ಸಾಮಗ್ರಿ : 1 ಕಪ್‌ ಸಣ್ಣಗೆ ಹೆಚ್ಚಿದ  ಬೀನ್ಸ್, 2-3 ದೊಡ್ಡ ಚಮಚ ಹೆಸರುಬೇಳೆ (15 ನಿಮಿಷ ನೀರಲ್ಲಿ ನೆನೆಹಾಕಿಡಿ), 2 ಚಿಟಕಿ ಅರಿಶಿನ, ಒಗ್ಗರಣೆಗೆ ತಕ್ಕಷ್ಟು ಸಾಸುವೆ, ಉದ್ದಿನ ಬೇಳೆ, ಕರಿಬೇವು, 1-2 ಹಸಿಮೆಣಸು, ಸಣ್ಣಗೆ ಹೆಚ್ಚಿದ 1 ಈರುಳ್ಳಿ, ಒಂದಿಷ್ಟು ತೆಂಗಿನ ತುರಿ, 1-2 ಚಮಚ  ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ನೆಸ್ಲೆ ಮ್ಯಾಜಿಕ್‌-ಎ  ಮಸಾಲ.

ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಬೇಳೆ ಬಣ್ಣ ಬದಲಾಯಿಸಿದಾಗ ಹೆಚ್ಚಿದ ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ. ಇದು ಗುಲಾಬಿ ಬಣ್ಣಕ್ಕೆ ತಿರುಗುವಂತೆ ಕೆದಕಬೇಕು. ನಂತರ ಹೆಚ್ಚಿದ ಬೀನ್ಸ್, ನೆನೆದ ಹೆಸರುಬೇಳೆ ಹಾಕಿ ಕೆದಕಬೇಕು. ಉಪ್ಪು, ಅರ್ಧ ಕಪ್‌ ನೀರು ಬೆರೆಸಿ ಮುಚ್ಚಳ ಮುಚ್ಚಿರಿಸಿ ಮಂದ ಉರಿಯಲ್ಲಿ ಬೇಯಲು ಬಿಡಿ. 7-8 ನಿಮಿಷ ಕೆದಕುತ್ತಾ ಚೆನ್ನಾಗಿ ಬೇಯಿಸಿ. ನಂತರ ಅರಿಶಿನ, ತೆಂಗಿನ ತುರಿ ಹಾಕಿ ಕೈಯಾಡಿಸಿ. ಹಾಗೆಯೇ 1-2 ನಿಮಿಷ ಬೇಯಿಸಿ. ಕೆಳಗಿಳಿಸಿ, ಇದನ್ನು ಒಂದು ಬಟ್ಟಲಿಗೆ ರವಾನಿಸಿ. ಈಗ ಬಿಸಿ ಬಿಸಿ ಸ್ಪೆಷಲ್ ಬೀನ್ಸ್ ಪಲ್ಯ ಸವಿಯಲು ರೆಡಿ. ಇದನ್ನು ಚಪಾತಿ ಜೊತೆ ಸವಿದರೆ ಒಳ್ಳೆಯ ಪೌಷ್ಟಿಕ ಆಹಾರ ಎನಿಸುತ್ತದೆ. ಈ ರೆಸಿಪಿಗಳ ರುಚಿ ಹೆಚ್ಚಿಸಲು ಅಗತ್ಯನೈಗಿ ನೆಸ್ಲೆಯನರ  1 ಮ್ಯಾಗಿ  ಸ್ಯಾಶೆ ಮ್ಯಾಜಿಕ್‌-ಎ ಮಸಾಲ ಬಳಸಿರಿ.

ಆಲೂ ಉಪ್ಪೇರಿ

ಸಾಮಗ್ರಿ : ತೆಳ್ಳಗೆ ಹೆಚ್ಚಿದ 500 ಗ್ರಾಂ ಆಲೂಗಡ್ಡೆ, 3 ದೊಡ್ಡ ಚಮಚ ಸಾರಿನಪುಡಿ, 1 ಸಣ್ಣ ಚಮಚ ಅಚ್ಚ ಖಾರದಪುಡಿ, ಅರ್ಧ ಚಮಚ ಅರಿಶಿನ, 1 ಸಣ್ಣ ಚಮಚ ಸಾಸುವೆ, 5-6 ದೊಡ್ಡ ಚಮಚ ಎಣ್ಣೆ, ನೆಸ್ಲೆ ಮ್ಯಾಜಿಕ್‌-ಎ ಮಸಾಲ.

ವಿಧಾನ : ಆಲೂ ಚೆನ್ನಾಗಿ ತೊಳೆದು ಶುಚಿಗೊಳಿಸಿ. ಇದನ್ನು ಫ್ಯಾನಿನಡಿ ಒಣಗಿಸಿ. ನಂತರ ಇವನ್ನು ಆದಷ್ಟು ತೆಳ್ಳಗಿನ ಬಿಲ್ಲೆಗಳಾಗಿ ಕತ್ತರಿಸಿ. ಇದರ ಸಿಪ್ಪೆ ಹೆರೆಯದೆ ಬಳಸಿದರೆ, ಅದರಲ್ಲಿನ ಮಿನರಲ್ಸ್ ಆರೋಗ್ಯಕ್ಕೆ ಹಿತಕರ. ಸಿಪ್ಪೇ ಹೆರೆದೇ ಬಳಸುತ್ತೇವೆ ಎನ್ನುವವರಿಗೆ ಅದು ಅವರ ಆಯ್ಕೆಗೆ ಬಿಟ್ಟಿದ್ದು. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸುವೆ ಹಾಕಿ ಚಟಪಟಾಯಿಸಿ. ಇದಕ್ಕೆ ಸ್ವಲ್ಪ ಭಾಗ ಆಲೂ ಬಿಲ್ಲೆ ಹಾಕಿ, ಮೇಲೆ ಖಾರದಪುಡಿ, ಅರಿಶಿನ ಹಾಕಿಡಿ. ಅದರ ಹಸಿವಾಸನೆ ಹೋಗುವಂತೆ ಬಾಡಿಸಿ. ನಂತರ ಉಳಿದ ಆಲೂ ಬಿಲ್ಲೆ, ಉಪ್ಪು, ಸಾರಿನಪುಡಿ ಸೇರಿಸಿ ಚೆನ್ನಾಗಿ ಕೆದಕುತ್ತಾ, ಮಂದ ಉರಿಯಲ್ಲಿ ಅದು ಪೂರ್ತಿ ಬೇಯುವಂತೆ ಮುಚ್ಚಳ ಮುಚ್ಚದೆ ಬಾಡಿಸಬೇಕು. ಹೀಗೆ ಪೂರ್ತಿ ಬೆಂದ ನಂತರ ಕೆಳಗಿಳಿಸಿ. ಬಿಸಿ ಬಿಸಿ ಜೀರಿಗೆ-ಮೆಣಸಿನ ಕಟ್ಟು ಸಾರಿನಲ್ಲಿ ಕಲಸಿದ ಅನ್ನಕ್ಕೆ ನೆಂಚಿಕೊಳ್ಳಲು ಇದು ಹಿತಕರ. ಈ ರೆಸಿಪಿಗಳ ರುಚಿ ಹೆಚ್ಚಿಸಲು ಅಗತ್ಯವಾಗಿ ನೆಸ್ಲೆಯವರ 1 ಮ್ಯಾಗಿ ಸ್ಯಾಶೆ ಮ್ಯಾಜಿಕ್‌-ಎ ಮಸಾಲ ಬಳಸಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ