ಈಕೆ 2001ರಲ್ಲಿ ಮಿಸ್ ದೆಹಲಿ, ಫಸ್ಟ್ ರನ್ಸರ್ ಅಪ್ ಎನಿಸಿದ್ದರು. ಇಂಥ ಮನೀಷಾ ಚೋಪ್ರಾ ಮೊದಲಿನಿಂದಲೂ ಬಿಸ್‌ನೆಸ್ ವಿಷಯದಲ್ಲಿ ಸಕ್ರಿಯವಾಗಿದ್ದರು. ಆಕೆ ಸಮಾಜ ಮತ್ತು ಮಹಿಳಾ ಸಶಕ್ತೀಕರಣಕ್ಕಾಗಿ ಏನಾದರೂ ಮಾಡಬಯಸಿದರು. ಸ್ತ್ರೀವಾದದ ಪರವಾಗಿ ನಡೆಯುವ ಎಲ್ಲಾ ಸ್ಪರ್ಧೆ, ಕಾರ್ಯಕ್ರಮಗಳಲ್ಲೂ ಅವರು ಸದಾ ಮುಂದಾಳು.
ಮನೀಷಾರ ತಾಯಿ 80ರ ದಶಕದ ಮೇಕಪ್ ಆರ್ಟಿಸ್ಟ್. ಆಕೆ ಬಾಲಿವುಡ್ ಕಲಾವಿದರ ಜೊತೆ ಬೇಕಾದಷ್ಟು ಕೆಲಸ ಮಾಡಿದ್ದಾರೆ. ಇದೇ ಕಾರಣದಿಂದ ಮನೀಷಾ ಟೆಲಿಕಾಂ ಎಂಜಿನಿಯರಿಂಗ್ ನಂತರ ಮದುವೆ ಆದಮೇಲೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ, ಮೇಕಪ್ ಆರ್ಟಿಸ್ಟ್ ಆಗಿಯೇ ತಮ್ಮ ಐಡೆಂಟಿಟಿ ಪಡೆದರು.
ಮನೀಷಾ ಸೀಸೋಲ್ ಕಾಸ್ಮಾಸೂಟಿಕಲ್ಸ್ ನ ಕೋಫೌಂಡರ್‌ಡೈರೆಕ್ಟರ್ ಆಗಿದ್ದಾರೆ. 2013ರಲ್ಲಿ ಸ್ಥಾಪಿಸಲ್ಪಟ್ಟ ಸೀಸೋಲ್ ವಿಭಿನ್ನ ತರಹದ ಸ್ಕಿನ್‌ಕೇರ್ ಪ್ರಾಡಕ್ಟ್ಸ್ ನ ತಯಾರಕ ಹಾಗೂ ವಿತರಕ ಕಂಪನಿಯಾಗಿದೆ.
ನೀವು ಈ ಫೀಲ್ಡ್ ಗೆ ಬರಲು ಯಾರ ಪ್ರೇರಣೆ ಮಹತ್ವದ ಪಾತ್ರ ವಹಿಸಿತು?
ಖಂಡಿತವಾಗಿಯೂ ನನ್ನ ಪತಿ ಸಂಕಲ್ಪ್ ಚೋಪ್ರಾರದು. ಅವರು ನನ್ನ ಅತಿ ದೊಡ್ಡ ಪ್ರೇರಣಾದಾಯಕರು ಹಾಗೂ ಸಮರ್ಥಕರು. ಅವರೊಂದಿಗೆ ಮದುವೆ ಆದಮೇಲೆ, ನಾನು ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸಬಹುದು ಎಂದು ಕಂಡುಕೊಂಡೆ. ಮದುವೆ ನಂತರ ನಾವು ಆಸ್ಟ್ರೇಲಿಯಾದಲ್ಲಿ ಸೆಟ್ಲ್ ಆದೆ. ಅಲ್ಲಿಯೇ ನಾವು ಸೀಸೋಲ್‌ನ್ನು ಸ್ಥಾಪಿಸಿದೆ. ಪತಿ ಹಾಗೂ ನನ್ನ ಕುಟುಂಬದ ಇತರರು ಈ ನಿಟ್ಟಿನಲ್ಲಿ ನನಗೆ ಬಹಳ ಒತ್ತಾಸೆ ನೀಡಿದರು.
ಎಷ್ಟೋ ಯುವತಿಯರು ಉತ್ಸಾಹದಿಂದ ಬಿಸ್‌ನೆಸ್ ಏನೋ ಆರಂಭಿಸುತ್ತಾರೆ, ಆದರೆ ಯಶಸ್ವಿ ಎನಿಸುವುದಿಲ್ಲ. ಅಂಥವರಿಗೆ ನಿಮ್ಮ ಸಲಹೆ…?
ಒಬ್ಬ ಯಶಸ್ವಿ ಉದ್ಯಮಿಯಾಗಿ ನಾನು ಹೇಳುವುದೆಂದರೆ, ಹೊಸ ಬಿಸ್‌ನೆಸ್ ನಡೆಸಬೇಕೆನ್ನುವ ಐಡಿಯಾ ಏನಾದರೂ ನಿಮ್ಮ ಬಳಿ ಇದ್ದರೆ, ಅದರ ಕುರಿತಾಗಿ ವಿವರವಾಗಿ ಮಾರ್ಕೆಟ್ ಸರ್ವೆ ಮಾಡಿ, ಲಾಭನಷ್ಟಗಳ ಆಗುಹೋಗುಗಳ ಲೆಕ್ಕ ಹಾಕಿ. ಪ್ರತಿ ವರ್ಷ ಎಷ್ಟೋ ಹೊಸ ಸ್ಟಾರ್ಟ್ ಅಪ್‌ಗಳೇನೋ ಬರುತ್ತವೆ, ಆದರೆ ಇದರಲ್ಲಿ ಶೇ.80 ರಷ್ಟು ಹೆಂಗಸರು ತಮ್ಮ ಈ ಹೊಸ ಬಿಸ್‌ನೆಸ್ ಕುರಿತಾದ ಕಡಿಮೆ ತಿಳಿವಳಿಕೆಯಿಂದಾಗಿ, ಒಳಹೊರಗುಗಳ ಅರಿವಿಲ್ಲದೆ ವಿಫಲರಾಗುತ್ತಾರೆ. ಶುರು ಮಾಡುವುದೇನೋ ಸುಲಭ, ಆದರೆ ಅದನ್ನು ಯಶಸ್ವಿಗೊಳಿಸುವುದು ಅಷ್ಟೇ ಕಷ್ಟಕರ.
ಹಲವು ಕಾರಣಗಳಿಂದಾಗಿ ಪ್ರತಿಯೊಬ್ಬ ಮಹಿಳೆ ತಾನು ಬಯಸಿದ ಡಿಗ್ರಿ ಪಡೆಯಲಾಗದು. ಅಂಥವರು ಬಿಸ್‌ನೆಸ್ ವಿಷಯದಲ್ಲಿ ತಮ್ಮ ಕನಸು ನನಸಾಗಿಸಿಕೊಳ್ಳುವುದು ಹೇಗೆ?
ತಾವು ಬಯಸಿದ ಡಿಗ್ರಿ ಹೊಂದಿರದಿದ್ದರೂ ಸಹ ಇಂಥ ಮಹಿಳೆಯರು ತಮ್ಮ ಕನಸನ್ನು ನನಸಾಗಿಸಲು, ತಮ್ಮ ಬಿಸ್‌ನೆಸ್‌ಗೆ ಸಂಬಂಧಿಸಿದಂತೆ ಉತ್ತಮ ವ್ಯವಹಾರಜ್ಞಾನ, ಮನೋಭಾವ ಹೊಂದಿರಬೇಕು. ಕಲಿಯುವ ಪ್ರಕ್ರಿಯೆ ಜೀವನವಿಡೀ ಮುಂದುವರಿಯುತ್ತದೆ ಎಂದೇ ನಂಬಿದ್ದೇನೆ ಅದೂ ಬಿಸ್‌ನೆಸ್ ವಿಷಯದಲ್ಲಿ ಯಾರಿಂದ, ಯಾವಾಗ ಬೇಕಾದರೂ ಕಲಿಯಬಹುದು.
ಮತ್ತೊಂದು ವಿಷಯ, ಪ್ರತಿಯೊಬ್ಬ ಮಹಿಳೆಯೂ ತಮ್ಮ ಇಂಥ ಕನಸನ್ನು ನನಸಾಗಿಸಲು ಉತ್ಸಾಹದಿಂದ ಮುನ್ನುಗ್ಗುತ್ತಲೇ ಇರಬೇಕು, ಹೇಗಾದರೂ ತಮ್ಮೊಳಗೆ ಜೋಶ್ ಹೆಚ್ಚಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಕೆರಿಯರ್‌ನಲ್ಲಿ ಬ್ಯಾಲೆನ್ಸ್ ಕಾಪಾಡಿಕೊಳ್ಳುತ್ತಾ ಮುಂದುವರಿಯಬಹುದು.
ಮಹಿಳಾ ಉದ್ಯಮಿಯಾದ ಕಾರಣ ನೀವು ಎಂತೆಂಥ ಸವಾಲು ಎದುರಿಸಬೇಕಾಗಿ ಬಂದಿತು?
ಖಂಡಿತವಾಗಿಯೂ ನಾನು ಹಲವು ಬಗೆಯ ಸವಾಲುಗಳನ್ನು ಎದುರಿಸಬೇಕಾಯಿತು. ಒಬ್ಬ ಉದ್ಯಮಿ ಮಾತ್ರವಲ್ಲದೆ, ನಾನು ಒಬ್ಬ ಪತ್ನಿ, ತಾಯಿ, ಮಗಳ ರೂಪದಲ್ಲಿ ಬಗೆಬಗೆಯ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ. ಇದೆಲ್ಲ ಕಠಿಣ ಕಾರ್ಯ ನಿಜ, ಆದರೆ ನಾನು ಇವೆಲ್ಲದರ ನಡುವೆ ಬ್ಯಾಲೆನ್ಸ್ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತೇನೆ. ಪ್ರಾಡಕ್ಟ್ಸ್ ಲಾಂಚ್‌ಗಾಗಿ ನಾನು ತಿಂಗಳಲ್ಲಿ 15-20 ದಿನ ಅನಿವಾರ್ಯವಾಗಿ ಮನೆಯಿಂದ ಹೊರಗೆ ಇರಬೇಕಾಗುತ್ತದೆ. ಮನೆಯಲ್ಲಿ ಇಬ್ಬರು ಮಕ್ಕಳನ್ನು ಹಾಗೇ ಬಿಟ್ಟು ಹೊರಗೆ ಕೆಲಸ ನಿರ್ವಹಿಸಬೇಕಾದ ಈ ಜಂಜಾಟ ನಿಜಕ್ಕೂ ನನ್ನ ಪಾಲಿನ ದೊಡ್ಡ ಸವಾಲೇ ಸರಿ!
ಸೌಂದರ್ಯ ಮತ್ತು ವ್ಯಕ್ತಿತ್ವದ ನಡುವೆ ಎಂಥ ಸಂಬಂಧವಿದೆ ಅಂತೀರಾ?
ಇವೆರಡರ ನಡುವೆ ಬಲು ಆಳವಾದ ಸಂಬಂಧವಿದೆ. ಮೇಕಪ್ ಸ್ಕಿನ್‌ಕೇರ್ ಪ್ರಾಡಕ್ಟ್ಸ್ ನಿಂದ ಎಂಥ ಮಹಿಳೆಯನ್ನಾದರೂ ಸುಂದರವಾಗಿ ಮಾರ್ಪಡಿಸಬಹುದು.
ಪ್ರತಿಯೊಬ್ಬ ಮಹಿಳೆಯೂ ಸುಂದರಿಯೇ… ಆದರೆ ಅದನ್ನು ಸೂಕ್ತವಾಗಿ ಗುರುತಿಸಿ ತಿಳಿದುಕೊಳ್ಳಬೇಕಷ್ಟೆ. ಪ್ರತಿಯೊಬ್ಬರಲ್ಲೂ ಏನಾದರೊಂದು ವೈಶಿಷ್ಟ್ಯವಿದ್ದೇ ಇರುತ್ತದೆ. ಅದನ್ನು ಒರೆಹಚ್ಚಿ ತಿಳಿಯಬೇಕು. ಸರಿಯಾದ ರೀತಿಯಲ್ಲಿ ಮೇಕಪ್ ಮಾಡಿದ್ದೇ ಆದರೆ, ಅದು ಹೆಣ್ಣಿಗೆ ಹೆಚ್ಚಿನ ಆತ್ಮವಿಶ್ವಾಸ ತಂದುಕೊಡುತ್ತದೆ. ಯಾರೋ ಒಬ್ಬ ಜನಪ್ರಿಯ ಸೆಲೆಬ್ರಿಟಿಯನ್ನು ಕಾಪಿ ಮಾಡಿ ಎಂದು ನಾನು ನಿಮಗೆ ಹೇಳುತ್ತಿಲ್ಲ, ಏಕೆಂದರೆ ಅದು ನಿಮಗೆ ಸೂಟ್ ಆಗದಿರಬಹುದು. ನಿಮ್ಮ ದೇಹ ಪ್ರಕೃತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಅನುರೂಪವಾಗಿ ನಡೆದುಕೊಳ್ಳಿ.
ನಿಮ್ಮ ಇತರ ಆಸಕ್ತಿಗಳೇನು?
ಸೀಸೋಲ್ ಒಂದೇ ನನ್ನ ಪ್ರಮುಖ ಆಸಕ್ತಿ. ನಾನು ಸದಾ ಸರ್ದಾ ಇದರ ಏಳಿಗೆಗಾಗಿ ದುಡಿಯ ಬಯಸುತ್ತೇನೆ. ಹಾಗೊಂದು ವೇಳೆ ಸಮಯ ಉಳಿದರೆ ಮಕ್ಕಳ ಜೊತೆ ಅದನ್ನು ಕಳೆಯುತ್ತೇನೆ.
ಮಹಿಳೆಯರ ಕುರಿತಾಗಿ ನಮ್ಮ ಜನರ ಮನೋಭಾವ ಬದಲಾಗಿದೆ ಅಂತೀರಾ?
ಹೌದು, ಬದಲಾವಣೆ ಆಗಿದೆ, ಆದರೆ ಪೂರ್ತಿ ಆಗಿಲ್ಲ. ಟಿಯರ್ ಮತ್ತು ಟಿಯರ್, ಲೆವೆಲ್‌ನ ನಗರಗಳು ಎಷ್ಟೋ ಪ್ರಮಾಣದಲ್ಲಿ ಟಿಯರ್ ನಗರಗಳಿಗಿಂತ ಬೆಟರ್ ಅನಿಸುತ್ತವೆ. ಗಂಡಸರು ಈಗ ಹೆಂಗಸರನ್ನು ಕೇವಲ ಸಂಗಾತಿ ಮಾತ್ರವಲ್ಲದೆ, ವರ್ಕಿಂಗ್ ಪಾರ್ಟ್‌ನರ್ ಆಗಿಯೂ ಆದರಿಸತೊಡಗಿದ್ದಾರೆ. ಜನರ ದೃಷ್ಟಿಕೋನ ಬದಲಾಗಿದೆಯಾದರೂ ಅದಿನ್ನೂ 100% ಆಗಿಲ್ಲ ಅನಿಸುತ್ತದೆ.
– ಜಿ. ಪಂಕಜಾ