ಮನೆಯನ್ನು ಅಲಂಕರಿಸಲು ಹಾಗೂ ಹೊಚ್ಚ ಹೊಸ ಅಂದಚೆಂದ ತುಂಬಿಕೊಳ್ಳಲು ಅಗತ್ಯವಾಗಿ ಗಮನಿಸಬೇಕಾದ ವಿಷಯಗಳೆಂದರೆ, ಗೋಡೆಯ ಬಣ್ಣ, ಫರ್ನೀಚರ್‌ ಹೇಗಿದೆ ಎಂಬುದು. ಮನೆಯನ್ನು ಸೊಗಸಾಗಿ ಅಲಂಕರಿಸಲು ಪ್ರತಿ ಸಲ ಹೊಸ ಫರ್ನೀಚರ್‌ ಕೊಳ್ಳಲಾಗದು ಎಂಬುದು ಗೊತ್ತಿರುವ ವಿಚಾರ. ನೀವು ನಿಮ್ಮ ಹಳೆಯ ಫರ್ನೀಚರ್‌ಗಳಿಗೆ ಹೊಸದಾಗಿ ಪೇಂಟ್‌ ಅಥವಾ ಪಾಲಿಶ್‌ ಮಾಡಿಸಿ ಪರ್ಫೆಕ್ಟ್ ನ್ಯೂ ಲುಕ್ಸ್ ನೀಡಬಹುದು. ಇದು ನಿಮ್ಮ ಡ್ರಾಯಿಂಗ್‌ ರೂಂ, ಬೆಡ್‌ ರೂಂ ಅಥವಾ ಕಿಚನ್‌ ಯಾವುದೇ ಇರಲಿ, ಡನ್‌ ಫರ್ನೀಚರ್‌ ಎಲ್ಲಾ ಕೋಣೆಗಳಿಗೂ ಒಪ್ಪುವ ಸ್ಟೈಲಿಶ್‌ ಯೂನಿಟ್ಸ್ ಆಗಿವೆ. ಹೀಗಾಗಿ ಇವನ್ನು ವಿಶೇಷ ಮುತುವರ್ಜಿಯಿಂದ ನೋಡಿಕೊಳ್ಳಬೇಕು.

ಪಾಲಿಶ್‌ ಹೀಗೆ ಆರಿಸಿ

ಫರ್ನೀಚರ್‌ ಯಾವುದೇ ಪ್ರಕಾರದ್ದಾಗಿರಲಿ, ಅದರ ಮೇಲೆ ತಗುಲಿದ ಕಲೆಗುರುತು, ಗೀಚುಗಳು ಅದನ್ನು ಕುರೂಪಗೊಳಿಸುತ್ತವೆ. ಎಷ್ಟೋ ಸಲ ನಾವು ಇಂಥ ಫರ್ನೀಚರ್‌ನ್ನು ಶುಚಿಗೊಳಿಸುವುದಕ್ಕಾಗಿ, ಫರ್ನೀಚರ್‌ ವ್ಯಾಕ್ಸ್ ಬಳಸುತ್ತೇವೆ. ಆದರೆ ಇದರ ಜಿಡ್ಡುಜಿಡ್ಡಾಗಿ ಅಂಟಿಕೊಳ್ಳುವ ಗುಣದಿಂದಾಗಿ ಫರ್ನೀಚರ್‌ ಮೇಲೆ ಧೂಳು ಮಣ್ಣು ಸುಲಭ ಮೆತ್ತಿಕೊಳ್ಳುತ್ತದೆ. ಅದರಿಂದಾಗಿ ಫರ್ನೀಚರ್‌ ಬೇಗ ಹಾಳಾಗುತ್ತದೆ.

ನೀವು ನಿಮ್ಮ ಮನೆಯ ಫರ್ನೀಚರ್‌ಗಳಾದ ಸೋಫಾ, ಶೆಲ್ಫ್, ಮಂಚ, ಡನ್‌ ಅಲ್ಮೇರಾ, ಡೈನಿಂಗ್‌/ಸೈಡ್‌ ಟೇಬಲ್ ಚೇರ್‌, ಸ್ಟೂಲ್‌ ಇತ್ಯಾದಿಗಳನ್ನು ಪೇಂಟ್‌ ಯಾ ಪಾಲಿಶ್‌ ಮಾಡಿಸಿ, ಅದಕ್ಕೆ ಮತ್ತೆ ಹೊಸ ರೂಪ ನೀಡಬಹುದಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯ. ಈಗಾಗಲೇ ಫರ್ನೀಚರ್‌ ಮೇಲೆ ಪೇಂಟ್‌ ಆಗಿದ್ದರೆ, ಎರಡನೇ ಸಲ ಪಾಲಿಶ್‌ ಬದಲು ಪೇಂಟ್‌ನ್ನೇ ಮಾಡಿಸಿ. ಅದೇ ರೀತಿ ಪಾಲಿಶ್‌ ಆಗಿದ್ದರೆ ಮತ್ತೆ ಪಾಲಿಶ್‌ನ್ನೇ ಮಾಡಿಸಿ. ಆಧುನಿಕ ಕೋಟಿಂಗ್‌ ಪೇಂಟ್ಸ್ ಕೆಮಿಕಲ್ ಪ್ರತಿರೋಧಕಗಳಾಗಿರುತ್ತವೆ. ಇವು ಫರ್ನೀಚರ್‌ನ್ನು ತೇವಾಂಶದಿಂದ ಮಾತ್ರವಲ್ಲದೆ, ಬೂಷ್ಟು, ಗೆದ್ದಲು ಇತ್ಯಾದಿಗಳಿಂದಲೂ ರಕ್ಷಿಸುತ್ತದೆ.

ಬಣ್ಣಗಳನ್ನು ರಿಪೀಟ್‌ ಮಾಡದಿರಿ

ನಿಮ್ಮ ಮನೆಗೆ ಹೊಸ ಲುಕ್ಸ್ ಒದಗಿಸಲು ಕಲರ್ಸ್‌ ರಿಪೀಟ್‌ ಮಾಡಬೇಡಿ. ನಿಮಗೆ ಯಾವುದೇ ಬಣ್ಣ ಬಹಳ ಇಷ್ಟ ಅಂದ್ರೆ ಅದರರ್ಥ ಅದನ್ನೇ ಮತ್ತೆ ಮತ್ತೆ ಬಳಸಬೇಕು ಅಂತಲ್ಲ. ನೀವು ಹೊಸ ಆಕರ್ಷಕ ಬಣ್ಣದ ಪೇಂಟ್‌ನ್ನು ಬಳಸಿಕೊಳ್ಳಿ. ಈ ಹೊಸ ಬಣ್ಣ ನಿಮ್ಮ ಮನೆ ಮಂದಿಗೆಲ್ಲ ಹೊಸ ಉತ್ಸಾಹ, ಶಕ್ತಿ ತುಂಬುವುದರಲ್ಲಿ ಸಂದೇಹವಿಲ್ಲ. ಮನೆಯ ಒಳಾಲಂಕಾರವಂತೂ ಬ್ಯೂಟಿಫುಲ್ ಎನಿಸಲಿದೆ. ನಿಮ್ಮ ಡನ್‌ ಫರ್ನೀಚರ್‌ನಲ್ಲಿ ಗೀಚು ಗುರುತು ಗಳಿದ್ದರೆ ಅಥವಾ ಮೊಳೆಯ ತೂತುಗಳಿದ್ದರೆ, ಪೇಂಟ್‌ ಮಾಡಿಸುವ ಮೊದಲು ಆ ಭಾಗಗಳಿಗೆ ಡಲ್ ಫಿಲ್ಲರ್‌ (ರೆಡಿಮೇಡ್‌ ಲಭ್ಯ) ತುಂಬಿಸಿ. ಡಲ್ ಫಿಲ್ಲರ್‌ ಇಂಥ ಡನ್‌ ಫರ್ನೀಚರ್‌ಗೆ ಪಟ್ಟಿ ತರಹ ಒಂದೇ ಸಮನಾಗಿ ಬರುವಂತೆ ಲೆವೆಲ್‌ ಮಾಡುತ್ತದೆ.

ಫಿಲ್ಲರ್‌ ಬಣ್ಣ ಫರ್ನೀಚರ್‌ಗಿಂತ ಸದಾ ಗಾಢ ಬಣ್ಣದ್ದಾಗಿರಬೇಕು. ಫರ್ನೀಚರ್‌ನಲ್ಲಾದ ಲೋಪದೋಷಗಳನ್ನು ಮೊದಲೇ ಸರಿಪಡಿಸಿಕೊಂಡು, ನಂತರ ಫಿಲ್ಲರ್‌ ತುಂಬಿಸಿ, 6-7 ಗಂಟೆಗಳವರೆಗೆ ಹಾಗೇ ಬಿಡಿ. ಫಿಲ್ಲರ್‌ ಮೇಲು ಪದರಕ್ಕಿಂತ ಇನ್ನೂ ಅಧಿಕ ಆಗಿದ್ದರೆ, ಸ್ಯಾಂಡ್‌ ಪೇಪರ್‌ ನೆರವಿನಿಂದ ಅದನ್ನು ಸರಿಪಡಿಸಿ, ಪೇಂಟ್‌ ಹಚ್ಚಿರಿ. ಡನ್‌ ಫರ್ನೀಚರ್‌ ಒಳಗೆ ನೀರಿಳಿಯದೆ ಅದನ್ನು ತಡೆಯಬಲ್ಲಂಥ, ಮೂಲ ಫರ್ನೀಚರ್‌ಗೆ ಧಕ್ಕೆ ಆಗದಂತೆ ರಕ್ಷಿಸಬಲ್ಲಂಥ ವಾರ್ನಿಷ್‌ವುಳ್ಳ ಪೇಂಟ್‌ನ್ನೇ ಆರಿಸಬೇಕು. ಎಷ್ಟೋ ಸಲ ಪೇಂಟ್‌ ನೀರಿನ ಸಂಪರ್ಕಕ್ಕೆ ಬಂದ ಕೆಲವು ದಿನಗಳ ನಂತರ, ಅದರೊಳಗೆ ನೀರಿಳಿದು ನೋಡಲು ಕೆಟ್ಟದಾಗಿ ಕಾಣುತ್ತದೆ. ನಿಮ್ಮ ಒಳಾಲಂಕಾರ ಕೆಡಿಸುವ ಇಂಥ ಫರ್ನೀಚರ್‌ ಪೇಂಟ್‌ಗಳಿಂದ ದೂರವಿರಿ.

ಡಲ್ ಕೋಟಿಂಗ್‌ ಅತ್ಯಗತ್ಯ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಆಧುನಿಕ ಡಲ್ ಕೋಟಿಂಗ್‌ ಪೇಂಟ್ಸ್ ಲಭ್ಯವಿವೆ. ಇದು ವಾಟರ್‌ಬೇಸ್ಡ್ ಫಾರ್ಮುಲಾ ಆಧರಿಸಿರುತ್ತದೆ, ಜೊತೆಗೆ ಬಾಳಿಕೆಯೂ ಹೆಚ್ಚು. ಇಂಥ ಡಲ್ ಕೋಟಿಂಗ್‌ ಪೇಂಟ್ಸ್ ಫರ್ನೀಚರ್‌ನ್ನು ನೀರಿನಿಂದ ರಕ್ಷಿಸುವುದು ಮಾತ್ರವಲ್ಲದೆ, ಅದರ ಮೇಲೆ ಧೂಳು ಮಣ್ಣು ಸೇರಿದ್ದರೆ, ನೀವು ಅದನ್ನು ಸುಲಭವಾಗಿ ಒಣಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಲಿಕ್ಕೂ ಪೂರಕ. ಫರ್ನೀಚರ್‌ನ್ನು ಸ್ಕ್ರಾಚ್‌ನಿಂದ ರಕ್ಷಿಸುವಂಥ ಡಲ್ ಕೋಟಿಂಗ್‌ ಪೇಂಟ್‌ ಸಹ ಲಭ್ಯ. ಅಗತ್ಯವೆನಿಸಿದರೆ ನೀವು ವಾಟರ್‌ ಬೇಸ್ಡ್ ಮ್ಯಾಟ್‌ ಟಾಪ್‌ಕೋಟ್‌ನ್ನು ಸಹ ಬಳಸಬಹುದು. ಈ ಪೇಂಟ್‌ ಹಳದಿ ಬಣ್ಣ ಬರದಂತೆ ಕಾಯುತ್ತದೆ, ಹೀಗಾಗಿ ಫರ್ನೀಚರ್‌ ಬ್ರೈಟ್‌ ಲುಕ್‌ ಗಳಿಸುತ್ತದೆ. ನೀವು ಫರ್ನೀಚರ್‌ನ್ನು ಅದರ ಅಸಲಿ ಬಣ್ಣದಲ್ಲೇ ಇರಿಸಿಕೊಳ್ಳ ಬಯಸಿದರೆ, ವಾರ್ನಿಷ್‌ ಬಳಸಿರಿ. ವಾರ್ನಿಷ್‌ ಫರ್ನೀಚರ್‌ನ ಡಲ್ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ, ಬಿಲ್‌ಕುಲ್‌ ಹೊಸತರಂತೆ ಇಡುತ್ತದೆ. ಇದು ಸಹ ಫರ್ನೀಚರ್‌ನ್ನು ಆರ್ದ್ರತೆ, ಧೂಳು, ತೇವಾಂಶ, ಸೂರ್ಯನ ತೀಕ್ಷ್ಣ ಬಿಸಿಲಿನಿಂದ ರಕ್ಷಿಸುತ್ತದೆ.

– ಅಪರ್ಣಾ ಕುಮಾರ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ