ಸಾಮಗ್ರಿ : 2 ಮಾಗಿದ ಮಾವಿನ ಹಣ್ಣು, 1 ಕಪ್‌ ಫ್ರಿಜ್‌ ನೀರು, 3-4 ಚಮಚ ಜೇನುತುಪ್ಪ, ಒಂದಿಷ್ಟು ಐಸ್‌ ಕ್ಯೂಬ್ಸ್.

ವಿಧಾನ : ಮಾವಿನ ಹಣ್ಣಿನ ಸಿಪ್ಪೆ ಹೆರೆದು ಹೋಳು ಮಾಡಿಕೊಳ್ಳಿ. ಇದನ್ನು ಬೇರೆಲ್ಲ ಸಾಮಗ್ರಿಗಳೊಂದಿಗೆ ಮಿಕ್ಸಿಗೆ ಹಾಕಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಸೋಸಿಕೊಂಡು 1 ತಾಸು ಫ್ರಿಜ್‌ನಲ್ಲಿಡಿ. ನಂತರ 6 ಗ್ಲಾಸುಗಳಿಗೆ ಸುರಿದು ತಣ್ಣಗೆ ಸವಿಯಲು ಕೊಡಿ.

ಗೋಲ್ಡನ್ಗ್ರೇಟ್

ಸಾಮಗ್ರಿ : 4-5 ಚಮಚ ಬಟರ್‌ಸ್ಕಾಚ್‌ ಸಿರಪ್‌, 4 ಚಮಚ ಸ್ಟ್ರಾಬೆರಿ ಕ್ರಶ್ಡ್, ಅಗತ್ಯವಿದ್ದಷ್ಟು ಸೋಡ, ಐಸ್‌ ಕ್ಯೂಬ್ಸ್, ಹಣ್ಣಿನ ಹೋಳು.

ವಿಧಾನ : ಮೇಲಿನ ಸಾಮಗ್ರಿಗಳನ್ನು ಒಟ್ಟಾಗಿ ಮಿಕ್ಸಿಗೆ ಹಾಕಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಅದನ್ನು ಫ್ರಿಜ್‌ನಲ್ಲಿರಿಸಿ ತಂಪುಗೊಳಿಸಿದ ನಂತರ, ಚಿತ್ರದಲ್ಲಿರುವಂತೆ ಸೋಡ ಜೊತೆ ಗ್ಲಾಸುಗಳಿಗೆ ಸುರಿದು, ಹಣ್ಣಿನ ಹೋಳಿನೊಂದಿಗೆ ಅಲಂಕರಿಸಿ ಸವಿಯಲು ಕೊಡಿ.

ಬ್ಲೂ ಓಷನ್

ಸಾಮಗ್ರಿ : 2 ದೊಡ್ಡ ನಿಂಬೆಹಣ್ಣು, 4 ಚಮಚ ಬ್ಲೂ ಲೈಮ್ ಕ್ರಶ್ಡ್ (ರೆಡಿಮೇಡ್‌ ಲಭ್ಯ), ಅಗತ್ಯವಿದ್ದಷ್ಟು ಸ್ಪ್ರೈಟ್‌ಐಸ್‌ ಕ್ಯೂಬ್ಸ್, ಹಣ್ಣಿನ ಹೋಳು.

ವಿಧಾನ : ಮಿಕ್ಸಿಗೆ ನಿಂಬೆಹಣ್ಣು ಹಿಂಡಿಕೊಂಡು, ಅದಕ್ಕೆ ಸ್ಪ್ರೈಟ್‌ ಬಿಟ್ಟು ಉಳಿದೆಲ್ಲ ಸಾಮಗ್ರಿ ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ನಂತರ ಇದನ್ನು ಉದ್ದನೆಯ ಗ್ಲಾಸುಗಳಿಗೆ ಸುರಿದು, ಸ್ಪ್ರೈಟ್‌ಐಸ್‌ ಕ್ಯೂಬ್ಸ್ ಸಹ ಸೇರಿಸಿ. ಚಿತ್ರದಲ್ಲಿರುವಂತೆ ಹಣ್ಣಿನ ಹೋಳುಗಳಿಂದ ಅಲಂಕರಿಸಿ, ಅತಿಥಿಗಳಿಗೆ ಸವಿಯಲು ಕೊಡಿ.

ಮ್ಯಾಂಗೋ ಟ್ಯಾಂಗೋ

ಸಾಮಗ್ರಿ : 1 ಕಪ್‌ ಮಾವಿನ ಹಣ್ಣಿನ ಜೂಸ್‌, 1 ಕಪ್‌ ಕಿತ್ತಳೆಹಣ್ಣಿನ ಜೂಸ್‌, 1-2 ಸ್ಕೂಪ್‌ ವೆನಿಲಾ ಐಸ್‌ ಕ್ರೀಂ, 1-2 ಸ್ಕೂಪ್‌ಮ್ಯಾಂಗೋ ಐಸ್‌ ಕ್ರೀಂ, 2-3 ಚಮಚ ಕಿವುಚಿದ ಮಾವಿನ ಹೋಳು, ತುಸು ಹಣ್ಣಿನ ಹೋಳು.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್‌ ಮಾಡಿ. ನಂತರ ಗ್ಲಾಸುಗಳಿಗೆ ಸುರಿದು, ಮೇಲಿನಿಂದ ಇನ್ನಷ್ಟು ವೆನಿಲಾ ಐಸ್‌ ಕ್ರೀಂ ತೇಲಿಬಿಟ್ಟು, ಹಣ್ಣಿನ ಹೋಳು ಹಾಕಿ ಅಲಂಕರಿಸಿ ಸವಿಯಲು ಕೊಡಿ.

ರಿಫ್ರೆಶಿಂಗ್ಆರೆಂಜ್

ಸಾಮಗ್ರಿ : 3-4 ರಸಭರಿತ ಆರೆಂಜ್‌, 4-5 ಚಮಚ ಸಕ್ಕರೆ, ಅರ್ಧ ಕಪ್‌ ಆರೆಂಜ್‌ ಸೋಡ, ತುಸು ಕ್ರಶ್ಡ್ ಐಸ್‌.

ವಿಧಾನ : ಕಿತ್ತಳೆಹಣ್ಣಿನ ಸಿಪ್ಪೆ ಸುಲಿದು, ಬೀಜ ಬೇರ್ಪಡಿಸಿ ತೊಳೆಗಳನ್ನು ಉಳಿದ ಸಾಮಗ್ರಿ ಜೊತೆ ಮಿಕ್ಸಿಗೆ ಹಾಕಿ, ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಗ್ಲಾಸುಗಳಿಗೆ ಸುರಿದು, ಕ್ರಶ್ಡ್ ಐಸ್‌ ಹಾಕಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಓಥೋ ಲೇ

ಸಾಮಗ್ರಿ : 2 ಕಪ್‌ ಸೇಬಿನ ರಸ, 4-5 ಚಮಚ ಕ್ರಶ್ಡ್ ಸ್ಟ್ರಾಬೆರಿ, ಅಗತ್ಯವಿದ್ದಷ್ಟು ಸೋಡ, ಐಸ್‌ ಕ್ಯೂಬ್ಸ್, ಹಣ್ಣಿನ ಹೋಳು.

ವಿಧಾನ : ಸೋಡ ಬಿಟ್ಟು ಉಳಿದ ಸಾಮಗ್ರಿ ಮಿಕ್ಸಿಗೆ ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ನಂತರ ಇದನ್ನು ಗ್ಲಾಸಿಗೆ ಸುರಿದು, ಸೋಡ ಬೆರೆಸಬೇಕು. ನಂತರ ಐಸ್‌ ಕ್ಯೂಬ್ಸ್ ಹಾಕಿ, ಹಣ್ಣುಗಳಿಂದ ಅಲಂಕರಿಸಿ ಸವಿಯಲು ಕೊಡಿ.

ಸನ್ರೈಸ್

ಸಾಮಗ್ರಿ : 1 ಕಪ್‌ ಆರೆಂಜ್‌ ಜೂಸ್‌, 1 ಕಪ್‌ ಸೀಬೆಹಣ್ಣಿನ ರಸ, 3-4 ಚಮಚ ಆರೆಂಜ್‌ ಕುಸುಮೆಗಳು, ಅಗತ್ಯವಿದ್ದಷ್ಟು ಐಸ್‌.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಬ್ಲೆಂಡರ್‌ಗೆ ಹಾಕಿ ಚಾಯಿಸಿ. ಇದನ್ನು ಗ್ಲಾಸುಗಳಿಗೆ ಬಗ್ಗಿಸಿ ಐಸ್‌ ಕ್ಯೂಬ್ಸ್  ತೇಲಿಬಿಟ್ಟು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಆ್ಯಪಲ್ ಡ್ರಿಂಕ್

ಸಾಮಗ್ರಿ : 1 ಕಪ್‌ ಸೇಬಿನ ರಸ, 1 ಸಣ್ಣ ನಿಂಬೆಯ ರಸ, ಅಗತ್ಯವಿದ್ದಷ್ಟು ಸೋಡ, ಐಸ್‌ ಕ್ಯೂಬ್ಸ್, ಒಂದಿಷ್ಟು ಹೆಚ್ಚಿದ ಪುದೀನಾ.

ವಿಧಾನ : ಸೋಡ ಹೊರತುಪಡಿಸಿ ಉಳಿದ ಸಾಮಗ್ರಿಯನ್ನು ಮಿಕ್ಸರ್‌ನಲ್ಲಿ ಬೆರೆಸಿ ಬ್ಲೆಂಡ್‌ ಮಾಡಿ. ನಂತರ ಗ್ಲಾಸುಗಳಿಗೆ ಬಗ್ಗಿಸಿ, ಮೇಲೆ ಸೋಡ ತುಂಬಿಸಿ. ಆಮೇಲೆ ಐಸ್‌ ಕ್ಯೂಬ್ಸ್ ತೇಲಿಬಿಟ್ಟು, ಪುದೀನಾ ಉದುರಿಸಿ.

ಪರಂಗಿ ಮಿಲ್ಕ್ ಶೇಕ್

ಸಾಮಗ್ರಿ : 3 ಕಪ್‌ ಮಾಗಿದ ಪರಂಗಿ ಹಣ್ಣಿನ  ಹೋಳು, 1 ಕಪ್‌ ಕೋಲ್ಡ್ ಅನಾನಸ್‌ ಜೂಸ್‌, 1 ಕಪ್‌ ಹಾಲು, ಅರ್ಧ ಕಪ್‌ಬಾಳೆಹಣ್ಣಿನ ಹೋಳು, 4-5 ಐಸ್‌ ಕ್ಯೂಬ್ಸ್, 2 ಚಮಚ ಜೇನುತುಪ್ಪ, 1 ಸಣ್ಣ ನಿಂಬೆಯ ರಸ, ತುಸು ವೆಜ್‌ ಸ್ಟಾಕ್‌, ಒಂದಿಷ್ಟು ಹೆಚ್ಚಿದ ತುಳಸಿ ಎಲೆ ಪುದೀನಾ, 2 ಚಿಟಿಕಿ ಉಪ್ಪು.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ ಮಿಕ್ಸರ್‌ನಲ್ಲಿ ಬ್ಲೆಂಡ್‌ ಮಾಡಿ. ನಂತರ ಇದನ್ನು ಗ್ಲಾಸುಗಳಿಗೆ ಬಗ್ಗಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ