ಯಾರದ್ದಾದರೂ ಸಂಬಂಧದಲ್ಲಿ ಬಿರುಕು ಉಂಟಾಗುತ್ತಿದ್ದರೆ, ನಮ್ಮಲ್ಲಿ ಬಹಳಷ್ಟು ಜನರು ಸಂಗಾತಿಯದ್ದೇ ದೋಷ ಎಂದು ಆರೋಪ ಹೊರಿಸುತ್ತಾರೆ. ಆದರೆ ಚಪ್ಪಾಳೆ ಎಂದೂ ಒಂದೇ ಕೈಯಿಂದ ಹೊಡೆಯಲು ಆಗುವುದಿಲ್ಲ. ಬಹಳಷ್ಟು ಕಡಿಮೆ ಪ್ರಕರಣಗಳಲ್ಲಿ ಕೇವಲ ಒಬ್ಬರದ್ದು ಮಾತ್ರ ತಪ್ಪು ಇರುತ್ತದೆ. ನಿಮ್ಮ ನಡುವೆ ಕೂಡ ಏನಾದರೂ ತಪ್ಪು ಘಟಿಸುತ್ತಿದ್ದರೆ, ಸಂಗಾತಿಯ ಮೇಲೆ ದೋಷಾರೋಪ ಹೊರಿಸುವ ಮೊದಲು, ಈ ತೊಂದರೆಯ ಹೊಣೆಗಾರ ನೀವಲ್ಲ ತಾನೇ ಎಂಬುದನ್ನು ಅವಲೋಕಿಸಿ ನೋಡಿ :

ಸಂಗಾತಿ ನಿಮ್ಮನ್ನು ಉಪೇಕ್ಷೆ ಮಾಡುತ್ತಿದ್ದಾನೆಂದು ನಿಮಗೆ ಅನಿಸುತ್ತದೆಯೇ? ಇದು ನಿಮಗೆ ಮೊದಲ ಬಾರಿ ಅನಿಸುತ್ತಿಲ್ಲ ಅಲ್ಲವೇ? ನಿಮ್ಮ ಮಾಜಿ ಪ್ರೇಮಿ ಕೂಡ ಹೀಗೆಯೇ ಮಾಡುತ್ತಿದ್ದ ಎಂದು ನಿಮಗೆ ಅನಿಸುತ್ತದೆಯೇ? ಅಥವಾ ಬೇರೆ ಕೆಲವು ಸ್ನೇಹಿತರು ಹೀಗೆಯೇ ಮಾಡುತ್ತಾರೆಯೇ? ನಿಮ್ಮ ನಿಕಟವರ್ತಿಗಳೊಂದಿಗೂ ಕೂಡ ಹೀಗೆಯೇ ಆಗುತ್ತಿದೆ ಎಂದು ನಿಮಗನ್ನಿಸಿದರೆ ಈ ಸಮಸ್ಯೆ ನಿಮ್ಮದೇ.

ಇದರ ಬಗ್ಗೆ ಗಂಭೀರವಾಗಿ ಯೋಚಿಸಿ. ಪುರುಷನೇ ಆಗಿರಬಹುದು ಅಥವಾ ಮಹಿಳೆ ಯಾರನ್ನಾದರೂ ಆಯ್ಕೆ ಮಾಡುವ ವಿಧಾನವೇ ತಪ್ಪು.

`ನಾನು ಮೂಡಿ,’  ಎನ್ನುವುದು ಯಾವುದೇ ನೆಪ ಆಗಿರುವುದಿಲ್ಲ. ನಿಮ್ಮ ಈ ವಿಷಯನ್ನು ಬೇರೆಯವರು ತಿಳಿದುಕೊಳ್ಳಲಿ ಎನ್ನುವುದು ಸರಿಯಾದುದುಲ್ಲ. ನಿಮ್ಮ ಈ ಅಭ್ಯಾಸದ ಬಗ್ಗೆ ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕು. ನಿಮ್ಮ ಕೋಪದ ಮೇಲೆ ನಿಮಗೆ ನಿಯಂತ್ರಣವಿರದೇ ಇದ್ದರೆ, ನಿಮ್ಮ ನಿಕಟವರ್ತಿಗಳಿಗೆ ಅದರಿಂದ ಕಷ್ಟವಾಗುತ್ತಿದ್ದರೆ, ಈ ಸಮಸ್ಯೆಯನ್ನು ನಿಭಾಯಿಸುವುದು ನಿಮ್ಮದೇ ಜವಾಬ್ದಾರಿ. ಥೆರಪಿಸ್ಟ್ ಬಳಿ ಹೋಗಿ ಅವರ ಸಲಹೆಗಳನ್ನು ಗಮನಿಸಿ. ಒಂದು ವೇಳೆ ಸಂಗಾತಿ ಈ ಸ್ವಭಾದವನಾಗಿದ್ದರೆ ನೀವು ಇದನ್ನೇ ಬಯಸುತ್ತೀರಿ ಅಲ್ಲವೇ…

ನಿಮಗೆ ಸಂಗಾತಿಯ ಮೇಲೆ ಬಹಳ ಕೋಪ ಬಂದಿದೆ, ನೀವು ಅವನ ಕರೆ ಸ್ವೀಕರಿಸದೆ ಆ ಸಂದೇಶ ನೀಡಿದ್ದೀರಿ. ಆದರೆ ಎಷ್ಟೋ ಸಲ ಸಂಗಾತಿ ಯೋಚಿಸುವುದೇನೆಂದರೆ, ನೀವು ವ್ಯಸ್ತರಾಗಿದ್ದೀರಿ ಅಥವಾ ಮಾತನಾಡುವ ಮೂಡ್‌ನಲ್ಲಿಲ್ಲ ಎಂದು ಭಾವಿಸಬಹುದು. ಅವನು ನಿಮ್ಮ ಮನಸ್ಸಿನ ಮಾತನ್ನು ಅರಿಯಲಾರ.

ನೀವು ಏನನ್ನೂ ಹೇಳದೆಯೇ ಅವನು ತಿಳಿದುಕೊಳ್ಳುತ್ತಾನೆಂದು ನೀವು ಭಾವಿಸಬೇಡಿ. ನೀವು ಹೇಗೆ ಯೋಚಿಸುತ್ತಿದ್ದೀರಿ, ಹೇಗೆ ಅನುಭವ ಮಾಡಿಕೊಳ್ಳುತ್ತಿದ್ದೀರೆಂದು ಅವನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಎಂದಾದರೊಮ್ಮೆ ಅವನಿಗೆ ನಿಮ್ಮ ಮೂಡ್‌ ಏಕೆ ಹಾಳಾಗಿದೆ ಎಂದು ಗೊತ್ತಾಗಬಹುದು. ಆದರೆ ಎಲ್ಲ ಸಮಯದಲ್ಲೂ ಆಗುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅವನಿಗೆ ಹೇಳಿ, ನೀವು ಯಾವುದೇ ಕಾರಣಕ್ಕೂ ಮೌನದಿಂದಿರಬೇಡಿ. ಮಾತುಕತೆ ನಡೆಯುತ್ತಾ ಇರಬೇಕು. ಅದು ಒಳ್ಳೆಯ ಸಂಬಂಧದ ಅಡಿಪಾಯ.

ಅವನೇ ಫೋನ್‌ ಮಾಡಬೇಕು, ಏನಾದರೂ ಪ್ಲಾನ್‌ ಮಾಡಬೇಕು ಎಂದು ನೀವು ಬಯಸುತ್ತೀರಾ? ಆರಂಭದಲ್ಲಿ ಇದು ಸರಿ ಕಾಣುತ್ತದೆ. ಆದರೆ ಒಂದು ಹಂತದ ಬಳಿಕ ಅವನಿಗೆ, ನಿಮಗೆ ಯಾವುದೇ ಸಂಗತಿಯ ಬಗ್ಗೆ ಚಿಂತೆಯೇ ಇಲ್ಲ, ಏನು ಮಾಡಬೇಕೊ ಅದನ್ನು ನೀವೇ ಮಾಡಲಿ ಎಂದು ಅವನು ಅಂದುಕೊಳ್ಳುತ್ತಾನೆ.

ಪ್ರೀತಿ ಇಲ್ಲವೇ ಕೆಲಸ

ಸಕಾರಾತ್ಮಕ ಸಂಗತಿಯ ಬಗ್ಗೆಯೇ ಗಮನಕೊಡುವುದು ಯಶಸ್ಸಿನ ರಹಸ್ಯವಾಗಿದೆ. ಯಾವುದೇ ಸಂಗತಿಯ ಬಗ್ಗೆ ದೂರು ಹೇಳಬಹುದು. ಇಂತಹ ಹಲವು ಸಂಗತಿಗಳು ನಿಮ್ಮ ಸಂಗಾತಿಗೆ ಇಷ್ಟವಾಗದೇ ಹೋಗಬಹುದು.

ಯಾವ ಸಂಗತಿಗಳು ನಿಮಗೆ ಇಷ್ಟವಾಗುತ್ತವೆ, ಅದರಿಂದ ನಿಮ್ಮ ಸಂಬಂಧ ಮಧುರಗೊಳ್ಳುತ್ತದೋ ಅಂತಹ ವಿಷಯದ ಮೇಲೆ ಫೋಕಸ್‌ ಮಾಡಿ. ಯಾವ ಸಂಗತಿಗಳು ನಿಮಗಿಷ್ಟವಿಲ್ಲವೋ ಅನ್ನುವ ನಿರ್ಲಕ್ಷಿಸಿ, ಅವುಗಳ ಬಗ್ಗೆ ರಂಪ ಮಾಡಬೇಡಿ.

ಹೊಸದೊಂದು ಅನುಭವವನ್ನು ಜೊತೆ ಜೊತೆಗೆ ಶೇರ್‌ ಮಾಡುವುದು, ಅದು ಸಂಗಾತಿಯ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪರಸ್ಪರರ ಸ್ಪೇಸ್‌ನ್ನು ಗೌರವಿಸುತ್ತ, ಹೊಸ ಸಂಗತಿ ಹಂಚಿಕೊಳ್ಳುತ್ತ ಅಸುರಕ್ಷತೆ ಅಥವಾ ಈಗೋ ನಡುವೆ ಬರಲು ಅವಕಾಶ ಕೊಡಬೇಡಿ. ಇಲ್ಲದಿದ್ದರೆ ಸಂಬಂಧ ಮುಂದೆ ಸಾಗಲು ಅಡ್ಡಿಯುಂಟಾಗುತ್ತದೆ.

ಯಾವುದೇ ಸಮಸ್ಯೆ ಇದ್ದರೆ, ಅದು ಕಾಲಕ್ರಮೇಣ ಸರಿ ಆಗಬಹುದು ಎಂದು ಭಾವಿಸುವುದು ಸರಿಯಲ್ಲ. ಸಮಸ್ಯೆ ಸರಿಪಡಿಸದೆ ಇದ್ದರೆ ಅದು ಹಾಗೆಯೇ ಮುಂದುವರಿಯುತ್ತದೆ. ಸಂಗಾತಿಯೊಂದಿಗೆ ಕುಳಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಿ.

ತಪ್ಪು ನಿಮ್ಮದೇ ಎಂದು ಗೊತ್ತಿರುವಾಗ, ಕ್ಷಮೆ ಕೇಳಲು ನಿಮಗೆ ಸಂಕೋಚ ಎನಿಸುತ್ತಿದೆಯೇ? ತಪ್ಪಾಗಿದ್ದರೆ ಕ್ಷಮೆ ಕೇಳಲು ಹಿಂಜರಿಯಬೇಡಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಇಬ್ಬರನ್ನೂ ಮತ್ತಷ್ಟು ಹತ್ತಿರ ತರುತ್ತದೆ.

ನೀವೇನೊ ಒಂದು ಯೋಜನೆ ರೂಪಿಸುತ್ತಿದ್ದೀರಿ. ಆದರೆ ಅದರಲ್ಲಿ ನಿಮ್ಮ ಗಂಡನನ್ನು ಸೇರ್ಪಡೆ ಮಾಡಿಕೊಂಡಿಲ್ಲ. ಮಾಡಿಕೊಳ್ಳುವುದು ಅವಶ್ಯ ಎಂದು ಕೂಡ ಭಾವಿಸಿಲ್ಲ. ಹೀಗೆ ಮಾಡಿದಲ್ಲಿ ನೀವು ಏಕಾಂಗಿ ಜೀವನ ನಡೆಸುತ್ತಿದ್ದೀರಿ ಎಂದರ್ಥ. ನೀವು ನಿಮ್ಮ ಅಸ್ತಿತ್ವ ಕಾಪಾಡಿಕೊಳ್ಳಿ, ಆದರೆ ಒಂದು ಸಂಬಂಧದ ಅರ್ಥ ನಮ್ಮ ಜೀವನವನ್ನು ಯಾರೊಂದಿಗಾದರೂ ಶೇರ್‌ ಮಾಡುವುದಾಗಿದೆ.

ನೀವು ನಿಮ್ಮ ಇಷ್ಟದ ಪದಾರ್ಥಗಳನ್ನು ತಯಾರಿಸುವುದನ್ನು ನಿಲ್ಲಿಸಬೇಡಿ. ಆದರೆ ನೀವು ಗಮನಿಸಬೇಕಾದ ಸಂಗತಿಯೆಂದರೆ, ನಿಮ್ಮ ಯಾವ ವರ್ತನೆ ಸಂಗಾತಿಗೆ ಇಷ್ಟವಾಗುವುದಿಲ್ಲ ಎನ್ನುವುದನ್ನು.

ಸಂಗಾತಿಯ ಯಾವುದಾದರೂ ಮಾತು ನಿಮಗೆ ದುಃಖವನ್ನುಂಟು ಮಾಡುತ್ತದೆ ಎಂದಾದರೆ, ಆ ಬಗ್ಗೆ ಸಂಗಾತಿಗೆ ಅವಶ್ಯವಾಗಿ ಹೇಳಿ. ಇದರ ಬಗ್ಗೆ ಇಬ್ಬರೂ ಜೊತೆಗೂಡಿ ಚರ್ಚಿಸಿ. ನೀವು ಸಾಕಷ್ಟು ಬಾರಿ ಹೇಳಿದ ಬಳಿಕ ನಿಮ್ಮ ತೊಂದರೆಗಳು ಕಡಿಮೆ ಆಗಿಲ್ಲವೆಂದರೆ, ನೀವು ಈ ಸಂಬಂಧದ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಯೋಚಿಸಿ.

– ಪೂಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ