``ಪ್ರತಿದಿನದ ಪೊಲ್ಯೂಷನ್‌ ನನ್ನ ಸ್ಕಿನ್‌ನ್ನು ಡ್ಯಾಮೇಜ್‌ ಮಾಡುತ್ತದೆ. ಇದೇ ಕಾರಣದಿಂದ ನನ್ನ ಬಾಡಿ ಹಾಗೂ ನನ್ನ ಮುಖ ಒಂದೇ ತರಹ ಕಾಣಿಸುವುದಿಲ್ಲ. ಆದ್ದರಿಂದ ನಾವು ನಮ್ಮ ಬಾಡಿಯ ಸ್ಕಿನ್‌ನ್ನು ವಿಶೇಷವಾಗಿ ಗಮನಿಸಿಕೊಳ್ಳಬೇಕಾದುದು ಅತ್ಯಗತ್ಯ. ಹೀಗಾಗಿ ನಾನು ನನ್ನ ಸ್ಕಿನ್‌ನ್ನು ಉತ್ತಮ ರೀತಿಯಲ್ಲಿ ಮಾಯಿಶ್ಚರೈಸ್ಡ್ ಆಗಿರಿಸುತ್ತೇನೆ, ಹಾಗಾದಾಗ ಮಾತ್ರ ಅದು ನಿರ್ಜೀವ ಎನಿಸುವುದಿಲ್ಲ. ವ್ಯಾಸಲೀನ್‌ ಹೆಲ್ದಿ ಲೈಟ್‌ ನನ್ನ ಸ್ಕಿನ್‌ನ್ನು ರಿಪೇರಿ ಮಾಡಿ, ಅದರ ತಾರುಣ್ಯವನ್ನು ಸದಾ ಕಾಪಾಡುತ್ತದೆ.''

ಬಾಲಿವುಡ್‌ಗೆ `ರಾಕ್‌ ಸ್ಟಾರ್‌' ಸಿನಿಮಾದಿಂದ ಡೆಬ್ಯು ಪಡೆದ ನಟಿ ನರ್ಗಿಸ್‌ ಫಾಕ್ರಿ, ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆಕೆಗೆ ಮೂಲತಃ ಹಿಂದಿ ಚೆನ್ನಾಗಿ ಬರುವುದಿಲ್ಲ, ಆದರೆ ಆಕೆ ಪ್ರತಿ ಸಿನಿಮಾವನ್ನು ಅರ್ಥ ಮಾಡಿಕೊಂಡು, ಅದರ ಮೇಲೆ ರಿಸರ್ಚ್‌ ಮಾಡಿ, ನಿರ್ದೇಶಕರ ಜೊತೆ ಸುದೀರ್ಘ ಮಾತುಕಥೆ ನಡೆಸಿ, ನಂತರ ಸಹಿ ಹಾಕುತ್ತಾರೆ. ಈ ಕಾರಣದಿಂದಲೇ ಈಕೆ ನಿಧಾನವಾಗಿ ಬಾಲಿವುಡ್‌ನಲ್ಲಿ ಎಲ್ಲರ ಅಚ್ಚುಮೆಚ್ಚಿನ ನಟಿ ಎನಿಸಿದ್ದಾರೆ.

``ನಾನು ಸಿನಿಮಾಗೆ ನಟಿಯಾಗಿ ಬರಬೇಕು ಅಂದುಕೊಂಡವಳಲ್ಲ. ಆದರೆ `ರಾಕ್‌ಸ್ಟಾರ್‌' ಚಿತ್ರದ ಸೂಪರ್ಬ್‌ ಚಿತ್ರಕಥೆ ನಾನು ಅಭಿನಯವನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳುವಂತೆ ಮಾಡಿತು.

``ನಂತರದ `ಮದ್ರಾಸ್‌ ಕೆಫೆ' ಚಿತ್ರ ನನ್ನ ಜೀವನದ ಟಿರ್ನಿಂಗ್‌ ಪಾಯಿಂಟ್‌, ಇದರಲ್ಲಿ ನನ್ನ ನಟನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ರೊಮ್ಯಾಂಟಿಕ್‌ ಅಭಿನಯಕ್ಕಾಗಿ ಎಂದೂ ಬೇಡ ಅಂದವಳಲ್ಲ, ಅದು ಸಿನಿಮಾ ಅಥವಾ ಜಾಹೀರಾತು ಯಾವುದೇ ಆಗಿರಲಿ,'' ಎನ್ನುತ್ತಾರೆ ನರ್ಗಿಸ್‌.

ನಮ್ರ ಸ್ವಭಾವ ಹಾಗೂ ಸ್ಪಷ್ಟ ಭಾಷಿ ಆಗಿರುವ ನರ್ಗಿಸ್‌ ತಮ್ಮ ಬೋಲ್ಡ್ ಆ್ಯಕ್ಟಿಂಗ್‌ನಿಂದಾಗಿ, ಕ್ಯಾಮೆರಾದ ಮುಂದೆ ಅವರು ಯಾವುದೇ ಸೀನ್‌ ಪರ್ಫಾರ್ಮ್ ಮಾಡಲು ಸ್ವಲ್ಪ ಹಿಂಜರಿಯುವುದಿಲ್ಲ ಎಂದು ನಿರೂಪಿಸಿದ್ದಾರೆ. ಆಕೆಗೆ ಬೋಲ್ಡ್ ಫೋಟೋ ಶೂಟ್‌ಎಂದರೆ ಕೊಂಚ ಅಳುಕಿಲ್ಲ.

ದಾರಿ ಸುಲಭ ಆಗಿರಲಿಲ್ಲ

ಅಮೇರಿಕಾದ ನರ್ಗಿಸ್‌ ಫಾಕ್ರಿ ಮುಂಬೈನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಾರೆ. `ತಾಯಿಯನ್ನು ಭೇಟಿ ಆಗಲು ಆಕೆ ಆಗಾಗ ಅಮೆರಿಕಾಗೆ ಹೋಗುತ್ತಿರುತ್ತಾರೆ, ಏಕೆಂದರೆ ತಾಯಿ ಸಹ ಅಲ್ಲಿ ಒಬ್ಬಂಟಿ. ಶುರುವಿನಲ್ಲಿ ನರ್ಗಿಸ್‌ ತಾಯಿಗೆ ಭಾರತದ ಬಾಲಿವುಡ್‌ಹಾಗೂ ಮಗಳ ಕೆಲಸದ ಬಗ್ಗೆ ಅರಿಯಲು ತುಸು ಕಷ್ಟವೆನಿಸಿತು. ಆದರೆ ನಂತರ ನರ್ಗಿಸ್‌ ತಾಯಿಗೆ ತನ್ನ ಚಿತ್ರಗಳನ್ನು ತೋರಿಸಿದಾಗ, ಆಕೆಗೆ ಖುಷಿ ಎನಿಸಿ, ನರ್ಗಿಸ್‌ ಮುಂದುವರಿಯುವಂತೆ ಪ್ರೋತ್ಸಾಹಿಸಿದರು.

ಮುಂಬೈಗೆ ಬಂದು ಸೆಟಲ್ ಆಗುವುದು ನರ್ಗಿಸ್‌ಗೆ ಹೂವಿನ ಹಾದಿ ಆಗಿರಲಿಲ್ಲ. 2009ರ ಸ್ವಿಮ್ ಸೂಟ್‌ ಕ್ಯಾಲೆಂಡರ್‌ನಿಂದ ಆಕೆಗೆ ಒಳ್ಳೆಯ ಹಣ ದೊರಕಿತು, ನಂತರ ಆಕೆ ಇಲ್ಲೇ ನೆಲೆಸಲು ನಿಶ್ಚಯಿಸಿದರು. ಕ್ಯಾಲೆಂಡರ್‌ನಲ್ಲಿ ನರ್ಗಿಸ್‌ ಪೋಸ್‌ ಗಮನಿಸಿಯೇ ಆಕೆಗೆ `ರಾಕ್‌ ಸ್ಟಾರ್‌' ಚಿತ್ರದಲ್ಲಿ ಅವಕಾಶ ಸಿಕ್ಕಿತು.

ನರ್ಗಿಸ್‌ ಫಾಕ್ರಿ ತಮ್ಮ ಆರೋಗ್ಯದ ಕುರಿತು ಬಹಳ ಎಚ್ಚರಿಕೆ ವಹಿಸುತ್ತಾರೆ. ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಆಕೆ ಸದಾ ಸಮತೋಲಿತ ಆಹಾರ ಸೇವಿಸುತ್ತಾರೆ, ಧಾರಾಳವಾಗಿ ನೀರು ಕುಡಿಯುತ್ತಾರೆ. ಗ್ಲಾಮರ್‌ ಪ್ರಪಂಚದಲ್ಲಿ ಸದಾ ಸುಂದರವಾಗಿ ಕಂಡುಬರಬೇಕಾದುದು ಅನಿವಾರ್ಯ. ಸೌಂದರ್ಯದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಹೀಗಿರುವಾಗ ಸೌಂದರ್ಯ ಸದಾ ಉಳಿಸಿಕೊಳ್ಳಲು ಧಾರಾಳವಾಗಿ ತಾಜಾ ಹಣ್ಣು ತರಕಾರಿ ಸೇವಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ