ದಿನೇದಿನೇ ಹೆಚ್ಚುತ್ತಿರುವ ಬೆಲೆ ಗಮನಿಸಿದರೆ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬೇಕಾದುದು ಅನಿವಾರ್ಯ. ಹೀಗಾಗಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅನೇಕ ಅವಕಾಶಗಳಿವೆ. ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಒಂದು ಉತ್ತಮ ಆಯ್ಕೆ. ಮ್ಯೂಚುವಸ್ ಫಂಡ್ ಯೋಜನೆಗಳ ಆಧಾರದಿಂದ ಖರೀದಿಸಲಾದ ಯೂನಿಟ್‌ಗಳಿಂದ ದೊರಕಿದ ಒಟ್ಟು ಮೊತ್ತದ ಹಣವನ್ನು ಫಂಡ್ ಮ್ಯಾನೇಜರ್ ವಿವಿಧ ಕಡೆ ಹೂಡಿಕೆ ಮಾಡುತ್ತಾನೆ. ಅಂದರೆ ಷೇರ್, ಡಿಬೆಂಚರ್ ಅಥವಾ ಓಪನ್ ಬಜಾರ್‌ನಲ್ಲಿ ಹೂಡಿಕೆ ಮಾಡುತ್ತಾನೆ. ಈ ರೀತಿ ಸಾಧಾರಣ ಜನರಿಗೆ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಉತ್ತಮ ಮಾಧ್ಯಮವಾಗಿದೆ. ಹೂಡಿಕೆದಾರರ ಅಗತ್ಯಗಳು, ಗುರಿ, ವಯಸ್ಸು, ಹಣಕಾಸು ಸ್ಥಿತಿ, ರಿಸ್ಕ್ ಫ್ಯಾಕ್ಟರ್ ಇತ್ಯಾದಿಗಳನ್ನು ಆಧರಿಸಿ ಮ್ಯೂಚುವಲ್ ಫಂಡ್‌ನ ಅನೇಕ ಯೋಜನೆಗಳಿವೆ. ಯಾವ ಸ್ಕೀಮಿನಲ್ಲಿ ಹೂಡಿಕೆದಾರರು ಎಷ್ಟು ಹಣ ಹೂಡುತ್ತಾರೋ, ಅವರಿಗೆ ಅವರ ಹೂಡಿಕೆಯ ಪ್ರಕಾರ ಯೂನಿಟ್ಸ್ ಸಿಗುತ್ತವೆ. ಪ್ರತ್ಯೇಕ ಯೂನಿಟ್‌ನ ಬೆಲೆಯನ್ನು ಮ್ಯೂಚುವಲ್ ಫಂಡ್‌ನ ಪೋರ್ಟ್ ಪೋಲಿಯೊ ಮಾರುಕಟ್ಟೆಯಲ್ಲಿ ಬದಲಾಗುತ್ತಿರುತ್ತದೆ.
ಮ್ಯೂಚುವಲ್ ಫಂಡ್‌ನ ಪ್ರಕಾರಗಳು
ಮ್ಯೂಚುವಲ್ ಫಂಡ್ಸ್ ಕ್ಲೋಸ್ ಎಂಡೆಡ್ ಹಾಗೂ ಓಪನ್ ಎಂಡೆಡ್ ಆಗಿರುತ್ತದೆ. ಕ್ಲೋಸ್‌ಎಂಡೆಂಡ್ ಮ್ಯೂಚುವಲ್ ಫಂಡ್‌ನ್ನು ನ್ಯೂ ಫಂಡ್ ಆಫರ್ ಮೂಲಕ ಖರೀದಿಸಿ, ನಂತರ ಪರಿಪಕ್ವಗೊಂಡಾಗ ಅದನ್ನು ಮಾರಬಹುದು. ಆದರೆ ಓಪನ್ ಎಂಡೆಡ್ ಸ್ಕೀಮಿನಲ್ಲಿ ಹೂಡಿಕೆ ಅಥವಾ ಹೂಡಿಕೆಯ ಬಿಕರಿಯನ್ನು ಯಾವಾಗ ಬೇಕಾದರೂ ಮಾಡಬಹುದು. ಹೂಡಿಕೆದಾರರು ತಮ್ಮ ಅಗತ್ಯಗಳ ಅನುಸಾರ ಇದರಿಂದ ಲಾಭ ಪಡೆಯಬಹುದು. ಮ್ಯೂಚುವಲ್ ಫಂಡ್‌ನ ಮೇಲ್ವಿಚಾರಣೆಯನ್ನು ಒಂದು ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಮಾಡುತ್ತದೆ. ಫಂಡ್‌ನ್ನು ಆರಿಸಿಕೊಳ್ಳುವಾಗ, ಯಾವ ಫಂಡ್‌ನಲ್ಲಿ ಹಣ ಹೂಡಲಿದ್ದೀರೋ, ಆ ಫಂಡ್ ಕುರಿತಾಗಿ ತಿಳಿದುಕೊಳ್ಳಬೇಕಾದುದು ಎಂದರೆ, ಅವರು ಆ ಹಣವನ್ನು ಎಲ್ಲೆಲ್ಲಿ ತೊಡಗಿಸಲಿದ್ದಾರೆಂಬುದು.
ಲಿಕ್ವಿಡ್ ಫಂಡ್ : 36 ತಿಂಗಳ ಅವಧಿಗೆ ಹೂಡಿಕೆ ಮಾಡಬೇಕಿದ್ದರೆ, ಲಿಕ್ವಿಡ್ ಫಂಡ್‌ನ್ನೇ ಆರಿಸಿ. ಇದು 91 ದಿನಗಳ ಒಳಗೆ ಮೆಚ್ಯೂರ್‌ಆಗುತ್ತದೆ.
ತೆರಿಗೆ ವಿನಾಯಿತಿಯ ಯೋಜನೆಗಳು : ಈ ಯೋಜನೆಗಳು ಹೂಡಿಕೆದಾರರಿಗೆ ಕಾಲಾನುಕಾಲಕ್ಕೆ ಟ್ಯಾಕ್ಸ್, ನಿಯಮಗಳ ಅನ್ವಯ, ಟ್ಯಾಕ್ಸ್ ನಿಂದ ಮುಕ್ತಿ ಕೊಡಿಸುತ್ತವೆ ಹಾಗೂ ಮ್ಯೂಚುವಲ್ ಫಂಡ್‌ಗಳ ಮಾಧ್ಯಮದಿಂದ ಈಕ್ವಿಟಿ ಷೇರುಗಳಲ್ಲಿ ಸುದೀರ್ಘ ಕಾಲದ ಹೂಡಿಕೆಗೆ ಪ್ರೋತ್ಸಾಹ ನೀಡುತ್ತವೆ. ನೀವು ದೀರ್ಘಾವಧಿಗಾಗಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಯಸಿದರೆ, ್ಹಪಿ ಅಂದರೆ ಸಿಸ್ಟಮ್ಯಾಟಿಕ್ ಇನ್‌ವೆಸ್ಟ್ಮೆಂಟ್ ಪ್ಲಾನ್‌ಗೆ ತಕ್ಕಂತೆ ಹೂಡಿಕೆ ಮಾಡಬಹುದು. ಇದರಲ್ಲಿ 1 ಕಂತಿನ ನಿಶ್ಚಿತ ಮೊತ್ತವನ್ನು ಒಂದು ಸ್ಕೀಮಿನಲ್ಲಿ ನಿಯಮಿತ ರೂಪದಲ್ಲಿ ಹೂಡಿಕೆ ಮಾಡಬೇಕು. ಈ ಸ್ಕೀಂ ನಿಮಗೆ ಒಂದೇ ಸಲ ಭಾರಿ ಮೊತ್ತವನ್ನು ಹೂಡುವ ಬದಲು ಮ್ಯೂಚುವಲ್ ಫಂಡ್‌ನಲ್ಲಿ ಕಡಿಮೆ ಅವಧಿಗೆ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.
ಡೆಟ್ ಫಂಡ್ : ಈ ತರಹದ ಫಂಡ್‌ನ ಉದ್ದೇಶ ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆಯ ಮೂಲಕ ಲಾಭ ಕೊಡಿಸುತ್ತದೆ. ಸಾಮಾನ್ಯವಾಗಿ ಇಂಥ ಯೋಜನೆಗಳ ಹಣ ಸರ್ಕಾರಿ ಕ್ಷೇತ್ರ, ಬಾಂಡ್ಸ್ ಹಾಗೂ ಕಾರ್ಪೊರೇಟ್ ಡಿಬೆಂಚರ್‌ಗಳಲ್ಲಿ ತೊಡಗಿಸುವುದಾಗಿರುತ್ತದೆ.