ಶಾಲೆಗೆ ಹೋಗೋದ್ರಿಂದ ಸ್ನೇಹಿತರು ಸಿಗುತ್ತಾರೆ. ಅವರ ಜೊತೆ ಆಟವಾಡಿಕೊಂಡು ಕಾಲ ಕಳೆಯಬಹುದು ಎಂದುಕೊಂಡು ಶಾಲೆಗೆ ಸೇರಿದ ಕೆಲವೇ ಮಕ್ಕಳಲ್ಲಿ ಇವರೂ ಒಬ್ಬರು. ಓದಿನಲ್ಲಿ ಆಸಕ್ತಿ ಇರಲಿಲ್ಲ. ಮನೆಯವರ ಬಲವಂತಕ್ಕೆ ಶಾಲೆಗೆ ಹೋಗೋ ಆಟ. ಅಲ್ಲೊಂದು ಪಾಠ. ಓದದೇ, ಹೋಂವರ್ಕ್‌ ಮಾಡದೇ ಟೀಚರ್ಸ್ ಹತ್ತಿರ ಬೈಸಿಕೊಳ್ಳುತ್ತಿದ್ದ ದಿನಗಳನ್ನು ಈಗ ನೆನೆದು ನಗುತ್ತಾರೆ. ಸ್ನೇಹಿತರೆಲ್ಲ ಒಟ್ಟಾಗಿ ಸೇರಿ ಇವರು ಕುಳಿತುಕೊಳ್ಳುತ್ತಿದ್ದ ಗಾಲಿ ಕುರ್ಚಿಯನ್ನು ತಳ್ಳುತ್ತ.... ಅಕ್ಕಪಕ್ಕದವರ ತೋಟಕ್ಕೆ ನುಗ್ಗಿ ಸೀಬೆ, ಮಾವು ಕೀಳುತ್ತಾ, ಸಿನಿಮಾ ನೋಡುತ್ತಾ, ಊರೂರು ತಿರುಗಾಡುತ್ತಾ ಇದ್ದದ್ದು ಇದೇ ಜೀವನವಾಗಿತ್ತು.

ಮನೆಯಲ್ಲೂ ಬಹಳ ಮುದ್ದಿನಿಂದ ಸಾಕಿದ್ದರು. ವಿದ್ಯೆಯಲ್ಲಿ ಆಸಕ್ತಿಯೂ ಇರಲಿಲ್ಲ. ತಲೆಗೆ ಹತ್ತಲೂ ಇಲ್ಲ. ಆದರೂ 10ನೇ ತರಗತಿಯಲ್ಲಿ ಹಿರಿಯರ ಬುದ್ಧಿವಾದಗಳಿಂದ ಶ್ರಮಪಟ್ಟು ಓದಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದು ಮಾತ್ರ ಸಾಧನೆಯೇ ಹೌದು. ಒಟ್ಟಿನಲ್ಲಿ ಬಾಲ್ಯವನ್ನು ತರಲೆ, ಚೇಷ್ಟೆ ಹಾಗೂ ಸ್ನೇಹಿತರೊಂದಿಗೆ ಕಳೆದ ನೆನಪುಗಳು ಈಗಿನವರೆಗೆ ಹಚ್ಚಹಸಿರು! ಹೌದು ಇವರೇ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ 70ರ ಹರೆಯದ ವಿಜಯಕುಮಾರಿ ಮುರಾರಪ್ಪ.

ಸವಾಲಾದ ಜೀವನಶೈಲಿ

70 ವರ್ಷಗಳಿಂದಲೂ ವೀಲ್‌ಚೇರ್‌ ಮೇಲೇ ಕಳೆದಿರುವ ಇವರ ಜೀವನಕ್ಕೊಂದು ಸವಾಲ್! 1949, ಸೆಪ್ಟೆಂಬರ್‌ರಂದು ಅನಂತಮತಿ ಹಾಗೂ ಮುರಾರಪ್ಪ ದಂಪತಿಗಳ 6 ಮಕ್ಕಳಲ್ಲಿ ಇವರೂ ಒಬ್ಬರಾಗಿ ಜನಿಸಿದರು. ಮನೆಯಲ್ಲಿ ಪ್ರೀತಿಯ ವಾತಾವರಣ, ಯಾವುದಕ್ಕೂ ಕೊರತೆಯಿಲ್ಲದ ಕುಟುಂಬ. ಬಡತನವನ್ನು ನೋಡೇ ಇಲ್ಲ!

ಮೂಲತಃ ಹಾಸನದವರಾದ ಇವರು ಬದುಕನ್ನು ಬಹಳ ಜಾಲಿಯಾಗೇ ಕಳೆದರು. ಅಂತಹ ಕಷ್ಟಗಳೇನೂ ಒದಗಿಲ್ಲ! ವರ್ಷದ ಮಗುವಿದ್ದಾಗ ಕಾಡಿದ ಜ್ವರಕ್ಕೆ ಮಹಾಮಾರಿ ಪೋಲಿಯೋ ಬಂದು ತಮ್ಮೆರಡೂ ಕಾಲುಗಳನ್ನು ಕಳೆದುಕೊಂಡು ಆಗಿಂದ ಈಗಿನರೆಗೂ ಗಾಲಿಕುರ್ಚಿಯಲ್ಲೇ ಜೀವನ ಸವೆಸುತ್ತಿದ್ದಾರೆ.

ಪೂರಕ ಪ್ರವೃತ್ತಿ

ಪಾಠಕ್ಕಿಂತ ಆಟಗಳಲ್ಲಿ ಹೆಚ್ಚು ಆಸಕ್ತಿ. ಸಣ್ಣವರಿದ್ದಾಗ ಕುಂಟೆಬಿಲ್ಲೆ ಆಡುತ್ತ ಬಚ್ಚಗಳನ್ನು ಮನೆಗಳಿಗೆ ಇವರು ಎಸೆದರೆ ಸ್ನೇಹಿತರು ಇವರ ಪರ ಆಡುತ್ತ ಸಂತಸಪಡುತ್ತಿದ್ದರು. ಬಾಲಿನ ಆಟ, ಟೆನಿಸ್‌ ಹೀಗೆ ಆಟದ ಕಡೆಗೆ ನಿಗಾ ಜಾಸ್ತಿ. ಇದೇ ಆಸಕ್ತಿಯಿಂದ ಮುಂದೊಂದು ದಿನ ವೀಲ್‌ಚೇರ್‌ ರನ್ನಿಂಗ್‌ ರೇಸ್‌ ಹಾಗೂ ಇದರ ಮೇಲೆ ಕೂತು ಆಡುವ ಹಲವು ಆಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತ ಸಾಧನೆಗೈದ ಅಪರೂಪದ ಮಹಿಳೆ! 750 ರೀತಿಯ ತಿಂಡಿಗಳು, 450 ಸ್ಪರ್ಧಿಗಳಿದ್ದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಅಮೆರಿಕಾ ಗೋಧಿ ಸಂಸ್ಥೆಗಳ ಒಕ್ಕೂಟದಲ್ಲಿ ಏರ್ಪಡಿಸಿದ್ದ ಗೋಧಿ ಖಾದ್ಯ ತಯಾರಿಕಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಇವರದು!

ಇವರ ಮಗದೊಂದು ಆಸಕ್ತಿ ತೋಟಗಾರಿಕೆ. ಹೂ ಹಣ್ಣುಗಳನ್ನು ಬೆಳೆಯೋದು, ಅವುಗಳಿಂದ ಅಲಂಕಾರಿಕ ಕೆಲಸಗಳನ್ನು ನಿರ್ವಹಿಸೋದು. ಹೀಗೆ ಮಾಡುತ್ತ ದೊಡ್ಡ ದೊಡ್ಡ ಹೂದೋಟಗಳಲ್ಲಿ ಇವರ ಕೈಚಳಕ ನೋಡಿದರೆ ಆಶ್ಚರ್ಯವಾಗುತ್ತದೆ. ಕಡೆಗೊಂದು ದಿನ ತೋಟಗಾರಿಕೆಯೇ ಮುಖ್ಯ ಕಾಯಕವಾಯಿತು. ತೋಟಗಾರಿಕೆಗೆ ಸಂಬಂಧಪಟ್ಟ ಹತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನಗಳನ್ನು ಪಡೆಯುತ್ತಾ ಬಂದರು. ಇಂದಿಗೂ ಇವರ ಉಸ್ತುವಾರಿಯಲ್ಲಿ ಹಲವಾರು ತೋಟಗಳು ಬೆಳೆಯುತ್ತಿವೆ, ಜನಮನಗಳಿಗೆ ಮನೋಲ್ಲಾಸ ನೀಡುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ