”ನ್ಯಾಚುರಲ್ಸ್ ಹೇರ್‌ಬ್ಯೂಟಿ ಸೆಲೂನಿನ ಪ್ರೊಪ್ರೈಟರ್‌ವೀಣಾ ಕುಮಾರ್‌ವೇಲ್, ದೇಶವಿದೇಶಗಳಲ್ಲಿ 410 ಔಟ್‌ಲೆಟ್ಸ್ ಹೊಂದಿದ್ದು, ಅದರಲ್ಲಿ 180 ಫ್ರಾಂಚೈಸಿ ಆಗಿದೆ. ಇವರ ಮುಂದಿನ ಗುರಿ 3000 ಔಟ್‌ಲೆಟ್ಸ್ ಹೊಂದುವುದಲ್ಲದೆ, ತಮ್ಮೊಂದಿಗೆ ಲಿಂಕ್‌ಹೊಂದಿರುವ ಮಹಿಳಾ ಉದ್ಯಮಿಗಳನ್ನು 1000 ಸಂಖ್ಯೆ ದಾಟಿಸುವುದಾಗಿದೆ. ಸ್ವರ್ಣಭೂಮಿ ಕ್ಯಾಂಪಸ್‌ಮೂಲಕ ಬೆಂಗಳೂರು, ಚೆನ್ನೈ, ಕೊಯಂಬತ್ತೂರು, ಹೈದರಾಬಾದ್‌ಗಳಲ್ಲಿ ತಮ್ಮದೇ ಆದ ಟ್ರೇನಿಂಗ್‌ಅಕಾಡೆಮಿ ಹೊಂದಿದ್ದಾರೆ. ಕೆಲವು ಮಹಿಳಾ ಉದ್ಯಮಿಗಳು ಒಂದಷ್ಟನ್ನು ಸಾಧಿಸಿ, ಆರಾಮವಾಗಿ ಇರೋಣವೆಂದು ಭಾವಿಸುತ್ತಾರೆ. ಭಾರತದ ನಂ.1 ಬ್ಯೂಟಿ ಸೆಲೂನ್`ನ್ಯಾಚುರಲ್ಸ್ ಹೇರ್‌ಬ್ಯೂಟಿ ಸೆಲೂನ್’ನ ಪ್ರೊಪ್ರೈಟರ್‌ವೀಣಾ ಕುಮಾರ್‌ವೇಲ್‌ಸದಾ ಏಳಿಗೆಯತ್ತ ಹೆಜ್ಜೆ ಹಾಕುವ ಕೆಲವೇ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು.
ಇವರ ಸೆಲೂನ್‌ಗಳು ಭಾರತದ ಉದ್ದಗಲಕ್ಕೂ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹರಡಿದೆ, ಜೊತೆಗೆ ವಿದೇಶಗಳಲ್ಲೂ ಶಾಖೆಗಳಿವೆ. ಸತತ ಪರಿಶ್ರಮದಿಂದ ತಮ್ಮ ಕಂಪನಿಗಾಗಿ ಅನೇಕ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ.
ವಿದೇಶಗಳಲ್ಲಿ ನೀವು ಎಲ್ಲೆಲ್ಲಿ ಶಾಖೆಗಳನ್ನು ತೆರೆದಿರುವಿರಿ?
ದುಬೈನಲ್ಲಿ ಈಗಾಗಲೇ ಶಾಖೆ ತೆರೆದಾಯಿತು. ಮುಂದೆ ಅಮೆರಿಕಾದಲ್ಲೂ ತೆರೆಯುವ ಉದ್ದೇಶವಿದೆ.
ಪ್ರಾರಂಭದಲ್ಲಿ ನಿಮಗೆ ಈ ಕ್ಷೇತ್ರದಲ್ಲಿ ಏನೇನು ಕಷ್ಟಗಳನ್ನು ಎದುರಿಸಬೇಕಾಯಿತು?
ಪ್ರಾರಂಭದಲ್ಲಿ ನಮಗೆ ಆರ್ಥಿಕ ತೊಂದರೆಗಳೇ ಹೆಚ್ಚಿದ್ದವು. 3 ವರ್ಷಗಳವರೆಗೂ ನಾವು ಹೂಡಿದ್ದ ಹಣದಲ್ಲಿ ಅರ್ಧ ಬರಲಿಲ್ಲ. ಏಕೆಂದರೆ ಎಲ್ಲಕ್ಕೂ ಮೊದಲು ಚೆನ್ನೈನ ರಿಚ್‌ಏರಿಯಾ ನುಂಗಂಬಾಕ್ಕಮ್ ಖಾದರ್‌ನಾಜ್‌ಖಾನ್‌ರೋಡ್‌ನಲ್ಲಿ ಸೆಲೂನ್‌ತೆರೆದೆವು. ಅದು ಬಹಳ ಪಾಶ್‌ಏರಿಯಾ, ಹೀಗಾಗಿ ಇಂಟೀರಿಯರ್‌ಗೆ ಬಹಳ ಖರ್ಚು ಮಾಡಬೇಕಾಯಿತು. ಆದರೆ ನಾವು ಸೋಲು ಒಪ್ಪಲಿಲ್ಲ, ಕೊನೆಗೆ ಯಶಸ್ಸು ಸಿದ್ಧಿಸಿತು.
1997ರಲ್ಲಿ ಲಂಡನ್ನಿನಲ್ಲಿ `ಅನಿತ್ ರೋಡಿಕ್’ರ ಜೊತೆ ಬೆರೆತು ಹೇಗೆ ಬಿಸ್ನೆಸ್ ಅಭಿೃದ್ಧಿಪಡಿಸಿದಿರಿ?
ಈಕೆ ಲಂಡನ್ನಿನ ಖ್ಯಾತ ಬಾಡಿ ಶಾಪ್‌ನ ಫೌಂಡರ್. ಇವರ ನ್ಯಾಚುರಲ್ ಪ್ರಾಡಕ್ಟ್ಸ್ ಬಹಳ ಪ್ರಸಿದ್ಧ. ಇವರ ಪುಸ್ತಕ ಓದಿ, ಕ್ಯಾಸೆಟ್ಸ್ ಕೇಳಿ ಪ್ರಭಾವಿತಳಾದೆ. ಇವರನ್ನು ಬ್ಯೂಟಿ ಬಿಸ್‌ನೆಸ್‌ನಲ್ಲಿ ಇನ್‌ವಾಲ್ವ್‌ಆಗುವಂತೆ ಕೇಳಿದಾಗ, ಭಾರತದಲ್ಲಾದರೆ ಬೇಡ ಎಂದುಬಿಟ್ಟರು. ನಂತರ ಒಪ್ಪಿಕೊಂಡು ಕೈಗೂಡಿಸಿದರು.
`ನ್ಯಾಚುರಲ್ಸ್‘ನ ಫ್ರಾಂಚೈಸಿ ಪಡೆಯಲು ಮಹಿಳೆಯರು ಏನು ಮಾಡಬೇಕು?
ಮೊದಲು ಮಹಿಳೆಯರು ಈ ಕುರಿತಾಗಿ ಏನಾದರೂ ಮಾಡಬೇಕೆಂದು ಯೋಚಿಸುತ್ತಾರೆ. ನಂತರ ಹಣಕಾಸಿನ ಲೆಕ್ಕಾಚಾರ ಹಾಕಿ ಹಿಂದೆ ಸರಿಯುತ್ತಾರೆ. ಅದುವೇ ಅವರ ಮೊದಲ ತಪ್ಪು. ಯಶಸ್ಸಿಗೆ ಧೈರ್ಯ, ಆತ್ಮವಿಶ್ವಾಸ ಅತ್ಯಗತ್ಯ. ಫ್ರಾಂಚೈಸಿಗಾಗಿ ಮಹಿಳೆಯರು ಬ್ಯಾಂಕಿನಿಂದ ಲೋನ್‌ಪಡೆಯಬೇಕು. ಫ್ರಾಂಚೈಸಿ ನಡೆಸಲು ಕೆಲವು ವರ್ಷಗವಳರೆಗೆ ಇಟಿಸಿ ಸಹಾಯ ಮಾಡುತ್ತದೆ. ಇಂಡಿಯನ್‌ಓವರ್‌ಸೀಸ್‌ಬ್ಯಾಂಕ್‌ಹಾಗೂ ಭಾರತೀಯ ಮಹಿಳಾ ಬ್ಯಾಂಕ್-45 ಲಕ್ಷದವರೆಗೂ ಹಣದ ಸಾಲ ಒದಗಿಸುತ್ತದೆ. ಕೆಲವು ಔಪಚಾರಿಕ ಅಗತ್ಯಗಳನ್ನು ಪೂರೈಸಬೇಕಷ್ಟೆ.
ಇಲ್ಲಿಯವರೆಗೂ ನಿಮ್ಮದು ಎಷ್ಟು ಔಟ್ಲೆಟ್ಸ್ ಗಳಾದವು?
ನಮ್ಮದು ಒಟ್ಟು 410 ಔಟ್‌ಲೆಟ್ಸ್ ಗಳಿವೆ. ಇದರಲ್ಲಿ 230 ನಮ್ಮದೇ ಸ್ವಂತ, ಉಳಿದ 180 ಫ್ರಾಂಚೈಸಿಗೆ ಕೊಟ್ಟಿದ್ದೇವೆ.
ಚೆನ್ನೈನಲ್ಲಿ ಶುರುವಾಗಲಿರುವ `ಸ್ವರ್ಣಭೂಮಿ ಕ್ಯಾಂಪಸ್’ ಕುರಿತು ಹೇಳುವಿರಾ?
ನಾವು ಈಗಾಗಲೇ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಯಂಬತ್ತೂರಿನಲ್ಲಿ ಟ್ರೇನಿಂಗ್‌ಅಕಾಡೆಮಿ ಹೊಂದಿದ್ದೇವೆ. ಇದೀಗ ಚೆನ್ನೈ ಬಳಿಯ ಮಹಾಬಲಿಪುರಂನಲ್ಲೂ, ಗೋದ್ರೆಜ್‌ಸಹಯೋಗದೊಂದಿಗೆ ತೆರೆಯಲ್ಲಿದ್ದೇವೆ.
2016ರಲ್ಲಿ ಮಿಶನ್ಎಲ್ಲಿಯರೆಗೆ ಕೊಂಡೊಯ್ಯ ಬಯಸುತ್ತೀರಿ?
ಮಾನವ ಏನಾದರೂ ಮಾಡಲೇಬೇಕೆಂದು ಬಯಸಿದರೆ ಆಕಾಶ ಮೂರೇ ಗೇಣು ಎಂದು ತಿಳಿಯಿರಿ. 3000 ಔಟ್‌ಲೆಟ್ಸ್ ಹೊಂದುವುದಲ್ಲದೆ, ನಮ್ಮೊಂದಿಗೆ ಲಿಂಕ್ ಹೊಂದಿರುವ ಮಹಿಳಾ ಉದ್ಯಮಿಗಳ ಸಂಖ್ಯೆ 1000 ದಾಟಿಸುವುದೇ ನಮ್ಮ ಮುಂದಿನ ಗುರಿ!
– ಟಿ.ಆರ್. ಜಯಂತಿ.