ಚಿತ್ರಾ ಮದುವೆಯಾದ 3 ತಿಂಗಳಿಗೆ ಮೊದಲ ಬಾರಿ ತವರಿಗೆ ಬಂದಿದ್ದಳು. ಬರುತ್ತಿದ್ದಂತೆಯೇ ಅವಳು ಅಮ್ಮನನ್ನು ಆಲಂಗಿಸಿಕೊಂಡು ಅಳುತ್ತಲೇ ಹೇಳಿದ್ದಳು, ``ಅಮ್ಮಾ , ನಾನು ಇನ್ಮುಂದೆ ಆ ಮನೆಗೆ ಹೋಗೋದಿಲ್ಲ.''

ಅವಳು ಹೇಳಿದ್ದನ್ನು ಕೇಳಿ, ಅಮ್ಮ ಅಪ್ಪ ಗಾಬರಿಗೊಳಗಾದರು. ಅವರು ಅವಳ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ಮಾಡಿದ್ದರು. ಅತ್ತೆಮನೆಯಲ್ಲಿ ಅಂಥದ್ದೇನು ನಡೆದಿರಬೇಕು ಎಂದು ಅವರು ಮಗಳ ಕಡೆ ನೋಡುತ್ತ ವಿಚಾರ ಮಾಡತೊಡಗಿದರು. ಅಳಿಯ ಮದುವೆಗೂ ಮೊದಲೇ ಹಲವು ಸಲ ತಮ್ಮನ್ನೆಲ್ಲ ಭೇಟಿಯಾಗಲು ಬಂದಿದ್ದ. ಅವನ ವರ್ತನೆಯಲ್ಲಿ ಅಂತಹ ದೋಷವೇನೂ ಅವರಿಗೆ ಕಂಡಿರಲಿಲ್ಲ.

ತಾಯಿ ತಂದೆಯ ಏಕೈಕ ಪುತ್ರ ಸುದರ್ಶನ. ಒಳ್ಳೆಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ. ಅವನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ಅವನ ಒಳ್ಳೆಯ ಗುಣನಡತೆ ನೋಡಿ ಅವನಿಗೆ ಮಗಳನ್ನು ಧಾರೆಯೆರೆದು ಕೊಟ್ಟಿದ್ದರು. ಅವನ ತಾಯಿ ತಂದೆ ಕೂಡ ಆಧುನಿಕ ಮನೋಭಾವದವರಾಗಿದ್ದರು. ಏನೋ ಗಂಭೀರ ಸಮಸ್ಯೆ ಇದೆ. ಅದು ಮದುವೆಯ ಬಳಿಕ ಗೊತ್ತಾಗಿರಬಹುದು ಎಂದು ಎಲ್ಲರೂ ಯೋಚಿಸತೊಡಗಿದರು. ಮಗಳು ತಾನೇಕೆ ತವರುಮನೆಗೆ ವಾಪಸ್‌ ಬಂದೆ ಎಂದು ಕಾರಣಗಳನ್ನು ಹೇಳಿದಾಗ, ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೆಂದು ಅಮ್ಮ ಅಪ್ಪನಿಗೆ ಗೊತ್ತಾಗಲಿಲ್ಲ.

ಚಿತ್ರಾ ಹೇಳಿದ್ದೇನು ಗೊತ್ತೆ, ``ಸುದರ್ಶನ ಮದುವೆಗೂ ಮುಂಚೆ, ನನ್ನನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ಈಗ ಹಾಗೆ ಮಾಡಬೇಡ, ಹೀಗೆ ಮಾಡಬೇಡ, ಅಮ್ಮ ಅಪ್ಪನಿಗೆ ನೋವಾಗದಂತೆ ನಡೆದುಕೊ ಎನ್ನುತ್ತಾನೆ. ಮುಂಜಾನೆ 6ಕ್ಕೆ ಎದ್ದು ತಿಂಡಿ ಮಾಡು ಎಂದು ಹೇಳುತ್ತಾನೆ!''

ಚಿತ್ರಾ ಉದ್ಯೋಗ ಕೂಡ ಮಾಡುತ್ತಾಳೆ. ಅವಳು ಮನೆಗೆ ದಣಿದು ಬಂದರೂ ಅತ್ತೆಗೆ ಸಹಾಯ ಮಾಡಲು ತಯಾರಾಗಬೇಕು. ಈ ಬಗ್ಗೆ ಅತ್ತೆಯೇನೂ ಕರೆಯುವುದಿಲ್ಲ. ಆದರೆ ಸುದರ್ಶನ ಅಮ್ಮ ಒಬ್ಬಳೇ ಅಡುಗೆ ಕೆಲಸ ಮಾಡಬೇಕಾ, ನೀನೂ ಅವರಿಗೆ ನೆರವಾಗು ಎಂದು ಅವಳನ್ನು ಕಳಿಸುತ್ತಾನೆ. ಸುದರ್ಶನ ಕೂಡ ಅವಳಿಗೆ ಕೆಲಸಕ್ಕೆ ನೆರವಾಗಲು ಇಚ್ಛಿಸುತ್ತಾನೆ. ಆದರೆ ಮದುವೆಗೂ ಮುಂಚೆ ಅವನು ಅಡುಗೆಮನೆಯಲ್ಲಿ ಕೆಲಸ ಮಾಡಿಲ್ಲ. ಹಾಗಾಗಿ ತಾನು ಅಡುಗೆಮನೆಗೆ ಸಹಾಯಕ್ಕೆ ಬಂದರೆ ಅಮ್ಮ ಅಪ್ಪ ಏನು ಅನ್ನುತ್ತಾರೊ ಎಂಬ ಸಂಕೋಚ ಅವನಿಗೆ.

ತಮ್ಮ ಮಗಳು ಇಷ್ಟು ಚಿಕ್ಕಪುಟ್ಟ ವಿಷಯಗಳಿಗೆ ಅತ್ತೆಮನೆ ಬಿಟ್ಟು ಬರುತ್ತಾಳೆಂಬುದು ಅವರ ಕಲ್ಪನೆಗೂ ಮೀರಿದ ವಿಷಯವಾಗಿತ್ತು. ತಮ್ಮ ಪಾಲನೆ ಪೋಷಣೆಯಲ್ಲಿಯೇ ಏನಾದರೂ ಲೋಪ ಆಯ್ತಾ, ಅದಕ್ಕಾಗಿ ತಾವು ಇಂತಹದನ್ನು ನೋಡಬೇಕಾಗಿ ಬಂತಾ ಎಂದರು ಯೋಚಿಸಿದರು.

ಚಿತ್ರಾಳ ಈ ಮಾನಸಿಕತೆಯ ಹಿಂದಿನ ಕಾರಣವೇನಿರಬಹುದು? ಅದರ ಬಗ್ಗೆ ಒಂದಿಷ್ಟು ತಿಳಿಯುವ ಪ್ರಯತ್ನ ಮಾಡೋಣ :

ತಾಯಿ ತಂದೆಯ ಅತಿಯಾದ ಮುದ್ದಿನ ಪರಿಣಾಮ ಎಂಬಂತೆ ಅವಳು ಪರಾವಲಂಬಿ ಆಗಿಬಿಟ್ಟಿದ್ದಾಳೆ.

ಅವಳಿಗೆ ಪುಸ್ತಕ ಜ್ಞಾನವನ್ನೇನೊ ಕೊಟ್ಟಿದ್ದಾರೆ. ಆದರೆ ಅವಳಿಗೆ ವ್ಯವಹಾರ ಜ್ಞಾನವನ್ನೇನೂ ಹೇಳಿಕೊಟ್ಟಿರಲಿಲ್ಲ ಸಂಬಂಧಗಳ  ಸಂವೇದನಾಶೀಲತೆ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಕಲಿಸಿಯೇ ಇರಲಿಲ್ಲ. ವಿವಾಹದ ಮೂಲ ಆಧಾರವೇ ಹೊಂದಾಣಿಕೆಯಾಗಿದೆ.

ಯಾವುದೇ ಕೆಲಸ ಮಾಡಲು ಹೇಳದೇ ಇರುವುದರಿಂದ ಅವರು ಸ್ವಾವಲಂಬಿಗಳಾಗಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಅವರು ಯಾವುದೇ ಸಣ್ಣ ಕೆಲಸ ಮಾಡಲು ಕೂಡ ಹಿಂದೇಟು ಹಾಕುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ