ಬಹಳಷ್ಟು ಮಹಿಳೆಯರು ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ತಮಗೆ ಪರ್ಫೆಕ್ಟ್ ಲುಕ್ ಕೊಡಲು ಮರೆಯುವುದಿಲ್ಲ.
ಆಫೀಸ್ ತಲುಪಿದ ಮೇಲೂ ಸೊಫೆಸ್ಟಿಕೇಟೆಡ್ ಆಗಿರುತ್ತಾರೆ. ಅಂತಹ ಮಹಿಳೆಯರಲ್ಲಿ ನೀವು ಒಬ್ಬರಾಗಿದ್ದರೆ ಮೇಕಪ್ ನಿಮ್ಮ ರುಟೀನಿನ ಪ್ರಮುಖ ಭಾಗವಾಗಿದೆ ಎಂದರ್ಥ. ಅನೇಕ ಮಹಿಳೆಯರು ತಮ್ಮ ವೀಕ್ಲಿ ಆಫ್ ದಿನದಂದು ಮನೆಯಲ್ಲಿ ಮೇಕಪ್‌ನಲ್ಲಿ ಮಿಂದಿರುತ್ತಾರೆ. ಏಕೆಂದರೆ ಅವರ ಸಂಗಾತಿ ಮೇಕಪ್ ಇಲ್ಲದ ಅವರ ಮುಖವನ್ನು ನೋಡಿಬಿಡಬಾರದೆಂದು. ಸಂಗಾತಿಯ ಸಂಪೂರ್ಣ ಗಮನ ತಮ್ಮ ಮೇಲೆ ಇರಲು ಅವರು ಹೀಗೆ ಮಾಡುತ್ತಾರೆ. ಒಂದು ಸಮೀಕ್ಷೆಯಲ್ಲಿ ಶೇ.53 ರಷ್ಟು ಮಹಿಳೆಯರು ರಾತ್ರಿಯಲ್ಲಿ ಮೇಕಪ್ ಇಲ್ಲದೆ ತಮ್ಮ ಸಂಗಾತಿಯನ್ನು ಮೋಹಗೊಳಿಸಲು ಸಾಧ್ಯವಿಲ್ಲವೆಂದರು. ಹಲವು ಸಂಶೋಧನೆಗಳಿಂದ ತಿಳಿದುಬಂದ್ದೇನೆಂದರೆ ರಾತ್ರಿ ಮೇಕಪ್ ತೆಗೆಯದೆ ಮಲಗುವ ಮಹಿಳೆಯರ ತ್ವಚೆಗೆ ಮೇಕಪ್ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ.
ಮೇಕಪ್ ಮಾಡುವುದು ಎಷ್ಟು ಅಗತ್ಯವೋ ಅದನ್ನು ಸ್ವಚ್ಛಗೊಳಿವುದೂ ಅಷ್ಟೇ ಅಗತ್ಯ. ಹೀಗೆ ಮಾಡದಿದ್ದರೆ ನಿಮ್ಮ ಮುಖಕ್ಕೆ ಇನ್ಛೆಕ್ಷನ್ ಕೂಡ ಆಗಬಹುದು. ಮೇಕಪ್ ಪದರ ಹಚ್ಚಿದ ಕೂಡಲೇ ತ್ವಚೆಯ ಮೇಲೆ ರೋಮರಂಧ್ರಗಳು ಮುಚ್ಚಿಹೋಗುತ್ತವೆ. ರೋಮರಂಧ್ರಗಳು ಬಹಳ ಕಾಲ ಮುಚ್ಚಿದ್ದರೆ ತ್ವಚೆಯ ಒಳಗಿನ ಕೊಳೆ ಹೊರಗೆ ಬರುವುದಿಲ್ಲ. ಮುಂದೆ ಅದು ಮೊಡವೆಗಳ ರೂಪ ತಾಳುತ್ತದೆ.
ಬಹಳಷ್ಟು ಮಹಿಳೆಯರು ಅನೇಕ ಬಾರಿ ಮೇಕಪ್‌ನ್ನು ಸ್ವಚ್ಛಗೊಳಿಸದೆ ಮಲಗಿ ಬಿಡುತ್ತಾರೆ. ನಿಮ್ಮ ತ್ವಚೆ ಸೋಂಕಿಗೊಳಗಾಗದಿರಲು ಮಲಗುವ ಮುಂಚೆ ಮೇಕಪ್‌ನ್ನು ಅಗತ್ಯವಾಗಿ ರಿಮೂವ್ ಮಾಡಿ.
ಆರತಿ ಆಫೀಸಿನಿಂದ ಸುಸ್ತಾಗಿ ಮನೆಗೆ ಬಂದ ನಂತರ ತಾನೊಂದು ಮದುವೆಗೆ ಹೋಗುಬೇಕಿತ್ತೆಂದು ತಿಳಿಯಿತು. ಅವಳು ಪಾರ್ಲರ್‌ಗೆ ಫೋನ್ ಮಾಡಿ ಟೈಂ ಫಿಕ್ಸ್ ಮಾಡಿದಳು. ಪಾರ್ಲರ್‌ನಿಂದ ತನ್ನನ್ನು ಪಿಕಪ್ ಮಾಡಲು ಹೇಳಿ ಹೊರಟುಹೋದಳು. ಆರತಿ ಪಾರ್ಲರ್‌ನಲ್ಲಿ ಸ್ಪೆಷಲ್ ಸಿಲಿಕಾನ್ ಮೇಕಪ್ ಮಾಡಿಸಿಕೊಂಡಳು. ಉತ್ತಮ ಹೇರ್‌ಸ್ಟೈಲ್ ಮಾಡಿಸಿಕೊಂಡು ಸೀರೆಯನ್ನು ಸ್ಟೈಲಾಗಿ ಉಟ್ಟು ಹೀರೋಯಿನ್‌ನಂತೆ ಸಿದ್ಧಳಾದಳು. ಅವಳು ಗಂಡ ಆದಿತ್ಯ ಇದರ ಮಧ್ಯೆ 4 ಬಾರಿ ಫೋನ್ ಮಾಡಿದ್ದ. ನಂತರ ಅವನು ಪಾರ್ಲರ್‌ಗೆ ಹೋದ. ಆರತಿ ಪಾರ್ಲರ್‌ನಿಂದ ಹೊರಬಂದು ಕಾರಿನಲ್ಲಿ ಕುಳಿತಳು. ಆರತಿಯನ್ನು ನೋಡಿದ ಕೂಡಲೇ ಆದಿತ್ಯನ ಕೋಪವೆಲ್ಲ ಮಾಯವಾಯಿತು. ಆರತಿ ಯಾವುದೇ ಹೀರೊಯಿನ್‌ಗೆ ಕಡಿಮೆ ಇರಲಿಲ್ಲ. ಮದುವೆ ಮುಗಿಸಿಕೊಂಡು ಮಧ್ಯರಾತ್ರಿ 2 ಗಂಟೆಗೆ ಇಬ್ಬರೂ ಮನೆ ತಲುಪಿದರು. ಅವಳು ಸೀರೆ ಬದಲಿಸಿ ಗೌನ್‌ಧರಿಸಿದಳು. ಹೇರ್‌ಸ್ಟೈಲ್‌ಗೆ ಹಾಕಿದ್ದ ಎಲ್ಲ ಆ್ಯಕ್ಸೆಸರೀಸ್ ತೆಗೆದು ಮಲಗಿದಳು. ಬೆಳಗ್ಗೆ ಎದ್ದಾಗ ಮುಖದಲ್ಲಿ ಊತ ಹಾಗೂ ದದ್ದುಗಳು ಎದ್ದಿದ್ದವು. ಅವನ್ನು ಕಂಡು ಆರತಿಗೆ ಭಯವಾಯಿತು. ಕೂಡಲೇ ಅವಳು ಸ್ಕಿನ್ ಸ್ಪೆಷಲಿಸ್ಟ್ ಗೆ ತೋರಿಸಿದಳು. ಅವರು ``ಅದು ಆಗಲು ಕಾರಣ, ರಾತ್ರಿ ಹೆವಿ ಮೇಕಪ್‌ಮಾಡಿಕೊಂಡು ಹಾಗೆ ಮಲಗಿದ್ದರಿಂದ,'' ಎಂದರು.
ಮೇಕಪ್ ತೆಗೆಯದಿದ್ದರೆ ಏನಾಗುತ್ತದೆ?
ಒಂದು ವೇಳೆ ನೀವು ಮೇಕಪ್ ತೆಗೆಯದಿದ್ದರೆ ಹಗಲಲ್ಲಿ ಮುಖದ ಮೇಲೆ ಬಿದ್ದ ಧೂಳು, ಮಣ್ಣಿನ ಕಣಗಳು ಮುಖವನ್ನು ಅಟ್ಯಾಕ್ ಮಾಡುತ್ತವೆ. ರಾತ್ರಿ ನೀವು ಲೈಟ್ ಅಥವಾ ಹೆವಿ ಮೇಕಪ್ ಮಾಡಿಕೊಂಡಿದ್ದರೂ ಸ್ವಚ್ಛಗೊಳಿಸದಿದ್ದರೆ ಅದು ಇಡೀ ರಾತ್ರಿ ಮುಖದ ಮೇಲಿದ್ದು ಸ್ಕಿನ್‌ಗೆ ಹಾನಿಯುಂಟು ಮಾಡುತ್ತದೆ. ನಿಮ್ಮ ಮುಖದಲ್ಲಿ ವಯಸ್ಸಿಗೆ ಮುಂಚೆ ನೆರಿಗೆಗಳು ಬೀಳುತ್ತವೆ. ನಿಮ್ಮ ಕಾಂಪ್ಲೆಕ್ಷನ್ ಕೂಡ ಡಾರ್ಕ್ ಆಗುತ್ತದೆ.