``ಪ್ರತಿದಿನ ಗಂಡಂದಿರು ತಂದುಕೊಡುವ ಚಹಾದ ಕಪ್‌ ಹಿಡಿದು ಹೀರುವವರು ನಿಜಕ್ಕೂ ಅದೃಷ್ಟಶಾಲಿಗಳು. ಚಹಾ ಬಿಡಿ, ಒಂದು ಗ್ಲಾಸ್‌ ನೀರು ಕೂಡ ಇವರ ಕೈಯಿಂದ ಸಿಗುವುದಿಲ್ಲ,'' ಇದು ಶಾಲಿನಿ ತನ್ನ ಪತಿ ವಿವೇಕ್‌ ಬಗ್ಗೆ ಹೇಳುವ ಮಾತು. ಅದೊಂದು ದಿನ ವಿವೇಕ್‌ ಬೇಗನೇ ಎದ್ದು 2 ಕಪ್‌ ಚಹಾ ತಯಾರಿಸಿದ. ಬಾಯಲ್ಲಿ ಸಿಹಿ ಮುತ್ತುಗಳನ್ನು ಉದುರಿಸುತ್ತ ಹೇಳಿದ, ``ಗುಡ್‌ ಮಾರ್ನಿಂಗ್‌ ಡಿಯರ್‌, ನಿನಗಾಗಿ ಬಿಸಿಬಿಸಿ ಚಹಾ ಮಾಡಿ ತಂದಿರುವೆ.''

ಅವನ ಮಾತು ಕೇಳಿ ಶಾಲಿನಿಗೆ ಆಶ್ಚರ್ಯವೋ ಆಶ್ಚರ್ಯ! ಅವಳು ಮುಗುಳ್ನಗುತ್ತಲೇ ಅವನ ಕೈಯಿಂದ ಕಪ್‌ ಕೈಗೆತ್ತಿಗೊಂಡಳು. ಒಂದು ಗುಟುಕು ಹೀರಿದ ಬಳಿಕ ಮುಖ ಸಿಂಡರಿಸುತ್ತ ಹೇಳಿದಳು, ``ಇದೆಂಥ ಚಹಾ? ಸಕ್ಕರೆ ಟೀಪುಡಿ ಎರ್ರಾಬಿರ್ರಿ ಹಾಕಿಬಿಟ್ಟಿದ್ದೀರಾ? ಹಾಲಂತೂ ಇಲ್ಲವೇ ಇಲ್ಲ. ಬೆಳ್ಳಂಬೆಳಗ್ಗೆ ನನ್ನ ಮೂಡ್‌ ಹಾಳ್‌ ಮಾಡಿಬಿಟ್ರಿ...ವಿವೇಕ್‌ಗೂ ಸಿಟ್ಟು ಬಂತು. `ಅತ್ತ ದರಿ, ಇತ್ತ ಪುಲಿ' ಎಂಬಂತಹ ಸ್ಥಿತಿ ನನ್ನದು ಮಾಡದೇ ಇದ್ದರೆ ಒಂದು. ಮಾಡಿದ್ರೆ ಈ ರೀತಿ ಕೊಂಕು ಮಾತು.''

ರಮೇಶ್‌ ಆಫೀಸ್‌ನಿಂದ ಮನೆಗೆ ಬರುತ್ತಿದ್ದಂತೆ ತನ್ನ ಸಾಮಾಜಿಕ ಜಾಲತಾಣ ಹಾಗೂ ಮೇಲ್‌ ಚೆಕ್‌ ಮಾಡಲು ಕುಳಿತ. ಆಗ ಹೆಂಡತಿ ಸೀಮಾ ಕೇಳಿದಳು, ``ಊಟಕ್ಕೆ ಏನು ಮಾಡಲಿ?''

``ನಿನಗೇನು ಇಷ್ಟವೋ ಅದನ್ನು ಮಾಡು,'' ಎಂದು ಹೇಳುತ್ತ ಲ್ಯಾಪ್‌ಟಾಪ್‌ನಲ್ಲಿ ಮಗ್ನನಾಗಿ ಬಿಟ್ಟ. ಆ ಮಾತಿಗೆ ಸೀಮಾ ಹೇಳಿದಳು, ``ಊಟ ನಾನೊಬ್ಬಳೇ ಮಾಡ್ತೀನಾ, ನೀವು ಮಾಡ್ತೀರಿ ತಾನೇ ನಿಮಗೆ ಏನೂ ಇಷ್ಟವಿಲ್ಲವೇ? ಕೇಳಿದ್ರೆ ಹೀಗೆ, ಕೇಳದೇ ಇದ್ರೆ ಹಾಗೆ,'' ಎಂದು ಒಟಗುಟ್ಟತ್ತ ಒಳಗೆ ಹೋದಳು.

ಆಗ ರಮೇಶ್‌ಗೆ ತಾನು ಗೊತ್ತಿದ್ದೊ ಗೊತ್ತಿಲ್ಲದೆಯೋ ಗೃಹಕಲಹ ಶುರು ಮಾಡಿದ್ದೇನೆ ಎಂದೆನಿಸಿತು. ವಾದವಿವಾದವನ್ನು ಮುಂದುವರಿಸಿ, ಮನೆಯ ವಾತಾವರಣ ಇನ್ನಷ್ಟು ಕದಡಲು ಇಷ್ಟಪಡುತ್ತಿರಲಿಲ್ಲ. ಹೀಗಾಗಿ ಶಸ್ತ್ರಾಸ್ತ್ರ ಕೆಳಗಿಡುತ್ತ ಹೇಳಿದ, ``ನೀನು ನಿನ್ನ ಆಪ್ಶನ್‌  ಹೇಳು.''

``ಚಪಾತಿ ಆಲೂಗಡ್ಡೆ ಪಲ್ಯ, ಅಕ್ಕಿ ರೊಟ್ಟಿ, ಕುಂಬಳಕಾಯಿ ಪಲ್ಯ, ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ. ನಿಮಗೆ ಯಾವುದು ಇಷ್ಟ ಹೇಳಿ?''

``ಇಂದು ನೀನು ನನಗೆ ಆಲೂಗಡ್ಡೆ ಪಲ್ಯ ತಿನ್ನಿಸಿಯೇ ಇರುತ್ತೀಯಾ. ಇರಲಿ, ನನಗೆ ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ಮಾಡು,'' ಎಂದು ಅವಳನ್ನು ಸಮಾಧಾನಪಡಿಸುತ್ತ ಹೇಳಿದಾಗ ಆಕೆ ಮುಗುಳ್ನಕ್ಕಳು. ಬಳಿಕ ರಮೇಶ್‌ ಪುನಃ ಲ್ಯಾಪ್‌ಟಾಪ್‌ನಲ್ಲಿ ಮುಳುಗಿದ.

ಒಂದು ಗಂಟೆ ಬಳಿಕ ಅವನಿಗೆ ಊಟಕ್ಕೆ ಬುಲಾವ್‌ ಬಂತು. ಅವನು ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ತಿನ್ನುವ ಅಪೇಕ್ಷೆಯಿಂದ ಟೇಬಲ್ ಹತ್ತಿರ ಬಂದಾಗ ಅವನು ಸೌತೇಕಾಯಿ ರೊಟ್ಟಿ ನೋಡಿ ದಂಗಾಗಿ ಹೋದ. ಅವನು ಅಷ್ಟಿಷ್ಟು ಕೋಪದಿಂದಲೇ ಕೇಳಿದ, ``ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ಎಲ್ಲಿ?``

``ಇಲ್ಲ ಮಾಡಲಿಲ್ಲ. ಫ್ರಿಜ್‌ ತೆರೆದಾಗ ನನಗೆ ಸೌತೇಕಾಯಿ ಮಿಕ್ಸ್ ಮಾಡಿದ ಹಿಟ್ಟು ಕಾಣಿಸಿತು. ಅದು ಬೇಗ ಕೆಟ್ಟು ಹೋಗುತ್ತದೆ. ಹಾಗಾಗಿ ಇವತ್ತು ಅದನ್ನೇ ಮಾಡಬೇಕಾಯಿತು.'' ಅವಳು ತನ್ನ ತಿಳಿವಳಿಕೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತ ರಮೇಶ್‌ನತ್ತ ನೋಡಿದಳು. ಆದರೆ ಅವನ ಮೂಡ್‌ ಕೆಟ್ಟು ಹೋಯಿತು. ಅವನು ಕೇಳಿದ, ``ನೀನು ಇದನ್ನೇ ಮಾಡಬೇಕೆಂದಿದ್ದರೆ, ನನ್ನನ್ನೇಕೆ ಕೇಳಬೇಕಿತ್ತು?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ