ಇಂದಿನ ಫ್ಯಾಷನೆಬಲ್ ಯುಗದಲ್ಲಿ ಸೌಂದರ್ಯದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಹೆಚ್ಚುತ್ತಿದೆ. ಅವಳು ರಿಸೆಪ್ಶನಿಸ್ಟ್ ಆಗಲಿ ಅಥವಾ ಗ್ಲಾಮರ್‌ ಲೋಕದೊಂದಿಗೆ ಸಂಬಂಧಿಸಿದ ಆ್ಯಂಕರ್‌, ಹೋಸ್ಟ್, ಕಾರ್ಪೋರೇಟ್‌ ಆಫೀಸ್‌ನಲ್ಲಿ ಕೆಲಸ ಮಾಡುವ ಮಹಿಳೆ ಅಥವಾ ಏರ್‌ಹೋಸ್ಟೆಸ್‌ ಆಗಿರಬಹುದು. ಇವರೆಲ್ಲರಿಗೂ ಮೇಕಪ್‌ ಬಹಳ ವಿಶೇಷವಾಗಿರುತ್ತದೆ. ಅದು ಅವರಿಗೆ ಕೆಲಸ ಮಾಡುವಾಗ ಅಟ್ರಾಕ್ಟಿವ್‌ ಮತ್ತು ಫ್ರೆಶ್‌ ಲುಕ್‌ ಕೊಡುತ್ತದೆ. ಅಷ್ಟೇ ಅಲ್ಲ, ಈ ಲುಕ್‌ ಅವರಲ್ಲಿ ಕಾನ್ಛಿಡೆನ್ಸ್ ಕೂಡ ಉಂಟು ಮಾಡುತ್ತದೆ.

ಈ ವರ್ಷದ ಇಂತಹ 5 + 5 ಮೇಕಪ್‌ ಮತ್ತು ಹೇರ್‌ಸ್ಟೈಲ್‌ ಟಿಪ್ಸ್ ಗಳನ್ನು ತಿಳಿದುಕೊಳ್ಳಿ. ಅವು ನಿಮಗೊಂದು ಹೊಸ ಗುರುತು ಕೊಡುತ್ತವೆ. ಬ್ಯೂಟಿ ಎಕ್ಸ್ ಪರ್ಟ್ಸ್ ರಹೀಮಾ ಖಾನ್‌ ಹಾಗೂ ರೇಣು ಮಹೇಶ್ವರಿ ಈ ಟಿಪ್ಸ್ ಕೊಡುತ್ತಿದ್ದಾರೆ.

ಕಾರ್ಪೋರೇಟ್ಮೇಕಪ್

ಕಾರ್ಪೋರೇಟ್‌ ಆಫೀಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಕಾನ್ಛಿಡೆನ್ಸ್ ಉಂಟು ಮಾಡುವಂತಹ ಲುಕ್‌ ಇರಬೇಕು.

ಮೇಕಪ್ಹೇಗೆ ಮಾಡಬೇಕು? : ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇಡೀ ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿ. ಆಮೇಲೆ ಎಸ್‌ಪಿಎಫ್‌ 18 ಫ್ಲೂಯಿಡ್‌ ಟಿಂಟ್‌ ಲೋಶನ್‌ ಹಚ್ಚಿ. ಮುಖಕ್ಕೆ ಕನ್ಸೀಲರ್‌ ಉಪಯೋಗಿಸಿ.

ಐಸ್ಮೇಕಪ್‌: ಸ್ಮೋಕಿ ಐಸ್‌ ಮೇಕಪ್‌ ಮಾಡಿ. ಅದಕ್ಕೆ ಬ್ರೌನ್‌ ಗ್ರೇ ಶ್ಯಾಡೋ ಉಪಯೋಗಿಸಿ. ಐ ಲ್ಯಾಶಸ್‌ ಮೇಲೆ ಮಸ್ಕರಾವನ್ನು ಚೆನ್ನಾಗಿ ಉಪಯೋಗಿಸಿ.

ಲಿಪ್‌, ಚೀಕ್ಮೇಕಪ್‌: ರಿಸೆಪ್ಶನಿಸ್ಟ್ ಮತ್ತು ಏರ್‌ಹೋಸ್ಟೆಸ್‌ಗಳು ಗ್ಲಾಸಿ ಡಾರ್ಕ್‌ ಲಿಪ್‌ಸ್ಟಿಕ್‌ ಆಯ್ದುಕೊಳ್ಳಿ ಮತ್ತು ಚೀಕ್ಸ್ ಮೇಲೆ ಪಿಂಕ್‌ ಬ್ಲಶರ್‌ ಹಾಕಿ ಅದನ್ನು ಮರ್ಜ್‌ ಮಾಡಿ.

ಹೇರ್ಸ್ಟೈಲ್

‌ಕಾರ್ಪೋರೇಟ್‌ ಆಫೀಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ಹೇರ್‌ಸ್ಟೈಲ್‌ನಲ್ಲಿ ನೀಡ್‌ ಲುಕ್‌ ಇರಬೇಕು. ಚಿಕ್ಕ ಕೂದಲಿಗಾಗಿ ಅರ್ಧ ಕೂದಲನ್ನು ಎತ್ತಿ ಪಿನ್‌ನಿಂದ ಸೆಟ್‌ ಮಾಡಿ ಮತ್ತು ಅರ್ಧ ಕೂದಲನ್ನು ಹಾಗೆಯೇ ಬಿಡಿ. ಉದ್ದ ಕೂದಲಿನಿಂದ ಎತ್ತರದ ಪೋನಿ ಮಾಡಿ. ಸಿಂಪಲ್ ಆದ ಜಡೆಯನ್ನೂ ಹಾಕಬಹುದು. ಏರ್‌ಹೋಸ್ಟೆಸ್‌ ಮತ್ತು ರಿಸೆಪ್ಶನಿಸ್ಟ್ ತಮ್ಮ ಕೂದಲಿಗೆ ಮುಂದಿನಿಂದ ಡಿಫರೆಂಟ್‌ ಸ್ಟೈಲ್‌ ಮಾಡಿ ಬೇರೆ ಲುಕ್‌ ಕೊಡಬಹುದು.

ಕರೆಕ್ಟಿವ್ಮೇಕಪ್

ಈ ಮೇಕಪ್‌ನ್ನು ಹೆಚ್ಚಾಗಿ ಆ್ಯಂಕರ್‌, ನ್ಯೂಸ್‌ ರೀಡರ್‌ಗಳಿಗೆ ಬೆಸ್ಟ್ ಎನ್ನಲಾಗುತ್ತದೆ. ಅದು ಅವರಿಗೆ ಕ್ಯಾಮೆರಾದಲ್ಲಿ ಬೆಸ್ಟ್ ಲುಕ್‌ಕೊಡುತ್ತದೆ.

ಬೇಸ್ ಆಯ್ಕೆ : ಮುಖವನ್ನು ಸ್ವಚ್ಛಗೊಳಿಸಿ ಇಡೀ ಮುಖದ ಮೇಲೆ ಬ್ರಶ್‌ನಿಂದ ಪ್ರೈಮರ್‌ ಹಚ್ಚಿ. ಸ್ಕಿನ್‌ಗೆ ತಕ್ಕಂತೆ ಡರ್ಮಾ ಬೇಸ್‌ಕಲರ್‌ನ್ನು ಆಯ್ದುಕೊಳ್ಳಿ. ಡರ್ಮಾ ಬೇಸ್‌ ಹಾರ್ಡ್‌ ಆಗಿರುತ್ತದೆ. ಅದನ್ನು ಸಾಫ್ಟ್ ಮಾಡಲು ಅದರಲ್ಲಿ 1 ತೊಟ್ಟು ಮೇಕಪ್‌ ಬ್ಲೆಂಡ್ ಹಾಕಿ ಲಿಕ್ವಿಡ್‌ ಮಾಡಿ. ಬೇಸ್‌ನ್ನು ಮುಖದ ಮೇಲೆ ಯಾವಾಗಲೂ ತಪತಪನೆ ಹಚ್ಚಿ. ಡರ್ಮಾದ ಕಾಂಟೂರಿಂಗ್‌ ಕಲರ್‌ನಿಂದ ಮುಖದ ಫೋರ್‌ಹೆಡ್‌, ಚೀಕ್ಸ್, ಚಿನ್‌ ಇತ್ಯಾದಿ ವಿಂಗಡಿಸಿ.

ಐಸ್ಮೇಕಪ್‌ : ಐ ಶ್ಯಾಡೋ ಹಚ್ಚುವ ಮೊದಲು ಐ ಶ್ಯಾಡೋ ಪ್ರೈಮರ್‌ನ 1 ಹನಿ ಹಚ್ಚಿ. ಇದರಿಂದ ಬ್ಲೆಂಡಿಂಗ್‌ ಚೆನ್ನಾಗಿ ಆಗುತ್ತದೆ. ಬ್ರಶ್‌ನ ಬದಲು ಇದನ್ನು ಬೆರಳುಗಳಿಂದ ಹಚ್ಚಿ ಬ್ಲೆಂಡ್‌ ಮಾಡಿ. ನಂತರ ಇದರ ಮೇಲೆ ಕಾಪರ್‌ ಅಥವಾ ಗೋಲ್ಡನ್ ಬ್ರೌನ್‌ ಶ್ಯಾಡೋ ಹಚ್ಚಿ. ಕಣ್ಣುಗಳ ಕಾರ್ನರ್‌ಗಳ ಮೇಲೆ ಡಾರ್ಕ್‌ ಬ್ರೌನ್‌ ಶ್ಯಾಡೋ ಹಚ್ಚಿ. ಒಳಗಡೆಗೆ ಬ್ಲೆಂಡ್‌ ಮಾಡಿ. ಐ ಬ್ರೋಸ್ ಕೆಳಗೆ ಹೈಲೈಟರ್‌ ಸಿಲ್ವರ್‌ ಅಥವಾ ಗೋಲ್ಡನ್‌ ಯಾವುದಾದರೂ ಹಚ್ಚಬಹುದು. ನಂತರ ಐ ಬ್ರೋಸ್‌ಗೆ ಬ್ಲ್ಯಾಕ್‌ ಅಥವಾ ಬ್ರೌನ್ ಪೆನ್ಸಿಲ್‌‌ನಿಂದ ಅಥವಾ ಬ್ರಶ್‌ನಿಂದ ಕಲರ್‌ನ್ನು ಹಚ್ಚಿ ಹೈರೆಸ್ಟ್ ಪಾಯಿಂಟ್‌ನಿಂದ ಹಚ್ಚುತ್ತಾ ಒಳಭಾಗದತ್ತ ಬನ್ನಿ. ಈಗ ಬ್ರಶ್ ನಿಂದ ಐ ಲೈನರ್‌ ಹಚ್ಚಿ. ಕಣ್ಣುಗಳ ಆಕಾರಕ್ಕೆ ತಕ್ಕಂತೆ ಕಾಜಲ್‌ನ್ನು ಅಗತ್ಯವಿದ್ದರೆ ಉಪಯೋಗಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ