ಸಾಮಾನ್ಯವಾಗಿ ಟೀನೇಜ್ ಹುಡುಗಿಯರು ಕಂಗಳಿಗೆ ಕಾಡಿಗೆ ಹಾಗೂ ತುಟಿಗಳಿಗೆ ಲಿಪ್‌ಸ್ಟಿಕ್ ತೀಡುವುದು ವಾಡಿಕೆ, ಇದು ಹೆಚ್ಚು ಕಡಿಮೆ ಇಡೀ ದಿನ ಇರುತ್ತದೆ. ಆದರೆ ಹೀಗೆ ದಿನವಿಡೀ ಕಾಡಿಗೆ ತೀಡಿರುವುದರಿಂದ ಕಂಗಳ ಟಿಯರ್ ಗ್ಲಾಂಡ್ಸ್ ಕ್ಲೋಸ್ ಆಗಿಬಿಡುತ್ತವೆ. ಇದರಿಂದ ಕಂಗಳು ಡ್ರೈ ಆಗುತ್ತವೆ. ಹೀಗಾಗಿ ಆಗಾಗ ಅಮ್ಮಂದಿರು ತಮ್ಮ ವಯಸ್ಕ ಹೆಣ್ಣುಮಕ್ಕಳಿಗೆ ಕಾಡಿಗೆ ಹಚ್ಚುವಾಗ ಎಚ್ಚರಿಕೆಯಿಂದಿರಿ ಎಂದು ಆಗಾಗ ಹೇಳುತ್ತಲೇ ಇರಬೇಕು. ಜೊತೆಗೆ ಕಾಜಲ್, ಲಿಪ್‌ಸ್ಟಿಕ್, ಲಿಪ್ ಗ್ಲಾಸ್‌ಮುಂತಾದವೆಲ್ಲ ಖ್ಯಾತ ಕಂಪನಿಗಳದ್ದೇ ಆಗಿರಬೇಕು, ಅಗ್ಗದ ಮಾಲಲ್ಲ.
ಇದೇ ತರಹ ಮಸ್ಕರಾ ಬಳಸುವಾಗಲೂ ಸಹ ಈ ಮಾತುಗಳನ್ನು ನೆನಪಿಡಬೇಕು. ಮಸ್ಕರಾದಿಂದ ರೆಪ್ಪೆಗಳ ಮೇಲೆ ಕೃತಕ ಕೆಮಿಕಲ್ ಕೋಟಿಂಗ್ ಆಗುತ್ತದೆ. ಇದರಿಂದ ಕಣ್ಣೆವೆಗಳಿಗೆ ಆಕ್ಸಿಜನ್ ತಲುಪುದಿಲ್ಲ, ಆಗ ಆ ಕೂದಲು ಉದುರತೊಡಗುತ್ತದೆ.
ಇದೇ ತರಹ ತುಟಿಗಳಿಗೂ ಸದಾ ಲಿಪ್‌ಸ್ಟಿಕ್, ಲಿಪ್ ಗ್ಲಾಸ್‌ಬಳಿಯುತ್ತಿರಬಾರದು. ಆಗ ತುಟಿಗಳ ಒರಿಜಿನಲ್ ಬಣ್ಣ ಸಹಜವಾಗಿ ಮಂಕಾಗುತ್ತದೆ. ತುಟಿಗಳ ಸಹಜ ಗುಲಾಬಿ ಟಚ್ ಉಳಿಸಿಕೊಳ್ಳಲು, ಪೆಟ್ರೋಲಿಯಂ ಜೆಲ್ಲಿ (ವ್ಯಾಸಲಿನ್) ಬಳಸುವುದು ಲೇಸು. ಇದರಲ್ಲಿ ಆ್ಯಂಟಿ ಸೆಪ್ಟಿಕ್ ಅಂಶಗಳು ತುಂಬಿವೆ. ಯಾವುದೇ ಸಂದರ್ಭದಲ್ಲಿ ಟೀನೇಜ್ ಮಗಳು ಲಿಪ್‌ಸ್ಟಿಕ್ ಬಳಸಲೇಬೇಕೆಂದು ಬಯಸಿದರೆ ವಿಟಮಿನ್, ಮಾಯಿಶ್ಚರೈಸರ್ ಅಡಗಿರುವ ಲಿಪ್‌ಸ್ಟಿಕ್‌ನ್ನೇ ಆರಿಸಬೇಕು. ಇದು ತುಟಿಗಳ ಕೋಮಲತೆಗೆ ಬಾಧೆ ತರುವುದಿಲ್ಲ.
ಇಂದಿನ ಹುಡುಗಿಯರು ತಮ್ಮ ಲುಕ್, ಕುರಿತಾಗಿ ಬಲು ಎಚ್ಚರಿಕೆ ವಹಿಸುತ್ತಾರೆ. ಇಂದಿನ ಫ್ಯಾಷನ್ ಮತ್ತು ಗ್ಲಾಮರ್‌ಗೆ ಇದು ಅಗತ್ಯ ಕೂಡ. ಆದರೆ ನಿಮ್ಮ ಮಗಳ ಆರೋಗ್ಯಕ್ಕೆ ಯಾವುದು ಪೂರಕ ಎಂಥ ಪ್ರಾಡಕ್ಟ್ ಆರಿಸಬೇಕು ಎಂಬುದರತ್ತ ನೀವು ಮತ್ತೆ ಮತ್ತೆ ಗಮನ ಕೊಡಿ. ತಾಯಿ ಮಾತ್ರವೇ ಇಂಥ ಗೈಡೆನ್ಸ್ ಕೊಡಲು ಸಾಧ್ಯ, ಅದೂ ಬ್ರಾಂಡೆಡ್ ಆಗಿರುವ ಪ್ರಾಡಕ್ಟ್ ಮಾತ್ರ ಆಗಿರಲಿ.
- ಪ್ರೇಮಲತಾ