ಮಹಿಳೆಯರಿಗೆ ಸಾಮಾನ್ಯವಾಗಿ ಬೆಳಗ್ಗೆ 6 ಗಂಟೆಯಿಂದ ದಿನ ಆರಂಭವಾಗುತ್ತದೆ. ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುವುದು, ಗಂಡನನ್ನು ಆಫೀಸಿಗೆ ಕಳುಹಿಸುವುದು, ಒಂದು ವೇಳೆ ಸ್ವತಃ ಉದ್ಯೋಗಸ್ಥೆಯಾಗಿದ್ದರೆ ತಾನೂ ಸಿದ್ಧಳಾಗಿ ಆಫೀಸಿಗೆ ಹೋಗಿ ಕೆಲಸ ಮಾಡುತ್ತಾ ದಿನ ಹೇಗೆ ಕಳೆದುಹೋಗುತ್ತದೆಂದು ತಿಳಿಯುವುದೇ ಇಲ್ಲ.

ಅವರು ಸೂಪರವುಮನ್‌ ಆಗಿ ಖುಷಿಯಾಗಿರಲು ಸಾಧ್ಯವಿಲ್ಲ. ಏಕೆಂದರೆ ದಿನನಿತ್ಯದ ಒತ್ತಡಭರಿತ ದಿನಚರಿ ನಿಧಾನವಾಗಿ ಅವರ ಮುಗುಳ್ನಗುವನ್ನು ಕಿತ್ತುಕೊಳ್ಳುತ್ತದೆ. ಪ್ರತಿ ದಿನದ ನೀರಸ, ಒತ್ತಡಭರಿತ ಬದುಕಿನಿಂದ ಮಹಿಳೆಯರಿಗೆ ಬ್ರೇಕ್‌ಸಿಗಬಾರದೇ?

ವರ್ಲ್ಡ್ ಹೆಲ್ತ್ ಆರ್ಗನೈಸೇಷನ್‌ (ಡಬ್ಲ್ಯೂಎಚ್‌ಓ)ನ ಇತ್ತೀಚಿನ ಒಂದು ವರದಿಯ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಒತ್ತಡ ಉಂಟಾಗುವ ಸಂಭಾವ್ಯತೆ ದ್ವಿಗುಣವಾಗಿರುತ್ತದೆ. ಈ ಒತ್ತಡಕ್ಕೆ ಮುಖ್ಯ ಕಾರಣ ಮೆದುಳಿನಲ್ಲಿ ಸಿರೋಟೋನಿನ್‌, ನೋರ್‌ ಎಡ್ರಿನಾಲಿನ್‌ ಮತ್ತು ನ್ಯೂರೋಟ್ರಾನ್ಸ್ ಮೀಟರ್‌ಗಳಂತಹ ಡೋಪಾಮೀನ್‌ಗಳ ಕೊರತೆ. ಆದರೂ ಮಹಿಳೆಯರು ತಮಗಾಗಿ ಕೊಂಚ ಸಮಯ ಮೀಸಲಿಟ್ಟು ಸಂತೋಷವಾಗಿದ್ದು, ಜೀವನದ ವಿಶೇಷ ಕ್ಷಣಗಳನ್ನು ಸೆಲೆಬ್ರೇಟ್‌ಮಾಡಿಕೊಂಡರೆ ಅವರು ಪ್ರಸನ್ನಚಿತ್ತರಾಗಿ ಹಾಗೂ ಆರೋಗ್ಯವಾಗಿ ಇರುತ್ತಾರೆ. ಇಷ್ಟೇ ಅಲ್ಲ, ಕುಟುಂಬದ ಪರಿಸ್ಥಿತಿ ಹಾಗೂ ಸಂಬಂಧಗಳೂ ಸಕಾರಾತ್ಮಕ ಉತ್ಸಾಹದಿಂದ ತುಂಬಿತುಳುಕುತ್ತದೆ.

ಬರ್ಥ್ಡೇ ಸ್ಮರಣೀಯವಾಗಿರಲಿ

ಬರ್ಥ್‌ಡೇ ಪ್ರತಿದಿನ ಬರುವುದಿಲ್ಲ. ವರ್ಷಕ್ಕೊಂದೇ ಬಾರಿ ಬರುತ್ತದೆ. ಈ ಬಾರಿ ಬರ್ಥ್‌ಡೇಯನ್ನು ವಿಶೇಷವಾಗಿ ಆಚರಿಸಿ.

ಎಲ್ಲಕ್ಕೂ ಮೊದಲು ಬರ್ಥ್‌ಡೇನಂದು ಬೆಳಗ್ಗೆ ಬೇಗನೆ ಎದ್ದು ಗಡಿಬಿಡಿಯಿಂದ ಓಡಾಡುವ ಬದಲು ನಿಮ್ಮ ಕಾಫಿ, ತಿಂಡಿಯನ್ನು ಬೆಡ್ ಮೇಲೇ ತೆಗೆದುಕೊಳ್ಳುತ್ತೇನೆಂದು ನಿರ್ಧರಿಸಿ. ವರ್ಷವಿಡೀ ನೀವು ಬೆಳಗ್ಗೆ ಬೇಗನೆ ಎದ್ದು ಗಂಡ ಮತ್ತು ಮಕ್ಕಳಿಗೆ ತಿಂಡಿ, ಕಾಫಿ ಮಾಡಿ ಕೊಟ್ಟಿದ್ದೀರಿ. ಇಂದು ಅದರ ಜವಾಬ್ದಾರಿಯನ್ನು ಗಂಡ ಮತ್ತು ಮಕ್ಕಳ ಮೇಲೆ ಹಾಕಿ.

ಅಂದು ಇತರರ ಬದಲು ನಿಮಗಾಗಿ ಸಮಯ ಮಾಡಿಕೊಳ್ಳಿ. ಶಾಪಿಂಗ್‌ಗೆ ಹೋಗಿ ಒಳ್ಳೆಯ ಡ್ರೆಸ್‌ಗಳನ್ನು ಖರೀದಿಸಿ. ಒಳ್ಳೆಯ ಪಾರ್ಲರ್‌ಗೆ ಹೋಗಿ ಸ್ಪಾ ಮತ್ತು ಫೇಶಿಯಲ್ ಮಾಡಿಸಿಕೊಳ್ಳಿ. ಶ್ರೀಗಂಧ ಹಾಗೂ ವಿಧವಿಧವಾದ ಹೂಗಳ ಸುವಾಸನೆಯಲ್ಲಿ ಸ್ನಾನ ಮಾಡಿದರೆ ಮೈಮನಗಳ ಆಯಾಸ ಪರಿಹಾರವಾಗುತ್ತದೆ. ಫೇಶಿಯಲ್, ಬ್ಲೀಚ್‌ನಂತಹ ಟ್ರೀಟ್‌ಮೆಂಟ್‌ನಿಂದ ಮುಖಕ್ಕೆ ಹೊಸ ತಾಜಾತನ ಬರುತ್ತದೆ.

ನಿಮಗೆ ಇಷ್ಟವಾದ ಅಡುಗೆ ಮಾಡಿ ನೀವು ತಿನ್ನಿ. ಮನೆಯವರಿಗೂ ತಿನ್ನಿಸಿ. ಆಕರ್ಷಕ ಉಡುಪುಗಳನ್ನು ಧರಿಸಿ. ಇಡೀ ಮನೆಯನ್ನು, ಮುಖ್ಯವಾಗಿ ನಿಮ್ಮ ಕೋಣೆಯನ್ನು ಕೊಂಚ ವಿಶೇಷವಾಗಿ ಅಲಂಕರಿಸಿ.

ನಿಮಗೆ ಯಾವುದು ಇಷ್ಟವೋ ಅದನ್ನೇ ದಿನವಿಡೀ ಮಾಡುತ್ತಿರಿ. ಒಳ್ಳೆಯ ಸಿನಿಮಾ ನೋಡಲು ಹೋಗಿ. ಸಂಜೆ ನಿಮ್ಮ ಗೆಳತಿಯರೊಂದಿಗೆ ಮೋಜು ಮಾಡಿ. ಕಾಲೇಜಿನ ದಿನಗಳನ್ನು ನೆನಪು ಮಾಡಿಕೊಳ್ಳಿ. ಸಣ್ಣಪುಟ್ಟ ಪಾರ್ಟಿಯನ್ನೂ ಮಾಡಬಹುದು. ಒಟ್ಟಿನಲ್ಲಿ ಆ ದಿನವನ್ನು ಮನಸಾರೆ ಎಂಜಾಯ್‌ ಮಾಡಿ.

ನಿಮ್ಮ ಪ್ರತಿ ಬರ್ಥ್‌ಡೇ ಫೋಟೋಗಳನ್ನು ರೆಕಾರ್ಡ್‌ ಮಾಡಿ ಇಡಿ. ಮುಂದೆ ಅವನ್ನು ನೋಡಿದಾಗ ನಿಮಗೆ ಸಂತೋಷವಾಗುತ್ತದೆ.

ಅಂದು ಎಲ್ಲಾದರೂ ಸುತ್ತಾಡಲು ಹೋಗುವ ಪ್ರೋಗ್ರಾಂ ಹಾಕಿಕೊಳ್ಳಬಹುದು. ಗಂಡನೊಂದಿಗೆ ಲಾಂಗ್‌ ಡ್ರೈವ್ ‌ಕೂಡ ಹೋಗಬಹುದು.

ವಿವಾಹ ವಾರ್ಷಿಕೋತ್ಸವ

ಮದುವೆ ಒಮ್ಮೆ ಮಾತ್ರ ಆಗುತ್ತದೆ. ಆದರೆ ಮದುವೆಯ ವಾರ್ಷಿಕೋತ್ಸವ ಪ್ರತಿ ವರ್ಷ ಬರುತ್ತದೆ. ಆ ದಿನವನ್ನು ಕೊಂಚ ವಿಶೇಷ ಸ್ಟೈಲ್‌ನಿಂದ ಸೆಲೆಬ್ರೇಟ್‌ ಮಾಡಿ ನಿಮಗೆ ಸಂತಸ ಕೊಡುವ ಜೊತೆಗೆ ನಿಮ್ಮ ಸಂಬಂಧಗಳ ತಾಜಾತನವನ್ನು ವರ್ಷವಿಡೀ ಉಳಿಸಿಕೊಳ್ಳಬಹುದು. ಹಾಗಾದರೆ ನಿಮ್ಮ ಮ್ಯಾರೇಜ್‌ ಆ್ಯನಿವರ್ಸರಿಯನ್ನು ಹೀಗೆ ಆಚರಿಸಿ.

ಪ್ರೀತಿಯ ಹುರಿ ಬಲಹೀನವಾಗದಂತೆ ನಿಮ್ಮ ಭಾವನೆಗಳಿಗೆ ಶಬ್ದಗಳ ರೂಪ ಕೊಟ್ಟು ಸಂಗಾತಿಯ ಮುಂದೆ ಇಡಿ. ಅದಕ್ಕೆ ಆ್ಯನಿವರ್ಸರಿಗಿಂತ ಉತ್ತಮ ದಿನ ಇನ್ನೊಂದಿಲ್ಲ. ಬೆಳಗ್ಗೆಯೇ ಸಂಗಾತಿಗೆ ಪ್ರೇಮಭರಿತ ಕಾರ್ಡೊಂದನ್ನು ಗಿಫ್ಟ್ ಮಾಡಿ. ಕಾರ್ಡ್ ಪ್ರಿಂಟ್‌ ಮಾಡಿಸಿದರೆ ಒಳ್ಳೆಯದು. ಇಲ್ಲದ್ದಿದರೆ ನಿಮ್ಮ ಕೈಯಿಂದಲೇ ಕಾರ್ಡ್‌ ತಯಾರಿಸಿ. ನೀವೇ ಬರೆದ ಪ್ರೀತಿ ತುಂಬಿದ ಕವನವನ್ನು ಟೈಪ್‌ ಮಾಡಿಸಬಹುದು.

ರಾತ್ರಿಯ ಊಟ ಹೊರಗೇ ಮಾಡಿ. ಆ ಜಾಗಕ್ಕೆ ನಿಮ್ಮ ರೊಮ್ಯಾಂಟಿಕ್‌ ಜೀವನದಲ್ಲಿ ವಿಶೇಷ ಮಹತ್ವ ಇರಬೇಕು. ಅದು ನೀವು ಇಬ್ಬರೂ ಮೊದಲು ಭೇಟಿಯಾದ ಸ್ಥಳ ಇರಬಹುದು ಅಥವಾ ಎಂಗೇಜ್‌ಮೆಂಟ್‌ ನಡೆದ ಜಾಗವಾಗಿದ್ದು ಅಲ್ಲಿ ನೀವು ಸಂಗಾತಿಗೆ ಒಟ್ಟಿಗೆ ಜೀವನ ಸಾಗಿಸುವ ಬಗ್ಗೆ ಮಾತು ಕೊಟ್ಟಿರಬಹುದು.

ಸಂಗಾತಿಗೆ ಒಂದು ಸುಂದರ ಉಡುಗೊರೆ ಕೊಡಲು ಮರೆಯದಿರಿ. ಅವರಿಗಿಷ್ಟವಾದ ಅಥವಾ ನಿಮಗಿಷ್ಟವಾದದ್ದು, ಅದುವರೆಗೆ ನೀವು ಹಣದ ಕೊರತೆಯಿಂದ ಖರೀದಿಸದೇ ಇದ್ದುದನ್ನು ಖರೀದಿಸಿ.

ಅಂದು ನೀವು ಬಯಸಿದರೆ ನಿಮ್ಮ ಆತ್ಮೀಯ ಗೆಳತಿಯರ ಮುಂದೆ ಅಥವಾ ಏಕಾಂತದಲ್ಲಿ ಸಂಗಾತಿಯ ಎದುರಿಗೆ ನೀವು ಮದುವೆಯ ಸಮಯದಲ್ಲಿ ಕೊಟ್ಟಿದ್ದ ವಚನಗಳನ್ನು ಮತ್ತೆ ನೆನಪಿಸಿ.

ನೀವು ವೆಡ್ಡಿಂಗ್‌ ಡೇನ ಫೋಟೋ ಆಲ್ಬಂ ಮಾಡಿಸಿದಂತೆಯೇ ಒಂದು ಸ್ಕ್ರಾಪ್‌ ಬುಕ್‌ ಮಾಡಿಸಿ. ಅದರಲ್ಲಿ ಇಡೀ ಜೀವನಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಖುಷಿ, ಫನ್‌, ಮೋಜು ಮತ್ತು ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿದಿರಬೇಕು.

ಮನೆಯಲ್ಲಿ ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಇಬ್ಬರಿಗೂ ಇಷ್ಟವಾದ ಅಡುಗೆ ತಯಾರಿಸಿ.

ಜೋರಾಗಿ ಹಾಡುತ್ತಾ ಸಂಗಾತಿಯೊಂದಿಗೆ ಮೋಜಿನಿಂದ ನರ್ತಿಸಿ.

ಇಬ್ಬರೂ ಒಟ್ಟಿಗೆ ನಿಮ್ಮ ಮದುವೆಯ ವೀಡಿಯೋ ಮತ್ತು ಫೋಟೋ ಆಲ್ಬಂ ನೋಡುತ್ತಾ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಳ್ಳಿ.

ಆ್ಯನಿವರ್ಸರಿ ಪಾರ್ಟಿ ಇಟ್ಟು ನಿಮ್ಮ ಹತ್ತಿರದ ಫ್ರೆಂಡ್ಸ್ ಹಾಗೂ ಬಂಧುಗಳನ್ನು ಕರೆಯಿರಿ.

ವೆಡ್ಡಿಂಗ್‌ ಆ್ಯನಿರ್ಸರಿಯ ರಾತ್ರಿಯನ್ನು ಕೊಂಚ ವಿಶೇಷವಾಗಿ ಆಚರಿಸಿ. ಹಾಸಿಗೆಯ ಮೇಲೆ ಗುಲಾಬಿಯ ದಳಗಳನ್ನು ಹರಡಿ ಬಣ್ಣಬಣ್ಣದ ಕ್ಯಾಂಡಲ್‌ಗಳನ್ನು ಅಂಟಿಸಿ. ಹಗುರವಾದ ಸುವಾಸನೆ ಹಾಗೂ ಲೈಟ್‌ ಮ್ಯೂಸಿಕ್‌ನಿಂದ ರೊಮ್ಯಾಂಟಿಕ್‌ ವಾತಾವರಣ ಉಂಟು ಮಾಡಿ. ನಂತರ ನಿರ್ಯೋಚನೆಯಿಂದ ಸಂಗಾತಿಯ ಬಾಹುಗಳಲ್ಲಿ ಸೆರೆಯಾಗಿ.

ಇಬ್ಬರೂ ಭೇಟಿಯಾದಾಗ

ನೀವು ಮೊದಲ ಬಾರಿ ನಿಮ್ಮ ಪ್ರೇಮಿ ಅಥವಾ ಸಂಗಾತಿಯನ್ನು ಭೇಟಿಯಾದ ದಿನ ಮತ್ತು ಘಳಿಗೆ ಬಹಳ ಮಹತ್ವದ್ದಾಗಿರುತ್ತದೆ. ಈ ವಿಶೇಷ ದಿನದ ನೆನಪು ನಿಮ್ಮ ಮನಸ್ಸಿನಲ್ಲಿ ತಾಜಾ ಆಗಿ ಉಳಿಯಲು ಅದನ್ನು ಹೀಗೆ ಸೆಲೆಬ್ರೇಟ್‌ ಮಾಡಿ.

ನಿಮ್ಮಿಬ್ಬರ ಪ್ರೀತಿ ಶುರುವಾಗಿದ್ದ ಜಾಗದಲ್ಲಿ ಅಥವಾ ನೀವು ಮೊದಲ ಬಾರಿ ಭೇಟಿಯಾಗಿ ಸಾಕಷ್ಟು ಎಂಜಾಯ್‌ ಮಾಡಿದ್ದ ಜಾಗಕ್ಕೆ ಸುತ್ತಾಡಲು ಹೋಗಿ.

ಆ ದಿನ ನೀವು ಧರಿಸಿದ್ದ ಡ್ರೆಸ್ಸನ್ನೇ ಧರಿಸಿ.

ಮೊದಲ ಭೇಟಿಯಂದು ಯಾವ ಹೋಟೆಲ್‌‌ನಲ್ಲಿ ತಿಂಡಿ ತಿಂದಿದ್ದಿರೋ ಅಲ್ಲೇ ಹೋಗಿ ನಿಮಗಿಷ್ಟವಾದ ತಿಂಡಿ ತಿಂದು ಎಂಜಾಯ್‌ಮಾಡಿ.

ಸಂಗಾತಿಗೆ ಬೊಕೆ ಅಥವಾ ಯಾವುದಾದರೂ ಪ್ರೀತಿಯ ಗಿಫ್ಟ್ ಕೊಡಿ.

ಸಂಗಾತಿಯನ್ನು ಭೇಟಿಯಾದ ನಂತರ ನಿಮ್ಮ ಬದುಕು ಬದಲಾಗಿದೆ. ಯಾವಾಗಲೂ ಅವರೊಂದಿಗೆ ಹೀಗೆಯೇ ಜೀವನ ಕಳೆಯಲು ಇಚ್ಛಿಸುತ್ತೇನೆ ಎಂದು ವಿಶ್ವಾಸ ಉಂಟುಮಾಡಿ.

ಸ್ವಲ್ಪ ಸಮಯ ಇಬ್ಬರೂ ಏಕಾಂತದಲ್ಲಿ ಕಳೆಯಿರಿ. ಯಾರೂ ಬಳಿಯಲ್ಲಿ ಇರಬಾರದು. ಕೇವಲ ನೀವ ಹಾಗೂ ಅವರು ಇಬ್ಬರೇ.

ಇಬ್ಬರೂ ಕಣ್ಣುಗಳಲ್ಲೇ ಮಾತಾಡುತ್ತಿರಬೇಕು. ಬಾಯಿಂದ ಮಾತಾಡುವ ಅಗತ್ಯ ಇರಬಾರದು. ಆ ಕ್ಷಣಗಳಲ್ಲಿ ನೀವು ಮೊದಲ ಭೇಟಿಯ ನೆನಪುಗಳನ್ನು ಬಹಳ ಸುಂದರವಾಗಿ ಮಾಡಿಕೊಳ್ಳುತ್ತಿರಿ ಮತ್ತು ಮನಸ್ಸಿನಲ್ಲಿ ಪ್ರೀತಿ ಮತ್ತು ಸಂತಸದ ಅನುಭವ ಹರಡುತ್ತದೆ.

ಮೊದಲ ಮಗು

ನಿಮ್ಮ ಬದುಕಿನಲ್ಲಿ ಮೊದಲ ಮಗುವಿನ ಆಗಮನ ಬಹಳ ಮಹತ್ವದ್ದಾಗಿರುತ್ತದೆ. ಆ ದಿನವೇ ನೀವು ಮಾತೃತ್ವದ ಸುಂದರ ಅನುಭೂತಿ ಪಡೆದಿರುತ್ತೀರಿ. ನಿಮ್ಮ ಮಡಿಲಿನಲ್ಲಿ ಸಂತಸ ನಲಿದಾಡತೊಡಗಿದೆ. ಆ ದಿನವನ್ನು ಮರೆಯಲು ಹೇಗೆ ಸಾಧ್ಯ? ಅದನ್ನು ಹೀಗೆ ಸೆಲೆಬ್ರೇಟ್‌ ಮಾಡಿ.

ನಿಮ್ಮ ಮಗುವಿನೊಂದಿಗೆ ಅದಕ್ಕೆ ಇಷ್ಟವಾದ ಜಾಗದಲ್ಲಿ ಸುತ್ತಾಡಲು ಹೋಗಿ.

ಮಗುವಿಗೆ ಇಷ್ಟವಾದ ಗೊಂಬೆಯನ್ನು ಕೊಡಿಸಿ ಅಥವಾ ಅದು ಬಹಳ ದಿನಗಳಿಂದ ಕೇಳುತ್ತಿದ್ದ ಆಟದ ಸಾಮಾನು ಕೊಡಿಸಿ.

ಮಗುವನ್ನು ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಿ ಅಥವಾ ಮನೆಯಲ್ಲೇ ಸಣ್ಣ ಪುಟ್ಟ ಪಾರ್ಟಿ ಮಾಡಿ.

ಮಗು ಹುಟ್ಟಿದಾಗಿನಿಂದ ದೊಡ್ಡದಾಗುವವರೆಗೆ ಅದರ ಬಹಳಷ್ಟು ವಸ್ತುಗಳನ್ನು ನೀವು ಜೋಪಾನ ಮಾಡಿರಬಹುದು. ಜೊತೆಗೆ ಮಗುವಿನ ಬಗ್ಗೆ ನೀವು ಹೆಮ್ಮೆಪಟ್ಟ ಕ್ಷಣಗಳೂ ಇರಬೇಕು. ಆ ಕ್ಷಣಗಳನ್ನು ನೆನೆಸಿಕೊಂಡು ಸಂತೋಷಪಡಿ.

ಮಗು ಹುಟ್ಟಿದ್ದು ಹಾಗೂ ನಂತರದ ಫೋಟೋಗಳನ್ನು ಮತ್ತೆ ಮತ್ತೆ ನೋಡಿದಾಗ ಅವು ನಿಮ್ಮ ಜೀವನದಲ್ಲಿ ಹೇಗೆ ಸಂತಸ ತಂದ ಎಂದು ಅನುಭವವಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ