“ಪ್ರತಿದಿನದ ಪೊಲ್ಯೂಷನ್‌ ನನ್ನ ಸ್ಕಿನ್‌ನ್ನು ಡ್ಯಾಮೇಜ್‌ ಮಾಡುತ್ತದೆ. ಇದೇ ಕಾರಣದಿಂದ ನನ್ನ ಬಾಡಿ ಹಾಗೂ ನನ್ನ ಮುಖ ಒಂದೇ ತರಹ ಕಾಣಿಸುವುದಿಲ್ಲ. ಆದ್ದರಿಂದ ನಾವು ನಮ್ಮ ಬಾಡಿಯ ಸ್ಕಿನ್‌ನ್ನು ವಿಶೇಷವಾಗಿ ಗಮನಿಸಿಕೊಳ್ಳಬೇಕಾದುದು ಅತ್ಯಗತ್ಯ. ಹೀಗಾಗಿ ನಾನು ನನ್ನ ಸ್ಕಿನ್‌ನ್ನು ಉತ್ತಮ ರೀತಿಯಲ್ಲಿ ಮಾಯಿಶ್ಚರೈಸ್ಡ್ ಆಗಿರಿಸುತ್ತೇನೆ, ಹಾಗಾದಾಗ ಮಾತ್ರ ಅದು ನಿರ್ಜೀವ ಎನಿಸುವುದಿಲ್ಲ. ವ್ಯಾಸಲೀನ್‌ ಹೆಲ್ದಿ ಲೈಟ್‌ ನನ್ನ ಸ್ಕಿನ್‌ನ್ನು ರಿಪೇರಿ ಮಾಡಿ, ಅದರ ತಾರುಣ್ಯವನ್ನು ಸದಾ ಕಾಪಾಡುತ್ತದೆ.”

ಬಾಲಿವುಡ್‌ಗೆ `ರಾಕ್‌ ಸ್ಟಾರ್‌’ ಸಿನಿಮಾದಿಂದ ಡೆಬ್ಯು ಪಡೆದ ನಟಿ ನರ್ಗಿಸ್‌ ಫಾಕ್ರಿ, ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆಕೆಗೆ ಮೂಲತಃ ಹಿಂದಿ ಚೆನ್ನಾಗಿ ಬರುವುದಿಲ್ಲ, ಆದರೆ ಆಕೆ ಪ್ರತಿ ಸಿನಿಮಾವನ್ನು ಅರ್ಥ ಮಾಡಿಕೊಂಡು, ಅದರ ಮೇಲೆ ರಿಸರ್ಚ್‌ ಮಾಡಿ, ನಿರ್ದೇಶಕರ ಜೊತೆ ಸುದೀರ್ಘ ಮಾತುಕಥೆ ನಡೆಸಿ, ನಂತರ ಸಹಿ ಹಾಕುತ್ತಾರೆ. ಈ ಕಾರಣದಿಂದಲೇ ಈಕೆ ನಿಧಾನವಾಗಿ ಬಾಲಿವುಡ್‌ನಲ್ಲಿ ಎಲ್ಲರ ಅಚ್ಚುಮೆಚ್ಚಿನ ನಟಿ ಎನಿಸಿದ್ದಾರೆ.

“ನಾನು ಸಿನಿಮಾಗೆ ನಟಿಯಾಗಿ ಬರಬೇಕು ಅಂದುಕೊಂಡವಳಲ್ಲ. ಆದರೆ `ರಾಕ್‌ಸ್ಟಾರ್‌’ ಚಿತ್ರದ ಸೂಪರ್ಬ್‌ ಚಿತ್ರಕಥೆ ನಾನು ಅಭಿನಯವನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳುವಂತೆ ಮಾಡಿತು.

“ನಂತರದ `ಮದ್ರಾಸ್‌ ಕೆಫೆ’ ಚಿತ್ರ ನನ್ನ ಜೀವನದ ಟಿರ್ನಿಂಗ್‌ ಪಾಯಿಂಟ್‌, ಇದರಲ್ಲಿ ನನ್ನ ನಟನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ರೊಮ್ಯಾಂಟಿಕ್‌ ಅಭಿನಯಕ್ಕಾಗಿ ಎಂದೂ ಬೇಡ ಅಂದವಳಲ್ಲ, ಅದು ಸಿನಿಮಾ ಅಥವಾ ಜಾಹೀರಾತು ಯಾವುದೇ ಆಗಿರಲಿ,” ಎನ್ನುತ್ತಾರೆ ನರ್ಗಿಸ್‌.

ನಮ್ರ ಸ್ವಭಾವ ಹಾಗೂ ಸ್ಪಷ್ಟ ಭಾಷಿ ಆಗಿರುವ ನರ್ಗಿಸ್‌ ತಮ್ಮ ಬೋಲ್ಡ್ ಆ್ಯಕ್ಟಿಂಗ್‌ನಿಂದಾಗಿ, ಕ್ಯಾಮೆರಾದ ಮುಂದೆ ಅವರು ಯಾವುದೇ ಸೀನ್‌ ಪರ್ಫಾರ್ಮ್ ಮಾಡಲು ಸ್ವಲ್ಪ ಹಿಂಜರಿಯುವುದಿಲ್ಲ ಎಂದು ನಿರೂಪಿಸಿದ್ದಾರೆ. ಆಕೆಗೆ ಬೋಲ್ಡ್ ಫೋಟೋ ಶೂಟ್‌ಎಂದರೆ ಕೊಂಚ ಅಳುಕಿಲ್ಲ.

ದಾರಿ ಸುಲಭ ಆಗಿರಲಿಲ್ಲ

ಅಮೇರಿಕಾದ ನರ್ಗಿಸ್‌ ಫಾಕ್ರಿ ಮುಂಬೈನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಾರೆ. `ತಾಯಿಯನ್ನು ಭೇಟಿ ಆಗಲು ಆಕೆ ಆಗಾಗ ಅಮೆರಿಕಾಗೆ ಹೋಗುತ್ತಿರುತ್ತಾರೆ, ಏಕೆಂದರೆ ತಾಯಿ ಸಹ ಅಲ್ಲಿ ಒಬ್ಬಂಟಿ. ಶುರುವಿನಲ್ಲಿ ನರ್ಗಿಸ್‌ ತಾಯಿಗೆ ಭಾರತದ ಬಾಲಿವುಡ್‌ಹಾಗೂ ಮಗಳ ಕೆಲಸದ ಬಗ್ಗೆ ಅರಿಯಲು ತುಸು ಕಷ್ಟವೆನಿಸಿತು. ಆದರೆ ನಂತರ ನರ್ಗಿಸ್‌ ತಾಯಿಗೆ ತನ್ನ ಚಿತ್ರಗಳನ್ನು ತೋರಿಸಿದಾಗ, ಆಕೆಗೆ ಖುಷಿ ಎನಿಸಿ, ನರ್ಗಿಸ್‌ ಮುಂದುವರಿಯುವಂತೆ ಪ್ರೋತ್ಸಾಹಿಸಿದರು.

ಮುಂಬೈಗೆ ಬಂದು ಸೆಟಲ್ ಆಗುವುದು ನರ್ಗಿಸ್‌ಗೆ ಹೂವಿನ ಹಾದಿ ಆಗಿರಲಿಲ್ಲ. 2009ರ ಸ್ವಿಮ್ ಸೂಟ್‌ ಕ್ಯಾಲೆಂಡರ್‌ನಿಂದ ಆಕೆಗೆ ಒಳ್ಳೆಯ ಹಣ ದೊರಕಿತು, ನಂತರ ಆಕೆ ಇಲ್ಲೇ ನೆಲೆಸಲು ನಿಶ್ಚಯಿಸಿದರು. ಕ್ಯಾಲೆಂಡರ್‌ನಲ್ಲಿ ನರ್ಗಿಸ್‌ ಪೋಸ್‌ ಗಮನಿಸಿಯೇ ಆಕೆಗೆ `ರಾಕ್‌ ಸ್ಟಾರ್‌’ ಚಿತ್ರದಲ್ಲಿ ಅವಕಾಶ ಸಿಕ್ಕಿತು.

ನರ್ಗಿಸ್‌ ಫಾಕ್ರಿ ತಮ್ಮ ಆರೋಗ್ಯದ ಕುರಿತು ಬಹಳ ಎಚ್ಚರಿಕೆ ವಹಿಸುತ್ತಾರೆ. ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಆಕೆ ಸದಾ ಸಮತೋಲಿತ ಆಹಾರ ಸೇವಿಸುತ್ತಾರೆ, ಧಾರಾಳವಾಗಿ ನೀರು ಕುಡಿಯುತ್ತಾರೆ. ಗ್ಲಾಮರ್‌ ಪ್ರಪಂಚದಲ್ಲಿ ಸದಾ ಸುಂದರವಾಗಿ ಕಂಡುಬರಬೇಕಾದುದು ಅನಿವಾರ್ಯ. ಸೌಂದರ್ಯದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಹೀಗಿರುವಾಗ ಸೌಂದರ್ಯ ಸದಾ ಉಳಿಸಿಕೊಳ್ಳಲು ಧಾರಾಳವಾಗಿ ತಾಜಾ ಹಣ್ಣು ತರಕಾರಿ ಸೇವಿಸುತ್ತಾರೆ.

ಸ್ಕಿನ್ಕೇರ್ಅತ್ಯಗತ್ಯ

ಚರ್ಮವನ್ನು ಸದಾ ನಳನಳಿಸುತ್ತಾ, ಕಾಂತಿಯುತ ಆಗಿರಿಸಿಕೊಳ್ಳಲು ನರ್ಗಿಸ್‌ ನಿಯಮಿತವಾಗಿ ಕ್ಲೆನ್ಸಿಂಗ್‌, ಫೇಶಿಯಲ್ ವಾಶ್‌, ಸ್ಕ್ರಬ್‌, ಮಾಸ್ಕ್ ಇತ್ಯಾದಿ ಪ್ರಯೋಗಿಸುತ್ತಿರುತ್ತಾರೆ. ಚರ್ಮ ಸದಾ ಸುಂದರವಾಗಿರಲು ಅದು ಸದಾ ಆರ್ದ್ರತೆಯಿಂದ ಕೂಡಿರಬೇಕಾದುದು ಮುಖ್ಯ, ಶುಷ್ಕ ತ್ವಚೆಯಲ್ಲಿ ರಾಶೆಸ್‌ ಕಾಣಿಸಬಹುದು ಎನ್ನುತ್ತಾರೆ ನರ್ಗಿಸ್‌. ಈಕೆ ಹಗಲೂ ರಾತ್ರಿ ಹೊರಗೆ ಶೂಟಿಂರ್ಗ್‌ನಲ್ಲಿರುವಾಗ ವಾಲ್‌ನಟ್‌ ಸ್ಕ್ರಬ್‌ನಿಂದ ಮೇಕಪ್‌ ತೆಗೆಯುತ್ತಾರೆ. ಇದರಿಂದ ಮೇಕಪ್‌ ರೋಮರಂಧ್ರಗಳಿಂದ ಇಡಿಯಾಗಿ ಹೊರಬರುತ್ತದೆ. ಜೊತೆಗೆ ಮುಖದಲ್ಲಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ಆಕೆ ಪ್ರತಿ ದಿನ ಮಾಯಿಶ್ಚರೈಸರ್‌ ಹಚ್ಚುತ್ತಾರೆ.

ಮಲ್ಟಿ ಕಲ್ಚರ್‌ ಬ್ಯಾಕ್‌ಗ್ರೌಂಡ್‌ ಹೊಂದಿರುವುದರಿಂದ ನರ್ಗಿಸ್‌ ಮನೆಯಲ್ಲಿ ಬಾಲ್ಯದಿಂದಲೇ ನ್ಯಾಚುರಲ್ ಸ್ಟಫ್‌ ಹೆಚ್ಚು ಬಳಕೆಯಾಗುತ್ತಿತ್ತು. ಭಾರತಕ್ಕೆ ಬಂದಾಗ ಆಕೆಗೆ ತಾನು `ಮದರ್‌ ನೇಚರ್‌’ ಬಳಿ ಬಂದಂತೆ ಭಾಸವಾಯಿತಂತೆ, ಏಕೆಂದರೆ ಆಕೆಗೆ ಭಾರತದಲ್ಲಿ ಸಿಗುವ ಪ್ರತಿ ವಸ್ತುವನ್ನು ಸೇವಿಸಿ ಅಥವಾ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ತಮ್ಮ ಚರ್ಮದ ಸೌಂದರ್ಯ ಸಂರಕ್ಷಿಸಿಕೊಳ್ಳಬಹುದು ಎಂದು ಕಂಡುಕೊಂಡರಂತೆ. ಇಷ್ಟು ಮಾತ್ರವಲ್ಲದೆ ನರ್ಗಿಸ್‌ ನಿಯಮಿತವಾಗಿ ವರ್ಕ್‌ಔಟ್‌ ಸಹ ಮಾಡುತ್ತಾರೆ. ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಬಹಳ ದೂರ ದೂರದವರೆಗೆ ನಡೆದೇ ಹೋಗುತ್ತಿದ್ದರಂತೆ. ಆದರೆ ಭಾರತದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಆಕೆ ಮನೆಯಲ್ಲೇ ಡಿವಿಡಿ ಹಾಕಿಕೊಂಡು `ಜುಂಬಾ’ ವರ್ಕ್‌ಔಟ್ಸ್ ಮಾಡುತ್ತಾರೆ, ಜೊತೆಗೆ ಸ್ವಿಮ್ಮಿಂಗ್ ಅಭ್ಯಾಸ ಉಂಟು.

ನರ್ಗಿಸ್‌ ಬಹಳ ಶೀತಲ ಪ್ರದೇಶದಿಂದ ಬಂದವರಾದ್ದರಿಂದ, ಭಾರತದಂಥ ಉಷ್ಣತೆಯ ದೇಶದಲ್ಲಿ ತಮ್ಮ ಚರ್ಮದ ಆರೈಕೆಯನ್ನು ಬಹು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ತಮಗೆ ಸೂಟ್‌ ಆಗುವಂಥ ತಮ್ಮ ಚರ್ಮಕ್ಕೆ ಪೂರಕವಾಗಿರುವಂಥ ಉತ್ತಮ ಉತ್ಪನ್ನಗಳನ್ನು ಮಾತ್ರ ಅವರು ಬಳಸುತ್ತಾರೆ. ಅವರು ಎಂದೂ ಬಿಸಿಲಿನಲ್ಲಿ ಹೆಚ್ಚು ತಿರುಗಾಡುವುದಿಲ್ಲ. ತಮಗೆ ಅಧಿಕ ಮೇಕಪ್‌ಬೇಕು ಎಂದೂ ಅನಿಸುವುದಿಲ್ಲ. ತಮ್ಮ ಕಣ್ಣು ತುಟಿಗಳನ್ನು ಅತಿ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಅವರಿಗೆ ಹೇರ್‌ ಕಲರ್ ಇಷ್ಟವಿಲ್ಲ. ಕೂದಲನ್ನು ಸುಂದರವಾಗಿ ಇಟ್ಟುಕೊಳ್ಳಲು, ಅಕೆ ವಾರದಲ್ಲಿ 1 ಸಲ ತಪ್ಪದೆ ಮಸಾಜ್‌ ಮಾಡಿಸುತ್ತಾರೆ, ಆಗ ಅದು ಕೂದಲಿನ ಬುಡದವರೆಗೂ ಹೋಗಿ, ಸ್ಕಾಲ್ಪ್ ನ ಆರ್ದ್ರತೆ ಕಡಿಮೆ ಆಗದಂತೆ ಕಾಪಾಡುತ್ತದೆ. ಜೊತೆಗೆ ಎಂದೂ ಹೆಚ್ಚು ಸಿಹಿ ತಿನ್ನುವುದಿಲ್ಲ, ಗಾಢ ನಿದ್ದೆಗೆ ಮೊರೆಹೋಗುತ್ತಾರೆ.

ಸದ್ಯಕ್ಕೆ ನರ್ಗಿಸ್‌ `ಬಾಂಜೋ’ ಚಿತ್ರದಲ್ಲಿ ಒಬ್ಬ ಅಮೆರಿಕನ್‌ ಡಿ.ಜೆ. ಪಾತ್ರ ವಹಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಆಕೆ ಬೇಕಾದಷ್ಟು ತಯಾರಿ ನಡೆಸಿದ್ದಾರೆ. ಇದರಲ್ಲಿ ರಿತೇಶ್‌ ದೇಶಮುಖ್‌ ಆಕೆಯ ಸಹನಟ. ಈ ಚಿತ್ರದಿಂದ ಆಕೆ ಮಹಾರಾಷ್ಟ್ರದ ಸಂಸ್ಕೃತಿಯನ್ನು ಹತ್ತಿರದಿಂದ ಅರಿಯಲು ಒಂದು ಸದವಕಾಶ ಸಿಕ್ಕಿತು, ಸಹಜವಾಗಿಯೇ ಆಕೆಗೆ ಬಹಳ ಖುಷಿಯಂತೆ.

ಜಿ. ಸುಮಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ