ಫೆಂಟಾಸ್ಟಿಕ್ಫಿಶ್ಫ್ರೈ

ಸಾಮಗ್ರಿ : 400 ಗ್ರಾಂ ಸಾಲ್ಮನ್ ‌ಮೀನು, 2 ಮೊಟ್ಟೆ, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಅಕ್ಕಿಹಿಟ್ಟು, ಕಡಲೆಹಿಟ್ಟು, ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಜೀರಿಗೆ ಪುಡಿ, ಕಿಚನ್‌ಕಿಂಗ್‌ ಮಸಾಲ, ಓಮ, ಕಸೂರಿಮೇಥಿ, ನಿಂಬೆರಸ, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : ಮೀನನ್ನು ಶುಚಿಗೊಳಿಸಿ ಉದ್ದದ ಪೀಸ್‌ಗಳಾಗಿ ಕತ್ತರಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗೆ ಉಪ್ಪು, ಖಾರ ಸೇರಿಸಿ ಅದರಲ್ಲಿ ಈ ಪೀಸುಗಳನ್ನು ಮ್ಯಾರಿನೇಟ್‌ಗೊಳಿಸಿ. ನಂತರ ಒಂದು ಬಟ್ಟಲಿಗೆ 2 ಚಮಚ ಎಣ್ಣೆ, ಬೀಟ್‌ ಮಾಡಿದ ಮೊಟ್ಟೆ ಹಾಗೂ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಬೋಂಡಹಿಟ್ಟಿನ ಹದಕ್ಕೆ ತೆಳುವಾಗದಂತೆ ಕಲಸಿಡಿ. ಅದರಲ್ಲಿ ಫಿಶ್‌ ಪೀಸ್‌ಗಳನ್ನು ಒಂದೊಂದಾಗಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ಸಲಾಡ್‌ ಜೊತೆ ಅಲಂಕರಿಸಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಚಿಲಿ ಗಾರ್ಲಿಕ್ಫಿಶ್

ಸಾಮಗ್ರಿ : 1 ಇಂಚು ಉದ್ದಕ್ಕೆ ಕತ್ತರಿಸಿದ 500 ಗ್ರಾಂ ಬೋನ್‌ ಲೆಸ್‌ ಫಿಶ್‌, ಕರಿಯಲು ಎಣ್ಣೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಶುಂಠಿ, ಕೆಂಪು ಹಸಿರು ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಡಾರ್ಕ್‌ ಸೋಯಾ ಸಾಸ್‌, ಆಯೆಸ್ಟರ್‌ ಸಾಸ್‌, ಸಕ್ಕರೆ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸು.

ಮ್ಯಾರಿನೇಡ್‌ : 1 ನಿಂಬೆಯ ರಸ, ಅರ್ಧರ್ಧ ಚಮಚ ಉಪ್ಪು ಮೆಣಸು.

ಬ್ಯಾಟರ್‌ : ಅರ್ಧ ಕಪ್‌ ಕಾರ್ನ್‌ಫ್ಲೋರ್‌, 1 ಮೊಟ್ಟೆ, ತುಸು ಉಪ್ಪು.

ಕಾರ್ನ್ಸ್ಟಾರ್ಚ್ಪೇಸ್ಟ್ : ಇದಕ್ಕಾಗಿ 2 ದೊಡ್ಡ ಚಮಚ ಕಾರ್ನ್‌ಸ್ಟಾರ್ಚ್‌ನ್ನು 4-5 ಚಮಚ ನೀರಿನಲ್ಲಿ ಕದಡಿಕೊಳ್ಳಿ.

ವಿಧಾನ : ನಿಂಬೆರಸಕ್ಕೆ ಉಪ್ಪು, ಮೆಣಸು, ಬೆಳ್ಳುಳ್ಳಿ ಪೇಸ್ಟ್ ಬೆರೆಸಿ ಕದಡಿಕೊಂಡು ಅದರಲ್ಲಿ ಮೀನು ಹಾಕಿ 15 ನಿಮಿಷ ನೆನೆಯಲು ಬಿಡಿ. ಈಗ ಮೊಟ್ಟೆ ಒಡೆದು ಗೊಟಾಯಿಸಿ ಅದಕ್ಕೆ ಕಾರ್ನ್‌ಫ್ಲೋರ್‌, ಉಪ್ಪು, ಮೆಣಸು ಹಾಕಿ ಬ್ಯಾಟರ್‌ ರೆಡಿ ಮಾಡಿಡಿ. ನಂತರ ಮೀನನ್ನು ಇದರಲ್ಲಿ ಒಂದೊಂದಾಗಿ ಅದ್ದಿ ತೆಗೆದು, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಟಿಶ್ಯು ಪೇಪರ್‌ ಮೇಲೆ ಹರಡಿ ಹೆಚ್ಚುರಿ ಎಣ್ಣೆ ಹೋಗಲಾಡಿಸಿ.

ನಂತರ ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಹೆಚ್ಚಿದ ಹಸಿಮೆಣಸು, 2 ಬಗೆಯ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಕೊನೆಯಲ್ಲಿ ಉಪ್ಪು, ಖಾರ ಹಾಕಿ ಕೈಯಾಡಿಸಿ ಕೆಳಗಿಳಿಸಿ.

ಒಂದು ದೊಡ್ಡ ಬಟ್ಟಲಿಗೆ ತುಸು ಎಣ್ಣೆ, ಫ್ರಿಶ್‌ ಫ್ರೈ, 2 ಸಾಸ್‌ಗಳು, ಸಕ್ಕರೆ, ತುಸು ನೀರು ಬೆರೆಸಿ ಕೆದಕುತ್ತಾ ಕುದಿಸಬೇಕು. ನಂತರ ಇದಕ್ಕೆ ಕಾರ್ನ್‌ಸ್ಟಾರ್ಚ್‌ ಪೇಸ್ಟ್ ಬೆರೆಸಿ, ಮಿಶ್ರಣ ಸಾಕಷ್ಟು ಗಟ್ಟಿ ಆಗುವವರೆಗೂ ಬಾಡಿಸಬೇಕು. ಇದಕ್ಕೆ ಹೆಚ್ಚಿದ ಹಸಿ ಈರುಳ್ಳಿ ಬೆರೆಸಿ, ಬಿಸಿ ಬಿಸಿ ಅನ್ನ ಅಥವಾ ನೂಡಲ್ಸ್ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ