ಮೆಜೆಂತಾ, ಮಸ್ಟರ್ಡ್‌ ಮತ್ತು ಗ್ರೀನ್‌ ಕಾಂಬಿನೇಷನ್ನಿನ ಈ ದಟ್ಟ ಒಡಲಿನ ಸೀರೆ, ಅದರಲ್ಲಿನ ವಿನೂತನ ಕಸೂತಿಯಿಂದ ಸುಂದರವಾಗಿ ಕಂಗೊಳಿಸುತ್ತಿದೆ. ಇದರ ಗೋಲ್ಡನ್‌ ಬಣ್ಣದ ಸೆರಗು ಹಾಗೂ ಮ್ಯಾಚಿಂಗ್‌ ಬ್ಲೌಸ್‌ನಿಂದಾಗಿ ಈ ಸೀರೆ ಅದ್ಭುತ ಲುಕ್ ಗಳಿಸಿದೆ.

ಆಕಾಶ ನೀಲಿ ಒಡಲಿನ ರೇಷ್ಮೆ ಸೀರೆಗೆ ನಡುನಡುವೆ ವಿಶೇಷ ಪ್ರಿಂಟ್‌ಗಳ ವಿನ್ಯಾಸವಿದ್ದು, ಹಸಿರು ಸೆರಗು ಅಮೋಘವಾಗಿ ಹೊಂದುತ್ತದೆ. ಸೀರೆಗೆ ತಕ್ಕ ರವಿಕೆ ಹಾಗೂ ಒಪ್ಪುವ ಸರಳ ಆ್ಯಕ್ಸೆಸರೀಸ್‌, ಈಕೆ ಹಬ್ಬವನ್ನು ಎಂಜಾಯ್‌ ಮಾಡಲು ಕರೆ ನೀಡುತ್ತಿರುವಂತಿದೆ.

ದಟ್ಟ ಮೆಜೆಂತಾ ಬಣ್ಣದ ಒಡಲಿಗೆ, ಹೊಳೆಯುವ ಸುವರ್ಣಮಯ ಅಂಚು ಹಾಗೂ ಸೆರಗು, ಇಡೀ ಸೀರೆ ಶೋಭಾಯಮಾನವಾಗಿ ಎದ್ದುಕಾಣುವಂತೆ ಮಾಡಿದೆ. ಸಿಂಪಲ್ ಹೇರ್‌ಸ್ಟೈಲ್‌ಮೇಕಪ್‌, ಸರಳ ಹಾಗೂ ಸಾತ್ವಿಕ ಕಳೆ ತುಂಬಿಕೊಟ್ಟಿದೆ.

ಒಡಲು ಪೂರ್ತಿ ದಟ್ಟ ಪಿಂಕ್‌ ಇದ್ದು, ನಡುನಡುವೆ ನಕ್ಷತ್ರ ವಿನ್ಯಾಸ ಹರಡಿರುವ ಈ ಚೂಡಿದಾರ್‌, ತನ್ನ ಅತ್ಯಾಕರ್ಷಕ ಜರಿ ವಿನ್ಯಾಸದ ಬಾರ್ಡರ್‌ನಿಂದ ಕಣ್ಮನ ತಣಿಸುತ್ತದೆ. ಮ್ಯಾಚಿಂಗ್‌ ಪ್ಯಾಂಟ್‌ ಹಾಗೂ ದುಪಟ್ಟಾ ಈ ಉಡುಗೆಗೆ ರಿಚ್‌ ಗ್ರಾಂಡ್‌ ಲುಕ್ ನೀಡಿದೆ. ಸಾಂಪ್ರದಾಯಿಕ ಹಬ್ಬವನ್ನು ಆಧುನಿಕವಾಗಿ ಹೀಗೆ ಆಚರಿಸಬಹುದಲ್ಲವೇ?

ದಟ್ಟ ಮೆರೂನ್‌ ಬಣ್ಣದ ಸೀರೆಯಲ್ಲಿ ಹರಡಿದ ನಕ್ಷತ್ರಗಳ ವಿನ್ಯಾಸ, ಅಂಚು ಮತ್ತು ಸೆರಗಿನಲ್ಲಿ ಮಾಡಿಸಲಾದ ವಿಶಿಷ್ಟ ಆಧುನಿಕ ಡಿಸೈನ್‌ ಹಾಗೂ ಕಾಂಟ್ರಾಸ್ಟ್ ಹಸಿರು ಬಣ್ಣದ ಬ್ಲೌಸ್‌ ಮತ್ತದರ ಮ್ಯಾಚಿಂಗ್‌ ಬಾರ್ಡರ್‌, ಇಡೀ ಸೀರೆಗೆ ಹೊಸ ಕಳೆ ತಂದಿದೆ. ಅದನ್ನು ಗುಜರಾತಿ ಶೈಲಿಯಲ್ಲಿ ಉಟ್ಟ ಬಗೆ, ಒಡವೆಗಳ ಅಲಂಕಾರ, ಈಕೆ ಮದುವೆಯಾದ ಮೊದಲ ಯುಗಾದಿ ಆಚರಿಸುತ್ತಿದ್ದಾಳೆ ಎಂಬಂತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ