2004ರ ನಂತರ ಶೀತಲ್ ಸ್ಕೈ ಡೈವಿಂಗ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು. ಶೀತಲ್ ಇಂದಿನವರೆಗೂ 705 ಪ್ಯಾರಾಶೂಟ್‌ ಜಂಪ್‌ಗಳನ್ನು ಮಾಡಿದ್ದಾರೆ. ಇವೆಲ್ಲ ಜಂಪ್‌ಗಳನ್ನೂ ಆಕೆ 13,500 ಅಡಿ ಎತ್ತರಿದಿಂದ ಮಾಡಿದ್ದಾರೆ. ಕೆಲವನ್ನಂತೂ ಆಕೆ 18,000 ಅಡಿ ಎತ್ತರದಿಂದ (ಆಕ್ಸಿಜನ್‌ ಸಿಲಿಂಡರ್‌ ಸಮೇತ) ಹಾಗೂ ಮತ್ತೊಮ್ಮೆ 30,500 ಅಡಿ ಎತ್ತರದಿಂದ ಆಕ್ಸಿಜನ್‌ ಮಾಸ್ಕ್ ಸಮೇತ ದುಮುಕಿದ್ದಾರೆ.

ಇಷ್ಟು ಮಾತ್ರವಲ್ಲದೆ, ಶೀತಲ್ 8 ವಿಭಿನ್ನ ಬಗೆಯ ಏರ್‌ಕ್ರಾಫ್ಟ್ ಗಳಿಂದ ಬೇರೆ ಬೇರೆ ಸ್ಥಾನಗಳಿಂದ ಅಂದ್ರೆ ಉತ್ತರ ಧ್ರುವ    (ಆರ್ಕ್‌ಟಿಕ್‌) ಹಾಗೂ ದಕ್ಷಿಣ ಧ್ರುವ (ಅಂಟಾರ್ಕ್‌ಟಿಕ್‌), ಆಸ್ಟ್ರೇಲಿಯಾ, ಅಮೆರಿಕಾ, ಏಷ್ಯಾ, ಆಫ್ರಿಕಾ, ಯೂರೋಪ್‌ಗಳಲ್ಲಿ ಅಮೋಘ ಡೈವಿಂಗ್ಸ್ ಮಾಡಿದ್ದಾರೆ. ಆ ಮೂಲಕ ಆಕೆ  ಈಗಾಗಲೇ ಹಲವಾರು ಸಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದಿದ್ದಾರೆ.

ಶೀತಲ್ ಇದನ್ನೇ ಹವ್ಯಾಸವಾಗಿ ಇರಿಸಿಕೊಂಡು, ಫಿನ್‌ಲೆಂಡ್‌ನಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ವೈಭವ್ ರಾಣೆ ಜೊತೆ 2008ರಲ್ಲಿ ನೆಲದಿಂದ 600 ಅಡಿ ಎತ್ತರದಲ್ಲಿ ಹಾಟ್‌ ಏರ್‌ಬೆಲೂನ್‌ನಲ್ಲಿ ಮದುವೆ ಆದರು. ಇದು `ಲಿಮ್ಕಾ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ದಾಖಲಾಗಿದೆ. ಈಗ ಈಕೆ ಅವಳಿ ಮಕ್ಕಳ ತಾಯಿ. 2011ರಲ್ಲಿ ಈಕೆಗೆ 'ಪದ್ಮಶ್ರೀ' ಪ್ರಶಸ್ತಿಯೂ ಲಭಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಶೀತಲ್ ಥೈಲೆಂಡ್‌ನ ಪಟಾಯಾದಲ್ಲಿ, ಮಹಾರಾಷ್ಟ್ರದ ರಂಗುರಂಗಿನ ನೌವಾರಿ ಸೀರೆ ಧರಿಸಿ, 13,000 ಅಡಿ ಎತ್ತರದಿಂದ ದುಮುಕಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು. ಭಾರತೀಯ ನಾರಿ, ಕೇವಲ ದೈನಂದಿನ ಕೆಲಸಗಳಿಗೆ ಮಾತ್ರ ಸೀರೆ ಉಡುವುದಲ್ಲ, ಸ್ಕೈ ಡೈವಿಂಗ್‌ನಂಥ ರೋಮಾಂಚಾರಿ ಸಾಹಸ ಕ್ರೀಡೆಗಳಲ್ಲೂ ಸೈ ಎನಿಸಬಲ್ಲಳು ಎಂಬುದನ್ನು ವಿಶ್ವಕ್ಕೆ ತೋರಿಸಿ ನಿರೂಪಿಸಿದ್ದಾರೆ. 18 ಮೊಳದೆ ಸೀರೆಯುಟ್ಟು ಅತ್ಯಂತ ಕ್ಯಾಶ್ಯುಯೆಲ್ ಆಗಿ ಗಗನದಿಂದ ಭೂಮಿಗೆ ದುಮುಕಿದಾಗ, ವಿದೇಶೀಯರೆಲ್ಲ ಬೆರಗಾಗಿ, ಭಾರತೀಯ ಸೀರೆ, ಅದನ್ನು ಉಡುವ ಪರಿಯನ್ನೂ ಶ್ಲಾಘಿಸಿದರಂತೆ!

ಈ ಫೀಲ್ಡ್ ಗೆ ಬರಲು ನಿಮಗೆ ಪ್ರೇರಣೆ.....?

ನನಗೆ ಬಾಲ್ಯದಿಂದಲೇ ಏನಾದರೂ ಅಸಾಧ್ಯವಾದ ಸಾಹಸಕಾರ್ಯ ಕೈಗೊಳ್ಳಬೇಕೆಂಬ ಹಂಬಲವಿತ್ತು. ನಾನು ಮಿಲಿಟರಿ ಸೇರುವ ಪ್ರಯತ್ನ ಸಹ ಮಾಡಿದೆ. 12ನೇ  ತರಗತಿ ಓದುವಾಗ, ನಮ್ಮ ದೇಶದಲ್ಲಿ ಪಿಯು ಮುಗಿಸಿದಾಗ ಮಾತ್ರ ಹೆಂಗಸರು ಮಿಲಿಟರಿ ಸೇರಲು ಸಾಧ್ಯ ಎಂದು ತಿಳಿಯಿತು. ಹಾಗೆಯೇ ನಾನು ಸ್ನಾತಕ ಪದವಿ ಪಡೆದ ನಂತರವೇ ಈ ಫೀಲ್ಡ್ ಗೆ ಬರಲು ಯತ್ನಿಸಿದೆ. ಇದಕ್ಕೆ ಮೊದಲು ನನಗೆ ಕಲಾವಿದೆ ಆಗುವ ಆಸೆಯಿತ್ತು. ನಾನು ಉತ್ತಮ ಪೇಂಟಿಂಗ್ಸ್ ಸಹ ಮಾಡಿದ್ದೇನೆ. ಲತಾಜಿ, ಸಚಿನ್‌ ನನಗೆ ಮೂಲ ಪ್ರೇರಣೆ ನೀಡಿದರು ಎನ್ನಬಹುದು. ಅವರಂತೆ ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಛಲ ಮೂಡಿತು.

ನನ್ನ ಗೆಳತಿಯ ಅಣ್ಣ  ವಿದೇಶಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಮ್ ಪೇರ್ಸೆಸ್‌ ಟ್ರೇನಿಂಗ್‌ ನೀಡುತ್ತಾರೆ. ಅವರು ಅಲ್ಲಿ ಸ್ಕೈ ಡೈವಿಂಗ್‌ನಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಅದನ್ನು ನೋಡಿ ನಾನು ಈ ಫೀಲ್ಡ್ ಗೆ ಬಂದೆ. 21ರ ಹರೆಯದಲ್ಲಿ ನಾನು ಉತ್ತರ ಧ್ರುವದಿಂದ ತರಬೇತಿ ಇಲ್ಲದೆಯೇ ಜಂಪ್‌ ಮಾಡಿ ಯಶಸ್ವಿಯಾದೆ. ಹೀಗಾಗಿ ಈ ದಿಶೆಯಲ್ಲಿ ಮುಂದುವರಿಯಲು ಸಾಧ್ಯವಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ