ನಿಮ್ಮ ಮಲಗುವ ಕೋಣೆ ಚಿಕ್ಕದಾಗಿದ್ದರೆ ನಿರಾಶರಾಗುವ ಅಗತ್ಯವಿಲ್ಲ. ಅಂದಹಾಗೆ ಅದಕ್ಕೆ ದೊಡ್ಡದೆಂಬಂತೆ ಲುಕ್‌ ಕೊಡುವುದು ಸವಾಲಿನ ಕೆಲಸವೇ ಸರಿ. ಕೆಲವು ಯೋಜನೆ ಹಾಗೂ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಆಕರ್ಷಕ ಮತ್ತು ಗಾತ್ರದಲ್ಲಿ ದೊಡ್ಡದಾಗಿ ಕಾಣುವಂತೆ ಮಾಡಬಹುದು. ಅತ್ಯುತ್ತಮ ಸ್ಟೋರೇಜ್‌ ಹಾಗೂ ಬಹೂಪಯೋಗಿ ಫರ್ನೀಚರ್‌ ಬಳಕೆಯಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಅದಕ್ಕಾಗಿ ಕೆಲವು ಟಿಟ್ಸ್ :

ಅನವಶ್ಯಕ ಫರ್ನೀಚರ್‌ ನಿವಾರಿಸಿ : ನಿಮ್ಮ ಬೆಡ್‌ರೂಮಿನಲ್ಲಿ ಉಪಯೋಗ ಮಾಡದ ಯಾವುದಾದರೂ ಫರ್ನೀಚರ್‌ ಇದ್ದರೆ ಅವನ್ನು ಬೇರೆಡೆಗೆ ಸ್ಥಳಾಂತರಿಸಿ. ಆಗ ನಿಮ್ಮ ರೂಮಿನ ಗಾತ್ರ ದೊಡ್ಡದೆಂಬಂತೆ ಗೋಚರಿಸುತ್ತದೆ.

ಸಾಮಗ್ರಿಗಳನ್ನು ವ್ಯವಸ್ಥಿತವಾಗಿಡಿ : ಹೆಚ್ಚು ಸಾಮಾನುಗಳನ್ನು ಇಡುವುದರಿಂದ ಕೋಣೆ ತುಂಬಿಕೊಂಡಂತೆ ಹಾಗೂ ಅವ್ಯವಸ್ಥಿತವಾಗಿ ಕಂಡುಬರುತ್ತದೆ. ನಿಮ್ಮ ದೃಷ್ಟಿ ಕೂಡ ಒಂದು ಸಾಮಗ್ರಿಯಿಂದ ಇನ್ನೊಂದು ಸಾಮಗ್ರಿಯ ಮೇಲೆ ಹರಿದಾಡುತ್ತದೆ. ಹೀಗಾಗಿ ಕೆಲವು ಆಕರ್ಷಕ ವಸ್ತುಗಳನ್ನು ವ್ಯವಸ್ಥಿತವಾಗಿಡಿ. ಆಗ ನಿಮ್ಮ ದೃಷ್ಟಿ ಅತ್ತ ಕಡೆಯೇ ನೆಟ್ಟಿರುತ್ತದೆ.

– ವಿದ್ಯುಲ್ಲತಾ ಜಿ.ಕೆ.

ಕಿಟಕಿಯ ಅತ್ಯುತ್ತಮ ಉಪಯೋಗ : ನೀವು ಬೆಡ್‌ನ್ನು ಕಿಟಕಿಗೆ ಹೊಂದಿಕೊಂಡಂತೆ ಇಡಬಹುದು. ಇದರಿಂದ ಕೋಣೆ ದೊಡ್ಡದೆಂಬಂತೆ ಕಂಡುಬರುತ್ತದೆ. ಅದರ ಜೊತೆ ಜೊತೆಗೆ ಸ್ವಲ್ಪ ಹೆಚ್ಚುವರಿ ಜಾಗ ಲಭಿಸುತ್ತದೆ. ಬೆಡ್‌ನ್ನು ಕೋಣೆಯ ನಟ್ಟನಡುವೆ ಹಾಕುವುದರಿಂದ ಅದರ ಆಸುಪಾಸಿನ ಒಂದಿಷ್ಟು ಜಾಗ ವ್ಯರ್ಥವಾಗುತ್ತದೆ. ಇದರ ಹೊರತಾಗಿ ಬೆಳಗಿನ ಹೊತ್ತು ಸಾಕಷ್ಟು ಬೆಳಕು ಕೂಡ ಲಭಿಸುತ್ತದೆ. ನೀವು ಕಿಟಕಿಗೆ ಸ್ಲೈಡ್ಸ್ ಅಥವಾ ಪರದೆ ಅಳವಡಿಸಿ, ಬೆಳಕಿನ ಪ್ರಮಾಣವನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು.

ಕಸ್ಟಮ್ ಮೇಡ್‌ ಫರ್ನೀಚರ್‌ : ಸ್ಟ್ಯಾಂಡರ್ಡ್‌ ಫರ್ನೀಚರ್‌ಗೆ ಬದಲಾಗಿ ಕೋಣೆಗೆ ತಕ್ಕುದಾದ ಬೆಡ್‌ ಹಾಗೂ ಇತರೆ ಫರ್ನೀಚರ್‌ಗಳನ್ನು ತಯಾರಿಸಿಕೊಳ್ಳಿ. ಮಾಸ್ಟರ್‌ ಬೆಡ್‌ನಲ್ಲಿ ಪುಲ್‌ಓವರ್‌ ಬೆಡ್‌ ಸಹ ಮಾಡಿಸಬಹುದು. ಅಗತ್ಯಬಿದ್ದಾಗ ಮಗು ಅಥವಾ ಯಾರಾದರೂ ಅತಿಥಿಗಳು ಮಲಗಬಹುದು. ಇದರ ಹೊರತಾಗಿ ಮೌಂಟೆಡ್‌ ಬೆಡ್‌ಸೈಡ್‌ ಟೇಬಲ್ ಮಾಡಿಸಿ, ಒಂದೊಂದು ಇಂಚು ಕಾರ್ಪೆಟ್‌ ಏರಿಯಾದ ಲಾಭ ಪಡೆಯಬಹುದು.

ಹೆಚ್ಚುವರಿ ಕನ್ನಡಿಯ ಜಾದೂ : ಚಿಕ್ಕ ಕೋಣೆಯಲ್ಲಿ ಕನ್ನಡಿ ಹಾಕುವುದರಿಂದ ಕೋಣೆ ವಿಸ್ತಾರವಾಗಿರುವಂತೆ ಭಾಸವಾಗುತ್ತದೆ.

ಬಣ್ಣಗಳ ಆಯ್ಕೆ : ಸೂಕ್ತವಾದ ಬಣ್ಣಗಳನ್ನು ಆಯ್ಕೆ ಮಾಡಿ ಕೋಣೆಯ ಅಂದವನ್ನು ಹೆಚ್ಚಿಸಬಹುದು. ಬಿಳಿ ಬಣ್ಣದಿಂದ ಕೋಣೆ ಹೆಚ್ಚು ಪ್ರಕಾಶಮಾನ ಹಾಗೂ ಹೆಚ್ಚು ಮುಕ್ತವಾಗಿ ಗೋಚರಿಸುತ್ತದೆ. ಗೋಡೆಗೆ ಸುಂದರ ಲುಕ್‌ ಕೊಡಲು ನೀವು ಲೈಟ್‌ ಪಿಂಕ್‌ ಅಥವಾ ಕಿತ್ತಳೆ ವರ್ಣ ಹೊಡೆಸಬಹುದು. ಈ ಬಣ್ಣಗಳು ಇಟ್ಟಿಗೆಯ ಗೋಡೆ ಹಾಗೂ ಫರ್ನೀಚರ್‌ಗೆ ಚೆನ್ನಾಗಿ ಹೊಂದುತ್ತವೆ.

ಹೆಡ್‌ಬೋರ್ಡ್‌ : ಬೆಡ್‌ನ ಹೆಡ್‌ಬೋರ್ಡ್‌ನಲ್ಲಿ ನೀವು ಒಂದಿಷ್ಟು ಸ್ಟೋರೇಜ್‌ ವ್ಯವಸ್ಥೆ ಮಾಡಿಕೊಳ್ಳಬಹುದು. ಇದು ಕಡಿಮೆ ಜಾಗ,   ಹೆಚ್ಚು ಅನುಕೂಲ ಮಾಡಿಕೊಂಡಂತೆ.

ಸ್ಟೋರೇಜ್‌ ಸ್ಪೇಸ್‌ನ ಗರಿಷ್ಠ ಉಪಯೋಗ : ನೆಲದಿಂದ ಹಿಡಿದು ಸೀಲಿಂಗ್‌ ತನಕ ವಾರ್ಡ್‌ರೋಬ್‌ ಮಾಡಿಸಿಕೊಳ್ಳಿ. ಅದರಲ್ಲಿ ನೀವು  ಮನೆಯ ಬಹಳಷ್ಟು ವಸ್ತುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ