ಇಂದು ಪ್ರತಿಯೊಂದು ಜೋಡಿಯೂ ತಮ್ಮ ಪ್ರೀ ವೆಡ್ಡಿಂಗ್‌ ಶೂಟ್‌ನ್ನು ಅತ್ಯುತ್ತಮವಾಗಿಸಲು ಬಯಸುತ್ತದೆ. ಅತಿಥಿಗಳೆಲ್ಲ ಅದನ್ನು ಮೆಚ್ಚಿ ಹೊಗಳಲಿ, ಸಮಾರಂಭದ ನಂತರ ಅದನ್ನು ಜ್ಞಾಪಿಸಿಕೊಳ್ಳುತ್ತಿರಲಿ ಎಂಬ ಬಯಕೆ. ಫೋಟೊಗ್ರಾಫರ್‌ ಸಹ ಇತರರ ಮುಂದೆ ಅದನ್ನು  ಉದಾರಣೆಯಾಗಿ ತೋರಿಸುತ್ತಾರೆ. ಬನ್ನಿ, ಇದನ್ನು ಸ್ಮರಣೀಯವಾಗುವಂತೆ ಮಾಡುವುದು ಹೇಗೆ ಎಂದು ತಿಳಿಯಿರಿ.

ವಿವಾಹ ನಂತರ ನವ ದಂಪತಿಯು ಪರಸ್ಪರರನ್ನು ಅರಿಯಲು ಹನಿಮೂನ್‌ ಅಗತ್ಯವಾಗಿರುವಂತೆ, ಪರಿಚಯವನ್ನು ದೃಢಗೊಳಿಸಲು ಪ್ರೀ ವೆಡ್ಡಿಂಗ್‌ ಶೂಟ್‌ ಸಹಾಯಕಾರಿ. ಏಕೆಂದರೆ ಜೊತೆಯಲ್ಲಿ ಕಾಲ ಕಳೆಯುವುದರಿಂದ ಸಂಗಾತಿಯ ಬಗ್ಗೆ ವಿಷಯವನ್ನು ತಿಳಿದುಕೊಳ್ಳಬಹುದು. ಅವರ ಅಭ್ಯಾಸಗಳ ಬಗ್ಗೆ ಅರಿವಾಗುತ್ತದೆ. ಅವರ ಇಷ್ಟಾನಿಷ್ಟಗಳಿಗೆ ಮಾನಸಿಕವಾಗಿ ಹೊಂದಿಕೊಳ್ಳಲು ಸಿದ್ಧರಾಗುವಿರಿ. ಪ್ರೀ ವೆಡ್ಡಿಂಗ್‌ ಶೂಟ್‌ ಮಾಡುವ ಫೋಟೊಗ್ರಾಫರ್‌ನನ್ನೇ ವಿವಾಹ ಸಮಾರಂಭದ ಫೋಟೋಗಳ ಶೂಟ್‌ಗೂ ಬುಕ್‌ ಮಾಡುತ್ತಾರೆ. ಪೋಟೋಗ್ರಾಫರ್‌ಗೆ ಹೀಗೆ ಮೊದಲೇ ವಧೂವರರ ಸಂಪರ್ಕ ಬೆಳೆಯುವುದರಿಂದ ವಿವಾಹ ಕಾಲದಲ್ಲಿ ಫೋಟೋ ಸೆಷನ್‌ ಸಹಜವಾಗಿರುವ ಅನುಭವವಾಗುತ್ತದೆ. ಈ ಸಹಜತೆಯೇ ವಿವಾಹದ ಫೋಟೊ ಮತ್ತು ವಿಡಿಯೋಗಳಲ್ಲಿ ರಮಣೀಯ ಸ್ಮರಣೀಯ ಆಗುವಂತೆ ಮಾಡುತ್ತದೆ.

ಸ್ಥಳದ ಆಯ್ಕೆ

ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಲು ಮೊದಲು ಸೂಕ್ತ ಸ್ಥಳದ ಆಯ್ಕೆ ಮಾಡುವುದು ಅಗತ್ಯ. ಒಬ್ಬೊಬ್ಬರಿಗೆ ಒಂದೊಂದು ಸ್ಥಳ ಮೆಚ್ಚುಗೆಯಾಗುತ್ತದೆ. ಕೆಲವರಿಗೆ ನದಿ ಬೆಟ್ಟಗಳು ಇಷ್ಟವಾದರೆ, ಇನ್ನೂ ಕೆಲವರಿಗೆ ಸಮುದ್ರ ಅಥವಾ ಕೋಟೆ, ಅರಮನೆಗಳ ಪ್ರದೇಶ ಇಷ್ಟವಾಗುತ್ತದೆ. ಮತ್ತೆ ಕೆಲವರು ಥೀಮ್ ಶೂಟಿಂಗ್‌ನ್ನು ಮೆಚ್ಚುತ್ತಾರೆ.

ವಧೂವರರು ಪರಸ್ಪರರ ಇಷ್ಟ ಮತ್ತು  ಅನುಕೂಲಗಳನ್ನು ಗಮನಿಸಿಕೊಂಡು ಸ್ಥಳದ ಆಯ್ಕೆ ಮಾಡಬೇಕು. ದೇಶ ವಿದೇಶಗಳ ಅನೇಕ ಸ್ಥಳಗಳು ಪ್ರೀ ವೆಡ್ಡಿಂಗ್‌ ಶೂಟ್‌ಗೆ ಇಂದು ಯುವಜನರ ಮೆಚ್ಚಿನ ತಾಣಗಳಾಗಿವೆ. ಕೋಟೆ, ಅರಮನೆಗಳಿಗೆ  ಚಿತ್ರದುರ್ಗ, ಮೈಸೂರು, ಮಡಿಕೇರಿ, ರಾಜಾಸ್ಥಾನದ ಜಯಪುರ ಮತ್ತು ಉದಯಪುರ ಬೀಚ್‌ಗೆ ಗೋವಾ ಮತ್ತು ಕೇರಳ ಹಾಗೂ ತೋಟ ಕಾಡುಗಳಿಗೆ ನ್ಯಾಷನಲ್ ಪಾರ್ಕ್‌ಗಳು ಆರಿಸಲ್ಪಡುತ್ತವೆ.

ನಿಮ್ಮ ಬಜೆಟ್‌ಗೆ ಅನುಸಾರವಾಗಿ ನಿಮ್ಮ ಸುತ್ತಮುತ್ತಲಿನ ಯಾವುದೇ ರಮಣೀಯ ಸ್ಥಾನವನ್ನೂ ಸಹ ನೀವು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು.

ಇತರೆ ವಿಧಾನಗಳು

ಪ್ರೀ ವೆಡ್ಡಿಂಗ್‌ ಶೂಟ್‌ನ ಇತರೆ ವಿಧಾನಗಳ ಬಗ್ಗೆ ವೆಡ್ಡಿಂಗ್‌ ಫೋಟೋಗ್ರಾಫರ್‌ ನರೇಂದ್ರ ಹೀಗೆ ಹೇಳುತ್ತಾರೆ, ಚಿಕ್ಕಪುಟ್ಟ ಪಟ್ಟಣಗಳ ಯುವಕ ಯುವತಿಯರು ಡೆಸ್ಟಿನೇಶನ್‌ ಶೂಟ್‌ ಮಾಡಿಸಲಾಗದಿದ್ದರೆ, ಅವರಿಗಾಗಿ ಇಂದು ಒಂದು ಹೊಸ ವಿಧಾನ ಹೊರಬಂದಿದೆ. ಅದೆಂದರೆ ಸೆಟ್ಸ್. ಸಿನಿಮಾ ಮತ್ತು ಸೀರಿಯಲ್‌ಗಳಂತೆ ಇಂದು ಪ್ರೀ ವೆಡ್ಡಿಂಗ್‌ ಶೂಟ್‌ಗಾಗಿಯೂ ಸೆಟ್ಸ್ ರೂಪಿಸಲಾಗುತ್ತದೆ. ಇದರ ಅನುಕೂಲವೆಂದರೆ, ನಿಮಗೆ ಒಂದೇ ಸ್ಥಳದಲ್ಲಿ  ಎಲ್ಲ ಲೊಕೇಶನ್‌ಗಳ ಬ್ಯಾಕ್‌ ಗ್ರೌಂಡ್‌ ದೊರೆಯುತ್ತದೆ. ಒಂಟಿಯಾಗಿ ಹೊರಗೆ ಹೋಗುವ ಸಂಕೋಚ ತಪ್ಪುತ್ತದೆ ಮತ್ತು ನಿಮಗೆ ಬಜೆಟ್‌ ಸಹ ಹೊರೆಯಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾದುದೆಂದರೆ, ಔಟ್‌ಡೋರ್‌ ಶೂಟಿಂಗ್‌ನಲ್ಲಿ ಬಟ್ಟೆ ಬದಲಾಯಿಸಬೇಕಾದ ತೊಂದರೆಯಿಂದ ನೀವು ಪಾರಾಗುವಿರಿ.

ಶೂಟ್‌ ಹೇಗಿರಬೇಕು?

ಫೋಟೋ ಮತ್ತು ವಿಡಿಯೊ ಶೂಟ್‌ ಬಗ್ಗೆ ಹೆಚ್ಚಿನ ಕಪಲ್ಸ್ ಇಷ್ಟಪಡುವುದೆಂದರೆ ಸಿನಿಮಾದಲ್ಲಿ ತೋರಿಸುವಂತೆ ತಮ್ಮ ಕಥೆಯನ್ನು ಎಲ್ಲರ ಮುಂದಿಡಬೇಕೆಂಬುದು. ಒಂದು ವಿಶೇಷ ಸ್ಥಳದಲ್ಲಿ ತಾವಿಬ್ಬರು ಪ್ರಥಮ ಬಾರಿಗೆ ಎದುರಾದಂತೆ, ಕೊಂಚ ಬೆಡಗು ಬಿನ್ನಾಣ, ನಂತರ ಪ್ರಪೋಸ್‌ ಮತ್ತು ಸ್ವೀಕಾರ ಇತ್ಯಾದಿ. ಇದೆಲ್ಲ ವಿಡಿಯೊ ಶೂಟ್‌ನಲ್ಲಿ ಸಾಧ್ಯವಾಗುತ್ತದೆ. ಇದನ್ನೆಲ್ಲ ರಿಯಲ್ ಲೊಕೇಶನ್‌ನಲ್ಲಿ ಶೂಟ್‌ ಮಾಡುವುದು ಕಷ್ಟವಾಗುತ್ತದೆ. ಜೊತೆಗೆ  ಓವರ್‌ ಬಜೆಟ್‌ ಆಗಲೂಬಹುದು. ಆದ್ದರಿಂದ ಯಾವುದಾದರೂ ಸ್ಟುಡಿಯೋ ಸೆಟ್‌ನ್ನು ಆರಿಸಿಕೊಳ್ಳುವುದು ಉತ್ತಮ.

ವಿಡಿಯೊ ಶೂಟ್‌ನಲ್ಲಿ ನಿಮ್ಮ ಸಂಗಾತಿಯೊಡನೆ ಕಂಫರ್ಟೆಬಲ್ ಆಗಿರುವುದು ಬಹಳ ಮುಖ್ಯ. ಏಕೆಂದರೆ ಒಂದು ವಿಡಿಯೋ ಶೂಟ್‌ಗೆ 10-15 ಸೆಕೆಂಡ್ಸ್ ಬೇಕಾಗುತ್ತದೆ. ಅದೇ ಸ್ಟಿಲ್‌ ಫೋಟೋ ಶೂಟ್‌ 2-3 ಸೆಕೆಂಡ್‌ಗಳಲ್ಲಿ ಆಗಿಹೋಗುತ್ತದೆ.

ವಿಶೇಷತೆ

ಪ್ರೀ ವೆಡ್ಡಿಂಗ್‌ ಶೂಟ್‌ನಲ್ಲಿ ಪ್ರಮುಖವಾದುದೆಂದರೆ ನಿಮ್ಮಿಬ್ಬರ ನಡುವಿನ ಕೆಮಿಸ್ಟ್ರಿ. ನೀವಿಬ್ಬರೂ ಮೇಡ್‌ ಫಾರ್‌ ಈಚ್‌ ಅದರ್‌ ಎಂಬಂತೆ ಇರಬೇಕು. ಇದಕ್ಕಾಗಿ ನೀವು ಮೊದಲು ಸ್ವಲ್ಪ ಸಮಯವನ್ನು ಏಕಾಂತದಲ್ಲಿ ಕಳೆದಿದ್ದರೆ ಒಳ್ಳೆಯದು. ನೀವು ಫೋನ್‌ ಅಥವಾ ವಿಡಿಯೋ ಚಾಟ್‌ ಮೂಲಕ ಪರಸ್ಪರರ ಇಷ್ಟಾನಿಷ್ಟಗಳನ್ನು ತಿಳಿದಿರಬೇಕು. ಈ ಭಾವ ನಿಮ್ಮ ಬಾಡಿ ಲ್ಯಾಂಗ್ವೇಜ್‌ನಲ್ಲಿ ಪ್ರದರ್ಶಿತವಾಗಬೇಕು.

ಇಂತಹ ಶೂಟ್‌ಗೆ ನಿಮ್ಮ ಗೆಳೆಯರನ್ನೂ ಸೇರಿಸಿಕೊಳ್ಳಬಹುದು. ನೀವೆಲ್ಲರೂ ಡ್ಯಾನ್ಸ್ ಅಥವಾ ಪಿಕ್‌ನಿಕ್‌ನಲ್ಲಿ ಮಜಾ ಮಾಡುತ್ತಿರುವಂತೆ ಶೂಟ್‌ ಮಾಡಿದರೆ, ಆಗ ನೀವು ಹೆಚ್ಚು ಉತ್ಸಾಹಭರಿತರಾಗಿರುವಂತೆ ಕಾಣಿಸುತ್ತದೆ.

ಮಾನ್‌ಸೂನ್‌ನ ಮಳೆಯಲ್ಲಿ ನೆನೆಯುತ್ತಿರುವ ನಿಮ್ಮ ಶೂಟ್‌ನಲ್ಲಿ ನ್ಯಾಚುರಲ್ ರೊಮ್ಯಾನ್ಸ್ ಕಂಡುಬರುತ್ತದೆ. ಬಗೆಬಗೆಯ ಪ್ರಾಪ್ಸ್ ಬಳಸುವುದರ ಮೂಲಕ ನಿಮ್ಮ ಶೂಟ್‌ನ್ನು ವಿಶಿಷ್ಟವನ್ನಾಗಿಸಬಹುದು. ಇಂದಿನ ದಿನಗಳಲ್ಲಿ ಮ್ಯೂಸಿಕ್‌ ವಿಡಿಯೋ ಸಹ ವಿಶೇಷವಾಗಿ ಬಳಕೆಯಲ್ಲಿದೆ.

ಕೊಂಚ ರೊಮ್ಯಾಂಟಿಕ್‌ ಆಗಿರಿ

ಸಾಧಾರಣ ಶೂಟ್‌ಗಿಂತ ಕೊಂಚ ವಿಭಿನ್ನವಾಗಿ ನಿಮ್ಮ ವಿಡಿಯೊ ರೊಮ್ಯಾಂಟಿಕ್‌ ಮತ್ತು ಸೆಕ್ಸೀ ಆಗಿದ್ದರೆ ಚಿನ್ನಕ್ಕೆ ಪುಟವಿಟ್ಟಂತಿರುತ್ತದೆ. ಇಂತಹ ಫೋಟೊ ಅಥವಾ ವಿಡಿಯೋವನ್ನು ಎಲ್ಲರ ಮುಂದೆ ಪ್ರದರ್ಶಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿಯೂ ನೀವು ಇದನ್ನು ಏಕಾಂತವಾಗಿ ಕುಳಿತು ನೋಡಿ ಆನಂದಿಸಬಹುದು. ನಿಮ್ಮ ಫೋಟೋಗ್ರಾಫರ್‌ನೊಂದಿಗೆ ಮಾತನಾಡಿ ಇಂತಹ ವೈಯಕ್ತಿಕ ಸೆಕ್ಸೀ ವಿಡಿಯೋವನ್ನು ಶೂಟ್‌ ಮಾಡಿಸಬಹುದು.

– ಆಶಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ