ಪೆಂಡೆಂಟ್‌ ಲೈಟ್‌, ಸ್ಕಾನ್ಸೆಸ್‌ ರಿಸೆಸ್ಡ್ ಲೈಟ್‌, ಝೂಮರ್‌, ಫ್ಲೋರ್‌ ಮತ್ತು ಟೇಬಲ್ ಲ್ಯಾಂಪ್‌ ನಮ್ಮ ಕೋಣೆಗಳಿಗಷ್ಟೇ ಅಲ್ಲ, ನಮ್ಮ ಜೀವನವನ್ನು ಬೆಳಕಿನಿಂದ ತುಂಬಿಸುತ್ತವೆ. ಆದರೆ ಪ್ರತಿಯೊಂದು ಸೀಸನ್‌ ಮತ್ತು ವರ್ಷಕ್ಕನುಗುಣವಾಗಿ ಇವುಗಳ ಟ್ರೆಂಡ್‌ ಹಾಗೂ ಸ್ಟೈಲ್ ಕೂಡ ಬದಲಾಗುತ್ತದೆ. ಸಮೃದ್ಧ ಬೆಳಕೇ ಮನೆಯ ಆಂತರಿಕ ಭಾಗದ ಸೌಂದರ್ಯಕ್ಕೆ ಮೆರುಗು ಕೊಡುತ್ತದೆ. ಅದು ಕೋಣೆಯ ಲುಕ್‌, ನಮ್ಮ ಮೂಡ್‌ ಹಾಗೂ ವಾತಾವರಣವನ್ನು ಪರಿಪೂರ್ಣವಾಗಿ ಬದಲಿಸುತ್ತದೆ.

ಈ ಹಬ್ಬಕ್ಕೆ ನೀವು ನಿಮ್ಮ ಮನೆಯ ಮೂಲೆ ಮೂಲೆಗೂ ವಿದ್ಯುತ್‌ನ ಅಲಂಕಾರದ ಮೂಲಕ ಹೊಸ ರೂಪ ಕೊಡಬಹುದು.

ಝೂಮರ್

ಇದೊಂದು ಆಭರಣದ ರೀತಿಯಲ್ಲಿರುತ್ತದೆ. ಅದು ಮನೆಗೆ ವಿಶಿಷ್ಟ ಹೊಳಪು ನೀಡುತ್ತದೆ. ಜ್ಯಾಮೆಟ್ರಿಕ್‌ ಡಿಸೈನ್‌ಗಾಗಿ ನೀವು ಆರ್ಟ್‌ ಝೂಮರ್‌ ಆಯ್ದುಕೊಳ್ಳಬಹುದು. ಅದೇ ರೀತಿ ತಿರುಗುವ ಝೂಮರ್‌ ಹಾಕಿ ಆಕಾಶದಲ್ಲಿ ಮಿನುಗುವ ತಾರೆಗಳ ರೀತಿಯ ವಾತಾವರಣವನ್ನು ಮನೆಯಲ್ಲಿಯೇ ಸೃಷ್ಟಿ ಮಾಡಬಹುದು. ಹ್ಯಾಂಗಿಂಗ್‌ ಝೂಮರ್‌ ಎತ್ತರದ ಛಾವಣಿಗೆ ಹೆಚ್ಚು ಶೋಭಿಸುತ್ತದೆ. ಅದನ್ನು ಡೈನಿಂಗ್‌ ರೂಮಿನ ಟೇಬಲ್ ಮೇಲೂ ಇಡಬಹುದು.

ಅವುಗಳ ಬಣ್ಣಗಳ ಬಗ್ಗೆ ಹೇಳಬೇಕೆಂದರೆ ಅದರಲ್ಲಿ ಹಲವು ಪರ್ಯಾಯಗಳಿವೆ. ನೀವು ಹೊಳೆಯುವ ಬೆಳಕನ್ನು ಪಡೆಯಲು ಇಚ್ಛಿಸುವಿರಾದರೆ, ಬಿಳಿ ಬಣ್ಣ ಆಯ್ದುಕೊಳ್ಳಿ. ತಿಳಿ ಗುಲಾಬಿ ಬಣ್ಣ ವಿಶಿಷ್ಟ ವರ್ಣಮಯ ಅನುಭವ ನೀಡುತ್ತದೆ. ಬಂಗಾರ ವರ್ಣ ಭವ್ಯತೆಯ ಅನುಭವ ನೀಡುತ್ತದೆ. ನಿಮ್ಮ ಕೋಣೆಯ ಆಕಾರಕ್ಕೆ ತಕ್ಕಂತೆ ಒಂದು ನಿಶ್ಚಿತ ಸೈಜ್‌ ಆಯ್ದುಕೊಳ್ಳಿ. ಚಿಕ್ಕ ಝೂಮರ್‌ಗಳು ಚಿಕ್ಕ ಕೋಣೆ, ಬಾಥ್‌ರೂಮ್ ಅಥವಾ ಪ್ರವೇಶ ದ್ವಾರದಲ್ಲಿ ಚೆನ್ನಾಗಿ ಕಂಡುಬರುತ್ತವೆ.

ನೀವು ಆ್ಯಂಟಿಕ್‌ನಿಂದ ಹಿಡಿದು ಆಧುನಿಕ ಡಿಸೈನ್‌ ತನಕ ಆಯ್ಕೆ ಮಾಡಿಕೊಳ್ಳಬಹುದು. ನೀವು ಹಗುರವಾದ ಡಿಸೈನ್‌ ಇಷ್ಟಪಡುವಿರಾದರೆ ಚೂಪಾದ ಝೂಮರ್‌ ಆಯ್ಕೆ ಮಾಡಿಕೊಳ್ಳಿ. ನೀವು ಎಂತಹ ಮೆಟೀರಿಯಲ್ಸ್ ಆಯ್ಕೆ ಮಾಡಿಕೊಳ್ಳಬೇಕೆಂದರೆ, ಅದು ನಿಮ್ಮ ಇಂಟೀರಿಯರ್‌ಗೆ ಹೊಂದಾಣಿಕೆ ಆಗುವಂಥದೇ ಇರಬೇಕು. ರಾಟ್‌ ಐರನ್‌ನಿಂದ ಮಾಡಿದ ಝೂಮರ್‌ ಒಳ್ಳೆಯ ಮೆಟಲ್ ಲುಕ್‌ ನೀಡುತ್ತದೆ.

ಪೆಂಡೆಂಟ್ಸ್ ನ ಆಕರ್ಷಕ ಮಾದರಿಗಳು

ಆಕರ್ಷಕ ಹಾಗೂ ಸುಂದರ ಪೆಂಡೆಂಟ್ಸ್ ಮನೆಗೆ ರಾಜಕಳೆ ತರುತ್ತದೆ. ಮನೆಯನ್ನು ಯಾವುದೇ ಸ್ಟೈಲ್‌ನಲ್ಲಿ ಡಿಸೈನ್‌ ಮಾಡಿರಬಹುದು. ಪೆಂಡೆಂಟ್‌ ಲೈಟ್ಸ್ ಪ್ರತಿಯೊಂದು ಮನೆಗೂ ಸೂಕ್ತ ಎನಿಸುತ್ತದೆ. ಡಿಸೈನರ್‌ ಗ್ಲಾಸ್‌ ಪೆಂಡೆಂಟ್‌ ತನ್ನದೇ ಆದ ಆಕರ್ಷಕ ಬಣ್ಣಗಳು ಹಾಗೂ ಆಧುನಿಕ ಡಿಸೈನುಗಳ ಅತ್ಯುತ್ತಮ ಹೊಂದಾಣಿಕೆಯಾಗಿದೆ.

ಪೆಂಡೆಂಟ್‌ ಫಿಕ್ಸ್ ಚರ್‌ ಲಿವಿಂಗ್‌ ರೂಮಿಗೆ ಸಾಕಷ್ಟು ಬೆಳಕು ಹಾಗೂ ಆಕರ್ಷಣೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಇವನ್ನು ಎತ್ತರದ ಛಾವಣಿಗೆ ಅಳವಡಿಸಲಾಗುತ್ತದೆ.

ಬೆಡ್‌ಸೈಡ್‌ ಲೈಟಿಂಗ್‌ ಲೈಟ್ಸ್

ಇದು ಬೆಡ್‌ರೂಮ್ ನ್ನು ಅತ್ಯಂತ ವಿಶೇಷವಾಗಿಸುತ್ತದೆ. ಸೂಕ್ತ ರೀತಿಯ ಬೆಳಕು ಬೆಡ್‌ರೂಮಿನ ವಾತಾವರಣವನ್ನು ಹಿತಕರ ಆಗಿಸುತ್ತದೆ. ದಿನವಿಡೀ ದಣಿದ ನೀವು ಅಲ್ಲಿ ತಾಜಾತನದ ಅನುಭವ ಪಡೆದುಕೊಳ್ಳಬಹುದು.

ಬೆಡ್‌ಸೈಡ್‌ನ ಲೈಟಿಂಗ್‌ ಬಗ್ಗೆ ಹೇಳಬೇಕೆಂದರೆ, ಅದು ಸಾಮಾನ್ಯವಾಗಿ ಟೇಬಲ್ ಲ್ಯಾಂಪ್‌ಗೆ ಬಂದು ಮುಕ್ತಾಯಗೊಳ್ಳುತ್ತದೆ. ಜನರು ಅದನ್ನು ಮುಂದೆ ಹೋಗಿ ಯೋಚಿಸುವುದೇ ಇಲ್ಲ. ಬೆಡ್‌ಸೈಡ್‌ ಪೆಂಡೆಂಟ್‌ಗಳೂ ಇವೆ.

ಲೈಟ್‌ಗಳ ಲೇಯರ್‌

ಲೈಟ್‌ಗಳ ಲೇಯರ್‌ ಕೋಣೆಗೆ ವಿಶಿಷ್ಟ ಲುಕ್‌ ನೀಡುತ್ತದೆ. ಪ್ರತಿಯೊಂದು ಮೂಲೆಯಿಂದ ಎದ್ದು ಬರುವಂತೆ ಗೋಚರಿಸುತ್ತದೆ. ಲಿವಿಂಗ್‌ ರೂಮಿನಲ್ಲಿ ಮೆಟಲ್‌ನಿದ ಸಿದ್ಧವಾದ ಝೂಮರ್‌ ಬಹಳ ಸುಂದರ ಎನಿಸುತ್ತದೆ. ಜೊತೆಗೆ ಬೆಳಕನ್ನು ಕೋಣೆಯ ಪ್ರತಿ ಮೂಲೆ ಮೂಲೆಗೂ ತಲುಪಿಸುತ್ತದೆ. ಅದೇ ರೀತಿ ಕನ್ನಡಿಯ ಮೇಲ್ಭಾಗ ಟ್ವಿನ್‌ ಸ್ಕಾನ್ಸೆಜ್‌ನ್ನು ಬಳಸಬಹುದು. ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಸ್ಕ್ರಾಲಿಂಗ್‌ ಫ್ಲೋರ್‌ ಲ್ಯಾಂಪ್‌ನ್ನು ಬಳಸಬಹುದು.

ಆಧುನಿಕ ದೀಪಗಳು

ಕೋಣೆಯನ್ನು ಅಲಂಕರಿಸುವಾಗ ಲೈಟಿಂಗ್‌ ಬಗ್ಗೆ ಗಮನ ಕೊಡುವುದು ಅತ್ಯವಶ್ಯ. ನೀವು ಸೂಕ್ತ ವಿನ್ಯಾಸದ ಝೂಮರ್‌ ಅಥವಾ ಲ್ಯಾಂಪ್‌ನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಮನೆಯ ಇಂಟೀರಿಯರ್‌ಗೆ ಮೆರುಗು ನೀಡುತ್ತವೆ. ಡೈನಿಂಗ್‌ ಟೇಬಲ್‌ಗಾಗಿ ಬಂಗಾರ ವರ್ಣದ ಹೊಳಪುಳ್ಳ ಬೆಳಕು ನೀಡುವ ಝೂಮರ್‌ನ ಆಯ್ಕೆ ಮಾಡಬಹುದು. ಬೆಡ್‌ರೂಮಿಗೆ ನಕ್ಷೆಯಂತಿರುವ ಮಂದ ಬೆಳಕಿನ ಝೂಮರ್‌ ಸೂಕ್ತ.

ಝೂಮರ್‌ಗಳು ಫಾರ್ಮಲ್ ಲಿವಿಂಗ್‌ ರೂಮ್ ಗಷ್ಟೇ ಅಲ್ಲ, ನೀವು ಇದನ್ನು ಮೆಟ್ಟಿಲುಗಳ ಮೇಲೆ, ಅಡುಗೆ ಮನೆಯಲ್ಲಿ, ಮಕ್ಕಳ ಬೆಡ್‌ರೂಮಿನಲ್ಲೂ ಅಳವಡಿಸಬಹುದು. ಅದೇ ರೀತಿ ಹಲವು ಪ್ರಾಕೃತಿಕ ಬಣ್ಣಗಳಿಂದ ಕೂಡಿರುವ ಡನ್‌ ಝೂಮರ್‌ ಕೂಡ ಅಳವಡಿಸಬಹುದು. ಬೆಡ್‌ರೂಮಿನಲ್ಲಿ ನೀವು ರಿಲ್ಯಾಕ್ಸ್ ಮಾಡಲು, ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುವಂತಹ ಮಂದ ಬೆಳಕಿನ ಝೂಮರ್‌ ಹಾಕಿಸಬಹುದು.

ಸ್ಕಾನ್ಸೆಜ್

ಇದನ್ನು ಛಾವಣಿಗಿಂತ ಹೆಚ್ಚಾಗಿ ಗೋಡೆಯ ಮೇಲೆ ಅಳವಡಿಸಲಾಗುತ್ತದೆ. ಇದರಲ್ಲಿರುವ ಶೇಡ್ಸ್ ಅಥವಾ ಗ್ಲಾಸ್‌ ಬೆಳಕನ್ನು ಸಾಫ್ಟ್ ಮಾಡುತ್ತವೆ. ಲಿವಿಂಗ್‌ ರೂಮಿನಲ್ಲಿ ಇವನ್ನು ಜೋಡಿಯಾಗಿ, ಫೈರ್‌ಪ್ಲೇಸ್‌ನಲ್ಲಿ ಎರಡೂ ಕಡೆ ಹಾಕಬಹುದು. ಊಟದ ಬಳಿಕ ನೀವು ಎಲ್ಲರೂ ಒಂದು ಕಡೆ ಬಂದು ಸೇರುವ ಜಾಗದಲ್ಲಿ ಇದು ಉಪಯುಕ್ತ ಎನಿಸುತ್ತದೆ.

ಫಾಲ್ಸ್ ಸೀಲಿಂಗ್‌ ಲೈಟ್‌

ಈ ತೆರನಾದ ಲೈಟ್‌ ಸಾಕಷ್ಟು ಬೆಳಕು ನೀಡುತ್ತದೆ. ಇದನ್ನು ಛಾವಣಿಯ ಬದಲಿಗೆ ನೆಲಕ್ಕೆ ಹತ್ತಿರದಲ್ಲಿ ಅವಳವಡಿಸಲಾಗುತ್ತದೆ. ಇದರಿಂದ ಲಿವಿಂಗ್‌ರೂಮಿನ ಫ್ಯಾನ್‌ ಹುದುಗಿಸುವುದು ಸುಲಭ.

ಟೇಬಲ್ ಲ್ಯಾಂಪ್

ಇದು ಕೋಣೆಯನ್ನು ಬೆಳಕಿನಿಂದ ಅಲಂಕರಿಸುವ ವಿಶೇಷ ಪ್ರಕಾರವಾಗಿದೆ. ಟೇಬಲ್ ಲ್ಯಾಂಪ್‌ಗಳು ಕಡಿಮೆ ಹೊಳಪಿನೊಂದಿಗೆ ಬೆಳಕು ನೀಡುತ್ತವೆ. ಇವು ಕೋಣೆಯನ್ನು ಬೆಚ್ಚಗೆ ಹಾಗೂ ಆಹ್ಲಾದಕರವಾಗಿ ಇಡಲು ನೆರವಾಗುತ್ತವೆ. ಟೇಬಲ್ ಲ್ಯಾಂಪ್‌ನ ಬಳಿ ನೀವು ನಿಮ್ಮ ಪ್ರಿಯ ವ್ಯಕ್ತಿಯೊಬ್ಬರ ಚಿತ್ರವೊಂದನ್ನು ಅಳಡಿಸಬಹುದು.

– ಅಮೃತಾ ಕಿರಣ್‌

ಆಧುನಿಕ ಲೈಟಿಂಗ್‌ನ ಉಪಾಯಗಳು

ಫ್ಯಾಬ್ರಿಕ್‌ ಲೈಟ್ಸ್ : ಇವನ್ನು ಸಾಮಾನ್ಯವಾಗಿ ಲ್ಯಾಂಪ್‌ನಲ್ಲಿ ಕಂಡುಕೊಳ್ಳಲಾಗುತ್ತದೆ. ಇವನ್ನು ಬಗೆಬಗೆಯ ಡಿಸೈನು, ಬಣ್ಣ ಹಾಗೂ ಗಾಜುಗಳಲ್ಲಿ ಬಳಸಲಾಗುತ್ತದೆ. ಇವುಗಳ ಫ್ಯಾಷನ್‌ ಎಂದೂ ಹಳತಾಗುವುದಿಲ್ಲ. ಫ್ಯಾಬ್ರಿಕ್‌ ಲೈಟ್‌ಗೂ ತನ್ನದೇ ಆದ ಒಂದು ಮೆರುಗು ಇರುತ್ತದೆ. ಇವು ವಿಶೇಷ ರೀತಿಯಲ್ಲಿ ಮನೆಯ ಮೂಲೆಗೆ ಬೆಳಕು ಒದಗಿಸುತ್ತವೆ.

ಗ್ಲಾಸ್‌ ಸೀಲಿಂಗ್‌ ಲೈಟ್‌ : ಅಂತಾರಾಷ್ಟ್ರೀಯ ಡಿಸೈನ್‌ನ ಈ ಲೈಟ್ಸ್ ಗಾಜಿನ ಸೀಲಿಂಗ್‌ನಲ್ಲಿ ಅವಳವಡಿಸಲಾಗುತ್ತದೆ. ಇಂಟೀರಿಯರ್‌ ಡಿಸೈನ್‌ ನಲ್ಲಿ ಅವನ್ನು ಬಹಳ ಇಷ್ಟಪಡಲಾಗುತ್ತದೆ.

ಔಟ್‌ಡೋರ್‌ ಲೈಟಿಂಗ್‌ : ಮನೆಯ ಹೊರಭಾಗದಲ್ಲಿ ಲೈಟುಗಳ ಬಳಕೆ ಹೆಚ್ಚುತ್ತಿದೆ. ಈಗ ಜನರು ಬಾಗಿಲ ಹೊರಗೆ ಅಷ್ಟೇ ಅಲ್ಲ, ಮನೆಯ ಎರಡೂ ಬದಿಗೂ ಕೂಡ ಲೈಟ್‌ಗಳನ್ನು ಬಳಸಿ, ಹೊರಗೆ ಒಳಗೆ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕಿಟಕಿಯ ಹೊರಗಡೆ ಕತ್ತಲೆಯಲ್ಲಿ ಒಂದು ಗೋಡೆ ಕಾಣಿಸುವುದರ ಬದಲು ಜನರು ಎಲ್ಇಡಿ ತಂತ್ರಜ್ಞಾನದ ಮುಖಾಂತರ ಸುಂದರವಾದ ಲೈಟಿಂಗ್‌ ಇಷ್ಟಪಡುತ್ತಾರೆ. ಇವುಗಳ ಬೆಲೆ ಹಾಗೂ ನಿರ್ವಹಣೆ ಖರ್ಚು ಕಡಿಮೆಯಾಗುತ್ತದೆ. ಎಲ್ಇಡಿ ಉಳಿದ ಲೈಟುಗಳಿಗಿಂತ 6 ಪಟ್ಟು ಹೆಚ್ಚು ಮಿತವ್ಯಯ ಮತ್ತು ಸಾಮಾನ್ಯ ಬಲ್ಬ್ ಗಿಂತ 12 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ