32 ವರ್ಷ ವಯಸ್ಸಿನ ಆನಂದ್ ಬೆನ್ನುನೋವಿನಿಂದ ಬಳಲುತ್ತಿದ್ದ. ಅವನಿಗೆ ಬೆನ್ನನ್ನು ಅಲುಗಾಡಿಸಲೇ ಆಗದಂತಾಗಿತ್ತು. ವಿಶ್ರಾಂತಿ ಮತ್ತು ಔಷಧ ಸೇವನೆಯ ನಂತರ ನೋವು ಕಡಿಮೆಯಾಗಲಿಲ್ಲ. ಬೆನ್ನುನೋವು ಪ್ರಾರಂಭವಾದ 6 ವಾರಗಳಲ್ಲಿ ಅವನ ಶರೀರದ ತೂಕ ಬಹಳ ಕಡಿಮೆಯಾಗಿಬಿಟ್ಟಿತು.
ಆನಂದ್ ತಜ್ಞ ವೈದ್ಯರ ಬಳಿ ಅಪಾಯಿಂಟ್‌ಮೆಂಟ್ ತೆಗೆದುಕೊಂಡ. ಎಕ್ಸ್ ರೇನಿಂದ ಏನೂ ತಿಳಿಯದಿದ್ದಾಗ ಬ್ಲಡ್ ಟೆಸ್ಟ್ ಮಾಡಿಸಲು ಹೇಳಲಾಯಿತು. ಹೆಚ್ಚಿನ ಪರೀಕ್ಷೆಗಾಗಿ ಎಂ.ಆರ್.ಐ ಮಾಡಿಸಿದಾಗ ಅವನ ಬೆನ್ನುಮೂಳೆಯಲ್ಲಿ ಇನ್‌ಫೆಕ್ಷನ್ ಆಗಿ ಡಿಸ್ಕ್ ಸ್ಪೇಸ್ ಮತ್ತು ಸುತ್ತಮುತ್ತಲು ಜೀವಕೋಶಗಳಲ್ಲಿ ಕೀವು ತುಂಬಿರುವುದು ತಿಳಿದು ಬಂದಿತು.
ಪರಿಸ್ಥಿತಿ ಗಂಭೀರವಾಗಿರುವುದನ್ನು ಕಂಡು ವೈದ್ಯರು ಅವನಿಗೆ ಕೂಡಲೇ ಸ್ಪೈನಲ್ ಟ್ರೇಸಸ್ ಹಾಕಲು ಸಲಹೆ ನೀಡಿದರು. 6 ವಾರಗಳ ಕಾಲ ಆ್ಯಂಟಿ ಬಯೋಟಿಕ್ ಮಾತ್ರೆ ಸೇವಿಸಲು ಮತ್ತು ವಿಶ್ರಾಂತಿ ಪಡೆಯಲು ಸೂಚಿಸಿದರು. ಜೊತೆಗೆ ಸಿಟಿ ಗೈಡೆಡ್‌ಬಯಾಪ್ಸಿಯನ್ನು ಮಾಡಿಸಿದರು.
ಇವೆಲ್ಲ ಚಿಕಿತ್ಸೆಗಳಿಂದ ತಿಳಿದು ಬಂದ ಅಂಶವೆಂದರೆ, ಆನಂದನ ಬೆನ್ನುಮೂಳೆಯು ಸುರುಟಿಕೊಂಡಿದೆ ಮತ್ತು ಅದರಿಂದ ಅವನ ಕಾಲು, ಕರುಳು ಮತ್ತು ಬ್ಲಾಡರ್‌ಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಅದರ ಪರಿಹಾರಕ್ಕಾಗಿ ಆ ಕೂಡಲೇ ಸರ್ಜಿಕಲ್ ಟ್ರೀಟ್‌ಮೆಂಟ್ ಅಗತ್ಯವಾಗಿತ್ತು. ನ್ಯೂರೊಸರ್ಜಿಕಲ್ ಕಂಪ್ರೆಶನ್‌ನ್ನು ದೂರಗೊಳಿಸಲು ಮತ್ತು ಪೆಡಿಕ್‌ಸ್ಕ್ರೂ ಮತ್ತು ರಾಡ್ಸ್ ನಿಂದ ಬೆನ್ನುಮೂಳೆಯನ್ನು ಸ್ಥಿರಗೊಳಿಸಲು ಆನಂದನಿಗೆ ಸರ್ಜರಿ ಮಾಡಲಾಯಿತು.
ರೋಗಿಯ ನೋವನ್ನು ದೂರಗೊಳಿಸುವುದು, ಅವನು ಅಂಗವಿಕಲನಾಗುವುದನ್ನು ತಪ್ಪಿಸುವುದು ಮತ್ತು ಬೆನ್ನುಮೂಳೆಯ ಆಕಾರ ಮತ್ತಷ್ಟು ವಿಕೃತವಾಗದಂತೆ ತಡೆಯುವುದು, ಶಸ್ತ್ರಕ್ರಿಯೆಯ ಉದ್ದೇಶವಾಗಿತ್ತು. ಸರ್ಜರಿಯ ನಂತರ ರೋಗಿಯ ಪರಿಸ್ಥಿತಿ ಸುಧಾರಿಸಿತು ಮತ್ತು ನೋವು ಸಹ ದೂರವಾಯಿತು.
ಏನಿದು ಸ್ಪೈನಲ್ ಇನ್‌ಫೆಕ್ಷನ್?
ಇದು ಒಂದು ಬಗೆಯ ರೇರ್ ಇನ್‌ಫೆಕ್ಷನ್ ಆಗಿದ್ದು, ಬೆನ್ನುಮೂಳೆಗಳ ಮಧ್ಯದಲ್ಲಿರುವ ಡಿಸ್ಕ್ ಸ್ಪೇಸ್, ಸ್ಪೈನಲ್ ಕೆನಾಲ್ ಮತ್ತು ಅದರ ಸುತ್ತಮುತ್ತಲಿನ ಜೀವಕೋಶಗಳು ಹಾಗೂ ಸಾಫ್ಟ್ ಟಿಶ್ಯೂಗಳನ್ನು ಪ್ರಭಾವಗೊಳಿಸುತ್ತದೆ. ಈ ಇನ್‌ಫೆಕ್ಷನ್‌ಗೆ ಕಾರಣವಾದ ಬ್ಯಾಕ್ಟೀರಿಯಾಗಳು ರಕ್ತನಾಳಗಳ ಮೂಲಕ ಬೆನ್ನುಮೂಳೆ ಮತ್ತು ವರ್ಟಿಬ್ರಲ್ ಡಿಸ್ಕ್ ಗಳಿಗೆ ಹರಡಿ ಅವುಗಳ ಸುತ್ತಮುತ್ತಲ ಭಾಗಗಳಿಗೆ ಇನ್‌ಫೆಕ್ಷನ್ ತಗುಲುತ್ತದೆ. ಇದರಿಂದ ಡಿಸೈಟಿಸ್ ಉಂಟಾಗುವ ಸಾಧ್ಯತೆ ಇರುತ್ತದೆ.
ಡಿಸೈಟಿಸ್ ಸಹ ಒಂದು ಬಗೆಯ ಇನ್‌ಫೆಕ್ಷನ್ ಆಗಿದ್ದು, ಬೆನ್ನುಮೂಳೆಯ ಡಿಸ್ಕ್ ಗಳಿಗೆ ತಗಲುತ್ತದೆ. ಇನ್‌ಫೆಕ್ಷನ್ ಹೆಚ್ಚಾದಂತೆ ಡಿಸ್ಕ್ ಗಳ ನಡುವಿನ ಸ್ಪೇಸ್ ಕಡಿಮೆಯಾಗತೊಡಗುತ್ತದೆ. ಕ್ರಮೇಣ ಅದು ಶರೀರದ ಬೇರೆ ಭಾಗಗಳಿಗೂ ಹರಡಿ ಆಸ್ಟ್ರೊಮೈಟಿಸ್‌ಎಂಬ ಮೂಳೆಗಳ ಇನ್‌ಫೆಕ್ಷನ್‌ಗೆ ಕಾರಣವಾಗುತ್ತದೆ.
ಇನ್‌ಫೆಕ್ಷನ್‌ನಿಂದಾಗಿ ದುರ್ಬಲಗೊಳ್ಳುವ ಮೂಳೆಗಳು ಮುರಿಯುವ ಅಥವಾ ವಿಕಾರಗೊಳ್ಳುವ ಸಂಭವಿರುತ್ತದೆ. ಕೆಲವು ಸಲ ಇಂತಹ ಮೂಳೆಗಳು ಸ್ಪೈನಲ್ ಕಾರ್ಡ್‌ನ ನರಗಳನ್ನು ಎಳೆಯತೊಡಗಿದಾಗ ಸುಸ್ತು, ಜೋಮು, ಪ್ರಜ್ಞೆ ತಪ್ಪುವಿಕೆ, ತೀವ್ರ ನೋವು, ಬ್ಲಾಡರ್ ಡಿಸ್‌ಫಂಕ್ಷನ್, ಮೊದಲಾದ ನ್ಯೂರಲಾಜಿಕಲ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇಂಟರ್ ವರ್ಟಿಬ್ರಲ್ ಡಿಸ್ಕ್ ಸ್ಪೇಸ್‌ನಲ್ಲಿನ ಇನ್‌ಫೆಕ್ಷನ್ 3 ವಿಭಾಗಗಳಲ್ಲಿ ವಿಂಗಡಿಸಲ್ಪಡುತ್ತದೆ.
ಮೊದಲನೆಯದು ಸ್ಪೈನಲ್ ಕೆನಾಲ್ ಇನ್‌ಫೆಕ್ಷನ್. ಇದರಲ್ಲಿ ಸೇರಿರುವುದೆಂದರೆ :
ಸ್ಪೈನಲ್ ಎಪಿಡ್ಯೂರಲ್ ಆ್ಯಬ್ಸೆಸ್ ಅಂದರೆ ಬೆನ್ನುಮೂಳೆಯ ಹೊರ ಭಾಗದಲ್ಲಿ ಹುಣ್ಣು ಆಗುವುದು.
ಸಬ್‌ಡ್ಯೂಲರಿ ಆ್ಯಬ್ಸೆಸ್
ಇಂಟ್ರಾಮೆಡ್ಯೂಲರಿ ಆ್ಯಬ್ಸೆಸ್
ಎರಡನೆಯದು. ಅಕ್ಕಪಕ್ಕದ ಸಾಫ್ಟ್ ಟಿಶ್ಯೂಗಳಲ್ಲಿ ಇನ್‌ಫೆಕ್ಷನ್. ಇದರಲ್ಲಿ ಸೇರಿರುವುದೆಂದರೆ :
ಸರ್ವೈಕಲ್ ಮಕ್ತು ಥೊರಾಸಿಕ್ ಪ್ಯಾರಾಸ್ಪೈನಲ್.
ಮೂರನೆಯದು ಮೆದುಳಿನ ಭಾಗದ ಇನ್‌ಫೆಕ್ಷನ್ ಸ್ಪೈನಲ್ ಇನ್‌ಫೆಕ್ಷನ್‌ಗೆ ಕಾರಣಗಳು
ಸಾಮಾನ್ಯವಾಗಿ ನಮ್ಮ ಶರೀರದ ಚರ್ಮದಲ್ಲಿರುವ ಸ್ಟೆಫಿಲೊಕಾಕಸ್ ಓರಿಯಮ್ ಬ್ಯಾಕ್ಟೀರಿಯಾದ ಕಾರಣದಿಂದಾಗಿ ಸ್ಪೈನಲ್ ಇನ್‌ಫೆಕ್ಷನ್ ಉಂಟಾಗುತ್ತದೆ. ಇದಲ್ಲದೆ ಇಸ್ಟೆರಿಚಿಯಾಕೊಲಾ ಎಂಬ ಬ್ಯಾಕ್ಟೀರಿಯಾದಿಂದಲೂ ಇನ್‌ಫೆಕ್ಷನ್ ಆಗಬಹುದು. ಸ್ಪೈನಲ್ ಇನ್‌ಫೆಕ್ಷನ್ ಹೆಚ್ಚಾಗಿ ಲಂಬಾರ್ ಸ್ಪೈನಲ್, ಅಂದರೆ ಬೆನ್ನುಮೂಳೆಯ ಮಧ್ಯ ಅಥವಾ ಕೆಳಭಾಗದಲ್ಲಿ ಉಂಟಾಗುತ್ತದೆ. ಏಕೆಂದರೆ ಬೆನ್ನುಮೂಳೆಗೆ ಈ ಭಾಗದಿಂದಲೇ ರಕ್ತ ಸರಬರಾಜು ಆಗುತ್ತದೆ. ಜೊತೆಗೆ ಪೆಲ್ವಿಕ್ ಇನ್‌ಫೆಕ್ಷನ್, ಯೂರಿನರಿ ಇನ್‌ಫೆಕ್ಷನ್, ನಿಮೋನಿಯಾಗಳೂ ಆಗಬಹುದು. ನರಗಳ ಮೂಲಕ ಉಂಟಾಗುವ ಈ ಇನ್‌ಫೆಕ್ಷನ್‌ನಿಂದ ಕತ್ತು ಮತ್ತು ಸರ್ವೈಕಲ್ ಸ್ಪೈನಲ್‌ಗಳು ಹೆಚ್ಚಾಗಿ ಪ್ರಭಾವಿತವಾಗುತ್ತವೆ.
ಸ್ಪೈನಲ್ ಇನ್‌ಫೆಕ್ಷನ್‌ಗೆ ತುತ್ತಾದ ರೋಗಿಯ ರೋಗ ನಿರೋಧಕ ಶಕ್ತಿಯು ದುರ್ಬಲಗೊಳ್ಳುತ್ತದೆ. ಇದಕ್ಕೆ ಡಯಾಬಿಟೀಸ್, ಅಪೌಷ್ಟಿಕತೆ, ಆರ್ಗನ್ ಟ್ರಾನ್ಸ್ ಪ್ಲಾಂಟ್‌ನ ಹಿಸ್ಟರಿ, ಕೆಲವಾರು ಔಷಧಗಳ ಸೇವನೆ, ಇವುಗಳು ಕಾರಣವಾಗಿರುತ್ತವೆ.
ಲಕ್ಷಣಗಳು
ವಯಸ್ಕರಲ್ಲಿ ಸ್ಪೈನಲ್ ಇನ್‌ಫೆಕ್ಷನ್ ಬಹಳ ನಿಧಾನವಾಗಿ ಹರಡುತ್ತದೆ. ಹೀಗಾಗಿ ಅದರ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳದಿರುವುದರಿಂದ ಅದು ಕೂಡಲೇ ತಿಳಿದು ಬರುವುದಿಲ್ಲ. ಇದರ ಲಕ್ಷಣವೆಂದರೆ ಸಾಧಾರಣವಾಗಿ ಕತ್ತು ಅಥವಾ ಬೆನ್ನಿನ ಯಾವುದಾದರೂ ಭಾಗದಲ್ಲಿ ನೋವು ಪ್ರಾರಂಭವಾಗುತ್ತದೆ. ನೋವಿನ ಔಷಧಿ ಮತ್ತು ವಿಶ್ರಾಂತಿ ತೆಗೆದುಕೊಂಡ ನಂತರ ಆ ಭಾಗವನ್ನು ಆಡಿಸಿದಾಗ ಉಂಟಾಗುವ ನೋವು ಹೆಚ್ಚುತ್ತಲೇ ಇರುತ್ತದೆ.
ಇನ್‌ಫೆಕ್ಷನ್ ಹೆಚ್ಚಿದಾಗ ಜ್ವರ ಬರುವುದು, ನಡುಕ ಉಂಟಾಗುವುದು, ರಾತ್ರಿ ನೋವಿನಿಂದ ನರಳುವುದು, ತೂಕ ಇಳಿದು ಹೋಗುವುದು, ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಇವು ಎಲ್ಲರಲ್ಲೂ ತೋರಿಬರುವ ಸಾಮಾನ್ಯ ಲಕ್ಷಣಗಳಲ್ಲ, ದೀರ್ಘಕಾಲ ಇನ್‌ಫೆಕ್ಷನ್‌ಗೆ ತುತ್ತಾಗಿರುವ ರೋಗಿಗಳಲ್ಲಿ ಕಾಣಿಸಿಕೊಳ್ಳುವಂತಹವು. ಪ್ರಾರಂಭದಲ್ಲಿ ರೋಗಿಗೆ ಬೆನ್ನಿನಲ್ಲಿ ತೀವ್ರವಾದ ನೋವಿದ್ದು, ಶರೀರದ ಮೂವ್‌ಮೆಂಟ್ ಸೀಮಿತವಾಗಿರುತ್ತದೆ. ಸ್ಪೈನಲ್ ಇನ್‌ಫೆಕ್ಷನ್ ಆಗಿರುವ ಅನುಮಾನವಿದ್ದರೆ, ಲ್ಯಾಬೊರೇಟರಿ ಇವ್ಯಾಲ್ಯುಯೇಷನ್ ಮತ್ತು ರೇಡಿಯೋಗ್ರಾಫಿಕ್ ಇಮೇಜಿಂಗ್ ಸ್ಟಡೀಸ್ ಮಾಡಿಸುವುದು ಅತ್ಯಗತ್ಯ.
ಡಯಾಗ್ನೈಸ್ ಮಾಡುವ ಬಗೆ
ಸಾಮಾನ್ಯವಾಗಿ ಸ್ಪೈನಲ್ ಇನ್‌ಫೆಕ್ಷನ್‌ನ್ನು ಪತ್ತೆ ಮಾಡಲು ಮೊದಲು ಎಕ್ಸ್ ರೇ ಮಾಡಲಾಗುತ್ತದೆ. ಇನ್‌ಫೆಕ್ಷನ್ ಆದ 2 ಅಥವಾ 4 ವಾರಗಳಲ್ಲಿಯೂ ಎಕ್ಸ್ ರೇ ಸಾಧಾರಣವಾಗಿಯೇ ಇರುತ್ತದೆ ಮತ್ತು ಅದರಿಂದ ಇನ್‌ಫೆಕ್ಷನ್ ಪತ್ತೆಯಾಗುವ ಸಂಭವ ಕಡಿಮೆ ಇರುತ್ತದೆ. ಹಾಗಾದಾಗ ಅಡಿಶನಲ್ ಇಮೇಜಿಂಗ್ ಸ್ಟಡೀಸ್ ಮಾಡಬೇಕಾಗುತ್ತದೆ. ಎಂ.ಆರ್.ಐ ಸಹ ಅಗತ್ಯವಾಗಬಹುದು. ಅದರಿಂದ ಇನ್‌ಫೆಕ್ಷನ್ ಆಗಿರುವ ಭಾಗದ ವಿಶುಲೈಸೇಶನ್ ಸುಲಭವಾಗುತ್ತದೆ.
ಇದಲ್ಲದೆ ಲ್ಯಾಬ್‌ಟೆಸ್ಟ್ ಸಹ ಮಾಡಿಸಬೇಕಾಗುತ್ತದೆ. ಇದರಲ್ಲಿ ಇನ್‌ಫ್ಲಮೇಟರಿ ಮಾರ್ಕರ್ಸ್ ಹೆಚ್ಚಿನ ಪ್ರಯೋಜನಕಾರಿಯಾಗಿರುತ್ತವೆ. ಇವು ಇತರೆ ನಾನ್ ಇನ್‌ಫೆಕ್ಶಿಯಸ್ ಪೆಥಾಲಜಿಯಲ್ಲಿ ಅಷ್ಟಾಗಿ ಹೆಚ್ಚಿನ ಮಟ್ಟದಲ್ಲಿರುವುದಿಲ್ಲ.
ಇನ್‌ಫೆಕ್ಷನ್‌ಗೆ ಕಾರಣವಾದ ಸೂಕ್ಷ್ಮ ಜೀವಾಣುಗಳನ್ನು ಪತ್ತೆ ಮಾಡಲು ಬ್ಲಡ್ ಕಲ್ಚರ್ ಸ್ಟಡಿ ಮಾಡಿಸಲಾಗುತ್ತದೆ. ಶೇ.50ರಷ್ಟು ಪ್ರಕರಣಗಳಲ್ಲಿ ಬ್ಲಡ್ ಕಲ್ಚರ್‌ನ ಫಲಿತಾಂಶ ಪಾಸಿಟಿವ್ ಆಗಿಯೇ ಇರುತ್ತದೆ. ಕೆಲವು ರೋಗಿಗಳಲ್ಲಿ ಕಲ್ಚರ್‌ಗಾಗಿ ನೀಡಲ್ ಬಯಾಪ್ಸಿ ಅಥವಾ ಓಪನ್ ಸರ್ಜರಿಯನ್ನು ಮಾಡಬೇಕಾಗಿ ಬರುತ್ತದೆ. ಅದರಿಂದ ಇನ್‌ಫೆಕ್ಷನ್ ಹರಡದಂತೆ ಅಗತ್ಯವಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.
ಚಿಕಿತ್ಸೆ
ಸ್ಪೈನಲ್ ಇನ್‌ಫೆಕ್ಷನ್‌ನ ಚಿಕಿತ್ಸೆಯಲ್ಲಿ ಹೆಚ್ಚಾಗಿ ಸ್ನಾಯುಗಳ ಮೂಲಕ ಆ್ಯಂಟಿಬಯಾಟಿಕ್ಸ್ ನೀಡಲಾಗುತ್ತದೆ. ಅದಲ್ಲದೆ, ಟ್ರೇಸಿಂಗ್‌ಮಾಡಿಸಲು ಮತ್ತು ರೆಸ್ಟ್ ಪಡೆಯಲು ಸಲಹೆ ನೀಡಲಾಗುತ್ತದೆ.
ಇನ್‌ಫೆಕ್ಷನ್‌ನಿಂದಾಗಿ ವರ್ಟಿಬ್ರಲ್ ಡಿಸ್ಕ್ ನಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಿಲ್ಲ. ಬ್ಯಾಕ್ಟೀರಿಯಾದ ಉಪಸ್ಥಿತಿಯಿಂದಾಗಿ ಆ್ಯಂಟಿ ಬಯಾಟಿಕ್ ಔಷಧ ಪ್ರಭಾವಿತ ಭಾಗದವರೆಗೆ ಸುಲಭವಾಗಿ ತಲುಪಲಾಗುವುದಿಲ್ಲ. ಹೀಗಾಗಿ ಸಾಮಾನ್ಯವಾಗಿ 6-8 ವಾರಗಳವರೆಗೆ ಐ.ವಿ. ಆ್ಯಂಟಿಬಯಾಟಿಕ್ ಟ್ರೀಟ್‌ಮೆಂಟ್‌ನ ಅಗತ್ಯ ಉಂಟಾಗುತ್ತದೆ.
ಇದಲ್ಲದೆ, ಇನ್‌ಫೆಕ್ಷನ್ ಕಡಿಮೆಯಾದಾಗ ಬೆನ್ನುಮೂಳೆಯ ಸ್ಟೆಬಿಲಿಟಿಯನ್ನು ಉತ್ತಮಪಡಿಸಲು ಬ್ರೇಕಿಂಗ್ ಮಾಡಿಸಲು ಸಲಹೆ ನೀಡಲಾಗುತ್ತದೆ. ಇಷ್ಟೆಲ್ಲ ಮಾಡಿಯೂ ಸಮಸ್ಯೆ ಉಳಿದಿದ್ದರೆ ಸರ್ಜಿಕಲ್ ಟ್ರೀಟ್‌ಮೆಂಟ್ ಅಗತ್ಯವಾಗುತ್ತದೆ.
ಇನ್‌ಫೆಕ್ಷನ್‌ನ್ನು ನಿವಾರಿಸಿ ನೋವಿನಿಂದ ಪಾರುಮಾಡಲು, ಬೆನ್ನುಮೂಳೆಯು ವಿಕಾರಗೊಳ್ಳುತ್ತಿರುವುದನ್ನು ತಡೆಯಲು ಮತ್ತು ನರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಜರಿ ಮಾಡಲಾಗುತ್ತದೆ. ಚಿಕಿತ್ಸೆಯ ಜೊತೆಗೆ ಅದರ ಪ್ರಭಾವ ಹೇಗಿದೆಯೆಂದು ತಿಳಿಯಲು ಕಾಲಕಾಲಕ್ಕೆ ಬ್ಲಡ್ ಟೆಸ್ಟ್ ಮತ್ತು ಎಕ್ಲ್ ರೇ ಮಾಡಿಸಬೇಕಾಗುತ್ತದೆ.
– ಡಾ. ಅರವಿಂದ್‌ಕುಲಕರ್ಣಿ