ಬಾರ್ಲಿ, ಸ್ಪಿನಾಚ್ಎಗ್ಡ್ರಾಪ್ಸೂಪ್

ಸಾಮಗ್ರಿ : 1 ಕಪ್‌ ಬೆಂದ ಬಾರ್ಲಿ, ಅರ್ಧರ್ಧ ಕಪ್‌ ಓಟ್ಸ್, ಬೆಂದ ಸ್ವೀಟ್‌ ಕಾರ್ನ್‌, ಹೆಚ್ಚಿದ ಪಾಲಕ್‌ ಸೊಪ್ಪು, 1-2 ಮೊಟ್ಟೆಯ ಬಿಳಿ ಭಾಗ, ಚಿಕನ್‌ ಸ್ಟಾಕ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಸೀಡ್‌ಲೆಸ್‌ ದಾಳಿಂಬೆ ಹರಳು, ಅಲಂಕರಿಸಲು ಪುದೀನಾ, ಲೆಟ್ಯೂಸ್‌ ಎಲೆ ಇತ್ಯಾದಿ.

ವಿಧಾನ : ಚಿಕನ್‌ ಸ್ಟಾಕ್‌ ಬಿಸಿ ಮಾಡಿ, ಅದಕ್ಕೆ ಬಾರ್ಲಿ, ಓಟ್ಸ್ ಬೆರೆಸಿ ಮತ್ತಷ್ಟು ಕುದಿಸಿ. ಇದಕ್ಕೆ ಹೆಚ್ಚಿದ ಪಾಲಕ್‌, ಮೊಟ್ಟೆಯ ಬಿಳಿ ಭಾಗ, ಉಪ್ಪು, ಮೆಣಸು ಸೇರಿಸಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ. ಜೊತೆಗೆ ಸ್ವೀಟ್‌ ಕಾರ್ನ್‌, ದಾಳಿಂಬೆ ಸೇರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ನಿಂಬೆಹಣ್ಣು ಹಿಂಡಿಕೊಂಡು ಸವಿಯಲು ಕೊಡಿ.

ಪೋಚ್ಡ್ ಫಿಶ್ವಿತ್ಗ್ರೀನ್ವೆಜಿಟೆಬಲ್ಸ್

ಸಾಮಗ್ರಿ : 2-3 ತುಂಡು ಸೋಲ್ ಫಿಶ್‌, 2-3 ಚಮಚ ಆಲಿವ್ ‌ಆಯಿಲ್‌, 1 ಕಪ್‌ ವೆಜ್‌ ಸ್ಟಾಕ್‌, ಒಂದಿಷ್ಟು ಹೆಚ್ಚಿದ ಈರುಳ್ಳಿ, ಅದರ ತೆನೆ, ಅಗತ್ಯವಿದ್ದಷ್ಟು ಗುಂಡಗೆ ಹೆಚ್ಚಿದ ಕ್ಯಾರೆಟ್‌, ಹಳದಿ ಹಸಿರು ಝುಕೀನಿ, ಕೆಂಪು ಹಳದಿ ಹಸಿರು ಕ್ಯಾಪ್ಸಿಕಂ, ಬೇಬಿ ಕಾರ್ನ್‌, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಅಲಂಕರಿಸಲು ತುಸು ಹೆಚ್ಚಿದ ಕೊ.ಸೊಪ್ಪು, ಚೆರ್ರಿ ಟೊಮೇಟೊ.

ವಿಧಾನ : ಒಂದು ಪ್ಯಾನಿನಲ್ಲಿ ಆಲಿವ್ ಆಯಿಲ್ ‌ಬಿಸಿ ಮಾಡಿ ಅದರಲ್ಲಿ ಹೆಚ್ಚಿದ ಈರುಳ್ಳಿ, ಅದರ ತೆನೆ ಹಾಕಿ ಬಾಡಿಸಿ. ಇದಕ್ಕೆ ವೆಜ್ ಸ್ಟಾಕ್‌ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಉಪ್ಪು, ಮೆಣಸು ಹಾಕಿ, ನಿಂಬೆ ರಸ ಬೆರೆಸಿಕೊಳ್ಳಿ. ಇದಕ್ಕೆ ಸೋಲ್ ಫಿಶ್‌ ತುಂಡು ಹಾಕಿ, ಲಘುವಾಗಿ ಬೇಯಿಸಿ ಕೆಳಗಿಳಿಸಿ. ಗುಂಡಗೆ ಕತ್ತರಿಸಿದ 3 ಬಗೆಯ ಕ್ಯಾಪ್ಸಿಕಂ, 2 ಬಗೆ ಝುಕೀನಿ, ಕ್ಯಾರೆಟ್‌, ಬೇಬಿಕಾರ್ನ್‌ ಇತ್ಯಾದಿ ಗ್ರಿಲ್ ‌ಮಾಡಿಕೊಂಡು ಒಂದು ಟ್ರೇನಲ್ಲಿ ಜೋಡಿಸಿ. ಅದರ ಮೇಲೆ ಸೋಲ್ ಫಿಶ್‌ ಬರಲಿ. ಇದರ ಮೇಲೆ ಮತ್ತೆ ಉಪ್ಪು, ಮೆಣಸು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು, ಚಿತ್ರದಲ್ಲಿರುವಂತೆ ಅಲಂಕರಿಸಿ ವೆಜ್‌ ಸ್ಟಾಕ್‌ ಸಮೇತ ಸವಿಯಲು ಕೊಡಿ.

ಶುಗರ್ಫ್ರೀ ಫ್ರೂಟ್ಜೆಲ್ಲಿ

ಸಾಮಗ್ರಿ : 2 ಕಪ್‌ ಫ್ರಿಜ್‌ ನೀರು, 6 ಸ್ಯಾಚೆಟ್‌ ಶುಗರ್‌ ಫ್ರೀ, ಅರ್ಧ ಸಣ್ಣ ಚಮಚ ಜೆಲೆಟಿನ್‌, 2-3 ಹನಿ ಲೆಮನ್‌ ಎಸೆನ್ಸ್, 250 ಗ್ರಾಂ ಮಿಶ್ರ ಹಣ್ಣುಗಳ ಹೋಳು, ತುಸು ನಿಂಬೆರಸ.

ವಿಧಾನ : ಹಣ್ಣಿನ ಹೋಳುಗಳನ್ನು 2 ಭಾಗ ಮಾಡಿ. ಒಂದು ಭಾಗವನ್ನು 2 ಫ್ಯಾನ್ಸಿ ಗ್ಲಾಸುಗಳಿಗೆ ಹಾಕಿ ಫ್ರೀಝರ್‌ನಲ್ಲಿ ಸ್ವಲ್ಪ ಹೊತ್ತು ಇರಿಸಿ. ಆಮೇಲೆ ಬೆಚ್ಚಗಿನ ನೀರಲ್ಲಿ ಜೆಲೆಟಿನ್‌ ನೆನೆ ಹಾಕಿಡಿ. ಒಂದು ಪ್ಯಾನಿನಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಶುಗರ್‌ ಫ್ರೀ, ಜೆಲೆಟಿನ್‌, ನಿಂಬೆರಸ, ಲೆಮನ್‌ ಎಸೆನ್ಸ್  ಬೆರೆಸಿ ಕುದಿಸಬೇಕು. ಒಂದು ಸ್ಟೀಲ್ ಬಟ್ಟಲಿಗೆ ಈ ಮಿಶ್ರಣ ಬಗ್ಗಿಸಿ ಐಸ್‌ ಕ್ಯೂಬ್ಸ್ ಬೆರೆತ ತಣ್ಣೀರಿನಲ್ಲಿ ಈ ಬಟ್ಟಲಿರಿಸಿ ಅದನ್ನು ಚೆನ್ನಾಗಿ ಕೂಲ್ ‌ಮಾಡಿ. ಆದರೆ ಈ ಮಿಶ್ರಣ ಸೆಟ್‌ ಆಗದಂತೆ ನೋಡಿಕೊಳ್ಳಿ. ಫ್ರೀಝರ್‌ನಿಂದ ಫ್ಯಾನ್ಸಿ ಗ್ಲಾಸ್‌ ಹೊರತೆಗೆದು, ಅದಕ್ಕೆ ಈ ಮಿಶ್ರಣ ಬೆರೆಸಿ ಹಾಗೂ ಮತ್ತೊಮ್ಮೆ ಫ್ರಿಜ್‌ನಲ್ಲಿ ಸೆಟ್‌ ಆಗಲು ಇರಿಸಿ. ಹೊರತೆಗೆದ ನಂತರ ಉಳಿದ ಹಣ್ಣಿನ ಹೋಳು ತುಂಬಿಸಿ, ಚಿತ್ರದಲ್ಲಿರುವಂತೆ ರೆಡಿ ಮಾಡಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ