ಯೋಗರ್ಟ್ದಲಿಯಾ

ಸಾಮಗ್ರಿ : 1 ಕಪ್‌ ಬ್ರೋಕನ್‌ ವೀಟ್‌, 2 ಕಪ್‌ ಹುಳಿ ಮೊಸರು, ಅರ್ಧರ್ಧ ಕಪ್‌ ಹಸಿಬಟಾಣಿ, ಕ್ಯಾರೆಟ್‌ ತುರಿ, ಒಗ್ಗರಣೆಗೆ ಸಾಸುವೆ, ಜೀರಿಗೆ, ಇಂಗು, 8-10 ಕರಿಬೇವಿನ ಎಲೆ, ಕ/ಉ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ತರಿತರಿ ಕಾಳುಮೆಣಸು, 1-2 ಹಸಿಮೆಣಸು, 2-3 ಚಮಚ ತುಪ್ಪ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಬ್ರೋಕನ್‌ವೀಟ್‌ನ್ನು ತುಸು ತುಪ್ಪದಲ್ಲಿ ಘಮ್ಮೆನ್ನುವಂತೆ ಹುರಿಯಿರಿ. ನಂತರ ಅರ್ಧ ಗಂಟೆ ನೀರಲ್ಲಿ ನೆನೆಹಾಕಿಡಿ. ಒಂದು ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಹಸಿ ಮೆಣಸು, ಕಾಳುಮೆಣಸು ಹಾಕಿ ಕೆದಕಬೇಕು. ಆಮೇಲೆ ಬಟಾಣಿ, ಕ್ಯಾರೆಟ್‌ ಹಾಕಿ ಬಾಡಿಸಿ, ನೀರು ಚಿಮುಕಿಸಿ ಬೇಯಿಸಿ. ಆಮೇಲೆ ನೆನೆದ ವೀಟ್‌, 1 ಲೋಟ ನೀರು, ಸೇರಿಸಿ ಬೇಯಿಸಿ. 5 ನಿಮಿಷ ಬಿಟ್ಟು ಮೊಸರು ಬೆರೆಸಿ ಚೆನ್ನಾಗಿ ಕೆದಕಿ ಬೇಯಿಸಿ. ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಓಟ್ಸ್ ಪನೀರ್ಪರೋಟ

ಸಾಮಗ್ರಿ : 1 ಕಪ್‌ ಗೋದಿಹಿಟ್ಟು, 4 ಚಮಚ ತುಪ್ಪ, 5 ಚಮಚ ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಗರಂಮಸಾಲ, 150 ಗ್ರಾಂ ಮ್ಯಾಶ್ಡ್ ಪನೀರ್‌, 1 ಕಪ್‌ ಓಟ್ಸ್ ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಗೋದಿಹಿಟ್ಟಿಗೆ ಚಿಟಕಿ ಉಪ್ಪು, ನೀರು ಬೆರೆಸಿ ಮೃದು ಚಪಾತಿ ಹಿಟ್ಟು ಕಲಸಿ, ತುಪ್ಪ ಬೆರೆಸಿ ನಾದಿಕೊಂಡು ಚೆನ್ನಾಗಿ ನೆನೆಯಲು ಬಿಡಿ. ಒಂದು ಚಿಕ್ಕ ಬಾಣಲೆಯಲ್ಲಿ ಓಟ್ಸ್ ನ್ನು ತುಸು ತುಪ್ಪದಲ್ಲಿ  ಲಘುವಾಗಿ ಹುರಿಯಿರಿ. ನಂತರ ಇದಕ್ಕೆ ಮಸೆದ ಪನೀರ್‌, ಉಪ್ಪು, ಖಾರ, ಕೊ.ಸೊಪ್ಪು, ಮಸಾಲ ಬೆರೆಸಿ ಕೆದಕಿ ಕೆಳಗಿಳಿಸಿ. ಇದೀಗ ಹೂರಣ ರೆಡಿ. ನೆನೆದ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ. 2-3 ಚಮಚ ಹೂರಣ ತುಂಬಿಸಿ, ನೀಟಾಗಿ ಮಡಿಚಿ, ತುಪ್ಪ ಸವರಿ ಮತ್ತೆ ಲಟ್ಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಹೆಂಚಿಗೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಈ ಬಿಸಿ ಬಿಸಿ ಪರೋಟಾವನ್ನು ಗಟ್ಟಿ ಮೊಸರಿನೊಂದಿಗೆ ಸವಿಯಲು ಕೊಡಿ.

ರಷ್ಯನ್ಸ್ಪೆಷಲ್ ಸ್ಯಾಂಡ್ವಿಚ್

ಸಾಮಗ್ರಿ : 8 ಸ್ಲೈಸ್‌ ಬ್ರೌನ್‌ ಬ್ರೆಡ್‌, 1 ಕಪ್‌ ಗಟ್ಟಿ ಮೊಸರು (ಹಂಗ್‌ ಕರ್ಡ್‌), 3-4 ಚಮಚ ಫ್ರೆಶ್‌ ಕ್ರೀಂ, 2-3 ಚಮಚ ಕ್ಯಾರೆಟ್‌ತುರಿ, ಅರ್ಧ ಕಪ್‌ ಸಣ್ಣಗೆ ಹೆಚ್ಚಿದ ಎಲೆಕೋಸು, 1-1 ದೊಡ್ಡ ಚಮಚ ಹೆಚ್ಚಿದ ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು (ಹುರಿದು ಪುಡಿ ಮಾಡಿದ) ಸಾಸುವೆ, ಜೀರಿಗೆ, ಸೋಂಪು, ಕಾಳುಮೆಣಸು, ಪುಡಿಸಕ್ಕರೆ, ಉಪ್ಪು, ಬೆಣ್ಣೆ.

ವಿಧಾನ : ಮೊದಲು ಗಟ್ಟಿ ಮೊಸರಿನಲ್ಲಿ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ ಸ್ಪ್ರೆಡ್ ಸಿದ್ಧಪಡಿಸಿ. ಬ್ರೆಡ್‌ ಸ್ಲೈಸ್‌ಗಳನ್ನು ಲಘುವಾಗಿ ಬಿಸಿ ಮಾಡಿ, ಒಂದೊಂದು ಬದಿಗೆ ಬೆಣ್ಣೆ ಸವರಿಡಿ. ಒಂದರ ಮೇಲೆ 3-4 ಚಮಚ ಸ್ಪ್ರೆಡ್‌ ಹರಡಿ, ಇನ್ನೊಂದರಿಂದ ಆ ಭಾಗ ಮುಚ್ಚಬೇಕು. ನಂತರ ಚಿತ್ರದಲ್ಲಿರುವಂತೆ ತ್ರಿಕೋನಾಕಾರವಾಗಿ ಕತ್ತರಿಸಿ, ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ