ಗಂಡ ಟ್ರಾನ್ಸ್ ಫಾರ್ಮರ್‌ ಕಾರ್ಖಾನೆ ಇಟ್ಟುಕೊಂಡಿದ್ದರು. ಅಲ್ಲಿ ತಯಾರಾಗುವ ಎಲ್ಲ ಉತ್ಪನ್ನಗಳನ್ನು ತಮಿಳುನಾಡಿನ ಒಬ್ಬನೇ ವ್ಯಾಪಾರಿಗೆ ಕಳುಹಿಸುತ್ತಿದ್ದರು. 3-4 ವರ್ಷ ಎಲ್ಲ ಸರಿಯಾಗಿಯೇ ನಡೆದಿತ್ತು. ಆದರೆ ಕೆಲವು ತಿಂಗಳುಗಳಿಂದ ಅಷ್ಟಿಷ್ಟು ಬಾಕಿ ಉಳಿಸಿಕೊಂಡು ಬರುತ್ತಿದ್ದ ಆ ವ್ಯಾಪಾರಿ, ಒಂದು ದಿನ ಕೈ ಎತ್ತಿಬಿಟ್ಟ. ಆ ವ್ಯಾಪಾರಿ ಇವರಿಗೆ ಕೊಡಬೇಕಾದ ಮೊತ್ತ ಹೆಚ್ಚು ಕಮ್ಮಿ 15 ಲಕ್ಷ. ಈ ಕಾರಣದಿಂದ ಗಂಡ ತತ್ತರಿಸಿ ಹೋದ, ಆಸ್ಪತ್ರೆ ಕೂಡ ಸೇರಿದ. ಹೆಂಡತಿ ಮಾತ್ರ ಕಂಗಾಲಾಗದೆ, ಬ್ಯಾಗುಗಳನ್ನು ತರಿಸಿಕೊಂಡು, ಬೀದಿ ಬೀದಿ ಸುತ್ತಾಡಿ ಅಂಗಡಿಗಳಿಗೆ ಮಾರಾಟ ಮಾಡುವುದರ ಮೂಲಕ ಗಂಡ ಪುನಃ ಚೇತರಿಸಿಕೊಳ್ಳುವಂತೆ ಮಾಡಿದಳು. ಆ ಧೈರ್ಯಶೀಲ ಮಹಿಳೆಯೇ ವೀಣಾ ಕುಲಕರ್ಣಿ. ಅವರು ಮೂಲತಃ ಕಲಬುರ್ಗಿಯವರು. ಈಗ ಬೆಂಗಳೂರಿನಲ್ಲಿ ತಮ್ಮದೇ ಆದ `ಸಾಯಿ ಹ್ಯಾಂಡಿಕ್ರಾಫ್ಟ್' ಬ್ಯಾಗುಗಳ ಮೂಲಕ ಗಮನ ಸೆಳೆದಿದ್ದಾರೆ. ಆರಂಭದ 23 ವರ್ಷ ಮುಂಬೈ, ಅಹಮದಾಬಾದ್‌, ಸೂರತ್‌ ಮುಂತಾದೆಡೆಯಿಂದ ಫ್ಯಾಷನ್‌ ಬ್ಯಾಗ್‌ಗಳನ್ನು ತರಿಸಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡಿದರು. ಈ ಮಧ್ಯೆ ಚೇತರಿಸಿಕೊಂಡ ಗಂಡ ಉದಯ, ವೀಣಾ ಅವರ ಸಹಾಯಕ್ಕೆ ನಿಂತರು.

ಕರಕುಶಲ ಕಲೆಯ ಸ್ಪರ್ಶ ವೀಣಾ ಮುಂಚಿನಿಂದಲೂ ಹೆಣೆಗೆ ಕಸೂತಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಬಿಡುವಿದ್ದಾಗ ಏನಾದರೊಂದು ಮಾಡುತ್ತಲೇ ಇರುತ್ತಿದ್ದರು. ತಮ್ಮ ಈ ಕಲೆಯನ್ನು ಬ್ಯಾಗುಗಳ ಮೇಲೆ ಪ್ರಯೋಗ ಮಾಡಿ ಗ್ರಾಹಕರ ಗಮನಸೆಳೆದರು. ಅಂತಹ ಬ್ಯಾಗುಗಳಿಗೆ ಬೇಡಿಕೆ ಬರತೊಡಗಿದಂತೆ, ಅದನ್ನೇ ತಮ್ಮ ಸ್ವಂತ ಉದ್ಯಮವನ್ನಾಗಿ ಏಕೆ ಮಾಡಿಕೊಳ್ಳಬಾರದೆಂದು ಯೋಚಿಸಿದರು. ಅದನ್ನು ಕಾರ್ಯರೂಪಕ್ಕೆ ತರಲು ಮೂಲ ಬಂಡವಾಳವಾಗ ಬೇಕಾಗಿದ್ದ 30,000 ರೂ.  ಹೊಂದಿಸಲು ಆಗ ಅವರು ಸಾಕಷ್ಟು ಕಷ್ಟಪಡಬೇಕಾಯಿತು.

ಮೊದಲೇ ಬ್ಯಾಗು ಮಾರುಕಟ್ಟೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದ ತಮ್ಮದೇ ಆದ ಬ್ರ್ಯಾಂಡಿನ ಬ್ಯಾಗುಗಳನ್ನು ಮಾರುಕಟ್ಟೆಗೆ ತರಲು ಅವರಿಗೆ ಹೆಚ್ಚೇನೂ ಕಷ್ಟಪಡಬೇಕಾಗಿ ಬರಲಿಲ್ಲ. ಪುಟ್ಟ ಮೊಬೈಲ್ ಪರ್ಸ್‌ನಿಂದ ಹಿಡಿದು, ಬಗೆಬಗೆಯ ಚಿತ್ತಾರದ ಪರಿಸರಸ್ನೇಹಿ ಬ್ಯಾಗುಗಳು ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಳ್ಳತೊಡಗಿದವು. ಇವರ ಉತ್ಪಾದನಾ ಘಟಕದಲ್ಲಿ 50 ಜನರು ಕೆಲಸ ಮಾಡುತ್ತಿದ್ದಾರೆ. ಅದರ ಹೊರತಾಗಿ 100ಕ್ಕೂ ಹೆಚ್ಚು ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿಯೇ ಬ್ಯಾಗುಗಳಿಗೆ ಕಸೂತಿ ಹಾಕಿಕೊಡು ಕೆಲಸದಲ್ಲಿ ಮಗ್ನರಾಗಿದ್ದಾರೆ. ಹೀಗೆ ಇವರ ಉದ್ಯಮ ಅನೇಕ ಕುಟುಂಬಗಳ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ.

ಬ್ಯಾಂಕಿನ ಸಹಕಾರ

``ನನ್ನಲ್ಲಿ ಉದ್ಯಮ ಮುಂದುವರಿಸಿಕೊಂಡು ಹೋಗುವ ಛಲವೇನೋ ಇತ್ತು. ಆದರೆ ನನಗೆ ಹಣಕಾಸಿನ ಸಹಾಯ ನೀಡಿ ಬಲ ತುಂಬಿದ್ದು ಕೆನರಾ ಬ್ಯಾಂಕ್‌. ಪುಷ್ಪಾ ಮೇಡಂ ಅವರ ಸಹಕಾರವನ್ನು ನಾನೆಂದೂ ಮರೆಯುವುದಿಲ್ಲ,'' ಎಂದು ವೀಣಾ ಹೇಳುತ್ತಾರೆ.

ಮಾರಾಟ ತಂತ್ರ

ವೀಣಾ ಕುಲಕರ್ಣಿ ಕೇವಲ ಪಿ.ಯು.ಸಿ.ವರೆಗೆ ಓದಿದರು. ಆದರೆ ಮಾರಾಟ ತಂತ್ರಗಾರಿಕೆಯಲ್ಲಿ ಅವರು ಎಂಬಿಎ ಮಾಡಿದವರನ್ನೂ ಮೀರಿಸುತ್ತಾರೆ. ಮಾರಾಟಕ್ಕೆ ಹೋಗುವ ಪ್ರತಿಯೊಂದು ಬ್ಯಾಗ್‌ನಲ್ಲೂ ಒಂದು ಪಾಂಪ್ಲೆಟ್‌ ಹಾಕಿರುತ್ತಾರೆ. ಆ ಒಂದು ಪುಟ್ಟ ಪಾಂಪ್ಲೆಟ್‌ ಇವರಿಗೆ ಬೇಡಿಕೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿ ವಿದೇಶದಿಂದಲೂ ಇವರ ಬ್ಯಾಗುಗಳಿಗೆ ಬೇಡಿಕೆ ಬರುತ್ತಿರುತ್ತದೆ, ಮಾರ್ಗದರ್ಶಕಿ ವೀಣಾ ಕುಲಕರ್ಣಿ ಉದ್ಯಮದ ಆಗುಹೋಗುಗಳನ್ನು, ಅಲ್ಲಿ ಅನುಸರಿಸಬೇಕಾದ ನಿಯಮಗಳನ್ನು ತಾವೇ ಸ್ವತಃ ಅನುಭವದಿಂದ ಕಂಡುಕೊಂಡರು. ಅದಕ್ಕಾಗಿ ಅವರು ಯಾವುದೇ ಕಾರ್ಯಾಗಾರಗಳಿಗೆ ಹೋದವರಲ್ಲ. ಆದರೆ ಇಂದು ಅವರು ಯಾವ ಮಟ್ಟಕ್ಕೆ ಬೆಳೆದಿದ್ದಾರೆಂದರೆ, ಯುವ ಉದ್ಯಮಶೀಲ ಮಹಿಳೆಯರಿಗೆ ಕಾರ್ಯಾಗಾರಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ