ಪಾರ್ಟಿಯ ಟ್ರೆಂಡ್‌ ಬದಲಾಗುತ್ತಿರುತ್ತದೆ. ಈ ದಿನಗಳಲ್ಲಿ ಥೀಮ್ ಪಾರ್ಟಿ ಹೆಚ್ಚು ಚಾಲನೆಯಲ್ಲಿದೆ. ಇದರಲ್ಲಿನ ವಿಶೇಷವೆಂದರೆ ಡ್ರೆಸ್‌ನಿಂದ ಹಿಡಿದು ಎಲ್ಲ ಥೀಮ್ ಗೆ ಅನುಸಾರವಾಗಿರಬೇಕು. ಅಂದರೆ ಪೂರ್ಣ ಗೆಟಪ್‌ ಥೀಮ್ ಬೇಸ್ಡ್.

ಈ ದಿನಗಳಲ್ಲಿ ಅನಿಮಲ್, ಬಾಲಿವುಡ್‌, ರೆಟ್ರೋ, ಕಸೀನೊ ಮತ್ತು ಮ್ಯಾಜಿಕ್‌ ಥೀಮ್ ಟ್ರೆಂಡ್‌ಗಳಿವೆ. ಅನಿಮಲ್ ಮೇಕಪ್‌ನಲ್ಲಿ ಜೀಬ್ರಾ, ಲೆಪರ್ಡ್‌, ಟೈಗರ್‌, ಪೀಕಾಕ್‌, ಕ್ಯಾಟ್‌ ಲುಕ್‌ ಇತ್ಯಾದಿ ಹೆಚ್ಚು ಪಾಪ್ಯುಲರ್‌ ಆಗಿವೆ.

ಥೀಮ್ ಪಾರ್ಟಿಯಲ್ಲಿ ಪೀಕಾಕ್‌ಮತ್ತು ಕ್ಯಾಟ್‌ ಮೇಕಪ್‌ ಮಾಡುವ ಬಗ್ಗೆ ಮೇಕಪ್‌ ಎಕ್ಸ್ ಪರ್ಟ್‌ ರಾಗಿಣಿ ಹೀಗೆ ಹೇಳುತ್ತಾರೆ.

ಪೀಕಾಕ್ಮೇಕಪ್

ಪೀಕಾಕ್‌ ಮೇಕಪ್‌ ಹೆಸರಿನಲ್ಲಿಯೇ ನವಿಲಿನ ಸೌಂದರ್ಯ ಕಂಡುಬರುತ್ತದೆ. ಪೀಕಾಕ್‌ ಮೇಕಪ್‌ನಲ್ಲಿ ಬೇರೆ ಬೇರೆ ಶೇಡ್‌ ಮತ್ತು ಟೋನ್‌ನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ 7 ಬಣ್ಣಗಳಲ್ಲಿ ಅಂದರೆ ಪರ್ಪಲ್, ಗ್ರೀನ್‌, ಬ್ಲೂ, ಗೋಲ್ಡನ್‌, ಸಿಲ್ವರ್‌, ಗ್ರೇ ಮತ್ತು ವೈಟ್‌ಗಳಲ್ಲಿ ಉಪಯೋಗಿಸಲಾಗುತ್ತದೆ.

ಪೀಕಾಕ್ಮೇಕಪ್ ಸ್ಟೆಪ್ಸ್ ಫೇಸ್ಕ್ಲೀನಿಂಗ್‌ : ಯಾವುದೇ ರೀತಿಯ ಮೇಕಪ್‌ ಮಾಡುವ ಮೊದಲು ಮುಖವನ್ನು ಸ್ವಚ್ಛಗೊಳಿಸುವುದು ಬಹಳ ಅಗತ್ಯ. ಏಕೆಂದರೆ ಮುಖದ ಮೇಲೆ ಮೇಕಪ್‌ ಸುಲಭವಾಗಿ ಕೂರುವಂತಿರಬೇಕು. ಮೊದಲು ಮುಖ ಮತ್ತು ಕತ್ತನ್ನು ವೆಟ್‌ ಟಿಶ್ಶೂನಿಂದ ಚೆನ್ನಾಗಿ ಒರೆಸಿ. ನಂತರ ಮುಖದ ಮೇಲೆ ಕೋಕೋ ಬಟರ್‌ ಗ್ಲಾಸಿ ಮಾಯಿಶ್ಚರೈಸರ್‌ ಹಚ್ಚಿ ಚೆನ್ನಾಗಿ ಮಿಕ್ಸ್ ಮಾಡಿ.

ಬೇಸ್‌ ಮೇಕಪ್‌ನಲ್ಲಿ ಬೇಸ್‌ ತಯಾರಿಸುವುದು ಬಹಳ ಅವಶ್ಯ. ಬೇಸ್‌ ಯಾವಾಗಲೂ ಸ್ಕಿನ್‌ ಟೋನ್‌ಗೆ ಅನುಸಾರವಾಗಿ ಉಪಯೋಗಿಸಬೇಕು. ಆರ್‌.ಎಸ್‌ 22 ಮತ್ತು ಆರ್‌.ಎಸ್‌ 28 ಕನ್ಸೀಲರ್‌ನ್ನು ಬೆರೆಸಿ ಬೆರಳುಗಳಿಂದ ಮುಖಕ್ಕೆ ಹಚ್ಚಿ. ನಂತರ ಸ್ಪಂಜ್‌ನಿಂದ ಕನ್ಸೀಲರನ್ನು ಬೆರೆಸಿ. ನಂತರ ಮುಖಕ್ಕೆ ಟಾಲ್ಕಂ ಪೌಡರ್‌ ಹಚ್ಚಿ ಪಾಲಿಶಿಂಗ್‌ ಬ್ರಶ್‌ನಿಂದ ಚೆನ್ನಾಗಿ ಮಿಕ್ಸ್ ಮಾಡಿ.

ಮೇಕಪ್

ಪೀಕಾಕ್‌ ಮೇಕಪ್‌ನಲ್ಲಿ ಕಣ್ಣುಗಳನ್ನು ಹೈಲೈಟ್‌ ಮಾಡಲಾಗುತ್ತದೆ. ಈ ಮೇಕಪ್‌ನಲ್ಲಿ ಐ ಶ್ಯಾಡೋಗೆ ಬಟ್ಟೆಯಲ್ಲಿರುವ ಎರಡು ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಎಲ್ಲಕ್ಕೂ ಮೊದಲು ಪೂರ್ತಿ ಕಣ್ಣಿನ ಮೇಲೆ ಗೋಲ್ಡನ್‌ ಹೈಲೈಟರ್‌ನಿಂದ ಒಂದು ಬೇಸ್‌ತಯಾರಿಸಿ. ನಂತರ ೀ್‌ ಶೇಪ್‌ನ ಕೆಳಗಿನ ಭಾಗದಲ್ಲಿ ಬ್ಲೂ ಐ ಶ್ಯಾಡೋ ತುಂಬಿ ಮತ್ತು ತುದಿಗಳಲ್ಲಿ ಬ್ಲ್ಯಾಕ್‌ ಶ್ಯಾಡೋ ಮಿಕ್ಸ್ ಮಾಡಿ ಕೊಂಚ ಹೈಲೈಟ್‌ ಮಾಡಿ. ಜೊತೆಗೆ ಮೇಲಿನ ಕಡೆಗೆ ತೆಳುವಾಗಿ ಗ್ರೀನ್‌ ಶ್ಯಾಡೋ ಹಚ್ಚಿ.ಕಣ್ಣುಗಳ ಮೇಲೆ ಇನ್ನಷ್ಟು ಶ್ಯಾಡೋ ಹಚ್ಚಿದ ನಂತರ ಬ್ರಶ್‌ನ ಸಹಾಯದಿಂದ ಕಣ್ಣುಗಳ ಮೇಲೆ ಹಾಗೂ ಕೆಳಗೆ ಲಿಕ್ವಿಡ್‌ ಗ್ರೀನ್‌ ಲೈನರ್‌ ಹಚ್ಚಿ. ನಂತರ ಕೇಕ್ ಲೈನರ್‌ನಲ್ಲಿ ಕೊಂಚ ನೀರು ಹಾಕಿ ಬ್ರಶ್‌ನಿಂದ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಬೇಸ್‌ ಲೈನರ್‌ ಹಚ್ಚಿದ ನಂತರ ಕಣ್ಣುಗಳನ್ನು ಹೈಲೈಟ್‌ ಮಾಡಲು ಆರ್ಟಿಫಿಶಿಯಲ್ ಐ ಲ್ಯಾಶಸ್‌ ಹಚ್ಚಿ. ಐ ಲ್ಯಾಶಸ್‌ ಮೇಲೆ ಗಮ್ ಹಾಕಿ ಚೆನ್ನಾಗಿ ಅಂಟಿಸಿ.

ಐ ಲ್ಯಾಶಸ್‌ ಹಚ್ಚಿದ ನಂತರ ಐ ಲೈನರ್‌ನ ಒಂದು ಕೋಟಿಂಗ್‌ ಮಾಡಿ. ಆಗ ತೆಳುವಾದ ಗ್ಯಾಪ್‌ ಕೂಡ ಮುಚ್ಚಿಹೋಗುತ್ತದೆ. ಆಮೇಲೆ ಮಸ್ಕರಾ ಹಚ್ಚಿ.

ಕಣ್ಣುಗಳ ನಂತರ ಐ ಬ್ರೋಸ್‌ನ ಸರದಿ. ಕಣ್ಣುಗಳನ್ನು ಹೈಲೈಟ್‌ ಮಾಡಲು ಬ್ಲ್ಯಾಕ್‌ ಮತ್ತು ಬ್ರೌನ್‌ ಶ್ಯಾಡೋಗಳನ್ನು ಮಿಕ್ಸ್ ಮಾಡಿ ಐ ಬ್ರೋಸ್‌ ಮೇಲೆ ಹಚ್ಚಿ.ಲಿಪ್‌ಸ್ಟಿಕ್‌ ಡ್ರೆಸ್‌ಗೆ ಅನುಗುಣವಾಗಿ ಲಿಪ್‌ಸ್ಟಿಕ್‌ ಹಚ್ಚಿ ಅಥವಾ ಪೀಕಾಕ್‌ ಮೇಕಪ್‌ನಲ್ಲಿ ರೆಡ್‌ ಲಿಪ್‌ಸ್ಟಿಕ್‌ನ್ನೂ ಉಪಯೋಗಿಸಬಹುದು. ಅದಕ್ಕಾಗಿ ಲಿಪ್‌ ಲೈನರ್‌ನಿಂದ ಔಟ್‌ಲೈನಿಂಗ್‌ ಮಾಡಿ ಮತ್ತು ಲಿಪ್‌ಸ್ಟಿಕ್‌ನಿಂದ ಲಿಪ್ಸ್ ಫಿಲ್ ಮಾಡಿ. ನಂತರ ಲಿಪ್ಸ್ ಮೇಲೆ ಗ್ಲಾಸ್‌ ಹಚ್ಚಿ ಅನ್ನುವ ಹೈಲೈಟ್‌ ಮಾಡಿ.

ಬ್ಲಶರ್ಮೇಕಪ್

ನಂತರ ಬ್ಲಶರ್‌ಗೆ ವಿಶೇಷ ಮಹತ್ವ ಇದೆ. ಇದು ಮೇಕಪ್‌ಗೆ ಕಂಪ್ಲೀಟ್‌ ಲುಕ್‌ ಕೊಡುತ್ತದೆ. ಬ್ಲಶರ್‌ ಯಾವಾಗಲೂ ಪೀಚ್‌ ಕಲರ್‌ನದ್ದೇ ಹಚ್ಚಿ. ಅದನ್ನು ಕಿವಿಗಳ ಹತ್ತಿರದಿಂದ ಶುರು ಮಾಡಿ ಚೀಕ್ಸ್ ವರೆಗೆ ಹಚ್ಚಿ.

ಹೇರ್ಸ್ಟೈಲ್

ಪೀಕಾಕ್‌ ಮೇಕಪ್‌ನಲ್ಲಿ ಸಂಪೂರ್ಣ ಕೂದಲನ್ನು ತೆಗೆದುಕೊಂಡು ಒಂದು ಸಿಂಪಲ್ ಜಡೆ ಹಾಕಿ ಮತ್ತು ನವಿಲುಗರಿಗಳಿಂದ ಚೆನ್ನಾಗಿ ಡೆಕೋರೇಟ್‌ ಮಾಡಿ.

ಆ್ಯಕ್ಸೆಸರೀಸ್

ಪೀಕಾಕ್‌ ಮೇಕಪ್‌ನ್ನು ಹೊಳೆಯುವಂತೆ ಮಾಡಲು ಪೀಕಾಕ್‌ ಡಿಸೈನ್ಸ್ ಅಥವಾ ನವಿಲಿನ ರೆಕ್ಕೆಗಳಿಂದ ತಯಾರಿಸಿದ ಆ್ಯಕ್ಸೆಸರೀಸ್‌ ಧರಿಸಿ. ಅದರಿಂದ ನಿಮ್ಮ ಸೌಂದರ್ಯ ಇನ್ನಷ್ಟು ಹೊಳೆಯುತ್ತದೆ. ನಂತರ ಹಣೆ ಮತ್ತು ಕಣ್ಣುಗಳ ಬಳಿಯ ಭಾಗಗಳಲ್ಲಿ ಸ್ಟೋನ್‌ ಬಿಂದಿಯಿಂದ ಅಲಂಕರಿಸಿ.

ಕ್ಯಾಟ್ಲುಕ್ಸ್ ಗಾಗಿ ಸ್ಟೆಪ್ಸ್

ಫೇಸ್ಕ್ಲೀನಿಂಗ್‌ : ಕ್ಯಾಟ್‌ ಮೇಕಪ್‌ ಮಾಡುವ ಮೊದಲು ವೆಟ್‌ ಟಿಶ್ಶೂನಿಂದ ಮುಖ ಮತ್ತು ಕತ್ತನ್ನು ಸ್ವಚ್ಛಗೊಳಿಸಿ. ನಂತರ ಮುಖದ ಮೇಲೆ ಕೋಕೋ ಬಟರ್‌ ಗ್ಲಾಸಿ ಮಾಯಿಶ್ಚರೈಸರ್‌ ಹಚ್ಚಿ ಚೆನ್ನಾಗಿ ಮಿಕ್ಸ್ ಮಾಡಿ.

ಬೇಸ್‌ : ಮೇಕಪ್‌ನಲ್ಲಿ ಯಾವಾಗಲೂ ಸ್ಕಿನ್‌ ಟೋನ್‌ಗೆ ಅನುಗುಣವಾಗಿ ಬೇಸ್‌ನ್ನು ತಯಾರಿಸಬೇಕು. ಇಡೀ ಮುಖದ ಮೇಲೆ ಒಂದೇ ಬೇಸ್‌ ಹಚ್ಚಿ. ಡಾರ್ಕ್‌ ಸ್ಕಿನ್‌ ಅಡಗಿಸಲು ಅಲ್ಲಿ ಹೆಚ್ಚು ಕನ್ಸೀಲರ್‌ ಹಚ್ಚಬೇಡಿ. ಸ್ಕಿನ್‌ಟೋನ್‌ಗೆ ಅನುಗುಣವಾಗಿ ಕನ್ಸೀಲರ್‌ನಿಂದ ಮುಖದ ಮೇಲೆ ಒಂದು ಬೇಸ್‌ ತಯಾರಿಸಿ. ನಂತರ ಸ್ಪಾಂಜ್‌ನಿಂದ ತಪತಪನೆಂದು ಕನ್ಸೀಲರ್‌ನ್ನು ಮಿಕ್ಸ್ ಮಾಡಿ. ಆಗ ಇಡೀ ಮುಖ ಒಂದೇ ರೀತಿ ಕಂಡುಬರುತ್ತದೆ. ನಂತರ ಮುಖಕ್ಕೆ ಟಾಲ್ಕಂ ಪೌಡರ್‌ ಹಚ್ಚಿ. ಪಾಲಿಶಿಂಗ್‌ ಬ್ರಶ್‌ನಿಂದ ಚೆನ್ನಾಗಿ ಮಿಕ್ಸ್ ಮಾಡಿ. ಕ್ಯಾಟ್‌ ಎಫೆಕ್ಟ್ ಕೊಡಲು ಡಾರ್ಕ್‌ ಕಲರ್‌ನ ಬೇಸ್‌ನಿಂದ ಮುಖದ ಬಳಿ ಒಂದು ಶೇಡ್‌ ಡಾರ್ಕ್‌ ಕನ್ಸೀಲರ್‌ ಹಚ್ಚಿ. ಅದು ತೆಳುವಾಗಿ ವಿಭಿನ್ನವಾಗಿ ಕಂಡುಬರುವಂತಿರಬೇಕು.

ಮೇಕಪ್

ಬೇಸ್‌ ತಯಾರಾದ ನಂತರ ಕಣ್ಣುಗಳ ಮೇಕಪ್‌ ಆರಂಭಿಸಿ. ಕ್ಯಾಟ್‌ ಲುಕ್ಸ್ ನಲ್ಲಿ ಕಣ್ಣುಗಳನ್ನು ಆಕರ್ಷಕವಾಗಿಸಿ. ಏಕೆಂದರೆ ಕ್ಯಾಟ್‌ ಎಫೆಕ್ಟ್ ಸ್ಪಷ್ಟವಾಗಿ ಕಂಡುಬರುವಂತಿರಬೇಕು. ಅದಕ್ಕಾಗಿ ಮೊದಲು ಕಣ್ಣುಗಳ ಮೇಲೆ ಬ್ರೌನ್‌ ಐ ಶ್ಯಾಡೋ ಹಚ್ಚಿ. ಅದನ್ನು ಫೋರ್‌ ಹೆಡ್‌ವರೆಗೆ ಹೊರಗೆ ಎಳೆಯಿರಿ. ನಂತರ ಕಣ್ಣುಗಳ ಮೇಲೆ ತೆಳುವಾಗಿ ಪಿಂಕ್‌ ಐ ಶ್ಯಾಡೋ ಹಚ್ಚಿ. ಆಮೇಲೆ ಬ್ಲ್ಯಾಕ್‌ ಐ ಶ್ಯಾಡೋವನ್ನು ಉಲ್ಟಾ `ವಿ’ ಶೇಪ್‌ನಲ್ಲಿ ಹಚ್ಚಿ ಕಣ್ಣುಗಳಿಗೆ ಒಂದು ಪಾಯಿಂಟೆಡ್‌ ಎಫೆಕ್ಟ್ ಕೊಡಿ.

ಐ ಶ್ಯಾಡೋ ಹಚ್ಚಿದ ನಂತರ ಐ ಬ್ರೋಸ್‌ ಮೇಲೂ ಬ್ಲ್ಯಾಕ್‌ ಐ ಶ್ಯಾಡೋ ಹಚ್ಚಿ ಮತ್ತು ಎರಡೂ ಐ ಬ್ರೋಗಳನ್ನು ಮಧ್ಯದಿಂದ ಸೇರಿಸಿ ಕ್ಯಾಟ್‌ನಂತೆ ಕಂಡುಬರುವಂತೆ ಕೊಂಚ ದಪ್ಪಗೆ ಮಾಡಿ. ಈಗ ಕಣ್ಣುಗಳ ಮೇಲೆ ಮತ್ತು ಕೆಳಗೆ ಬ್ಲ್ಯಾಕ್‌ ಲೈನರ್‌ ಹಚ್ಚಿ ಮತ್ತು ಪಾಯಿಂಟೆಡ್‌ ಶೇಪ್‌ ಮಾಡಿ. ಕ್ಯಾಟ್‌ ಕಣ್ಣುಗಳು ಸಾಕಷ್ಟು ಭಯ ಹುಟ್ಟಿಸುವಂತಿರುತ್ತವೆ. ಆದ್ದರಿಂದ ಕಣ್ಣುಗಳ ಮೇಲೆ ಆರ್ಟಿಫಿಶಿಯಲ್ ಐ ಲ್ಯಾಶಸ್‌ ಹಾಕಿ. ಆರ್ಟಿಫಿಶಿಯಲ್ ಐ ಲ್ಯಾಶಸ್‌ಗೆ ಗಮ್ ಹಾಕಿ ಕಣ್ಣುಗಳ ಮೇಲೆ ಅಂಟಿಸಿ. ಸ್ವಲ್ಪ ಹೊತ್ತಿನ ನಂತರ ಐ ಲ್ಯಾಶಸ್‌ ಮೇಲೆ ಬ್ಲ್ಯಾಕ್‌ ಮಸ್ಕರಾ ಹಚ್ಚಿ. ಕಣ್ಣುಗಳ ಮೇಲೆ ಗ್ಯಾಪ್‌ ಚೆನ್ನಾಗಿ ಮುಚ್ಚುವಂತೆ ಮತ್ತೊಮ್ಮೆ ಲೈನರ್‌ ಹಚ್ಚಿ.

ನಂತರ ಬ್ಲ್ಯಾಕ್‌ ಲೈನರ್‌ನಿಂದ ಕಣ್ಣುಗಳ ಮೇಲೆ ಸಣ್ಣ ಸಣ್ಣ ಡಾಟ್ಸ್ ಇಡಿ. ಕಣ್ಣುಗಳ ಕೆಳಗೆ ತೆಳುವಾಗಿ ವೈಟ್‌ ಕಾಜಲ್ ಕೂಡ ಹಚ್ಚಿ.

ಲಿಪ್ಸ್ಟಿಕ್

ಕ್ಯಾಟ್‌ ಮೇಕಪ್‌ನಲ್ಲಿ ಲಿಪ್ಸ್ ಮೇಲೆ ಯಾವಾಗಲೂ ರೆಡ್‌ ಲಿಪ್‌ಸ್ಟಿಕ್‌ನ್ನೇ ಹಚ್ಚಿ. ಅದಕ್ಕಾಗಿ ಲಿಪ್‌ ಲೈನರ್‌ನಿಂದ ಲಿಪ್ಸ್ ಮೇಲೆ ಔಟ್‌ಲೈನ್‌ ಮಾಡಿ. ನಂತರ ಲಿಪ್‌ಸ್ಟಿಕ್‌ ಹಚ್ಚಿ ಮತ್ತು ಗ್ಲಾಸ್‌ನಿಂದ ಹೈಲೈಟ್‌ ಮಾಡಿ.

ಬ್ಲಶರ್

ಬ್ಲಶರ್‌ ಉಪಯೋಗಿಸುವಾಗ ಅದು ಬಹಳ ಗಾಢವಾಗಿ ಅಥವಾ ಹರಡಿದಂತೆ ಹಚ್ಚಬೇಡಿ. ನಿಮ್ಮ ಕೆನ್ನೆಗಳ ಮೇಲೆ ಬ್ಲಶರ್‌ನ್ನು ಯಾವ ಜಾಗದಲ್ಲಿ ಹಚ್ಚಬೇಕೆಂದರೆ ನಗು ಬಂದಾಗ ಮೇಲಕ್ಕೇಳುವ ಜಾಗದಲ್ಲಿ ಪಿಂಕ್‌ ಮತ್ತು ಪೀಚ್‌ ಬಣ್ಣದ ಬ್ಲಶರ್‌ನ್ನು ಮಿಕ್ಸ್ ಮಾಡಿ ರೌಂಡ್‌ ಶೇಪ್‌ನಲ್ಲಿ ಕೆನ್ನೆಗೆ ಹಚ್ಚಿ.

ನೋಸ್ಮೇಕಪ್

ಕ್ಯಾಟ್‌ ಮೇಕಪ್‌ನಲ್ಲಿ ಕ್ಯಾಟ್‌ನ ಮೂಗು ತಯಾರಿಸಲು ಬ್ಲ್ಯಾಕ್‌ ಐ ಲೈನರ್‌ ಉಪಯೋಗಿಸಿ. ಪಾಯಿಂಟ್‌ ಮೇಲೆ ಬ್ಲ್ಯಾಕ್‌ ಲೈನರ್‌ನಿಂದ ಲೈನ್‌ ಹಾಕಿ ಚೆನ್ನಾಗಿ ಬ್ಲ್ಯಾಕ್‌ ಮಾಡಿ. ನಂತರ ಲಿಪ್‌ನ ಮೇಲ್ಭಾಗ ಅಂದರೆ ಮೀಸೆಗಳಿರುವ ಜಾಗದಲ್ಲಿ ನವಿಲು ಗರಿಯ ತುಂಡನ್ನು ಅಂಟಿಸಿ.

ಹೇರ್ಸ್ಟೈಲ್

ಕ್ಯಾಟ್‌ ಮೇಕಪ್‌ನಲ್ಲಿ ಹೇರ್‌ ಸ್ಟೈಲ್ ಸಿಂಪಲ್ ಆಗಿರಲಿ. ಕೂದಲನ್ನು ಚೆನ್ನಾಗಿ ಬಾಚಿ ಹಾಫ್‌ ಪೋನಿ ಮಾಡಿ. ಪೋನಿಯನ್ನು ಮುಂಭಾಗದಲ್ಲಿ ಹರಡಿ.

ಡ್ರೆಸ್‌ ಕ್ಯಾಟ್‌ ಲುಕ್ಸ್ ನಲ್ಲಿ ಯಾವಾಗಲೂ ಬ್ಲ್ಯಾಕ್‌ ಡ್ರೆಸ್‌ನ್ನೇ ಧರಿಸಿ. ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕ್ಯಾಟ್‌ ಲುಕ್ಸ್ ಹೊಳೆಯುತ್ತದೆ.

ಎನ್‌. ಅಂಕಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ