ಮಾನ್‌ಸೂನಿನ ಮಳೆ ಬೇಸಿಗೆಯ ಧಗೆಯನ್ನು ಓಡಿಸಿ ಹಿತಾನುಭವ ನೀಡುತ್ತದೆ. ಆದರೆ ಈ ಸೀಸನ್‌ನಲ್ಲಿ ಚಿಂತೆಗಳೇನೂ ಕಡಿಮೆಯಲ್ಲ. ಎಲ್ಲೆಲ್ಲೂ ನೀರು ತುಂಬಿಕೊಳ್ಳುವುದರಿಂದ ಹೊರಗೆ ಕೆಲಸಕ್ಕೆಂದು ಹೊರಟರೂ ಟ್ರಾಫಿಕ್ ಜಾಮ್ ನಲ್ಲಿ ಸಿಲುಕುವಿಕೆ, ಮಳೆಯಲ್ಲಿ ನೆನೆದು ನೆಗಡಿ, ಕೆಮ್ಮು ಬರಿಸಿಕೊಳ್ಳುವುದು, ಬಟ್ಟೆಗಳಿಗೆ ಕಲೆ ತಗುಲುವುದು……. ಇತ್ಯಾದಿ ಇದರಿಂದ ತಪ್ಪಿಸಿಕೊಳ್ಳುವುದಂತೂ ಅಸಾಧ್ಯ ಆದರೆ ಈ ಸೀಸನ್‌ಗೆ ತಕ್ಕಂತೆ ಉಡುಗೆ ಧರಿಸಿ ತೊಂದರೆಗಳನ್ನು ಖಂಡಿತಾ ಕಡಿಮೆ ಮಾಡಿಕೊಳ್ಳಬಹುದು.
ಅವಾಯ್ಡ್ ಜೀನ್ಸ್ ಕ್ವಾರ್ಡ್ರಾಯ್
ಇದು ನಿಮ್ಮ ಅಚ್ಚುಮೆಚ್ಚಿನ ಉಡುಗೆಯೇ ಇರಬಹುದು, ಆದರೆ ಇದನ್ನು ಧರಿಸಿ ನೀವು ಮಳೆಯಲ್ಲಿ ನೆಂದುಬಿಟ್ಟರೆ, ಆಗ ಅದು ನಿಮಗೆ ಹೆಚ್ಚಿನ ಹಿಂಸೆ ನೀಡುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಬೇಗ ಒಣಗುವುದೂ ಇಲ್ಲ. ಮಳೆಗಾಲದ ವಾತಾವರಣದಲ್ಲಿ ಒಣಗಲು 2-3 ದಿನಗಳಾದರೂ ಬೇಕು. ಹಾಗೇ ಮೈಗಂಟಿದ ಒದ್ದೆ ಬಟ್ಟೆಯೊಡನೆ ನೀವು ಟ್ರಾಫಿಕ್‌ನಲ್ಲಿ ಸಿಲುಕಿ ಮನೆಗೆ ಬರುವಷ್ಟರಲ್ಲಿ ನಿಮಗೆ ಸಾಕಪ್ಪ ಸಾಕು ಎನಿಸಿ ಸಿಡುಕಲು ತೊಡಗುವಿರಿ. ಹಾಗೇ ಇದು ನಿಮಗೆ ಬೇಗ ಶೀತ ಆಗುವಂತೆ ಮಾಡುತ್ತದೆ. ಜೊತೆಗೆ ಫಂಗಲ್, ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ಸಹ ಆಗಬಹುದು.
ಶಾರ್ಟ್ಸ್ ಕೇಪ್ರಿ ಆರಿಸಿ
ಈ ಸೀಸನ್‌ಗೆ ಶಾರ್ಟ್ಸ್, ಕೇಪ್ರೀಸ್, ಸ್ಕರ್ಟ್ಸ್ ಅತಿ ಅವಶ್ಯಕ ಎನ್ನಬಹುದು. ಇದು ನಿಮ್ಮನ್ನು ಕೂಲ್ ಕಂಫರ್ಟೆಬಲ್ ಆಗಿ ಇಡುವುದು ಮಾತ್ರವಲ್ಲದೆ, ಮಳೆಯಲ್ಲಿ ಸಿಕ್ಕಿಕೊಂಡರೆ ಹೆಚ್ಚು ಅನಾನುಕೂಲ ಎನಿಸುವುದಿಲ್ಲ. ಕೇಪ್ರಿ ಮೈಗೆ ಅಂಟಿಕೊಳ್ಳುವಂತೆ ಟೈಟ್‌ಆಗಿರಬಾರದು ಎಂಬುದರತ್ತ ಗಮನಕೊಡಿ. ಇದು ಸಾಕಷ್ಟು ಲೂಸ್‌ಆಗಿದ್ದರೆ ಒಳ್ಳೆಯದು, ಆಗ ಸುಲಭವಾಗಿ ಒಣಗುತ್ತದೆ. ಶಾರ್ಟ್ಸ್ ಕೂಡ ಫಿಟ್‌ಆಗುವಂತಿದ್ದು, ಮಳೆ ನೀರು ರಸ್ತೆಯಲ್ಲಿ ಚಲಿಸುವಾಗ ಅದು ಎರಚುವಂತಿರಬಾರದು. ರಿಂಕಲ್ ಫ್ರೀ ಆಗಿರುವ ಪಾಲಿಯೆಸ್ಟರ್, ಲೈಕ್ರಾ ಆರಿಸಿ. ಇವು ಕಾಟನ್‌ಗಿಂತಲೂ ಬೇಗ ಒಣಗುತ್ತವೆ.
ಲೈಟ್ ಚೆಕರ್ಡ್ ಫಾರ್ಮ್ ಲುಕ್ಸ್
ಈ ಸೀಸನ್‌ನಲ್ಲಿ ಆರಾಮದಾಯಕ, ಹಗುರವಾದ ಹಾಫ್ ಸ್ಲೀವ್ ಫಾರ್ಮ್ ಶರ್ಟ್ಸ್ ಟ್ರೆಂಡಿ ಎನಿಸಿದೆ. ಇದು ಆಫೀಸ್ ಲುಕ್ಸ್ ಗೆ ಪರ್ಫೆಕ್ಟ್ ಎನಿಸಿದೆ. ಯಾರು ಆಫೀಸ್‌ನಲ್ಲಿ ಟೀಶರ್ಟ್ ಧರಿಸಲಾಗದೋ, ಅಂಥವರಿಗೆ ಹಾಫ್ ಸ್ಲೀವ್ ಫಾರ್ಮ್ ಶರ್ಟ್ ಬೆಟರ್‌ಚಾಯ್ಸ್ ಆಗಿದೆ.
ಪಾರದರ್ಶಕ ಉಡುಗೆ ಬೇಡ
ನೀವು ಪಾರದರ್ಶಕ ಟಾಪ್ ಯಾ ಕುರ್ತಾ ಧರಿಸಿದರೆ, ಮಳೆ ನಿಮ್ಮನ್ನು ನಾಚಿಕೆಯಿಂದ ಮುದುಡುವಂತೆ ಮಾಡುತ್ತದೆ. ಆದ್ದರಿಂದ ನೆನಪಿಡಿ, ಮಳೆಯಲ್ಲಿ ಸದಾ ಸಾಲಿಡ್‌ಡಾರ್ಕ್ ಕಲರ್ಡ್ ಟಾಪ್ಸ್ ಆರಿಸಬೇಕು. ಇಂಥ ಡ್ರೆಸ್ ಧರಿಸಿ ನೀವು ಆರಾಮವಾಗಿ ಮಳೆಯನ್ನು ಎಂಜಾಯ್ ಮಾಡಬಹುದು. ಸಾಲಿಡ್ ಡ್ರೆಸ್ ಮೆಟೀರಿಯಲ್ ಧರಿಸು ಮತ್ತೊಂದು ಪ್ಲಸ್ ಪಾಯಂಟ್ ಎಂದರೆ, ನೀವು ಮಳೆಯಲ್ಲಿ ನೆನೆದರೂ ಸಹ, ಈ ಬಟ್ಟೆಗಳು ಬೇಗ ಒಣಗಬಲ್ಲವು. ಆಗ ಅಂಡರ್ ಶರ್ಟ್ ಧರಿಸಲೇಬೇಕು ಅಂತೇನಿಲ್ಲ.
ತೆಳು ವಿಂಡ್ ಚೀಟರ್ಸ್ ಇರಲಿ
ನೀವು ಸದಾ ನಿಮ್ಮ ಬ್ಯಾಗಿನಲ್ಲಿ ಒಂದು ಅಲ್ಟ್ರಾ ವೈಟ್ ವಿಂಡ್ ಚೀಟರ್ ಇಟ್ಟುಕೊಳ್ಳಬೇಕು. ಮಳೆ ಬರುವ ಸಮಯದಲ್ಲಿ ನೀವು ಇದನ್ನು ಸುಲಭವಾಗಿ ಧರಿಸಬಹುದು. ನಿಮ್ಮ ಬಟ್ಟೆಗಳನ್ನು ಇದು ಆದಷ್ಟೂ ತೋಯದಂತೆ, ಮಳೆ ನೀರಿನ ರಾಡಿ ಹಾರದಂತೆ ಕಾಪಾಡುತ್ತದೆ. ನಿಮಗೆ ಇದ್ದಕ್ಕಿದ್ದಂತೆ ಹೆಚ್ಚು ಥಂಡಿ ಎನಿಸಿದರೆ, ಇದು ನಿಮ್ಮನ್ನು ಬೆಚ್ಚಗಿಡಬಲ್ಲದು.
ಆರಾಮದಾಯಕ ಫುಟ್‌ವೇರ್
ರಸ್ತೆ ಮೇಲೆ ಜಾರಿ ಬೀಳದಂಥ, ರಸ್ತೆಯ ಕೆಸರಿನಿಂದ ಪಾರಾಗುವಂಥ ಚಪ್ಪಲಿ ಧರಿಸಿ. ವಾಟರ್ ಪ್ರೂಫ್ ಲೆದರ್ ಸ್ಲಿಪ್ ಆನ್ಸ್, ಫ್ಲಾಟರ್ಸ್, ಸ್ನೀಕರ್ಸ್ ಇತ್ಯಾದಿ ಈ ಸೀಸನ್‌ಗೆ ಬೆಸ್ಟ್. ಇದು ನಿಮ್ಮನ್ನು ಮಳೆಯಿಂದ ಸುರಕ್ಷಿತವಾಗಿ ಇಡುತ್ತದೆ, ಸುದೀರ್ಘ ಬಾಳಿಕೆ ಬರುತ್ತದೆ. ಹೀಗಾಗಿ ಮಳೆ ನಿಲ್ಲುವವರೆಗೂ ನಿಮ್ಮ ಫಾರ್ಮ್ ಶೂ, ಸ್ಯಾಂಡಲ್ಸ್, ಚಪ್ಪಲಿಗಳಿಗೆ ವಿದಾಯ ಹೇಳಿ.
– ಮೋನಿಕಾ