ಫಿಶ್ ಕಟ್ನ ಬ್ಲ್ಯಾಕ್ ಡ್ರೆಸ್ ಜೊತೆ ಅತ್ಯಾಕರ್ಷಕ ಹೇರ್ ಸ್ಟೈಲ್ ಕಾಂಬಿನೇಶನ್, ಗಾರ್ಜಿಯಸ್ ಪಾರ್ಟಿ ಲುಕ್ಸ್ ಗೆ ಪರ್ಫೆಕ್ಟ್ ಆಗಿದೆ. ಸಿಂಪಲ್ ಆದರೆ ಯುನಿಕ್ ಲುಕ್ಸ್ ಜೊತೆ ಈ ಚೆಲುವೆಯ ಬೆಡಗು ತುಸು ನಿಭಿನ್ನವಾಗಿಯೇ ಇದೆ.
ನೆಟ್ನ ಬ್ಯೂಟಿಫುಲ್ ಡಬಲ್ ಶೇಡೆಡ್, ವೆಸ್ಟ್ ಫಿಟೆಡ್ ಡಿಸೈನರ್ ಸೀರೆಯಂತಿರುವ ಲಹಂಗಾದ ಈ ಮೋಡಿ ಅದ್ಭುತಾದುದು.
ಹೆವಿ ಎಂಬ್ರಾಯಿಡರಿಯಿಂದ ಸುಸಜ್ಜಿತಗೊಂಡ ಲಹಂಗಾ ಚೋಲಿ ಮೇಲೆ ಬ್ಯೂಟಿಫುಲ್ ಡಿಸೈನಿನ ಉತ್ತಮ ವಿನ್ಯಾಸದ ಅಂಚುಳ್ಳ ದುಪಟ್ಟಾ ಅತ್ಯಾಕರ್ಷಕ ಎನಿಸುತ್ತಿದೆ. ಹೆವಿ ಎಂಬ್ರಾಯಿಡರಿಯುಳ್ಳ ಅತ್ಯಾಕರ್ಷಕ ಲಹಂಗಾ ಚೋಲಿ ಜೊತೆ ಮ್ಯಾಚಿಂಗ್ಆ್ಯಕ್ಸೆಸರೀಸ್ ಧರಿಸಿದ ಸುಂದರಿ ಸುಶ್ಮಿತಾಸೇನ್ ಈ ಗೆಟಪ್ನಲ್ಲಿ ಗ್ಲಾಮರಸ್ ಆಗಿ ಮಿಂಚುತ್ತಿದ್ದಾಳೆ.
ತ್ರೀಫೋರ್ತ್ ಬಾಹುಗಳುಳ್ಳ ಚೋಲಿ ಹಾಗೂ ದಟ್ಟ ನೆರಿಗೆಗಳ ಲೆಹಂಗಾ ಜೊತೆ ಹೆವಿ ದುಪಟ್ಟಾ ಅಥವಾ ಸೊಂಟದ ಬಳಿ ಹೆವಿ ಗೋಲ್ಡನ್ ವರ್ಕ್ವುಳ್ಳ ನೆಟೆಡ್ ಲಹಂಗಾ ಮತ್ತು ಸ್ಲೀವ್ ಲೆಸ್ ಚೋಲಿ ಜೊತೆ ಲವ್ಲಿ ನೆಟೆಡ್ ದುಪಟ್ಟಾ… ಈ ಇಬ್ಬರು ಬಾಲೆಯರೂ ಚಂದ್ರಮುಖಿ ಪ್ರಾಣಸಖಿಯರಂತೆ ಮಿರಿಮಿರಿ ಮಿಂಚುತ್ತಿದ್ದಾರೆ.