ಚಳಿಗಾಲದಲ್ಲಿ ತ್ವಚೆ ಮತ್ತು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ ಸೀಸನ್ನಲ್ಲಿ ನಮ್ಮನ್ನು ನಾವು ಹೆಚ್ಚು ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.
ಚಳಿಗಾಲದಲ್ಲಿ ಮುಖ್ಯವಾಗಿ, 2 ಭಾಗಗಳನ್ನು ಜೋಡಿಸುವಂಥ ಅಂಗಗಳ ಆರೈಕೆಯತ್ತ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಮೊಣಕೈ, ಮಂಡಿ ಭಾಗ ಇತ್ಯಾದಿ. ಚಳಿಗಾಲದಲ್ಲಿ ಈ ಭಾಗದ ತ್ವಚೆ ಕಪ್ಪಾಗಿ, ಒರಟಾಗುತ್ತದೆ. ದೇಹದ ಈ ಭಾಗದಲ್ಲಿ ಡೆಡ್ಸ್ಕಿನ್ನ ಒಂದು ಪದರ ರೂಪುಗೊಳ್ಳುತ್ತದೆ. ಅದನ್ನು ತೊಲಗಿಸಿ, ಆ ಭಾಗವನ್ನು ಶುಭ್ರವಾಗಿಟ್ಟುಕೊಳ್ಳುವುದು ಒಂದು ಸವಾಲೇ ಸರಿ. ಇಂಥ ಭಾಗಗಳನ್ನು ನಿಯಮಿತವಾಗಿ ಆರೈಕೆ ಮಾಡುವುದರಿಂದ ನಿಮ್ಮ ಚಳಿಗಾಲ ಖುಷಿಯಾಗಿ ಸರಿಯುತ್ತದೆ.
ಮೊಣಕೈ ಕಪ್ಪಿನ ನಿವಾರಣೆ
ಅಜ್ಜಿಯ ಮನೆಮದ್ದು : ವಿನಿಗರ್ಮತ್ತು ಗ್ಲಿಸರಿನ್ನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು, ಆ ಮಿಶ್ರಣವನ್ನು ಅಗತ್ಯದ ಭಾಗಗಳಿಗೆ ಸವರಿ, ನಿಧಾನವಾಗಿ ಮಸಾಜ್ಮಾಡುವುದರಿಂದ ಲಾಭವಿದೆ. ನಂತರ ನೀರಿನಿಂದ ತೊಳೆಯಿರಿ. ಹೀಗೆ ದಿನಕ್ಕೆ 2 ಸಲ ಮಾಡಿ. 2-3 ವಾರಗಳ ನಂತರ ಗಮನಿಸಿದಾಗ, ನಿಮ್ಮ ಮೊಣಕೈ ಮಂಡಿ ಭಾಗ ಒಂದಿಷ್ಟೂ ಕಲೆ ಇಲ್ಲದೆ, ಮೃದುವಾಗಿರುತ್ತದೆ.
ಇಷ್ಟು ಮಾತ್ರವಲ್ಲ, ಅನ್ನ ಬಸಿದ ಗಂಜಿ ಆರಿದ ನಂತರ, ಆ ಗಂಜಿಯಿಂದಲೂ ಇದೇ ತರಹ ಲಾಭ ಪಡೆಯಬಹುದು. ಸ್ನಾನಕ್ಕೆ ಮೊದಲು ಅಂಥ ಭಾಗಗಳಿಗೆ ಗಂಜಿ ಸವರಿ ನಯವಾಗಿ ಮಸಾಜ್ ಮಾಡಿ. ಒಣಗಿದ ನಂತರ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನಕ್ಕೆ 2 ಸಲ ಹೀಗೆ 2-3 ವಾರ ಮಾಡಿ.
ತಜ್ಞರ ಸಲಹೆ : ಮೊಣಕೈ ಮೇಲೆ ಜಮೆಗೊಂಡ ಡೆಡ್ ಸ್ಕಿನ್ತೊಲಗಿಸಲು, ದಿನಕ್ಕೆ 2 ಸಲ ಯಾವುದೇ ಮೈಲ್ಡ್ ಸ್ಕ್ರಬ್ ಬಳಸಿ ಮಸಾಜ್ ಮಾಡಿ. ದಿನಕ್ಕೆ 2-3 ಸಲ ಸೆರಾಮೈಡ್ಯುಕ್ತ ಮಾಯಿಶ್ಚರೈಸರ್ ಬಳಸಿರಿ. ಇದರ ಹೊರತಾಗಿ ತ್ವಚೆಯ ಶುಷ್ಕತೆ ದೂರಗೊಳಿಸಲು ಪ್ರತಿದಿನ ಸ್ನಾನ ಮಾಡುವ ನೀರಿಗೆ 2-3 ಹನಿ ರೋಸ್ ಆಯಿಲ್, ಶೆಲ್ ಆಯಿಲ್, ಆಲಿವ್ ಆಯಿಲ್ ಇತ್ಯಾದಿ ಬೆರೆಸಿಕೊಳ್ಳಿ.
ಗಮನಿಸಿ : ಮೊಣಕೈ, ಮಂಡಿ ಭಾಗಗಳಿಗೆ ಮಾಯಿಶ್ಚರೈಸರ್ ಸವರಿ ವೃತ್ತಾಕಾರವಾಗಿ 5 ನಿಮಿಷ ಮಸಾಜ್ ಮಾಡಬೇಕು.
ಹಿಮ್ಮಡಿ ಒಡೆತದಿಂದ ಮುಕ್ತಿ
ಹಿಮ್ಮಡಿ ಒಡೆತದ ಪರಿಣಾಮವಾಗಿ ಎಷ್ಟೋ ಸಲ ಆ ಭಾಗದಿಂದ ರಕ್ತ ಜಿನುಗುವುದು, ನೋವು, ಉರಿ, ಹಿಂಸೆ ಎನಿಸುತ್ತದೆ. ಹಿಮ್ಮಡಿಯ ಚರ್ಮ ಬಹಳ ಡ್ರೈ ಆಗುವುದರಿಂದ ಇದು ಒಡೆಯುತ್ತದೆ.
ಅಜ್ಜಿಯ ಮನೆಮದ್ದು : 1 ದೊಡ್ಡ ಚಮಚ ಗ್ಲಿಸರಿನ್ಗೆ 2 ದೊಡ್ಡ ಚಮಚ ಗುಲಾಬಿ ಜಲ, ಅರ್ಧ ಚಮಚ ನಿಂಬೆರಸ ಬೆರೆಸಿ ಮಿಶ್ರಣ ಸಿದ್ಧಪಡಿಸಿ. ಇದನ್ನು ಹಿಮ್ಮಡಿಗೆ ಸವರಿ ಚೆನ್ನಾಗಿ ಮಸಾಜ್ಮಾಡಿ. ಇದು ಇಡೀ ರಾತ್ರಿ ಹಾಗೇ ಇರಲಿ. ಗ್ಲಿಸರಿನ್, ಗುಲಾಬಿ ಜಲ ಹಿಮ್ಮಡಿಗೆ ಮಾಯಿಶ್ಚರೈಸ್ ಮಾಡುವುದಲ್ಲದೆ, ನೋವಿನಿಂದಲೂ ನಿವಾರಣೆ ನೀಡುತ್ತದೆ. ದಿನಕ್ಕೆ 2 ಸಲ ಹೀಗೆ ಮಾಡಿ.
1 ದೊಡ್ಡ ಚಮಚ ಓಟ್ಮೀಲ್ ಪೌಡರ್ಗೆ, ತುಸು ಜೋಜೋಬಾ ಆಯಿಲ್ ಬೆರೆಸಿ ಗಾಢ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಹಿಮ್ಮಡಿಗೆ ಸವರಿ 1 ತಾಸು ಹಾಗೇ ಬಿಡಿ. ನಂತರ ನೀರಿನಿಂದ ತೊಳೆದು, ಒರೆಸಿ, ವ್ಯಾಸಲೀನ್ ಹಚ್ಚಿರಿ.