮದ ಪದರದ ಕೆಳಗಿರುವ ಹೇರ್‌ ಫಾಲಿಕ್ಸ್‌ನಲ್ಲಿನ ಪಿಗ್ಮೆಂಟ್‌ ಈ ಲೈಟ್‌ನ್ನು ಹೀರಿಕೊಳ್ಳುತ್ತದೆ. ಈ ರೀತಿ ಹೇರ್‌ ಫಾಲಿಕ್ಸ್‌ನ್ನು ಬಿಸಿ ಮಾಡುವುದರಿಂದ ಅದರ ಗ್ರೋಥ್‌ ನಿಂತುಬಿಡುತ್ತದೆ. ಈ ಚಿಕಿತ್ಸೆ ಹಳದಿ ಮತ್ತು ಗಾಢ ಬಣ್ಣದ ಚರ್ಮಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ನೋವು ಹೆಚ್ಚಿರುವುದಿಲ್ಲ. ಏಕೆಂದರೆ ಒಂದು ಸಲಕ್ಕೆ ಚರ್ಮದ ಒಂದು ಭಾಗಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಇದು ತುಸು ದುಬಾರಿ ಚಿಕಿತ್ಸೆ, ಹಲವು ಸಿಟಿಂಗ್ಸ್ ಅತ್ಯಗತ್ಯ ಬೇಕು.

ಎಲೆಕ್ಟ್ರಾಲಿಸಿಸ್‌ : ಇದರಲ್ಲಿ ಎಲೆಕ್ಟ್ರಿಕ್‌ ಕರೆಂಟ್‌ನಿಂದ ಪ್ರತಿಯೊಂದು ಕೂದಲಿನ ಬುಡ ಭಾಗವನ್ನು ಶಾಶ್ವತ ನಾಶ ಮಾಡಲಾಗುತ್ತದೆ. ಲೇಸರ್‌ ಹೇರ್‌ ರಿಮೂವ್‌ ಸಾದಾ ಮತ್ತು ಪ್ರತಿಯೊಂದು ಬಗೆಯ ಚರ್ಮಕ್ಕೂ ಹೊಂದುವಂಥದ್ದಲ್ಲ. ಆದರೆ ಇದು ಪ್ರತಿಯೊಂದು ಬಗೆಯ ಚರ್ಮದ ಮೇಲೂ ಕೆಲಸ ಮಾಡಬಲ್ಲದು. ಈ ಪ್ರಕ್ರಿಯೆಯಲ್ಲಿ ಒಂದು ಸಲಕ್ಕೆ ಒಂದೇ ಕೂದಲಿನ ಮೇಲೆ ಮಾತ್ರ ಕೆಲಸ ಮಾಡಲಾಗುವುದು. ಹೀಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬಹುಕಾಲ ಬೇಕು. ಇದರಿಂದ ಕೂದಲು ತೆಗೆಸಲು 3 ಮುಖ್ಯ ವಿಧಾನಗಳಿವೆ :

– ಗ್ಲೆನಿಕ್‌ ಎಲೆಕ್ಟ್ರಾಲಿಸಿಸ್‌ ಅತಿ ಪ್ರಾಚೀನ ವಿಧಾನ. ಇತ್ತೀಚೆಗಂತೂ ಇದು ಬಲು ಅಪರೂಪ. ಇದರಲ್ಲಿ ಡೈರೆಕ್ಟ್ ಕರೆಂಟ್‌ ನೆರವಿನಿಂದ ಹೇರ್‌ ಫಾಲಿಕ್ಸ್‌ನ್ನು ನಾಶಪಡಿಸುತ್ತಾರೆ. ಇದಕ್ಕೆ ಹೆಚ್ಚಿನ ಕಾಲಾವಕಾಶ ಬೇಕು. ಹೀಗಾಗಿ ಕ್ರಮೇಣ ಇದು ಕಡಿಮೆ ಆಗಿದೆ.

– ಥರ್ಮಾಲಿಸಿಸ್‌ 2ನೇ ವಿಧಾನ. ಇದರಲ್ಲಿ ಆಲ್ಟರ್‌ನೇಟಿಂಗ್‌ ಕರೆಂಟ್‌ ನೆರವಿನಿಂದ ಹೀಟ್‌ ಕ್ರಿಯೇಟ್‌ ಮಾಡಿ ಹೇರ್‌ ಫಾಲಿಕ್ಸ್‌ನ್ನು ನಾಶಪಡಿಸುತ್ತಾರೆ. ಇತ್ತೀಚೆಗೆ ಇದರ ಬಳಕೆ ಹೆಚ್ಚಾಗುತ್ತಿದೆ, ಏಕೆಂದರೆ ಇದು ಪ್ರಭಾವಶಾಲಿ, ಫಾಸ್ಟ್ ಪ್ರಕ್ರಿಯೆ.

– ಬ್ಲೆಂಡ್‌ನಲ್ಲಿ ಹೀಟ್‌ ಕರೆಂಟ್‌ ಬಳಸಿ ಗ್ಲೆನಿಕ್‌ ಕೆಮಿಕಲ್ ರಿಯಾಕ್ಷನ್‌ನ್ನು ತೀವ್ರಗೊಳಿಸಲಾಗುತ್ತದೆ, ಇದರಿಂದ ಹೇರ್‌ ಫಾಲಿಕ್ಸ್‌ ನಾಶವಾಗುತ್ತದೆ. ಥರ್ಮಾಲಿಸಿಸ್‌ಗೆ ಹೋಲಿಸಿದಾಗ ಈ ವಿಧಾನ ತುಸು ಹೆಚ್ಚಿನ ಸಮಯ ಬೇಡುತ್ತದೆ, ಆದರೆ ಇದು ಅದಕ್ಕಿಂತಲೂ ಹೆಚ್ಚು ಪ್ರಭಾವಶಾಲಿ ಹಾಗೂ ಕಾಂಪ್ಲಿಕೇಟೆಡ್‌ ಏರಿಯಾದಿಂದಲೂ ಕೂದಲು ತೆಗೆಯಲು ಅನುಕೂಲಕರ.

ಇದರಲ್ಲಿ ಯಾವುದೇ ವಿಧಾನ ಆರಿಸಿಕೊಳ್ಳಲಿಕ್ಕೂ ಅನುಭವಿ ತಜ್ಞರ ಸಹಾಯ ಬೇಕು. ಅವರು ಇದರಲ್ಲಿ ನುರಿತವರಾಗಿದ್ದು, ಈ ಕುರಿತು ಚೆನ್ನಾಗಿ ಪಳಗಿರಬೇಕು.

– ಡಾ. ಸಾಕ್ಷಿ ಕೆ. ಶಿವಾನಂದ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ