ಎಷ್ಟೋ ಸಲ ಫ್ಯಾಷನ್‌ ಡಿಸೈನರ್ಸ್‌ ತಮ್ಮ ರಚನೆ ಪ್ರಸ್ತುತಪಡಿಸುವಾಗ, ಅದರಲ್ಲಿ ಆಫೀಸ್‌ ಮತ್ತು ಸ್ಪೆಷಲ್ ಕಾರ್ಪೊರೇಟ್‌ಮೀಟಿಂಗ್‌ ಡ್ರೆಸೆಸ್‌ನ್ನು ಶಾಮೀಲುಗೊಳಿಸುತ್ತಾರೆ. ಆಗ ಮೂಡುವ ಪ್ರಶ್ನೆ ಎಂದರೆ ಇಂದಿನ ಮಹಿಳೆಯರು ಆಫೀಸ್‌ ವೇರ್‌ ಕುರಿತು ಎಷ್ಟು ಜಾಗರೂಕರು….?

ಆಫೀಸ್‌ನಲ್ಲಿ ಇವರುಗಳು ಫಾರ್ಮಲ್ ಗೆಟಪ್‌ ಕ್ಯಾರಿ ಮಾಡುವುದು ಎಷ್ಟು ಸರಿ? ಕ್ಯಾಶುಯೆಲ್‌ ಫಾರ್ಮಲ್ ಡ್ರೆಸೆಸ್‌ ನಡುವಿನ ವ್ಟತ್ಯಾಸವನ್ನು ಸರಿಯಾಗಿ ಅರಿತಿರುವರೆ? ಮಹಿಳೆಯರು ತಮ್ಮ ಕ್ಯಾಶುಯೆಲ್ ‌ಡ್ರೆಸೆಸ್‌ ಕುರಿತಾಗಿ ವಹಿಸುವ ಕಾಳಜಿಯನ್ನು ಫಾರ್ಮಲ್ ಡ್ರೆಸೆಸ್‌ ಕಡೆ ತೋರಿಸುತ್ತಾರೆಯೇ? ಯಾವ ಕಲರ್‌ ಸ್ಟೈಲ್ ಆಫೀಸಿಗೆ ಉತ್ತಮ ಎಂಬುದು ಗೊತ್ತಿದೆಯೇ?

ಇಂಥ ಇನ್ನೆಷ್ಟೋ ಪ್ರಶ್ನೆಗಳ ಕುರಿತಾಗಿ ಬೆಂಗಳೂರಿನ ಹಲವಾರು ಡ್ರೆಸ್‌ ಡಿಸೈನರ್ಸ್‌ ಜೊತೆ ಚರ್ಚಿಸಿದಾಗ, ಅವರು ತಿಳಿಸಿದ ವಿಷಯ ಹಾಗೂ ಫಾರ್ಮಲ್ ವೇರ್‌ ಕುರಿತ ಮಹತ್ವಪೂರ್ಣ ಮಾಹಿತಿಗಳು ಈ ಕೆಳಗಿನಂತಿವೆ.

ನಿಮ್ಮ ಫಾರ್ಮಲ್  ಔಟ್‌ಫಿಟ್ಸ್ ಕುರಿತಾಗಿ ತಿಳಿದುಕೊಳ್ಳಿ : ನಿಮ್ಮ ಡ್ರೆಸ್‌ ಮತ್ತು ಆತ್ಮವಿಶ್ವಾಸ ಸಾಮಾನ್ಯವಾಗಿ ಜನರಿಗೆ ಡ್ರೆಸ್‌ಇರುವುದೇ ನಮ್ಮ ದೇಹವನ್ನು ಮುಚ್ಚಿಡಲು ಹಾಗೂ ನಮ್ಮನ್ನು ಸುಂದರವಾಗಿ ತೋರ್ಪಡಿಸಲು ಎನಿಸುತ್ತದೆ. ಆದರೆ ಇದು ಕೇವಲ ಅರ್ಧ ಸತ್ಯ. ಉಳಿದ ಅರ್ಧ ಭಾಗದ ಸತ್ಯವೆಂದರೆ ನಮ್ಮ ಉಡುಗೆ ತೊಡುಗೆಗಳು ನಮ್ಮ ಆತ್ಮವಿಶ್ವಾಸ ಮತ್ತು ಬೋಲ್ಡ್ ನೆಸ್‌ಗೆ ಆಳವಾದ ಸಂಬಂಧ ಹೊಂದಿದೆ. ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರು ಎಲ್ಲೂ ಸುರಕ್ಷಿತರಲ್ಲ. ಹಾಗಿರುವಾಗ ಅವರ ಉಡುಗೆ ಯಾವ ರೀತಿ ಅವರ ವ್ಯಕ್ತಿತ್ವವನ್ನು ಬೋಲ್ಡ್ ಮತ್ತು ಆತ್ಮವಿಶ್ವಾಸ ತುಂಬಿರುವಂತೆ ತೋರಿಸುವ ರೀತಿಯಲ್ಲಿ ಅವರಿಗೆ ಸಹಾಯ ಮಾಡಬಹುದು, ಇದನ್ನು ತಿಳಿಯುವುದು, ಅರಿಯುವುದು ಬಹಳ ಅಗತ್ಯ. ಉಡುಗೆ ಮಾಧ್ಯಮದ ಮೂಲಕ ನೀವು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ಉದಾ : ನೀವು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಬಹುತೇಕ ಕಂಪನಿಗಳು ಕೇವಲ ಫಾರ್ಮಲ್ ಡ್ರೆಸೆಸ್‌ ಮಾತ್ರ ಧರಿಸಲು ಹೇಳುತ್ತಾರೆ. ಮಹಿಳೆಯರು ಫಾರ್ಮಲ್ ಲುಕ್‌ ಕ್ಯಾರಿ ಮಾಡುವಾಗ, ನೋಡುವವರಿಗೂ ಸಹ, ಈ ಮಹಿಳೆಯಲ್ಲಿ ಏನೋ ವಿಶೇಷವಿದೆ ಎನಿಸುತ್ತದೆ. ಆಗ ಅವಳಿಗೆ ತನ್ನಲ್ಲಿ ಹಿಂದಿಗಿಂತ ಹೆಚ್ಚಿನ ಆತ್ಮವಿಶ್ವಾಸ ತುಂಬಿಕೊಂಡಿರುವ ಹಾಗೆ ಭಾಸವಾಗುತ್ತದೆ. ಅವಳಲ್ಲಿ ಬೋಲ್ಡ್ ನೆಸ್‌ ಕೂಡ ಹೆಚ್ಚಿರುತ್ತದೆ, ಆಗ ಬೇರೆ ಯಾರಿಗೂ ಆಕೆ ಜೊತೆ ಅನಗತ್ಯ ಟೀಕೆ ಮಾಡಲು ಆಗದು.

ಒಂದು ಪಕ್ಷ ನೀವು ನಿಮ್ಮ ಆಫೀಸ್‌ಗೆ ಫಾರ್ಮಲ್ ಡ್ರೆಸ್‌ ಧರಿಸಿ ಹೋಗದಿದ್ದರೆ, ಒಮ್ಮೆ ಟ್ರೈ ಮಾಡಿನೋಡಿ. ಒಂದು ಸಲ ತ್ರೀ ಪೀಸ್‌ ಫಾರ್ಮಲ್ ವೇರ್‌ ಕ್ಯಾರಿ ಮಾಡಿ. ನೀವು ಇಂಥ ತ್ರೀ ಪೀಸ್‌ ಧರಿಸಿದಾಗ ಕೋಟ್‌, ಪ್ಯಾಂಟ್‌ ಮತ್ತು ಶರ್ಟ್‌ ಜೊತೆಗೆ ಟೈ ಕೂಡ ಇದ್ದುಬಿಟ್ಟರೆ, ನಿಮಗೆ ಆತ್ಮವಿಶ್ವಾಸ ತುಂಬಿ ಬರುತ್ತದೆ. ಜೊತೆಗೆ ಆಫೀಸ್‌ನಲ್ಲಿ ನಿಮ್ಮ ಜೊತೆ ಡೀಲ್ ‌ಮಾಡುವವರ ದೃಷ್ಟಿಕೋನ ನಿಮಗಾಗಿ ಬದಲಾಗುತ್ತದೆ. ಆಗ ಅವರು ಹೆಚ್ಚು ಆದರದಿಂದ ನಿಮ್ಮೊಡನೆ ವರ್ತಿಸುತ್ತಾರೆ. ಸ್ವತಃ ನಿಮಗೇ ನಿಮ್ಮ ವ್ಯಕ್ತಿತ್ವ ಮೊದಲಿಗಿಂತ ಹೆಚ್ಚು ಉನ್ನತವಾದಂತೆ ಅನಿಸತೊಡಗುತ್ತದೆ. ಹಾಗಾಗಲು ಕಾರಣ, ಯಾವುದೇ ಡ್ರೆಸ್‌ ಇರಲಿ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ನೀವು ಆ ಡ್ರೆಸ್‌ನ್ನು ಇಷ್ಟಪಟ್ಟು ನಿಮ್ಮದಾಗಿಸಿಕೊಂಡಾಗ, ನಿಮ್ಮ  ವ್ಯಕ್ತಿತ್ವ ಇನ್ನಷ್ಟು ಅರಳುತ್ತದೆ. ಹಾಗಾಗಿ ಆಧುನಿಕ ಉಡುಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿ ಒಂದು ವಿಶಿಷ್ಟ ಐಡೆಂಟಿಟಿ ನೀಡುತ್ತದೆ.

ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸಬೇಕು?

ಎಷ್ಟೋ ಹೆಂಗಸರಿಗೆ ಈ ವಿಷಯ ಗೊತ್ತೇ ಆಗುವುದಿಲ್ಲ. ಅದರಲ್ಲೂ ಮುಖ್ಯವಾಗಿ ಕಾರ್ಪೊರೇಟ್‌ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದರೆ ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಿಕೊಳ್ಳಬೇಕು ಎಂಬುದೇ ಸಮಸ್ಯೆ ಆಗಿರುತ್ತದೆ. ಎಷ್ಟೋ ಸಲ ಅವರು ಬೇರೆಯವರನ್ನು ಕಾಪಿ ಮಾಡುತ್ತಾರೆ. ಅಂಥವರಿಗೆ ಸಲಹೆ ಎಂದರೆ :

ನೀವು ಯಾವಾಗ ಆಫೀಸ್‌ಗೆ  ಡ್ರೆಸೆಸ್‌ ಬೇಕು ಎಂದು ಖರೀದಿಸಿದರೂ ಡಾರ್ಕ್‌ ಕಲರ್ಸ್‌ನ್ನೇ ಆರಿಸಿ. ನೀವು ಎಲ್ಲೇ ಕೆಲಸ ಮಾಡಲಿ, ನಿಮ್ಮ ಕೆಲಸದ ಕಡೆ ನೀವು ಹೆಚ್ಚು ಜವಾಬ್ದಾರರಾಗಿರುತ್ತೀರಿ. ಹಾಗಾಗಿ ಒಬ್ಬ ನಿಷ್ಠಾವಂತ ಸಿಬ್ಬಂದಿ ತರಹ ಕಾಣಿಸುವುದೂ ಮುಖ್ಯ. ಹೀಗಾಗಿ ಡಾರ್ಕ್‌ ಕಲರ್ಸೇ ಸರಿ.

ಕಲರ್ಸ್‌ ಜೊತೆ ನೆನಪಿಡಬೇಕಾದ ಮತ್ತೊಂದು ಮುಖ್ಯ ವಿಷಯವೆಂದರೆ ನಿಮ್ಮ ಡ್ರೆಸ್‌ನಲ್ಲಿ ಕನಿಷ್ಠ ಡೀಟೇಲಿಂಗ್‌ ಇರಬೇಕು.

ನೀವು ಯಾವ ಡ್ರೆಸ್‌ ಆರಿಸಿದರೂ ಸರಿ, ಅದನ್ನು ಆತ್ಮವಿಶ್ವಾಸದಿಂದ ಧರಿಸಿರಿ. ಆ ಡ್ರೆಸ್‌ ಧರಿಸಿದ ಕಾರಣ ನಿಮ್ಮ ಮುಖದಲ್ಲಿ ಯಾವುದೇ ಸಂಕೋಚ, ಕಸಿವಿಸಿ ಇರಬಾರದು. ಏಕೆಂದರೆ ಈ ಸಂಕೋಚವೇ ನಿಮ್ಮ ವ್ಯಕ್ತಿತ್ವವನ್ನು ಬಹಳ ಡೌನ್‌ ಮಾಡಬಹುದು.

ನೀವು ಆರಿಸಿರುವ ಡ್ರೆಸ್‌, ವೆರಿ ಕಂಫರ್ಟೆಬಲ್ ಆಗಿರಬೇಕು. ಈ ಡ್ರೆಸ್‌ ಧರಿಸಿದ್ದರಿಂದ ನೀವು ಎಂದಿನಂತೆ ಸಹಜವಾಗಿ ಫೀಲ್‌ಆಗುತ್ತಿಲ್ಲ ಎನಿಸಿದರೆ, ಅಂಥ ಸಣ್ಣ ಅಭಿಪ್ರಾಯ ಬಂದರೂ ಖಂಡಿತಾ ಅಂಥದ್ದನ್ನು ಧರಿಸಲೇಬೇಡಿ. ಆಗ ಬೇರೆ ಚಾಯ್ಸ್ ನೋಡಿ. ಇಂಥ ಡ್ರೆಸ್‌ ಧರಿಸಿ ಅದು ಸಹಜವಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲದಿದ್ದರೆ, ದಿನವಿಡೀ ನೀವು ಕಷ್ಟಪಡುತ್ತೀರಿ ಹಾಗೂ ಅದರ ದುಷ್ಪರಿಣಾಮ ನಿಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ.

ನೀವು ಆಫೀಸ್‌ಗೆ ಶರ್ಟ್‌ ಧರಿಸಿ ಹೊರಡುತ್ತೀರಾ? ಅದನ್ನು ಅಗತ್ಯವಾಗಿ ಟಕ್‌ ಮಾಡಿ, ತುಸು ಹೊರಗೆ ಇಣುಕುವಂತೆ ಮಾಡಿ. ಶರ್ಟ್‌ನ್ನು  ಯಾವ ತರಹ ಹೊರಗೆ ಬಿಡಬೇಕೆಂದರೆ, ನಿಮ್ಮ ಬೆಲ್ಟ್ ಲೈನ್‌ ಹೊರಗೆ ಕಾಣಿಸುವಂತಿರಬಾರದು. ನೀವು ಟ್ರೌಸರ್‌ಶರ್ಟ್‌ ಧರಿಸುತ್ತೀರಾದರೆ, ನಿಮ್ಮ ಬೆಲ್ಟ್ ಹೊರಗೆ ಕಾಣಿಸಲೇಬಾರದು. ನೀವು ಶರ್ಟ್‌ನ್ನು ಟಕ್‌ ಮಾಡದೆ ಹೊರಗೆ ಇಳಿಬಿಡಲು ಬಯಸಿದರೆ, ಆಗ ಶರ್ಟ್‌ನ ಉದ್ದಳತೆ ತುಂಬಾ ಗಿಡ್ಡ ಅಥವಾ ಜಾಸ್ತಿ ಆಗಬಾರದು. ಏಕೆಂದರೆ ಆಫೀಸ್‌ನಲ್ಲಿ ಓಪನ್‌ ಬಿಟ್ಟಿರುವ ಓವರ್‌ ಸೈಜ್‌ ಶರ್ಟ್‌ ಚೆನ್ನಾಗಿ ಕಾಣಿಸದು. ಆದ್ದರಿಂದ ಪರ್ಫೆಕ್ಟ್ ಫಿಟ್ಟಿಂಗ್‌ನ ಶರ್ಟ್‌ನ್ನೇ ಧರಿಸಿರಿ.

ಆಫೀಸ್‌ ವೇರ್‌ ಸ್ಕರ್ಟ್‌ನ್ನು ಸಹ ಆಫೀಸ್‌ನಲ್ಲಿ ಧರಿಸಬಹುದು. ಅದನ್ನು ನೀವು ಶರ್ಟ್‌ ಆಗಿ ಅಥವಾ ಫಾರ್ಮಲ್ ಟಾಪ್‌ ಆಗಿಯೂ ಬಳಸಿಕೊಳ್ಳಬಹುದು.

ಫಾರ್ಮಲ್ ಶರ್ಟ್ಸ್ ಗಾಗಿ ಬೆಸ್ಟ್ ಕಲರ್ಸ್

ಇದಕ್ಕಾಗಿ ಬೆಸ್ಟ್ ಕಲರ್‌ ಎಂದರೆ ಬಿಳುಪು. ನಿಮ್ಮ ಬಳಿ 1-2 ಬಿಳಿ ಶರ್ಟ್ಸ್ ಇರಬಹುದು. ಇದರ ಹೊರತಾಗಿ 1-1 ಕಪ್ಪು, ಗ್ರೇ, ನೇವಿಬ್ಲೂ, ಆಲಿವ್ ‌ಗ್ರೀನ್‌ ಶರ್ಟ್ಸ್ ನಿಮ್ಮ ವಾರ್ಡ್‌ರೋಬ್‌ನಲ್ಲಿರಲಿ. ಇತ್ತೀಚೆಗೆ  ಪೇಸ್ಟಲ್ ಶೇಡ್ಸ್ ಸಹ ಫಾರ್ಮಲ್ಸ್ ನಲ್ಲಿ ಫ್ಯಾಷನ್‌ ಎನಿಸಿದೆ.

ಆಫೀಸ್‌ಗೆ ಯಾವುದು ಸರಿಯಲ್ಲ?

ಟೀ ಶರ್ಟ್‌, ಫ್ಯಾನ್ಸಿ ಟಾಪ್‌, ಡೆನಿಮ್ ಯಾ ಇತರೆ ಫ್ಯಾಬ್ರಿಕ್ಸ್ ನಿಂದ ತಯಾರಾದ ಸಣ್ಣ ಸ್ಕರ್ಟ್ಸ್, ಮಿನಿ ಡ್ರೆಸ್‌ ಇತ್ಯಾದಿ ಆಫೀಸ್‌ಗೆ ಧರಿಸಬೇಡಿ. ಏಕೆಂದರೆ ಈ ಡ್ರೆಸೆಸ್‌ ನಿಮಗೆ ಸಹಜ ಕ್ಯಾಶ್ಯುಯೆಲ್ ಲುಕ್ಸ್ ನೀಡುತ್ತವೆ, ನಿಜ. ಆದರೆ ಆಫೀಸ್‌ನಲ್ಲಿ ಆರಾಮದಾಯಕವಾಗಿ, ಕಂಫರ್ಟೆಬಲ್ ಎನಿಸುವುದಿಲ್ಲ. ಆಫೀಸ್‌ನಲ್ಲಿ ನಿಮ್ಮ ಲುಕ್ಸ್ ಫಾರ್ಮಲ್ ಆಗಿರಲೇಬೇಕು. ಕೆಲವು ಅಫಿಶಿಯಲ್ ಸಂದರ್ಭಗಳಲ್ಲಿ ನೀವು ಒನ್‌ ಪೀಸ್‌ ಡ್ರೆಸ್‌, ಉದಾ : ಟ್ಯೂನಿಕ್‌ ಸ್ಟೈಲ್‌ನಲ್ಲಿರುವಂಥದ್ದನ್ನು ಧರಿಸಬಹುದು. ಹೀಗೆ ಸಮಯ ಸಂದರ್ಭ ನೋಡಿಕೊಂಡು ವಿವೇಕಯುತ ನಿರ್ಣಯ ಕೈಗೊಳ್ಳಿ.

– ರೇಣುಕಾ ಹೆಗಡೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ